
ಬೆಂಗಳೂರು (ಅ.03) ರಿಷಬ್ ಶೆಟ್ಟಿ ನಿರ್ದೇಶನ ಹಾಗೂ ನಟನೆಯ ಕಾಂತಾರಾ ಚಾಪ್ಟರ್ 1 ಸಿನಿಮಾ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಹಾಲಿವುಡ್ ರೇಂಜ್‌ಗೆ ಕನ್ನಡ ಸಿನಿಮಾವನ್ನು ಕೊಂಡೊಯ್ದಿದ್ದಾರೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ. ದೇಶದೆಲ್ಲೆಡೆ ಕಾಂತಾರಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹಲವು ಸೆಲೆಬ್ರೆಟಿಗಳು ಕಾಂತಾರಾ ಸಿನಿಮಾ ವೀಕ್ಷಿಸಿ ಮೆಚ್ಚುಕೊಂಡಿದ್ದಾರೆ. ಇದೀಗ ರಾಕಿಂಗ್ ಸ್ಟಾರ್ ಯಶ್ ಕೂಡ ಕಾಂತಾರ ಚಾಪ್ಟರ್ 1 ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ವೀಕ್ಷಿಸಿದ ಬಳಿಕ ಕಾಂತಾರಾ 1 ಸಿನಿಮಾ ಕುರಿತು ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಕಾಂತಾರಾ ಸಿನಿಮಾ ವೀಕ್ಷಿಸಿದ ಯಶ್, ಇದು ಕನ್ನಡ ಹಾಗೂ ಭಾರತೀಯ ಸಿನಿಮಾದ ಬೆಂಚ್‌ಮಾರ್ಕ್ ಎಂದು ಬಣ್ಣಿಸಿದ್ದಾರೆ. ಇದೇ ವೇಳೆ ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನವನ್ನೂ ಯಶ್ ಕೊಂಡಾಡಿದ್ದಾರೆ. ರಿಷಬ್ ಶೆಟ್ಟಿ ದೃಋ ಸಂಕಲ್ಪ, ಭಕ್ತಿ, ಸಾಹಸ,ನಂಬಿಕೆ, ಶ್ರದ್ಧೆ ಎಲ್ಲವೂ ಸಿನಿಮಾದ ಪ್ರತಿ ಫ್ರೇಮ್‌ನಲ್ಲಿ ನೋಡಲು ಸಾಧ್ಯವಾಗುತ್ತಿದೆ. ಒಬ್ಬ ಬರಹಗಾನರನಾಗಿ, ನಿರ್ದೇಶಕನಾಗಿ, ನಟನಾಗಿ ನಿಮ್ಮ ದೃಷ್ಠಿಕೋನ, ನಿಮ್ಮ ಆಲೋಚನೆ ಸ್ಕ್ರೀನ್ ಮೇಲೆ ನೋಡುವಾಗ ನಾವು ತಲ್ಲೀನರಾಗುತ್ತಿದ್ದೇವೆ ಎಂದು ಯಶ್ ಹೇಳಿದ್ದಾರೆ.
