ಚೆನ್ನಾಗಿದ್ರೆ ಜೋರಾಗಿ ಹೇಳಿ, ತಪ್ಪಾಗಿದ್ರೆ ಕಿವೀಲಿ ಹೇಳಿ: ಅಯೋಗ್ಯರು ಕೊಟ್ಟ ಯೋಗ್ಯ ಸಲಹೆ

Published : Jul 10, 2026, 04:51 PM IST
Ayogya 2 Press Meet

ಸಾರಾಂಶ

Ayogya 2: ಅದು ಅಯೋಗ್ಯ 2 ಹಾಡು ಬಿಡುಗಡೆಯ ಪ್ರೆಸ್‌ಮೀಟ್‌. ಗಣ್ಯರಿಂದ ಹಾಡು ಬಿಡುಗಡೆಯಾಯ್ತು. ಹಾಡು ಬರೆದವರು ಬಹದ್ದೂರ್‌ ಚೇತನ್‌. ಹಾಡು ಕೇಳಿದ ನಂತರ ಅದರಲ್ಲಿನ ಲೋಪದ ಬಗ್ಗೆ ಮಾತು ಬಂತು.

ಅದು ಅಯೋಗ್ಯ 2 ಹಾಡು ಬಿಡುಗಡೆಯ ಪ್ರೆಸ್‌ಮೀಟ್‌. ಗಣ್ಯರಿಂದ ಹಾಡು ಬಿಡುಗಡೆಯಾಯ್ತು. ಹಾಡು ಬರೆದವರು ಬಹದ್ದೂರ್‌ ಚೇತನ್‌. ಹಾಡು ಕೇಳಿದ ನಂತರ ಅದರಲ್ಲಿನ ಲೋಪದ ಬಗ್ಗೆ ಮಾತು ಬಂತು. ‘6 ಗಂಟೆ ಮೇಲೆ ಮಂಡ್ಯದಲ್ಲಿ ಎಲ್ಲರೂ ಹಾಗೇ ಮಾತನಾಡೋದು’ ಎಂದು ಸ್ಪಷ್ಟನೆ ನೀಡಿದ ಚೇತನ್‌ ಮರುಕ್ಷಣ ಹಠಾತ್‌ ಎಮೋಶನ್‌ಗೆ ಒಳಗಾದರು. ತಾನು ಪ್ರಶ್ನೆಗಳಿಂದ ಕಂಗಾಲಾಗಿದ್ದೇನೆ ಎಂದರು. ‘ತಪ್ಪಿದ್ರೆ ಸೈಡಿಗೆ ಕರ್ದು ಹೇಳೀಪ್ಪಾ, ತಿದ್ಕೋತೀವಿ. ಪ್ರೆಸ್‌ಮೀಟ್‌ನಲ್ಲಿ ಎಲ್ಲರೆದುರು ಹೀಗೆಲ್ಲ ಕೇಳಬೇಡಿ’ ಎಂದು ದಯನೀಯವಾಗಿ ಕೋರಿಕೊಂಡರು.

ಆಮೇಲೆ ಸತೀಶ್‌ ನೀನಾಸಂ, ‘ನಮ್ಮ ಮನಸ್ಸಲ್ಲಿರೋದನ್ನೇ ಚೇತನ್‌ ಹೇಳಿದ್ದಾರೆ’ ಅಂದುಬಿಟ್ಟರು. ಜೊತೆಗೆ, ‘ನಾನು ಇನ್ನು ಪ್ರೆಸ್‌ಮೀಟ್‌ಗೆ ಬಂದರೆ ಮಾತಾಡಲ್ಲ, ನನ್ನ ಬಾಯಿಗೆ ಟೇಪ್‌ ಹಾಕಬೇಕು ಅಂತ ಅನ್ನಿಸ್ತಿದೆ. ನಾನು ಏನು ಮಾತನಾಡಿದರೂ ವಿವಾದ ಆಗುತ್ತದೆ. ಇಲ್ಲಿ ಮಾತಾಡಿದ್ರೆ ಹೀಗೆ, ಸೋಷಿಯಲ್‌ ಮೀಡಿಯಾದಲ್ಲಿ ಹಾಡೋ ಟೀಸರೋ ರಿಲೀಸ್‌ ಆದ ತಕ್ಷಣ ಯೂಟ್ಯೂಬ್‌ ಅಲ್ಲಿ ನೀನು ಹೀರೋನೆ ಅಲ್ಲ, ನೋಡೋಕೆ ಹಂಗಿದ್ದೀಯ, ಹಿಂಗಿದ್ದೀಯ ಅಂತಾರೆ’ ಎಂದು ನೋವು ತೋಡಿಕೊಂಡರು.

ಮತ್ತೆ ಕಷ್ಟಕ್ಕೆ ದೂಡದಿರಿ

ಚಿತ್ರರಂಗ ಸಂಕಷ್ಟದಲ್ಲಿದೆ, ದಯಮಾಡಿ ನೊಂದವರಿಗೆ ಪ್ರಶ್ನೆಕೇಳಿ ಇನ್ನಷ್ಟು ನೋಯಿಸಬೇಡಿ. ನಿಮ್ಮಿಂದ ನಮಗೆ ಸಮಸ್ಯೆ ಆಗುತ್ತಿದೆ ಸಂಕಷ್ಟದಲ್ಲಿರುವ ಚಿತ್ರರಂಗವನ್ನು ಮತ್ತೆ ಕಷ್ಟಕ್ಕೆ ದೂಡದಿರಿ ಎಂಬ ಬೇಡಿಕೆಗಳು ಪತ್ರಿಕಾಗೋಷ್ಠಿಗಳಲ್ಲಿ ಕೇಳಿಬರುತ್ತಲೇ ಇರುತ್ತವೆ.

ಸಿನಿಮಾ ಟೀಕಿಸಬಾರದು, ರೇಟಿಂಗ್ ನೀಡಬಾರದು, ನೆಗೆಟಿವ್ ಬರೆಯಬಾರದು, ಕತೆ ಹೇಳಬಾರದು- ಹೀಗೆ ಪ್ರತಿ ಪತ್ರಿಕಾಗೋಷ್ಠಿಯಲ್ಲೂ ತಡೆಯಾಜ್ಞೆಗಳು. ಸಂಕಷ್ಟದಲ್ಲಿರುವ ಚಿತ್ರರಂಗದವರಿಗೆ ನೋವಾಗಬಾರದು, ನೊಂದವರನ್ನು ಮತ್ತೆ ನೋಯಿಸಬಾರದು. ಒಳ್ಳೆ ಸಿನಿಮಾ ಮಾಡದೇ ಹೋದರೂ ಕೆಟ್ಟ ಸಿನಿಮಾ ಮಾಡಿದ್ದಾರೆ ಎಂದು ಬರೆಯಬಾರದು. ಇದೇ ಚಿತ್ರರಂಗ ಉಳಿಸಲಿಕ್ಕಿರುವ ಏಕೈಕ ದಾರಿ. ಹಾಗಂತ ಹೇಳುತ್ತಿದ್ದಾರೆ ಸಾರಿ ಸಾರಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Exclusive Interview: ಅಮ್ಮನ ಸಿನಿಮಾ ಸೆಟ್‌ನಲ್ಲೇ ನನ್ನ ಕನಸು ಹುಟ್ಟಿತು: ಇಶಾ ಲಂಕೇಶ್
Special Interview: ಮದರ್‌ ಪ್ರಾಮಿಸ್‌ ಮರುಶೋಧಿಸಿಕೊಳ್ಳುವ ಯತ್ನ: ಡಾಲಿ ಧನಂಜಯ