Yash ದಕ್ಷಿಣ ಸಿನಿಮಾ ದಿಕ್ಕು ಬದಲಿಸಿದ್ದು ಬಾಹುಬಲಿ: ಯಶ್‌

Published : Nov 07, 2022, 09:54 AM IST
Yash ದಕ್ಷಿಣ ಸಿನಿಮಾ ದಿಕ್ಕು ಬದಲಿಸಿದ್ದು ಬಾಹುಬಲಿ: ಯಶ್‌

ಸಾರಾಂಶ

ಇಂಡಿಯಾ ಟುಡೇ ಸಂವಾದದಲ್ಲಿ ಅಭಿಮತ. ರಾಜಕೀಯದಲ್ಲಿ ಆಸಕ್ತಿ ಇಲ್ಲ ಎಂದ ನಟ ರಾಕಿಂಗ್ ಸ್ಟಾರ್ ಯಶ್..

ಮುಂಬೈ: ಈ ಹಿಂದೆ ಅಪಹಾಸ್ಯಕ್ಕೆ ಒಳಗಾಗುತ್ತಿದ್ದ ದಕ್ಷಿಣ ಚಿತ್ರಗಳ ದಿಕ್ಕು ಬದಲಾಯಿಸಿದ್ದು ‘ಬಾಹುಬಲಿ’ ಚಿತ್ರ. ಅದೇ ಟ್ರೆಂಡನ್ನು ಈಗ ‘ಕೆಜಿಎಫ್‌’ ಸೇರಿ ದಕ್ಷಿಣದ ಚಿತ್ರಗಳು ಮುಂದುವರಿಸಿವೆ ಎಂದು ಕೆಜಿಎಫ್‌ ಖ್ಯಾತಿಯ ಕನ್ನಡ ನಟ ಯಶ್‌ ಹೇಳಿದ್ದಾರೆ.

ಶನಿವಾರ ಇಂಡಿಯಾ ಟುಡೇ ಸುದ್ದಿ ವಾಹಿನಿಯ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ‘ಉತ್ತರ ಭಾರತದಲ್ಲಿ ಸುಮಾರು 10 ವರ್ಷಗಳ ಹಿಂದೆ ಹಿಂದಿಗೆ ಡಬ್‌ ಆಗುತ್ತಿದ್ದ ದಕ್ಷಿಣ ಭಾರತದ ಸಿನಿಮಾಗಳ ಸಾಹಸ ದೃಶ್ಯ ಹಾಗೂ ಡಬ್ಬಿಂಗ್‌ ಅನ್ನು ಅಪಹಾಸ್ಯ ಮಾಡಲಾಗುತ್ತಿತ್ತು. ನಮ್ಮ ಸಿನಿಮಾಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದ್ದವು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ದೇಶಾದ್ಯಂತ ನಮ್ಮ ಸಿನಿಮಾಗಳನ್ನು ಜನ ಇಷ್ಟಪಡುತ್ತಿದ್ದಾರೆ. ಮೊದಲು ಈ ಸಾಹಸ ಮಾಡಿದ್ದು ರಾಜಮೌಳಿ. ಅವರ ಬಾಹುಬಲಿ ಚಿತ್ರಕ್ಕೆ ಈ ಕ್ರೆಡಿಟ್‌ ಸಲ್ಲುತ್ತದೆ.’ಎಂದಿದರು. ಅಲ್ಲದೆ, ಕೆಜಿಎಫ್‌ ಚಿತ್ರವನ್ನು ಜನರನ್ನು ಪ್ರಚೋದಿಸಲು ಸಿದ್ಧಪಡಿಸಿಲ್ಲ. ಅವರಿಗೆ ಸ್ಫೂರ್ತಿ ತುಂಬಲು ನಿರ್ಮಿಸಿದ್ದೇವೆ ಎಂದು ಸ್ಪಷ್ಟಪಡಿಸಿದರು.

