ಸ್ಯಾಂಡಲ್‌ವುಡ್‌ನ ಟಾಪ್‌ 5 ಸುದ್ದಿಗಳು; ಮುಂದೆ ಯಾರ ಜತೆ ಯಾರು ಸಿನಿಮಾ ಮಾಡಲಿದ್ದಾರೆ?

Kannadaprabha News   | Asianet News
Published : Apr 12, 2021, 08:57 AM ISTUpdated : Apr 12, 2021, 09:02 AM IST
ಸ್ಯಾಂಡಲ್‌ವುಡ್‌ನ ಟಾಪ್‌ 5 ಸುದ್ದಿಗಳು; ಮುಂದೆ ಯಾರ ಜತೆ ಯಾರು ಸಿನಿಮಾ ಮಾಡಲಿದ್ದಾರೆ?

ಸಾರಾಂಶ

ಸದ್ಯ ಸ್ಯಾಂಡಲ್‌ವುಡ್‌ನಲ್ಲಿ ಟಾಪ್‌ 5 ಸುದ್ದಿಗಳು ಸಿಕ್ಕಾಪಟ್ಟೆಸದ್ದು ಮಾಡುತ್ತಿದೆ. ಈಗ ಗಾಸಿಪ್‌ನಂತೆ ಸದ್ದು ಮಾಡುತ್ತಿರುವ ಈ ಸುದ್ದಿಗಳು ಮುಂದೆ ನಿಜ ಆದರೂ ಅಚ್ಚರಿ ಇಲ್ಲ. ಅಂಥ ಟಾಪ್‌ 5 ಸುದ್ದಿಗಳು ಇಲ್ಲಿವೆ.

1. ಲೂಸಿಯಾ ಪವನ್‌ ಜತೆ ಪವರ್‌ ಸ್ಟಾರ್‌

ಗಾಂಧಿನಗರದಲ್ಲಿ ಬಲು ಜೋರಾಗಿಯೇ ಓಡಾಡುತ್ತಿರುವ ಸುದ್ದಿ ಇದು. ‘ಯುವರತ್ನ’ ಬಿಡುಗಡೆ ಸಂಭ್ರಮದ ನಂತರ ತಣ್ಣಗೆ ‘ಜೇಮ್ಸ್‌’ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿರುವ ಪವರ್‌ಸ್ಟಾರ್‌ ಪುನೀತ್‌ರಾಜ್‌ಕುಮಾರ್‌ ಈಗಾಗಲೇ ಎರಡು ಚಿತ್ರಗಳಿಗೆ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ. ಒಂದು ಸಂತೋಷ್‌ ಆನಂದ್‌ರಾಮ್‌, ಮತ್ತೊಂದು ದಿನಕರ್‌ ತೂಗದೀಪ್‌ ನಿರ್ದೇಶನದ ಸಿನಿಮಾ. ಆದರೆ, ಇದರ ಹೊರತಾಗಿಯೂ ನಿರ್ದೇಶಕ ಲೂಸಿಯಾ ಪವನ್‌ಕುಮಾರ್‌ ಜತೆಗೂ ಪವರ್‌ ಸ್ಟಾರ್‌ ಸಿನಿಮಾ ಮಾಡಲಿದ್ದಾರೆ. ಈ ಚಿತ್ರವನ್ನೂ ಕೂಡ ಹೊಂಬಾಳೆ ಫಿಲಮ್ಸ್‌ನ ವಿಜಯ್‌ ಕಿರಗಂದೂರು ಅವರೇ ನಿರ್ಮಿಸಲಿದ್ದಾರೆ ಎಂಬುದು ಸದ್ಯದ ಸುದ್ದಿ. ಮೊದಲೆರಡು ಚಿತ್ರಗಳಿಗಿಂತಲೂ ಲೂಸಿಯಾ ಜತೆ ಪವರ್‌ ಸ್ಟಾರ್‌ ಸಿನಿಮಾ ದೊಡ್ಡ ಮಟ್ಟದಲ್ಲೇ ಸದ್ದು ಮಾಡುತ್ತಿರುವುದು ಮಾತ್ರ ಸುಳ್ಳಲ್ಲ.

