'ಅಮೃತಮತಿ' ಹರಿಪ್ರಿಯಾಗೆ ಯಶೋಧರನಾದ ಕಿಶೋರ್!

By Suvarna News  |  First Published Dec 3, 2019, 2:37 PM IST

ಸಾಹಿತಿ ಬರಗೂರು ರಾಮಚಂದ್ರಪ್ಪ ನಿರ್ದೇಶನದ ‘ಅಮೃತಮತಿ’ ಚಿತ್ರವು ಚಿತ್ರೀಕರಣ ಮುಗಿಸಿ, ಸೆನ್ಸಾರ್‌ಗೆ ಸಿದ್ಧವಾಗಿದೆ. ಇದೀಗ ಚಿತ್ರತಂಡವು ‘ಅಮೃತಮತಿ’ ಪಾತ್ರದ ಫಸ್ಟ್‌ಲುಕ್‌ ರಿವೀಲ್‌ ಮಾಡಿದೆ.


ಗ್ಲಾಮರಸ್‌ ನಟಿ ಹರಿಪ್ರಿಯಾ ಇಲ್ಲಿ ‘ಅಮೃತಮತಿ’ಯಾಗಿ ಕಾಣಿಸಿಕೊಂಡಿದ್ದು, ಐತಿಹಾಸಿಕ ಕತೆಯಲ್ಲಿನ ಅವರ ಪಾತ್ರದ ಮೊದಲ ಲುಕ್‌ ಸಾಕಷ್ಟುಆಕರ್ಷಕವಾಗಿದೆ. ನಟ ಕಿಶೋರ್‌ ಯಶೋಧರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

'ಕನ್ನಡ್‌ ಗೊತ್ತಿಲ್ಲ' ಎನ್ನುವವರಿಗೆ ಮಾತ್ರ

Tap to resize

Latest Videos

undefined

13ನೇ ಶತಮಾನದ ಜನ್ನಕವಿ ರಚಿಸಿದ ‘ಯಶೋಧರ ಚರಿತೆ’ ಕಾವ್ಯವನ್ನು ಆಧರಿಸಿದ ಚಿತ್ರವೇ ಅಮೃತಮತಿ. ಯುವರಾಜ ಯಶೋಧರನ ಪತ್ನಿ ಅಮೃತಮತಿಯು ಒಂದು ದಿನ ಕುದುರೆ ಲಾಯದ ಉಸ್ತುವಾರಿ ಅಷ್ಟಾವಂಕನ ಹಾಡಿಗೆ ಮೋಹಿತಳಾಗುತ್ತಾಳೆ. ಅದು ಯಶೋಧರನಿಗೆ ಗೊತ್ತಾಗಿ ಅವರಿಬ್ಬರನ್ನು ಕೊಲ್ಲಲು ಯತ್ನಿಸುತ್ತಾನೆ. ಆದರೆ ಅದು ಆತನಿಂದ ಸಾಧ್ಯವಾಗುವುದಿಲ್ಲ. ಕೊನೆಗೆ ಅಮೃತಮತಿಯೇ ಗಂಡ ಮತ್ತು ಅತ್ತೆ ಮಾವಂದಿರ ಸಾವಿಗೆ ಕಾರಣಳಾಗುತ್ತಾಳೆ. ಆನಂತರ ಜನ್ಮಾಂತರಗಳಲ್ಲಿ ಮರುಹುಟ್ಟು ಪಡೆಯುತ್ತಾರೆನ್ನುವುದು ಜನ್ನ ಕವಿಯ ಯಶೋಧರ ಚರಿತೆಯ ಮೂಲ ಕತೆ. ಅದನ್ನೀಗ ಪುನರ್‌ವ್ಯಾಖ್ಯಾನ ಮಾಡಲು ಹೊರಟಿದ್ದಾರೆ ನಿರ್ದೇಶಕ ಬರಗೂರು ರಾಮಚಂದ್ರಪ್ಪ.

ನಟಿಯ ಕೈ ಗೀಚಿದ ಹುಡುಗ! ಏನಿದು ಗೆಸ್ ಮಾಡಿ!

‘ಅಮೃತಮತಿ ಮತ್ತು ಅರಮನೆ ವ್ಯವಸ್ಥೆಯ ನಡುವಿನ ಮುಖಾಮುಖಿಯ ಮೂಲಕ ಮೂಲ ಕಥನದಲ್ಲಿದ್ದ ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಮರು ವ್ಯಾಖ್ಯಾನದ ಹೊಸ ರೂಪ ನೀಡಲಾಗಿದೆ’ ಎನ್ನುತ್ತಾರೆ ಬರಗೂರು ರಾಮಚಂದ್ರಪ್ಪ. ವಿಧಾನ ಪರಿಷತ್‌ ಸದಸ್ಯ ಪುಟ್ಟಣ್ಣ ಈ ಚಿತ್ರದ ನಿರ್ಮಾಪಕರು. ಸುಂದರ ರಾಜ್‌, ಪ್ರಮೀಳಾ ಜೋಷಾಯ್‌, ಸುಪ್ರಿಯಾ ರಾವ್‌, ಅಂಬರೀಶ್‌ ಸಾರಂಗಿ, ವತ್ಸಲಾ ಮೋಹನ್‌ ಇದ್ದಾರೆ. ಈ ಚಿತ್ರಕ್ಕೆ ಶಮಿತಾ ಮಲ್ನಾಡ್‌ ಸಂಗೀತವಿದೆ.

click me!