ರಾಜಕೀಯದಲ್ಲಿ ಆಸಕ್ತಿ ಇಲ್ಲ:

ಈ ನಡುವೆ ರಾಜಕೀಯ ಸೇರುವ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಮೊದಲು ನನ್ನನ್ನು ಬದಲಿಸಿಕೊಳ್ಳುವೆ. ನಂತರ ಚಿತ್ರೋದ್ಯಮವನ್ನು. ಇತಿಮಿತಿಯೊಳಗೆ ಸಮಾಜಸೇವೆ ಕೂಡ ಮಾಡುವೆ. ಜನರ ಜೀವನ ಬದಲಿಸಲು ಅನೇಕ ಮಾರ್ಗಗಳಿವೆ. ರಾಜಕೀಯ ಎನ್ನುವುದು ಥ್ಯಾಂಕ್‌ಲೆಸ್‌ ಕೆಲಸ. ಅದರಲ್ಲಿ ನನಗೆ ಆಸಕ್ತಿ ಇಲ್ಲ’ ಎಂದು ಯಶ್‌ ಸ್ಪಷ್ಟಪಡಿಸಿದರು.

ಆಕ್ಷನ್ ಸಿನಿಮಾದಲ್ಲಿ violence  ಇದ್ಯಾ?:

ಕ್ರಿಯೇಟಿವ್ ಜನರಾಗಿ ನಾನು ಪ್ರೆಸೆಂಟ್ ಮಾಡಬೇಕು ಯಾವುದು ಸರಿ ಯಾವುದು ತಪ್ಪು ಎಂದು ಜನರು ನಿರ್ಧರಿಸುತ್ತಾರೆ. ನೀವು ಈ ಪ್ರಶ್ನೆಗಳನ್ನು ಆಕ್ಷನ್ ಪಿಕ್ಚರ್ ಮಾಡುವವರನ್ನು ಕೇಳಬೇಕು ಅಮಿತಾಭ್ ಬಚ್ಚನ್ ಸರ್‌ ಕೂಡ ಸಿನಿಮ್ಯಾಟಿಕ್ ಲಿಬರ್ಟಿಯನ್ನು ಎಲ್ಲರು ಅರ್ಥ ಮಾಡಿಕೊಳ್ಳುತ್ತಾರೆ. ನೀವು ಒಬ್ಬರನ್ನು ಹೊಡೆಯುತ್ತಿದ್ದರೆ ನೋವವರಿಗೆ ಗೊತ್ತು ನಿಜ ಜೀವನದಲ್ಲಿ ನೀವು ಅಷ್ಟೊಂದು ಜನರಿಗೆ ಹೊಡೆಯಲು ಆಗುವುದಿಲ್ಲ ಎಂದು. ಒಬ್ಬ ನಟ 100 ಜನರಿಗೆ ಹೊಡೆಯುತ್ತಿದ್ದಾನೆ ಅಂತ ಯಾರೂ ಸಿನಿಮಾ ನೋಡಲು ಹೋಗುವುದಿಲ್ಲ ಅದೇ ಕ್ರಿಮಿನಲ್ ಆಕ್ಟಿವಿಟಿ ತೋರಿಸಿ ಅಗ ತಪ್ಪು ಎಂದು ಹೇಳಬಹುದು. ನಾವು ಕ್ರಿಯೇಟಿವ್ ಜನರು ಸಿನಿಮಾದಲ್ಲಿ ಬರೀ ಒಳ್ಳೆಯ ವಿಚಾರಗಳನ್ನು ತೋರಿಸಲು ಆಗುವುದಿಲ್ಲ ಹೀಗಾಗಿ ಏನೇ ತೋರಿಸಿದ್ದರು ನಮಗೊಂದು ಲಿಮಿಟ್ ಇರುತ್ತದೆ ಒಂದು ಕ್ಲಾರಿಟಿ ಇರುತ್ತದೆ ಕೊನೆ ಒಳ್ಳೆ ವಿಚಾರಗಳನ್ನು ಒಂದು ಪ್ಯಾಕೇಟ್ ಮಾಡಿ ಜನರ ಮುಂದೆ ಇಡುತ್ತೀವಿ. ನಿಮಗೆ ನಾನು ಮೊದಲೇ ಹೇಳಿದ ಹಾಗೆ ಕೆಲವೊಂದು ವಿಚಾರಗಳನ್ನು ಅದರದ್ದೇ ರೀತಿಯಲ್ಲಿ ಹೇಳಬೇಕು ಈಗ ನೀವು ರಾಕಿ ನೋಡಿದ್ದರೆ ಅತನನ್ನು ಅದೆಷ್ಟೋ ವಿಚಾರಗಳಿಗೆ ಸ್ಫೂರ್ತಿಯಾಗಿ ಸ್ವೀಕರಿಸಬಹುದು. ಈಗ ನೀವು ರಾವಣ ಕ್ಯಾರೆಕ್ಟರ್ ನೋಡಿದ್ದರೆ ಆತನಲ್ಲಿ ಒಳ್ಳೆಯ ಗುಣ ಮತ್ತು ಕೆಟ್ಟಗುಣ ಎರಡೂ ಇದೆ...ಎರಡರ ಮಿಶ್ರಣವೇ ಬ್ಯೂಟಿ. Violance ವಿಚಾರದಲ್ಲಿ ನಾವು ತಮಾಷೆ ಮಾಡುತ್ತೀವಿ ಈಗ ನಾನು  Violance ಅಂತ ಹೇಳುವ ಮೂಲಕ ಇದನ್ನು ಡೈಲಾಗ್‌ನ ಸ್ಟೈಲಿಷ್ ಮಾಡುತ್ತೀವಿ ಹೊರತು  Violance ಮಾಡುವುದಿಲ್ಲ' ಯಶ್.