2. ಹೊಸ ನಿರ್ದೇಶಕನ ಅಡ್ಡದಲ್ಲಿ ಆ್ಯಕ್ಷನ್‌ ಪ್ರಿನ್ಸ್‌

ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ‘ಪೊಗರು’ ಚಿತ್ರದ ನಂತರ ಇದೇ ಕಾಂಬಿನೇಷನ್‌ನಲ್ಲಿ ‘ದುಬಾರಿ’ ಹೆಸರಿನ ಸಿನಿಮಾ ಶೂಟಿಂಗ್‌ ಅಖಾಡಕ್ಕೆ ಇಳಿಯಬೇಕಿತ್ತು. ಆದರೆ, ಯಾಕೋ ಹಾಗೆ ಆಗುವಂತೆ ಕಾಣುತ್ತಿಲ್ಲ. ನಂದ ಕಿಶೋರ್‌ ಶ್ರೇಯಸ್‌ ನಟನೆಯ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಇತ್ತ ಧ್ರುವ ಸರ್ಜಾ ಹೆಸರು ತೆಲುಗು ನಿರ್ದೇಶಕನ ಜತೆ ಕೇಳಿ ಬರುತ್ತಿದೆ. ಆದರೆ, ಈಗಿನ ಹೊಸ ಮಾಹಿತಿ ಪ್ರಕಾರ ಕನ್ನಡದ ಹೊಸ ನಿರ್ದೇಶಕನೇ ಆ್ಯಕ್ಷನ್‌ ಪ್ರಿನ್ಸ್‌ ಚಿತ್ರವನ್ನು ನಿರ್ದೇಶಿಸಲಿದ್ದಾರೆ ಎನ್ನಲಾಗುತ್ತಿದೆ. ಪ್ರೊಡಕ್ಷನ್‌ ನಂ.1 ಹೆಸರಿನಲ್ಲಿ ಈ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದ್ದು, ಆ ಹೊಸ ನಿರ್ದೇಶಕ ಯಾರೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

3. ದರ್ಶನ್‌ ದರ್ಶನ ಮಾಡಿರುವ ಜೋಗಿ ಪ್ರೇಮ್‌

ನಿರ್ದೇಶಕ ಜೋಗಿ ಪ್ರೇಮ್‌ ಹಾಗೂ ದರ್ಶನ್‌ ಜೋಡಿಯಲ್ಲಿ ಒಂದು ಸಿನಿಮಾ ಸೆಟ್ಟೇರುವ ಸುದ್ದಿ ತುಂಬಾ ಹಿಂದೆಯೇ ಕೇಳಿ ಬಂದಿತ್ತಾದರೂ ಯಾಕೋ ಈ ಸುದ್ದಿಯೂ ತಣ್ಣಗಾಗುತ್ತಿದೆ ಎಂದುಕೊಳ್ಳುವ ಹಾಗಾಗಿತ್ತು. ಇದೇ ಟೈಮ್‌ನಲ್ಲಿ ಜೋಗಿ ಪ್ರೇಮ್‌, ಈಗಷ್ಟೆದರ್ಶನ್‌ ಅವರ ದರ್ಶನ ಮಾಡಿಕೊಂಡು ಬಂದಿದ್ದಾರೆ. ಒಂದೇ ವಾರದಲ್ಲಿ ಮೂರು ನಾಲ್ಕು ಬಾರಿ ಚಾಲೆಂಜಿಂಗ್‌ ಸ್ಟಾರ್‌ ಮನೆಗೆ ಹೋಗಿ ಬಂದಿದ್ದಾರೆ ಪ್ರೇಮ್‌. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ‘ಗೋಲ್ಡ್‌ ರಿಂಗ್‌’ ಚಿತ್ರಕ್ಕೂ ಮೊದಲು ಅಥವಾ ನಂತರ ಪ್ರೇಮ್‌ ನಿರ್ದೇಶನದಲ್ಲಿ ದರ್ಶನ್‌ ಸಿನಿಮಾ ಸೆಟ್ಟೇರುವ ಲಕ್ಷಣಗಳು ಕಾಣುತ್ತಿವೆ. ಈ ಚಿತ್ರಕ್ಕೂ ಉಮಾಪತಿ ಅವರೇ ನಿರ್ಮಾಪಕರು ಎಂಬುದು ಮತ್ತೊಂದು ಸುದ್ದಿ. ಆದರೆ, ‘ಗೋಲ್ಡ್‌ ರಿಂಗ್‌’ ಚಿತ್ರಕ್ಕೆ ಇನ್ನೂ ನಿರ್ದೇಶಕರು ಯಾರೆಂಬುದು ಪಕ್ಕಾ ಆಗಿಲ್ಲ. ಒಂದು ವೇಳೆ ಈ ಚಿತ್ರವನ್ನೇ ಪ್ರೇಮ್‌ ನಿರ್ದೇಶನ ಮಾಡಿದರೂ ಅಚ್ಚರಿ ಪಡಬೇಕಿಲ್ಲ.

