'ತ್ರಿವಿಕ್ರಮ' ಚಿತ್ರದಲ್ಲಿ ವಿಕ್ರಮ್ ರವಿಚಂದ್ರನ್‌ಗೆ ಬಾಲಿವುಡ್ ನಟ ರೋಹಿತ್ ರಾಯ್ ವಿಲನ್!

By Kannadaprabha News  |  First Published Nov 26, 2019, 10:09 AM IST

ಸ್ಯಾಂಡಲ್‌ವುಡ್‌ನಲ್ಲಿ ಕಾಣಿಸಿಕೊಳ್ಳುತ್ತಿರುವ ಬಾಲಿವುಡ್‌ ನಟರ ಸಾಲಿಗೆ ಈಗ ಹೊಸ ಸೇರ್ಪಡೆ ರೋಹಿತ್‌ ರಾಯ್‌. ‘ಶೂಟೌಟ್‌ ಅಟ್‌ ಲೋಖಂಡ್‌ವಾಲ್‌’ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿಯಾದ ರೋಹಿತ್‌ ರಾಯ್‌ ಹಿಂದಿ ಕಿರುತೆರೆಯ ಜನಪ್ರಿಯ ನಟ.

Bollywood Rohit roy at act in Vikram ravichandran film

ರವಿಚಂದ್ರನ್‌ ಪುತ್ರ ವಿಕ್ರಮ್‌ ಅಭಿನಯದ ಚೊಚ್ಛಲ ಚಿತ್ರ ‘ತ್ರಿವಿಕ್ರಮ’ ಚಿತ್ರದೊಂದಿಗೆ ವಿಲನ್‌ ಶೇಡ್‌ ಪಾತ್ರದಲ್ಲಿ ಕನ್ನಡಕ್ಕೂ ಪರಿಚಯವಾಗುತ್ತಿದ್ದಾರೆ.

ರವಿಚಂದ್ರನ್‌ ಪುತ್ರ ವಿಕ್ರಮ್‌ ಚಿತ್ರದ ಫಸ್ಟ್‌ಲುಕ್‌!

Tap to resize

Latest Videos

‘ಚಿತ್ರದಲ್ಲಿ ರೋಹಿತ್‌ ರಾಯ್‌ ಎಸಿಪಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಪಾತ್ರಕ್ಕೆ ಕೊಂಚ ನೆಗೆಟಿವ್‌ ಶೇಡ್‌ ಕೂಡ ಇದೆ. ಪಾತ್ರಕ್ಕೆ ತಕ್ಕಂತೆ ಸೂಕ್ತ ನಟರನ್ನು ಬಾಲಿವುಡ್‌ ಕಡೆಯಿಂದಲೇ ಕರೆ ತರಬೇಕೆಂಬುದು ನಮ್ಮ ನಿರ್ಧಾರವಾಗಿತ್ತು. ಆ ನಿಟ್ಟಿನಲ್ಲಿ ಮೊದಲು ನಮಗೆ ಸೂಕ್ತ ಎನಿಸಿದ್ದು ರೋಹಿತ್‌ ರಾಯ್‌. ಹಿಂದಿ ಚಿತ್ರಗಳ ಜತೆಗೆ ಅಲ್ಲಿನ ಕಿರುತೆರೆಯಲ್ಲೂ ಜನಪ್ರಿಯತೆ ಇರುವ ನಟ. ಅವರನ್ನು ಸಂಪರ್ಕಿಸಿ, ಪಾತ್ರದ ಬಗ್ಗೆ ಹೇಳಿದಾಗ ಮರು ಮಾತನಾಡದೆ ಒಪ್ಪಿಕೊಂಡರು’ ಎನ್ನುತ್ತಾರೆ ನಿರ್ದೇಶಕ ಸಹನಾಮೂರ್ತಿ.

ಪಕ್ಕದ್ಮನೆ ಪಮ್ಮಿ ಜತೆ ಕ್ರೇಜಿಸ್ಟಾರ್‌ ಪುತ್ರನ ಸ್ಪೆಫ್ಸ್‌!

ವಿಕ್ರಮ್‌ ಸಿನಿ ಎಂಟ್ರಿಗೆ ನಿರ್ದೇಶಕ ಸಹನಾ ಮೂರ್ತಿ ಭರ್ಜರಿ ಕತೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರಂತೆ. ಲವ್‌ ಜತೆಗೆ ಆ್ಯಕ್ಷನ್‌ ಹಾಗೂ ಸೆಂಟಿಮೆಂಟ್‌ ಕೂಡ ಜೋರಾಗಿದೆಯಂತೆ. ಚಿತ್ರಕ್ಕೆ ರಾಜಸ್ಥಾನದಲ್ಲೇ ಬಹುತೇಕ ಚಿತ್ರೀಕರಣ ಆಗಿದೆ. ಚಿತ್ರಕ್ಕೆ ಉದ್ಯಮಿ ಸೋಮಣ್ಣ ಬಂಡವಾಳ ಹೂಡಿದ್ದಾರೆ.

vuukle one pixel image
click me!
vuukle one pixel image vuukle one pixel image