ಕಾಂತಾರ ನಮ್ಮ ಸಿನಿಮಾ:

'ರಜನೀಕಾಂತ್ ಅವರ ತಮಿಳು ಚಿತ್ರಗಳು ಸೇರಿ ತೆಲಗು, ಮಲಯಾಳಂ ಸಿನಿಮಾಗಳು ಈಗಾಗಲೇ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಹೆಗ್ಗುರುತು ಮೂಡಿಸುವಲ್ಲಿ ಯಶಸ್ವಿಯಾಗಿವೆ. ನಿಮ್ಮ ಸಿನಿಮಾ ಕಾಂತಾರ, ನಿಮ್ಮ ಸಿನಿಮಾವೆಂದರೆ ನೀವು ನಟಿಸದೇ ಇರಬಹುದು. ಕನ್ನಡ ಸಿನಿಮಾವೊಂದು ಭಾರತೀಯ ಚಿತ್ರರಂಗದಲ್ಲಿ ಇಷ್ಟು ಯಶ ಕಾಣಲು ಸಾಧ್ಯವಾಗಿದೆ. ಈ ವರ್ಷ ಕನ್ನಡ ಚಿತ್ರಗಳ ವರ್ಷ. ನಮ್ಮ ಬೆಂಗಳೂರು ಬಜ್ ವರ್ಡ್ ಆಗಿದ್ದು ಹೇಗೆ? ' ಎಂಬಂತೆ ಪ್ರಶ್ನಿಸಿದ್ದರು. ತಕ್ಷಣವೇ ಉತ್ತರಿಸಿದ ಯಶ್, ನಾನು ನಟಿಸದೇ ಹೋದರೇನು, ಇದೂ ನಮ್ಮ ಸಿನಿಮಾವೇ. ನಮ್ಮ ಕನ್ನಡ ಚಿತ್ರರಂಗದ ಸಿನಿಮಾ ಇಷ್ಟೊಂದು ಹೆಸರು ಮಾಡುತ್ತಿರುವುದಕ್ಕೆ, ನಮಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?
Karna Serial: ಸಂಜಯ್‌ ಕುತಂತ್ರಕ್ಕೆ ಬಲಿಯಾದ ನಿತ್ಯಾ: ಈಗ ಕರ್ಣನ ಜೊತೆ ಅಸಲಿ ಮದುವೆ ಆಗ್ಲೇಬೇಕು! ನಿಧಿ ಕಥೆ ಏನು?