'ಬೇರ' ನಿಜ ಅರ್ಥದ ಕರಾ‍ವಳಿ ಫೈಲ್ಸ್: ಹರ್ಷಿಕಾ ಪೂಣಚ್ಚ ಬಿಚ್ಚಿಟ್ಟ ಸತ್ಯಗಳು

Published : Jun 14, 2023, 08:59 AM IST
'ಬೇರ' ನಿಜ ಅರ್ಥದ ಕರಾ‍ವಳಿ ಫೈಲ್ಸ್: ಹರ್ಷಿಕಾ ಪೂಣಚ್ಚ ಬಿಚ್ಚಿಟ್ಟ ಸತ್ಯಗಳು

ಸಾರಾಂಶ

‘ಬೇರ’ ಸಿನಿಮಾ ಜೂ.16ರಂದು ಬಿಡುಗಡೆ. ಯಶ್‌ ಶೆಟ್ಟಿ, ಸುಮನ್, ಹರ್ಷಿಕಾ, ದೀಪಕ್ ರೈ ಪಾಣಾಜೆ ನಟಿಸಿರುವ ಸಿನಿಮಾ. ಯಾಕೆ ನೋಡ್ಬೇಕು ಗೊತ್ತಾ?

ವಿನು ಬಳಂಜ ನಿರ್ದೇಶನದ, ದಿವಾಕರ ದಾಸ್‌ ನೇರ್ಲಾಜೆ ನಿರ್ಮಾಣದ ‘ಬೇರ’ ಸಿನಿಮಾ ಜೂ.16ರಂದು ಬಿಡುಗಡೆಯಾಗುತ್ತಿದೆ. ಯಶ್‌ ಶೆಟ್ಟಿ, ಸುಮನ್, ಹರ್ಷಿಕಾ, ದೀಪಕ್ ರೈ ಪಾಣಾಜೆ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಚಿತ್ರದ ಕುರಿತಾಗಿ ಹರ್ಷಿಕಾ ಪೂಣಚ್ಚ ಹೇಳಿರುವ ಮಾತುಗಳು ಇಲ್ಲಿವೆ.

- ಕರಾವಳಿಯಲ್ಲಿ ನಡೆಯುವ ನೈಜ ಘಟನೆಗಳನ್ನು ಆಧರಿಸಿ ವಿನು ಬಳಂಜ ಈ ಸಿನಿಮಾ ಮಾಡಿದ್ದಾರೆ. ಬೇರ ಸಿನಿಮಾ ನಿಜ ಅರ್ಥದಲ್ಲಿ ಕರಾವಳಿ ಫೈಲ್ಸ್‌. ಆದರೆ ಇಲ್ಲಿ ಯಾವುದೇ ಧರ್ಮದ ಜನರಿಗೆ ನೋವಾಗುವಂತೆ ಚಿತ್ರೀಕರಣ ಮಾಡಿಲ್ಲ. ಯಾರಿಗೂ ಬೇಸರವಾಗದಂತೆ ಕತೆ ರೂಪಿಸಲಾಗಿದೆ.

ನನ್ನನ್ನು 'ಆ' ರೀತಿ ನೋಡ್ತಾರೆ, ಒಬ್ಬ ಹುಡ್ಗನೂ ಧೈರ್ಯ ಮಾಡಿಲ್ಲ: ಉರ್ಫಿ ಜಾವೇಜ್ ಕೆರಳಿಸುವ ಹೇಳಿಕೆ ವೈರಲ್!

- ನನಗೆ ಎಲ್ಲಾ ಧರ್ಮದ ಸ್ನೇಹಿತರೂ ಇದ್ದಾರೆ. ಯಾರಿಗೂ ನೋವಾಗಬಾರದು ಎಂದು ಬಯಸುವವಳು ನಾನು. ಈ ಸಿನಿಮಾದ ಉದ್ದೇಶ ಕೂಡ ಅದೇ. ಕೆಲವರು ಅಮಾಯಕರ ಜೀವಕ್ಕೆ ಬೆಲೆ ಕಟ್ಟಿ ಅ‍ವರನ್ನು ಬಲಿ ಕೊಡುತ್ತಾರೆ. ಹಾಗಾಗಬಾರದು. ಒಂದು ಜೀವ ಬಲಿಯಾದರೆ ಪ್ರತಿಯೊಬ್ಬ ತಾಯಿ, ಪ್ರತಿಯೊಂದು ಕುಟುಂಬ ಬೆಲೆ ತೆರುತ್ತಾರೆ. ಅದನ್ನು ತಪ್ಪಿಸುವ ಒಳ್ಳೆಯ ಉದ್ದೇಶದಿಂದ ರೂಪಿಸಲಾದ ಸಿನಿಮಾ ಇದು.

