29ಕ್ಕೂ ಹೆಚ್ಚು ತಳಿಯ ಶ್ವಾನ ಪ್ರದರ್ಶನ; ಚಾರ್ಲಿ 777 ಶ್ವಾನದೊಂದಿಗೆ ಸಿ..ಟಿ ರವಿ ರೌಂಡ್ಸ್

By Vaishnavi Chandrashekar  |  First Published Jan 21, 2023, 3:53 PM IST

ಶ್ವಾನ ಪ್ರಿಯರಿಗೆ ಸಂತಸ. ಚಿಕ್ಕಮಗಳೂರು ನಗರದಲ್ಲಿ ಅದ್ಧೂರಿಯಾಗಿ ನಡೆಯಿತ್ತು ಶ್ವಾನ ಪ್ರದರ್ಶನ. ಚಾರ್ಲಿ 777 ಖ್ಯಾತಿಯ ಶ್ವಾನ ಕೂಡ ಭಾಗಿ. ಚಾರ್ಲಿ 777 ಶ್ವಾನದೊಂದಿಗೆ ಸಿ..ಟಿ ರವಿ ರೌಂಡ್ಸ್ 
 


ವರದಿ :ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು : ಶ್ವಾನಗಳು ಅಂದ್ರೆ ಯಾರಿಗೆ ತಾನೇ ಪ್ರೀತಿ ಇರುವುದಿಲ್ಲ ಹೇಳಿ, ಕೆಲವರು ಪ್ರೀತಿಗಾಗಿ ಸಾಕಿದ್ರೆ ಇನ್ನು ಕೆಲವರು ಉದ್ಯಮನ್ನಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಇಂತಹ ಅಪರೂಪದ ಶ್ವಾನಗಳನ್ನು ಒಂದಡೆ ನೋಡುವ ಭಾಗ್ಯವನ್ನು ಜಿಲ್ಲಾಡಳಿತ ಮಾಡಿಕೊಟ್ಟಿತ್ತು. ಚಿಕ್ಕಮಗಳೂರು ಹಬ್ಬದ ಅಂಗವಾಗಿ ಜಿಲ್ಲಾಡಳಿತ ನಗರದಲ್ಲಿ ಶ್ವಾನ ಪ್ರದರ್ಶನವನ್ನು ಆಯೋಜನೆ ಮಾಡಿತ್ತು.ಈ ಶ್ವಾನ ಸ್ಪರ್ಧೆಯಲ್ಲಿ  29ಕ್ಕೂ ಹೆಚ್ಚು ತಳಿಯ ಶ್ವಾನಗಳ ಪ್ರದರ್ಶನ ನಡೆದಿದೆ, ಚಾರ್ಲಿ 777 ಸಿನಿಮಾದ ಖ್ಯಾತಿಯ ಶ್ವಾನ ಕೂಡ ಪಾಲ್ಗೋಂಡರು ಎಲ್ಲಾರು ಗಮನ ಸೆಳೆಯಿತು.

Tap to resize

Latest Videos

29ಕ್ಕೂ ಹೆಚ್ಚು ತಳಿಯ ಶ್ವಾನ ಪ್ರದರ್ಶನ :  

ಕಾಫಿನಾಡು ಚಿಕ್ಕಮಗಳೂರು ನಗರದ ಬಿಎಡ್ ಕ್ರೀಡಾಂಗಣದಲ್ಲಿ ಶ್ವಾನ ಪ್ರದರ್ಶನ ಮತ್ತು ಸ್ಪರ್ಧೆ  ನಡೆಯಿತು. ಸುಮಾರು 3 ಕೆ.ಜಿ ತೂಕವಿರುವ ಮಿನಿ ಎಚ್ಚರ್‌ ಪಿಂಚರ್‌ ನಿಂದ 70 ಕೆ.ಜಿ.ಗೂ ಅಧಿಕ ತೂಕವಿರುವ ಸೇಂಟ್‌ ಬರ್ನಾಡ್‌ ಶ್ವಾನವೂ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಜರ್ಮನ್‌ ಶಫಡ್‌,ಪಗ್ , ಅಮೇರಿಕೇನ್ ಪೆಟ್ ಬುಲ್ , ಸೈಬೇರಿಯನ್‌ ಹಸ್ಕಿ, ಚೌಚೌ, ಗೋಲ್ಡನ್‌ ರಿಟ್ರೀವರ್‌, ಡಾಬರ್‌ಮನ್‌, ಗ್ರೇಡ್‌ ಡಾನ್‌,ರಾರ‍ಯಂಟ್‌ ವಿಲ್ಲರ್‌, ಬ್ಯಾಬ್ರಡಾರ್‌ ರೆಟ್ರೀವರ್‌, ಪಗ್‌, ಪಮೇರಿಯನ್‌, ಸೇಂಟ್‌ ಬರ್ನಾಡ್‌ರ್‌ ನಮ್ಮ ರಾಜ್ಯದ ಮೂಲದ ಮುಧೋಳ್‌, ಕ್ಯಾರವಾನ್‌ ಹೌಲ್ಡ  ಸೇರಿದಂತೆ ಒಟ್ಟು 28 ಕ್ಕೂ ಹೆಚ್ಚು ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡು ತಮ್ಮ ಕರಾಮತ್ತು ಪ್ರದರ್ಶಿಸಿದವು.ಸ್ಪರ್ಧಯಲ್ಲಿ 250ಕ್ಕೂ ಹೆಚ್ಚು ಶ್ವಾನ  ಭಾಗವಹಿಸಿದು ವಿಶೇಷವಾಗಿತ್ತು. 

