ಅಭಿಮನ್ಯು ಎದುರು ಭೀಮನ ಘರ್ಜನೆ: ನಿಖಿಲ್ ಚಿತ್ರಕ್ಕೆ ವಿಲನ್ ಆದ ದುನಿಯಾ ವಿಜಯ್!

By Govindaraj S  |  First Published Jan 15, 2024, 8:10 PM IST

ಕಳೆದ ಕೆಲ ದಿನಗಳ ಹಿಂದಷ್ಟೆ ಸ್ಯಾಂಡಲ್ವುಡ್ನ ಅಭಿಮನ್ಯು ನಿಖಿಲ್ ಕುಮಾರ್ ಸ್ವಾಮಿ ಹಾಗು ದುನಿಯಾ ವಿಜಯ್ ಮುಖಾಮುಖಿ ಆಗಿದ್ರು. ವಿಜಯ್ ನಿಖಿಲ್ ಸರ್ಪ್ರೈಸ್ ಮೀಟ್ ಇಬ್ಬರ ಫಾಲೋವರ್ಸ್ಗೆ ಖುಷಿ ಕೊಟ್ಟಿತ್ತು. ಇಬ್ಬರ ಬೇಟಿ ಗುಟ್ಟೇನು ಅಂತ ಹುಡುಕೋಕೆ ಶುರು ಮಾಡಿದ್ರು. 


ಕಳೆದ ಕೆಲ ದಿನಗಳ ಹಿಂದಷ್ಟೆ ಸ್ಯಾಂಡಲ್ವುಡ್ನ ಅಭಿಮನ್ಯು ನಿಖಿಲ್ ಕುಮಾರಸ್ವಾಮಿ ಹಾಗು ದುನಿಯಾ ವಿಜಯ್ ಮುಖಾಮುಖಿ ಆಗಿದ್ರು. ವಿಜಯ್ ನಿಖಿಲ್ ಸರ್ಪ್ರೈಸ್ ಮೀಟ್ ಇಬ್ಬರ ಫಾಲೋವರ್ಸ್ಗೆ ಖುಷಿ ಕೊಟ್ಟಿತ್ತು. ಇಬ್ಬರ ಬೇಟಿ ಗುಟ್ಟೇನು ಅಂತ ಹುಡುಕೋಕೆ ಶುರು ಮಾಡಿದ್ರು. ಈಗ ನಿಖಿಲ್ ವಿಜಯ್ ಬೇಟಿ ಸೀಕ್ರೆಟ್ ಗೊತ್ತಾಗಿದೆ. ಇಬ್ಬರು ಮುಖಾಮುಖಿ ಆಗಿದ್ದಕ್ಕೆ ಕಾರಣ ತಿಳಿದಿದೆ. ನಟ ದುನಿಯಾ ವಿಜಯ್ ಹಾಗು ನಿಖಿಲ್ ಕುಮಾರ್ ಕಾಂಬಿನೇಷನ್ನಲ್ಲಿ ಮಾಸ್ ಮಸಾಲ ಮೂವಿ ಬರುತ್ತಿದೆ. ಈ ಸಿನಿಮಾಗಾಗಿ ವಿಜಯ್ರನ್ನ ಭೇಟಿ ಮಾಡಿದ್ದಾರೆ ನಿಖಿಲ್. ನಿಖಿಲ್ ಕುಮಾರ್ನಾಯಕನಾಗಿರೋ ಚಿತ್ರಕ್ಕೆ ಲೈಕಾ ಪ್ರೊಡಕ್ಷನ್ ಬಂಡವಾಳ ಹೂಡುತ್ತಿದೆ. 