4. ದುಬಾರಿ ಸೆಟ್ಟೇರುತ್ತಾ?

ಇದು ಉದಯ್‌ ಕೆ ಮೆಹ್ತಾ ನಿರ್ಮಾಣದ ಸಿನಿಮಾ. ಮೊದಲೇ ಘೋಷಣೆ ಮಾಡಿರುವಂತೆ ನಂದ ಕಿಶೋರ್‌ ನಿರ್ದೇಶಿಸಬೇಕಿರುವ ಸಿನಿಮಾ ಇದು. ಆದರೆ, ‘ಪೊಗರು’ ಸಿನಿಮಾ ನಿರೀಕ್ಷಿತ ಫಲಿತಾಂಶ ಬಾರದೆ ಹೋಗಿರುವುದು, ಅದೇ ರೀತಿ ದೊಡ್ಡ ಬಜೆಟ್‌ ಮೇಕಿಂಗ್‌, ಅದೇ ಮಾಸ್‌ ಹಾಗೂ ಆ್ಯಕ್ಷನ್‌ ಕತೆ ಎನ್ನುವ ಕಾರಣಕ್ಕೆ ಧ್ರುವ ಸರ್ಜಾ ಅವರು ಸದ್ಯಕ್ಕೆ ‘ದುಬಾರಿ’ ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿಲ್ಲ ಎಂಬುದು ಗಾಂಧಿನಗರದ ಗಾಸಿಪ್ಪು. ಹಾಗಾದರೆ ‘ದುಬಾರಿ’ ಸೆಟ್ಟೇರುವುದು ಯಾವಾಗ ಎನ್ನುವ ಪ್ರಶ್ನೆಗೆ ನಿರ್ಮಾಪಕರೇ ಉತ್ತರ ಕೊಡಬೇಕಿದೆ.

5. ಕಿಚ್ಚ ಕೊಟ್ಟಬಹಿರಂಗ ಅಹ್ವಾನ

ನಟ ಸುದೀಪ್‌ ನಿರ್ದೇಶಕ ಜೋಗಿ ಪ್ರೇಮ್‌ ಅವರಿಗೆ ಮತ್ತೊಂದು ಕಾಲ್‌ಶೀಟ್‌ ಕೊಟ್ಟಿದ್ದಾರಂತೆ. ಸುದೀಪ್‌ ಅವರೇ ಕರೆದು ಸಿನಿಮಾ ಮಾಡುವಂತೆ ಹೇಳಿದ್ದಾರೆ ಎಂಬುದು ಗಾಂಧಿನಗರದ ಹಾಟ್‌ ಟಾಪಿಕ್‌. ಕಿಚ್ಚನ ಈ ಓಪನ್‌ ಅಫರ್‌ ಯಾವಾಗ ಕಾರ್ಯಗತವಾಗುತ್ತೆ ಎಂಬುದು ‘ವಿಕ್ರಾಂತ್‌ ರೋಣಾ’ ಚಿತ್ರದ ಮೇಲೆ ರಿಲೀಸ್‌ ಮೇಲೆ ನಿಂತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಪೋಸ್ಟರ್ ರಿಲೀಸ್ ಮಾಡಿ ಕುತೂಹಲ ಹೆಚ್ಚಿಸಿದ ಯಶ್, ಸಿನಿಮಾ ಬಿಡುಗಡೆ ಕೌಂಟ್‌ಡೌನ್ ಶುರು
ಕನ್ನಡಿಗರ ಪ್ರೀತಿಯ ಪುಟ್ಟಿ ಯಾಕ್ ಹೀಗಾದ್ರು? Rukmini Vasanth ನ್ಯೂ ಲುಕ್ ವೈರಲ್