ನಿರ್ದೇಶಕರ ಪರ ನಿಂತ ಹುಚ್ಚ ವೆಂಕಟ್. ಫೈಟಿಂಗ್ ಆಂಡ್ ಫಯರಿಂಗ್ ಸ್ಟಾರ್ ಮನಸ್ಸಿಗೆ ನೋವಾಗಿದ್ದಕ್ಕೆ ಅಭಿಮಾನಿಗಳಿಗೂ ಬೇಸರ.....
ನಿರ್ದೇಶಕ ಗುರು ಪ್ರಸಾದ್ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಶಾಕ್. ಸರಸ್ವತಿ ಪುತ್ರ ಅಂತಲೇ ಹೆಸರು ಮಾಡಿದ್ದ ಗುರು ಪ್ರಸಾದ್ ಮಠ ಅನ್ನೋ ಅದ್ಭುತ ಚಿತ್ರವನ್ನು ನೀಡಿದ್ದರು. ನಡುವೆ ಒಂದೆರಡು ಫ್ಲಾಪ್ ಎದುರಿಸಿದ್ದರು ಚಲ ಬಿಡದೆ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದರು. ಹುಟ್ಟುಹಬ್ಬದ ದಿನವೂ ಯಾರ ಸಂಪರ್ಕಕ್ಕೆ ಸಿಗದ ಕಾರಣ ಎಲ್ಲಿದ್ದಾರೆ ಏನಾಯ್ತು ಅನ್ನೋ ಪ್ರಶ್ನೆ ಆಪ್ತರಲ್ಲಿ ಹುಟ್ಟುಕೊಂಡಿತ್ತು. ಅಕ್ಕ ಪಕ್ಕದ ಮನೆಯವರು ನೋಡಿದಾಗ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಗುರು ಪ್ರಸಾದ್ ಕಂಡು ಬಂದರು. ಅಲ್ಲಿಗೆ ಪೊಲೀಸರು ಆಗಮಿಸಿ ಪೋಸ್ಟ್ ಮಾರ್ಟಮ್‌ಗೆ ರವಾನೆ ಮಾಡಿದ್ದರು. ಆನಂತರ ಗುರು ಇಬ್ಬರು ಪತ್ನಿಯರ ಸಮ್ಮುಖದಲ್ಲಿ ಅಂತ್ಯಕ್ರಿಯೆ ನಡೆಯಿತ್ತು.
ಗುರು ಪ್ರಸಾದ್ ನೇಣು ಬಿಗಿದುಕೊಳ್ಳುವ ವ್ಯಕ್ತಿ ಅಲ್ಲ ಅನ್ನೋದು ಪ್ರತಿಯೊಬ್ಬರಿಗೂ ಗೊತ್ತಿತ್ತು ಆದರೆ ಧೈರ್ಯ ಕೆಟ್ಟಿ ಈ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನೆಂದು ಯಾರಿಗೂ ತಿಳಿದಿಲ್ಲ. ನಟ ಡಾಲಿ ಧನಂಜಯ್, ದುನಿಯಾ ವಿಜಯ್ ಮತ್ತು ಸತೀಶ್ ನೀನಾಸಂ ಒಟ್ಟಿಗಿ ಆಗಮಿಸಿ ಅಂತಿಮ ಸಂಸ್ಕಾರ ಮುಗಿಯುವವರೆಗೂ ಕುಟುಂಬಸ್ಥರ ಪರವಾಗಿ ನಿಂತ ಧೈರ್ಯ ಹೇಳಿದ್ದರು. ಆದರೆ ಗುರು ಪ್ರಸಾದ್‌ಗೆ ಆಪ್ತರಾಗಿದ್ದ ಜಗ್ಗೇಶ್ ನೀಡಿರುವ ಹೇಳಿಕೆ ನಿಜಕ್ಕೂ ಬೇಸರ ತಂದಿದೆ ಅಂತಿದ್ದಾರೆ ಜನರು. ಜಗ್ಗೇಶ್ ಮಾತುಗಳ ಬಗ್ಗೆ ಬಿಗ್ ಬಾಸ್ ಹುಚ್ಚ ವೆಂಕಟ್ ಕೂಡ ಅಸಮಾಧಾನ ಹೊರ ಹಾಕಿದ್ದಾರೆ.
undefined
ಸಾಕ್ಷಿ ಸಮೇತ ಗೋಲ್ಡ್ ಸುರೇಶ್ ಡಬಲ್ ಗೇಮ್ ಎಕ್ಸ್‌ಪೋಸ್ ಮಾಡಿದ ಬಿಗ್ ಬಾಸ್; ಕಣ್ಮುಂದೆ
'ಗುರು ಪ್ರಸಾದ್ ಅವರ ಬಗ್ಗೆ ಜಗ್ಗೇಶ್ ಮಾತನಾಡಿದ್ದು ಬಹಳ ಬೇಸರ ಆಯ್ತು. ಈಗ ಗುರು ಪ್ರಸಾದ್ ಅವರು ಇಲ್ಲ, ಅವರ ಮನೆಯವರು ಇನ್ನೂ ನೋವಿನಲ್ಲಿ ಇರುತ್ತಾರೆ. ಆ ನೋವಿನಲ್ಲಿ ಇರುವವರಿಗೆ ಇನ್ನೂ ನೋವು ಬೇಕಾ?. ತಪ್ಪು ಸರ್..ಒಬ್ಬು ಮನುಷ್ಯ ಬದುಕಿರುವಾಗ ಮಾತನಾಡಿದ್ದರೆ ತಪ್ಪು ಇನ್ನು ತೀರಿಕೊಂಡಿರುವವರ ಬಗ್ಗೆ ಏನ್ ಏನೋ ಮಾತನಾಡಿ ಅವರ ಫ್ಯಾಮಿಲಿ ಮೆಂಬರ್‌ಗಳಿಗೆ ಏನಾಗಬಹುದು? ಮೊದಲೇ ತೀರಿಕೊಂಡಿರುವ ನೋವಿನಲ್ಲಿ ಇದ್ದಾರೆ ಈಗ ನಿಮ್ಮ ಮಾತುಗಳನ್ನು ಕೇಳಿ ಇನ್ನೂ ನೋವಾಗುತ್ತದೆ. ಮನುಷ್ಯ ಸತ್ತ ಮೇಲೆ ಅವರ ಬಗ್ಗೆ ಮಾತನಾಡಬಾರದು. ಇನ್ನು ಮುಂದೆ ಅವರ ಬಗ್ಗೆ ಯಾರ ಬಳಿನೂ ಮಾತನಾಡಬೇಡಿ ಬುದ್ಧಿ ಹೇಳುವಷ್ಟು ಚಿಕ್ಕವನು ನಾನು ನಿಮ್ಮಷ್ಟು ದೊಡ್ಡವನು ಅಲ್ಲ ಅದರೆ ಬಹಳ ನೋವಾಯ್ತು ಸರ್. ಮನುಷ್ಯ ಸತ್ತ ಮೇಲೆ ಈ ರೀತಿ ಮಾತನಾಡಿದಕ್ಕೆ ತುಂಬಾ ನೋವಾಯ್ತು. ಗುರು ಪ್ರಸಾದ್ ಅವರ ಫ್ಯಾಮಿಲಿಗೂ ಹೇಳುತ್ತೀನಿ ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ ಏನೋ misunderstanding ಇರುತ್ತೆ, ಗುರು ಸರ್ ಆ ರೀತಿ ಅಲ್ಲ' ಎಂದು ಹುಚ್ಚ ವೆಂಕಟ್ ಮಾತನಾಡಿದ್ದಾರೆ.