ಈ ಸಿನಿಮಾದಲ್ಲಿ ಭೀಮ ವಿಜಯ್ ವಿಲನ್ ಆಗಿ ಘರ್ಜಿಸುತ್ತಿದ್ದಾರೆ. ದುನಿಯಾ ವಿಜಯ್ ತೆಲುಗಿನ ವೀರ ನರಸಿಂಹ ರೆಡ್ಡಿ ಸಿನಿಮಾದಲ್ಲಿ ವಿಲನ್ ಆಗಿ ಬಾಲಯ್ಯನ ಎದುರು ತೊಡೆ ತಟ್ಟಿದ್ರು. ಹಾಗ್ ನೋಡಿದ್ರೆ ವಿಜಯ್ ವಿಲನ್ ಪಾತ್ರಗಳ ಮೂಲಕವೇ ಚಿತ್ರರಂಗಕ್ಕೆ ಬಂದವ್ರು. ಕಿಚ್ಚನ ರಂಗ ಎಸ್ಎಸ್ಎಲ್ಸಿ ಸಿನಿಮಾದಿಂದ ಶಿವಣ್ಣನ ಜೋಗಿ ಸಿನಿಮಾದಲ್ಲೂ ವಿಜಯ್ ವಿಲನ್ ಆಗಿದ್ರು. ನಟ ವಿಜಯ್ ಸಧ್ಯ ಭೀಮನಾಗಿ ಘರ್ಜಿಸುತ್ತಿದ್ದಾರೆ. ಈ ಸಿನಿಮಾ ಬಿಡುಗಡೆ ದಿನಾಂಕ ಇನ್ನು ಅನೌನ್ಸ್ ಆಗಿಲ್ಲ. ಆಗ್ಲೇ ಸ್ಯಾಂಡಲ್ವುಡ್ ಸಿನಿ ಪ್ರೇಕ್ಷಕರಲ್ಲಿ ಭೀಮನ ಬಜನೆ ನಡೆಯುತ್ತಿದೆ. 

Tap to resize

Latest Videos



ಇದೀಗ ನಿಖಿಲ್ ಕುಮಾರ್ ಹೊಸ ಸಿನಿಮಾದಿಂದ ವಿಜಯ್ ಮತ್ತೆ ತಮ್ಮ ಹಳೇ ವೈಭವಕ್ಕೆ ಇನ್ನು ಸ್ಟ್ರಾಂಗ್ ವಿಲನ್ಆಗಿ ಕಮ್ ಬ್ಯಾಕ್ ಆಗುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ನ ನಿಖಿಲ್ ಸಿನಿಮಾದ ಮಹೂರ್ಥ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಆಗಿತ್ತು. ದೇವೇಗೌಡ್ರು ಬಂದು ಚಿತ್ರತಂಡಕ್ಕೆ ಶುಭ ಕೋರಿದ್ರು. ಇದೀಗ ಈ ಸಿನಿಮಾದ ಟೈಟಲ್ ಕೂಡ ಫಿಕ್ಸ್ ಆಗಿದೆ. ಕೆಜಿಎಫ್ನಲ್ಲಿ ಯಶ್ರನ್ನ ಮಾನ್ಸ್ಟರ್ ಅಂತ ಕರೆದಿದ್ರಲ್ಲ. ಅದೇ ಮಾನ್ಸ್ಟರ್ ಟೈಟಲ್ಅನ್ನ ನಿಖಿಲ್ ಸಿನಿಮಾಗೆ ಫಿಕ್ಸ್ ಮಾಡಲಾಗಿದೆ. ಬೋಗನ್, ಭೂಮಿ, ರೋಮಿಯೋ ಅಂಡ್ ಜೂಲಿಯೆಟ್‌ನಂತಹ ತಮಿಳು ಸಿನಿಮಾಗಳನ್ನು ನಿರ್ದೇಶಿಸಿರೋ ಲಕ್ಷ್ಮಣ್ ಈ ಮಾನ್ ಸ್ಟರ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈಗ ನಟ ದುನಿಯಾ ವಿಜಯ್ ಈ ಮಾನ್ಸ್ಟಾರ್ ನಲ್ಲಿ ವಿಲನ್ ಆಗಿರೋದು ಲೇಟೆಸ್ಟ್ ಸೆನ್ಸೇಷನ್.

click me!