ದೊಡ್ಡ ಸಿನಿಮಾಗಳನ್ನು ತೆರೆ ಮೇಲೆ ತರಲು ಹೊಂಬಾಳೆ ಫಿಲ್ಮಂ ನೀಡುತ್ತಿರುವ ಪ್ರೋತ್ಸಾಹ, ಬೆಂಬಲ ನಿಜಕ್ಕೂ ಕನ್ನಡ ಸಿನಿಮಾಗೆ ಹೊಸ ಮುನ್ನಡಿ ಬರೆದಿದೆ. ನಿಮ್ಮ ಸಹಕಾರ, ಬೆಂಬಲದಿಂದ ಕನ್ನಡ ಸಿನಿಮಾ ಹೊಸ ಮೈಲಿಗಲ್ಲು ನಿರ್ಮಿಸುತ್ತಿದೆ ಎಂದು ಯಶ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ರುಕ್ಮಿಣಿ ವಸಂತ್, ಗುಲ್ಶನ್ ದೇವಯ್ಯ ಪರ್ಫಾಮೆನ್ಸ್, ಅಭಿಮಾನಿಗಳನ್ನು ಹಿಡಿದಿಟ್ಟುಕೊಳ್ಳುವ ಸನ್ನಿವೇಶಗಳು ನಿಜಕ್ಕೂ ಅದ್ಭುತವಾಗಿದೆ. ಅಜನೀಶ್ ಲೋಕನಾಥ್ ಸಂಗೀತ, ಅರವಿಂದ್ ಕಶ್ಯಪ್ ಅದ್ಭುತ ಕ್ಯಾಮೆರಾ ಕೈಚಳಕ, ಜಯರಾಮ್, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮಿನಾಡ್ ಸೇರಿದಂತೆ ಇಡೀ ತಂಡದ ಸದಸ್ಯರ ಪರ್ದರ್ಶನ ಉತ್ತಮವಾಗಿ ಮೂಡಿಬಂದಿದೆ ಎಂದು ಯಶ್ ಹೇಳಿದ್ದರೆ. ಇದೇ ವೇಳೆ ಅಗಲಿದೆ ಕಲಾವಿದ ರಾಕೇಶ್ ಪೂಜಾರಿಯ ಅದ್ಭುತ ಪ್ರದರ್ಶನಕ್ಕೆ ಸಲಾಂ ಹೇಳಿರುವ ಯಶ್, ಈ ಸಂದರ್ಭದಲ್ಲಿ ಗೌರವ ನಮನ ಸಲ್ಲಿಸಿದ್ದಾರೆ. ಎಲ್ಲರು ಜೊತೆಯಾಗಿ ಅದ್ಭುತ ಸಿನಿಮಾ ನೀಡಿದ್ದೀರಿ ಎಂದು ಯಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಾಂತಾರಾ ಚಾಪ್ಟರ್ 1 ಸಿನಿಮಾ ಮೊದಲ ದಿನವೇ ಬರೋಬ್ಬರಿ 60 ಕೋಟಿ ರೂಪಾಯಿ ಕಲಕ್ಷೆನ್ ಮಾಡಿದೆ. ಈ ಮೂಲಕ ಇದರ ಜೊತೆಗೆ ಬಿಡುಗಡೆಯಾಗಿರುವ ಹಲವು ಬಾಲಿವುಡ್ ಸಿನಿಮಾಗಳನ್ನು ಧೂಳೀಪಟ ಮಾಡುವಂತೆ ಮಾಡಿದೆ. ವರುಣ್ ಧವನ್, ಜಾಹ್ನವಿ ಕಪೂರ್ ಸೇರಿದಂತೆ ಬಾರಿ ಬಾಲಿವುಡ್ ತಾರಾಣಗಣದ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಸಿನಿಮಾ ಅಕ್ಟೋಬರ್ ರಂದು ಕೇವಲ 9.25 ಕೋಟಿ ರೂಪಾಯಿ ಸಂಗ್ರಹ ಮಾಡಿದೆ. ಹಲೆವೆಡೆ ಟಿಕಟ್‌ಗಾಗಿ ಭಾರಿ ಕ್ಯೂ,ಕಾದು ಸುಸ್ತಾದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಘಚನೆಗಳು ನಡೆದಿದೆ. ದೇಶ ವಿದೇಶಗಳಲ್ಲೂ ಕಾಂತಾರಾ ಸಿನಿಮಾ ವೀಕ್ಷಿಸಲು ಜನರು ಹಾತೊರೆಯುತ್ತಿದ್ದಾರೆ. ಹಲೆವೆಡೆ ಎಲ್ಲಾ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿವೆ.
ಕಾಂತಾರಾ ಚಾಪ್ಟರ್ 1 ಸಿನಿಮಾ ಬಿಗ್ ಬಜೆಟ್ ಸಿನಿಮಾ. ಮೂಲಗಳ ಪ್ರಕಾರ 125 ಕೋಟಿ ರೂಪಾಯಿಗೂ ಹೆಚ್ಚು ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿದೆ ಎಂದು ಹೇಳಲಾಗುತ್ತಿದೆ. ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ನಿರೀಕ್ಷೆಯಲ್ಲಿ ಚಿತ್ರ ತಂಡ ನಿಂತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.