Chikkamagaluru Utsav: ಎತ್ತಿನಗಾಡಿ ಮೆರವಣಿಗೆಯಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಭಾಗಿ

ನೋಡುಗರ ಆಕರ್ಷಿಸಿದ ಚಾರ್ಲಿ_777 

ಚಾರ್ಲಿ 777  ಚಲನಚಿತ್ರದಲ್ಲಿ ನಟಿಸಿರುವ ಲ್ಯಾಬ್ರಡಾರ್ ಶ್ವಾನವೂ ಕೂಡ ಪ್ರದರ್ಶನದಲ್ಲಿ  ಭಾಗವಹಿಸಿ ಆಕರ್ಷಣೀಯ ಕೇಂದ್ರವಾಗಿ ನೋಡುಗರ ಗಮನ ಸೆಳೆಯಿತು. ಚಾರ್ಲಿ ಜೊತೆಯಾಗಿಯೇ ಶಾಸಕ ಸಿ.ಟಿ. ರವಿ ಅವರು ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿದರು. ಚಾರ್ಲಿ ಹಿಡಿದು ಪ್ರದರ್ಶನದ ಅಂಗಳದಲ್ಲಿ ಶಾಸಕರು ಅಲೆದಾಡಿದಾಗ ನೋಡುಗರು ಹರ್ಷ್ಟೋದ್ಗಾರ ಮಾಡಿದರು. ಅಲ್ಲದೆ ಬಿಸ್ಕೇಟ್ ಕೊಡ್ತೀನಿ ಬಾ ಎಂದು  ಕರೆದು ಚಾರ್ಲಿ 777 ಶ್ವಾನದೊಂದಿಗೆ ರೌಂಡ್ಸ್ ಹಾಕಿ ಶ್ವಾನವನ್ನು ಮುದ್ದಾಡಿದರು. ಹಲವರು ಚಾರ್ಲಿ ಜೊತೆ ನಿಂತು ಸೆಲ್ಪಿ ತೆಗೆದುಕೊಂಡು ಸಂಭ್ರಮಿಸಿದರು. ಇನ್ನು ಕೆಲವರು ಚಾರ್ಲಿ777 ಶ್ವಾನವನ್ನು ಕುತೂವಲದಿಂದ ವೀಕ್ಷಣೆಯನ್ನು ಮಾಡಿದರು.ಇದೇ ಸಂದರ್ಭದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ನೊಂದಿಗೆ ಮಾತಾಡಿದ ಸಿ.ಟಿ ರವಿ ಉಪಕಾರ ಮಾಡಿದವರಿಗೆ ನಾಯಿ ಯಾವತ್ತೂ ದ್ರೋಹ ಮಾಡುವುದಿಲ್ಲ. ಆದರೆ, ಮನುಷ್ಯ ಉಪಕಾರ ಮಾಡಿದವರಿಗೂ ಕೆಟ್ಟದ್ದನ್ನು ಬಯಸುತ್ತಾನೆ. ಆಗ ಶ್ವಾನ ಹೊಂದಿರುವ ನಿಷ್ಠೆ, ನಂಬಿಕೆ ಪ್ರತಿಯೊಬ್ಬರಿಗೂ ನೆನಪಾಗುತ್ತದೆ. ನಾಯಿಗಿರುವ ನಿಯತ್ ನಿನಗಿಲ್ಲವೆಂಬ ಲೋಕ ರೂಢಿ ಪದ ಸಹ ಈ ಕಾರಣದಿಂದಲೇ ಹುಟ್ಟಿಕೊಂಡಿದೆ ಎಂದು ಗಾದೆ ಮಾತು ನೆನಪು ಮಾಡಿದರು. ಶ್ವಾನದ ಗುಣಸ್ವಾಭಾವ ಕುರಿತು ಅನೇಕ ಚಲನಚಿತ್ರ ನಿರ್ಮಾಣ ಮಾಡಲಾಗಿದೆ. ಇತ್ತೀಚೆಗೆ ತಯಾರಾದ ಚಾರ್ಲಿ 777 ಚಿತ್ರ ವಿಶ್ವದ ಅನೇಕರ ಮನ ಗೆದ್ದಿದೆ ಎಂದು ಸ್ಮರಿಸಿದರು.

