
ಬೆಂಗಳೂರು: ನಟ ಉಪೇಂದ್ರ ಅವರ ಸಹೋದರನ ಪುತ್ರ ನಟ ನಿರಂಜನ್ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಈ ಸಂದರ್ಭದಲ್ಲಿ ಹಲವಾರು ತಾರೆಯರು ಬಂದು ನೂತನ ವಧು-ವರರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಎಲ್ಲರ ಗಮನ ಸೆಳೆದದ್ದು, ತಾರಾ ಜೋಡಿ ಉಪೇಂದ್ರ ಮತ್ತು ಪ್ರಿಯಾಂಕಾ ಉಪೇಂದ್ರ ಅವರ ಮಕ್ಕಳಾದ ಆಯುಷ್ ಮತ್ತು ಐಶ್ವರ್ಯ ಉಪೇಂದ್ರ (Ayush and Aishwarya Upendra).
ಇವರಿಬ್ಬರ ಸ್ಟನ್ನಿಂಗ್ ಲುಕ್ ಎಲ್ಲರ ಗಮನ ಸೆಳೆಯಿತು. ಗೂಗಲ್ ದಾಖಲೆಯ ಪ್ರಕಾರ ಐಶ್ವರ್ಯ ಅವರಿಗೆ 21 ವರ್ಷ ವಯಸ್ಸು. ಕಾಲೇಜು ಓದುತ್ತಿರುವ ಐಶ್ವರ್ಯ, ಸಿನಿಮಾಗೆ ನಾಯಕಿಯಾಗಿ ಬರುವ ಯಾವುದೇ ಯೋಚನೆ ಮಾಡಿಲ್ಲ. ಮಗ ಆಯುಷ್ಗೆ 22 ವರ್ಷ ವಯಸ್ಸು. ಆಯುಷ್ ಅವರು ಮೊದಲ ಸಿನಿಮಾಕ್ಕೆ ರೆಡಿಯಾಗಿದ್ದಾರೆ. ಇದರ ಚಿತ್ರೀಕರಣ ನಡೆಯುತ್ತಿದೆ.
ಐಶ್ವರ್ಯ, 2019ರಲ್ಲಿ ಬಿಡುಗಡೆಯಾದ ರೋಹಿತ್ ಹೆಚ್. ನಿರ್ದೇಶನದ ದೇವಕಿ (Devaki) ಸಿನಿಮಾದಲ್ಲಿ ತಾಯಿ ಪ್ರಿಯಾಂಕಾ ಉಪೇಂದ್ರ ಅವರ ಮಗಳ ಪಾತ್ರದಲ್ಲಿ (ಆರಾಧ್ಯಾ) ಅಭಿನಯಿಸಿ ಗಮನ ಸೆಳೆದಿದ್ದಾರೆ. ಚಿತ್ರರಂಗದಲ್ಲಿ ಬಾಲನಟಿಯಾಗಿ ಹಾಗೂ ಕೆಲವೊಮ್ಮೆ ಸಹಾಯಕ ನಿರ್ದೇಶಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಸದ್ಯಕ್ಕಂತೂ ಮಿಡಿಯಾದಿಂದ ದೂರ ಉಳಿದಿರುವ ಐಶ್ವರ್ಯ, ಲೈಮ್ ಲೈಟಲ್ಲಿ ಕಾಣಿಸಿಕೊಳ್ಳುವುದೇ ತುಂಬಾನೆ ಕಡಿಮೆ.
ಆದರೆ ಅದಾದ ಬಳಿಕ ಐಶ್ವರ್ಯ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿಲ್ಲ. ಏಳು ವರ್ಷವಾದರೂ ಒಂದೇ ಸಿನಿಮಾ ಮಾಡಲಿಲ್ಲ. ಇದೀಗ ಐಶ್ವರ್ಯ ಅವರಿಗೆ 21 ವರ್ಷ ವಯಸ್ಸು. ನಾಯಕಿಯಾಗಿ ಕಾಣಿಸಿಕೊಳ್ಳುವ ವಯಸ್ಸಿದು. ಆದರೂ ಚಿತ್ರದಲ್ಲಿ ಏಕೆ ಕಾಣಿಸಿಕೊಳ್ಳಲಿಲ್ಲ ಎನ್ನುವುದು ಅವರ ಅಭಿಮಾನಿಗಳ ಪ್ರಶ್ನೆ. ಒಂದು ಚಿತ್ರ ಆದ ಮೇಲೆ ಮಗಳಿಗೆ ಸಿಕ್ಕಾಪಟ್ಟೆ ಆಫರ್ಸ್ ಬರ್ತಿವೆ. ಆದರೆ ಅವಳಿಗೆ ಸಿನಿಮಾದಲ್ಲಿ ಸ್ವಲ್ಪವೂ ಇಷ್ಟವಿಲ್ಲ. ಅವಳ ಮನಸ್ಸಿನಲ್ಲಿ ಏನಿದೆ ಎನ್ನುವುದು ಗೊತ್ತಿಲ್ಲ. ಆಫರ್ಸ್ ಎಲ್ಲಾ ರಿಜೆಕ್ಟ್ ಮಾಡುತ್ತಿದ್ದಾಳೆ, ಸಿನಿಮಾ ಬೇಡ ಎನ್ನುತ್ತಿದ್ದಾಳೆ. ಅದಕ್ಕಾಗಿ ನಾವು ಒತ್ತಾಯ ಮಾಡುತ್ತಿಲ್ಲ ಎಂದಿದ್ದಾರೆ ಅಮ್ಮ ಪ್ರಿಯಾಂಕಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.