
ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ 'ದಬಾಂಗ್ -3' ಮತ್ತು ಬಿಗ್ ಬಾಸ್ ಸೀಸನ್ 7 ಶೂಟಿಂಗ್‌ನಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು ಈ ನಡುವೆಯೂ ಅಭಿಮಾನಿಯನ್ನು ಭೇಟಿ ಮಾಡಲು ತಮ್ಮ ಶೂಟಿಂಗ್ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಐಷಾರಾಮಿ ಕಾರು ಬಿಟ್ಟು ಸೈಕಲ್ ಏರಿದ ಕಿಚ್ಚ ಸುದೀಪ್!
ದೀಪಿಕಾ ವಿಶೇಷ ಚೇತನ ಮಗು. ಆಕೆಗೆ ಸುದೀಪ್ ಅಂದ್ರೆ ಪಂಚ ಪ್ರಾಣವಂತೆ. ಅವರನ್ನು ನೋಡದೆ ಅವರೊಂದಿಗೆ ಮಾತನಾಡದೆ ಏನೂ ತಿನ್ನುವುದಿಲ್ಲ ಏನೂ ಕುಡಿಯುವುದಿಲ್ಲ ಎಂದು ಹಠ ಮಾಡಿದ ಕಾರಣ ಅವರನ್ನು ಮಂಗಳೂರಿನಿಂದ ಬೆಂಗಳೂರಿನ ಶೂಟಿಂಗ್ ಸ್ಥಳಕ್ಕೆ ಕರೆಸಿಕೊಂಡಿದ್ದಾರೆ.
ಹೊಸ ರೆಸಿಪಿಗಾಗಿ ಹುಡುಕ್ತಾ ಇದೀರಾ? ಕಿಚ್ಚ ಸುದೀಪ್ ಹೇಳಿ ಕೊಡ್ತಾರೆ ನೋಡಿ!
ಸುದೀಪ್‌ರನ್ನು ನೋಡುತ್ತಿದ್ದಂತೆ ಓಡಿ ಬಂದು ತಬ್ಬಿಕೊಂಡ ದೀಪಿಕಾರನ್ನು ಹೂಗುಚ್ಛ ನೀಡಿ ಸ್ವಾಗತಿಸಿದರು. ಮತ್ತು 'ನಗುತಾ ನಗುತಾ ಬಾಳು ನೀನು ನೂರು ವರುಷಾ' ಎಂದು ಹಾಡಿದ ಹಾಡಿಗೆ ಸುದೀಪ್ ಭಾವುಕರಾಗಿದ್ದಾರೆ. ಪ್ರತಿ ದಿನ 10 ಮಾತ್ರೆಗಳನ್ನು ದೀಪಿಕಾ ಸೇವಿಸಬೇಕಿದ್ದು ಅದನ್ನು ಮಿಸ್ ಮಾಡಬಾರದು ಮತ್ತು ದಿನಾ ಊಟ ಮಾಡಬೇಕು ಎಂದು ಸುದೀಪ್ ಪ್ರಾಮಿಸ್ ತೆಗೆದುಕೊಂಡಿದ್ದಾರೆ. ಸುದೀಪ್ ಅವರನ್ನು ಮಂಗಳೂರಿನ ಮನೆಗೆ ಆಹ್ವಾನಿಸಿದ್ದು ಬರುವುದಾಗಿ ಸುದೀಪ್ ಭರವಸೆ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.