- ನನ್ನದು ಟ್ರಾವೆಲ್‌ ಏಜೆಂಟ್‌ ಪಾತ್ರ. ಎರಡು ಶೇಡ್‌ ಇರುವ ಪಾತ್ರ. ಒಂದು ಶೇಡ್‌ನಲ್ಲಿ ತಮಾಷೆಯಾಗಿ ಮಾತಾಡುತ್ತೇನೆ. ಇನ್ನೊಂದು ಶೇಡ್‌ನಲ್ಲಿ ಬಹಳ ಗಂಭೀರವಾಗಿರುತ್ತೇನೆ. ಈ ಪಾತ್ರ ನಿಜಕ್ಕೂ ನನಗೆ ಸವಾಲಿನದಾಗಿತ್ತು. ಇಂಥದ್ದೊಂದು ಪಾತ್ರ ಸಿಕ್ಕಿದ್ದೇ ನನ್ನ ಅದೃಷ್ಟ. ಒಳ್ಳೆಯ ಯೋಚನೆಯ ಒಳ್ಳೆಯ ಉದ್ದೇಶದ ಸಿನಿಮಾದಲ್ಲಿ ಭಾಗವಾಗುವ ಅವಕಾಶವನ್ನು ನನಗೆ ಒದಗಿಸಿದ್ದಕ್ಕೆ ನಿರ್ದೇಶಕರಿಗೆ, ನಿರ್ಮಾಪಕರಿಗೆ ನಾನು ಆಭಾರಿ.

ಮಗಳು ನನ್ನ ಕೆಲಸ ಅರ್ಥ ಮಾಡಿಕೊಂಡು ಗೌರವಿಸುತ್ತಿರುವುದೇ ಹೆಚ್ಚು: ಐಶ್ವರ್ಯ ರೈ

- ಗಂಭೀರವಾದ ಸಿನಿಮಾದಲ್ಲಿ ನನ್ನ ಮತ್ತು ಸ್ವರಾಜ್ ಶೆಟ್ಟಿ ಪಾತ್ರ ನಗು ಉಕ್ಕಿಸುವಂತೆ ಮಾಡುತ್ತವೆ. ಈ ಚಿತ್ರದಲ್ಲಿ ನಮ್ಮಿಬ್ಬರದು ಜೋಡಿ. ಆದರೆ ಕೊನೆಯ ತನಕವೂ ಆ ಪಾತ್ರ ನನ್ನ ಕೈಹಿಡಿಯುವುದಕ್ಕೂ ಆಗುವುದಿಲ್ಲ. ಈ ಸಿನಿಮಾ ಗಂಭೀರವಾಗಿರುವ ಜೊತೆಗೆ ಮನರಂಜನೆ ಕೊಡುತ್ತದೆ.

- ವಿನು ಬಳಂಜ ತುಂಬಾ ಸ್ಪಷ್ಟತೆ ಇರುವ ನಿರ್ದೇಶಕ. ಅವರ ಜೊತೆ ಕೆಲಸ ಮಾಡುವುದು ಖುಷಿ ಕೊಟ್ಟಿದೆ. ಚಿತ್ರದ ಚಿತ್ರೀಕರಣ ನಡೆದಿದ್ದು ಮಂಗಳೂರಿನಲ್ಲಿ. ಮಂಗಳೂರು ನನಗೆ ಎರಡನೇ ಮನೆ ಇದ್ದಂತೆ. ಒಳ್ಳೆಯ ಕಲಾವಿದರು ಈ ಸಿನಿಮಾದಲ್ಲಿದ್ದಾರೆ. ಹಾಗಾಗಿ ಒಂದೊಳ್ಳೆಯ ತಂಡದ ಜೊತೆ ಕೆಲಸ ಮಾಡಿದ ಸಮಾಧಾನ ನನಗಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆಂಧ್ರಪ್ರದೇಶದ X MLA Gummadi Narsaiah ಮನೆಗೆ ಹೋದಾಗ ನನ್ನ ತಂದೆ ಬಳಿಗೆ ಹೋದಂತಾಯ್ತು: Shiva Rajkumar
ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯುವ ಸಿನಿಮಾ: ‘45’ ಟ್ರೇಲರ್ ಬಿಡುಗಡೆಗೆ ಕೌಂಟ್‌ಡೌನ್