ಅಪರೂಪದ ಶ್ವಾನಗಳನ್ನು ನೋಡಿ ಕಣ್ಣು ತುಂಬಿಕೊಂಡ ಶ್ವಾನ ಪ್ರೀಯರು 

ಅದರಂತೆ ಅವುಗಳ ವಯಸ್ಸು, ಆರೋಗ್ಯ, ಕ್ರಿಯಾಶೀಲತೆ ಹಾಗೂ ಸ್ವಚ್ಛತೆಗೆ ಅನುಗುಣವಾಗಿ 12 ಶ್ವಾನಗಳಿಗೆ ಬೆಸ್ಟ್‌ಇ ನ್‌ ಶೋ, 1ಕ್ಕೆ ಬೆಸ್ಟ್‌ ಇನ್‌ ಪಪ್ಪಿ ಬಹುಮಾನ ನಿಗದಿ ಮಾಡಲಾಗಿತ್ತು. ಸಿಂಹಮರಿ ಎನ್ನುವ ರೀತಿಯಲ್ಲಿ ಕೂದಲು ಹೊಂದಿರುವ ಚೌ ಚೌ, ಚಾರ್ಲಿ 777 ಖ್ಯಾತಿಯ ಶ್ವಾನ   ಪ್ರೀಯರನ್ನು ಆಕರ್ಷಣೆಯನ್ನು ಮಾಡಿತ್ತು. ಶ್ವಾನಗಳು ವಿಶೇಷವಾದ ಕೂದಲು, ಬಣ್ಣ, ದೇಹಾಕಾರದಿಂದ ಪ್ರೇಕ್ಷಕರನ್ನು ಸೆಳೆಯುತ್ತಿದ್ದವು. ನೋಡುವುದಕ್ಕೆ ಭಯ ತರಿಸುವಂತ್ತಿದ್ದರೂ, ಬಹಳ ಮೃದು ಸ್ವಭಾವದ ಶ್ವಾನಗಳನ್ನು , ಪ್ರೇಕ್ಷಕರು ಸುತ್ತುವರಿದು ತಾಮುಂದು, ನಾಮುಂದು ಎಂದು ಮೊಬೈಲ್ ನಲ್ಲಿ ವಿಡಿಯೋ , ಪೋಟೋವನ್ನು ಕ್ಲಿಕ್ಕಿಸಿದರೂ ,ಮಾಲೀಕರ ಸೂಚನೆಯಂತೆ ನಡೆದುಕೊಳ್ಳುತ್ತಿದ್ದು, ನೋಡಗರ ಆಸಕ್ತಿ ಕೆರಳಿಸಿತು.ಅಪರೂಪದ ಶ್ವಾನಗಳನ್ನುಶ್ವಾನ ಪ್ರೀಯರು ನೋಡಿ ಕಣ್ಣು ತುಂಬಿಕೊಂಡ್ರು, ಪ್ರದರ್ಶನದಲ್ಲಿ ಕೆಲವರು ತಳಿ ಬಗ್ಗೆ ವಿಚಾರಿಸಿ ಮಾಹಿತಿ ಪಡೆದುಕೊಳ್ಳುತ್ತಿದರು. ಒಟ್ಟಾರೆ ಚಿಕ್ಕಮಗಳೂರು ಹಬ್ದದ ಅಂಗವಾಗಿ ಆಯೋಜನೆ ಮಾಡಲಾಗಿದ್ದ ಡಾಗ್ ಶೋ ಸ್ಪರ್ಧಯಲ್ಲಿ ವಿವಿಧ ಜಾತಿಯ ತಳಿ ಶ್ವಾನಗಳು ಭಾಗವಹಿಸಿ ಮಲೆನಾಡಿನ ಜನರಿಗೆ  ಮನರಂಜನೆ ನೀಡಿದ್ದು ವಿಶೇಷವಾಗಿತ್ತು.

click me!