ರವಿಚಂದ್ರನ್ ಪುತ್ರ ಮನು ರವಿಚಂದ್ರನ್‌ಗೆ ಸಿಕ್ಕಾಪಟ್ಟೆ ಕಾರ್ ಮತ್ತು ಬೈಕ್ ಕ್ರೇಜ್. ಮೂರ್ನಾಲ್ಕು ಕಾರ್ ಇದ್ರೂ ಈಗ ಮತ್ತೊಂದು ದುಬಾರಿ ಕಾರ್ ಪಟ್ಟಿಗೆ ಸೇರಿಕೊಂಡಿದೆ.
'ಚೀಲಂ' ಮತ್ತು 'ಪ್ರಾರಂಭ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಕನಸುಗಾರ ಪುತ್ರ ಮನುರಂಜನ್ ರವಿಚಂದ್ರನ್ ಬೈಕ್ ಮತ್ತು ಕಾರ್ ಕ್ರೇಜ್ ಕೇಳಿದ್ರೆ ಶಾಕ್ ಆಗ್ತೀರಾ, ಯಾಕಂದ್ರೆ ಮನೆ ಸೇರುತ್ತಿರುವುದೆಲ್ಲಾ ದುಬಾರಿ ಕಾರ್‌ಗಳೇ!
ದುಬಾರಿ ಬೈಕ್‌ಗೆ ಒಡೆಯನಾದ ಕ್ರೇಜಿಸ್ಟಾರ್ ಪುತ್ರ !
undefined
ಈಗಾಗಲೇ ಮನೆಯಲ್ಲಿ ಮೂರ್ನಾಲ್ಕು ಕಾರ್ ಇದ್ದು, ಮೋರಿಸ್ ಗ್ಯಾರೇಜುಗಳು (MG hector)ಹೊಸ ಮಾಡಲ್ ಬರ್ಗ್ಯಾಂಡಿ ಬಣ್ಣದ 16 ಲಕ್ಷ ಮೊತ್ತದ ದುಬಾರಿ ಕಾರನ್ನು ಖರೀದಿಸಿದ್ದಾರೆ. ಇದರ ಬಗ್ಗೆ ಮನುರಂಜನ್ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ'Welcom home lady'ಎಂದು ಬರೆದು ಫೋಟೋ ಶೇರ್ ಮಾಡಿಕೊಂಡಿದ್ದಾರೆ.
ಕೆಲ ತಿಂಗಳುಗಳ ಹಿಂದೆ ತಮ್ಮ ಕನಸಿನ ಬೈಕ್ 'ಡುಕಾಟಿ 959' ಬೈಕ್ ಖರೀದಿಸಿದ್ದರು. 955 ಸಿಸಿ ಹೊಂದಿರುವ ಡುಕಾಟಿ ಬೈಕ್ 14 ಕಿಮೀ. ಮೈಲೇಜ್ ಕೊಡುತ್ತದೆ ಇದರ ಬಗ್ಗೆ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದರು.