Rocking Star: ರೊಮ್ಯಾಂಟಿಕ್ ಸ್ಟಾರ್ ಆದ ರಾಕಿಂಗ್ ಸ್ಟಾರ್.. ಯಶ್‌ ಸಲುವಾಗಿ ಕಿತ್ತಾಡುತ್ತಿದೆ ಸೋಷಿಯಲ್ ಮೀಡಿಯಾ!

Published : Jul 10, 2026, 02:09 PM IST
Yash Kiara Advani

ಸಾರಾಂಶ

ಸದ್ಯ ತಬಾಹಿ ಹಾಡು ಸಾಮಾಜಿಕ ಜಾಲತಾಣದಲ್ಲಿ ಸುನಾಮಿ ಹಾಗೂ ಸುಂಟರಗಾಳಿ ಎಬ್ಬಿಸಿದೆ. ಪಂಚ ಭಾಷೆಯಲ್ಲಿ ಬಿಡುಗಡೆ ಆಗಿರೋ ಪ್ರಣಯ ಗೀತೆ 24 ಗಂಟೆಯಲ್ಲಿ 5 ಕೋಟಿ ವೀಕ್ಷಣೆ ಕಂಡು ಅಕ್ಷರಶಃ ಯೂಟ್ಯೂಬ್‌ನ ಹೈಜಾಕ್ ಮಾಡಿದ್ದು, ಸರಸ, ಸಮರ ಹಾಗೂ ಸಲ್ಲಾಪದ ಮೂಲಕ ಆಡಿಯನ್ಸ್‌ನ ಕಣ್ಮನ ಸೆಳೆದಿದೆ.

ಕನ್ನಡದ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ಯಶ್ (Rocking Star Yash) ಈಗ ರೊಮ್ಯಾಂಟಿಕ್ ಸ್ಟಾರ್ ಆಗಿದ್ದಾರೆ. ರೋಮ್ಯಾನ್ಸ್ ಅಂದ್ರೇನೆ ಬೆವತು ಬೆಂಡಾಗುತ್ತೇನೆ ಅನ್ನೋ ಯಶ್ ಗೆ ಈಗ ಅದರ ಭಯವೇ ಇಲ್ಲ ಅನ್ನೋ ಹಾಗೆ ಪ್ರಣಯದಲ್ಲಿ ತಲ್ಲೀನರಾಗುತ್ತಾರೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ 'ಟಾಕ್ಸಿಕ್'ನ (Toxic) ಈ ರೊಮ್ಯಾಂಟಿಕ್ ಹಾಡು.. ಈ ಹಾಡು ಈಗ ಸೋಷಿಯಲ್ ಮೀಡಿಯಾ ಬ್ಯಾಂಡ್ ಬಾಜಾ ಆಗಿದೆ. ಹಾಗಾದ್ರೆ ರಾಕಿಯ ರೊಮ್ಯಾನ್ಸ್ ಬಗ್ಗೆ ಏನೆಲ್ಲಾ ಚರ್ಚೆ ಆಗುತ್ತಿದೆ ನೋಡೋಣ ಬನ್ನಿ,.,

ಕೆಜಿಎಫ್​ತೂಫಾನ್​ಈಗ ರೊಮ್ಯಾಂಟಿಕ್ ಸ್ಟಾರ್; ರಾಯನ ಪ್ರಣಯಕ್ಕೆ ಸೋಷಿಯಲ್ ಮೀಡಿಯಾ ಶೇಕ್!

ಈಗ ಎಲ್ಲೆಲ್ಲೂ ಟಾಕ್ಸಿಕ್​ರೊಮ್ಯಾನ್ಸ್ ಬಗ್ಗೆಯೇ ಟಾಕ್​..!

ಹೌದು, ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಸಿನಿಮಾದಲ್ಲಿ ತುಪಾಕಿ ಎತ್ತಿ ಶೂಟ್ ಮಾಡಿ, ಲಾಂಗ್ ಹಿಡಿದು ರುಂಡ ಚಂಡಾಡಿದ್ದು ಇನ್ನೂ ಕಣ್ಣ ಮುಂದೆಯೇ ಇದೆ. ರಾಕಿಯ ಆ ರಣಾರ್ಭಟ ಸಿನಿ ಪ್ರೇಕ್ಷಕರನ್ನೇ ಬೆಚ್ಚಿ ಬೀಳಿಸಿತ್ತು.

ಆ ಸೀನ್ ಕಟ್ ಆದ್ರೆ ಈಗ ಅದೇ ರಾಕಿ ಭಾಯ್ ಕಿಂಗ್ ಆಫ್​ ರೊಮ್ಯಾನ್ಸ್ ಆಗಿದ್ದಾರೆ. ಟಾಕ್ಸಿಕ್​ನ ತಬಾಹಿ ಹಾಡಿನಲ್ಲಿ ಹಾಟಿ ಕಿಯಾರನಾ ತಬ್ಬಿ ಮುದ್ದಾಡಿದ್ದಾರೆ. ಯಶ್ ಅವರ ಈ ರೊಮ್ಯಾನ್ಸ್ ಇಂದು ವರ್ಲ್ಡ್ ವೈಡ್ ಸುದ್ದಿಯಾಗ್ತಿದೆ. ಟ್ರೋಲರ್ಸ್​ಗೆ ಹೊಟ್ಟೆ ತುಂಬಾ ಊಟ ಕೊಡ್ತಾ ಇದೆ.

ಪ್ರಣಯ ದೃಶ್ಯ ಚಿತ್ರೀಕರಣದಲ್ಲಿ ಮೈ ಬೆವತು ಕೂತಿದ್ದ ಯಶ್..!

ಹೌದು, ನಟ ಯಶ್​ಗೆ ರೊಮ್ಯಾಂಟಿಕ್ ದೃಶ್ಯಗಳಲ್ಲಿ ನಟಿಸೋದು ಅಂದ್ರೆ ಸಿಕ್ಕಾಪಟ್ಟೆ ಭಯ ಆಗುತ್ತಿದ್ದ ಒಂದು ಕಾಲವಿತ್ತು. 'ನನಗೆ ರೊಮ್ಯಾಂಟಿಕ್ ದೃಶ್ಯಗಳನ್ನು ಮಾಡೋದು ದೊಡ್ಡ ಚಾಲೆಂಜ್.. ಪ್ರಣಯ ದೃಶ್ಯ ಅಂದ್ರೆ ನಾನು ನರ್ವಸ್ ಆಗುತ್ತೇನೆ' ಅಂತ ವೀಕ್​ಎಂಡ್ ವಿತ್ ಕಾರ್ಯಕ್ರಮದಲ್ಲಿ ಯಶ್ ಹೇಳಿದ್ರು.

ಟಾಕ್ಸಿಕ್ ಸಿನಿಮಾಗಾಗಿ ನಿಯಮ ಮುರಿದು ರಾಕಿಂಗ್ ಸ್ಟಾರ್ ರೊಮ್ಯಾನ್ಸ್..!

ಹೌದು, ಯಶ್​ ತಮ್ಮ ವೃತ್ತಿ ಜೀವನದಲ್ಲಿ ಅನೇಕ ಸಿನಿಮಾಗಳನ್ನು ಮಾಡಿದ್ದಾರೆ. ಆದ್ರೆ ‘ಟಾಕ್ಸಿಕ್’ ಚಿತ್ರದಷ್ಟು ಬೋಲ್ಡ್ ಆಗಿ ಎಂದಿಗೂ ಕಾಣಿಸಿಲ್ಲ. ಶರ್ಟ್​ಲೆಸ್​ನಿಂದ ಹಿಡಿದು ತುಟಿ ಚುಂಬಿಸೋವರೆಗೂ 'ಎಲ್ಲಾ ಮಿತಿ ಮೀರಿ'ದ್ದಾರೆ. ಇದು ದೊಡ್ಡ ಅಚ್ಚರಿ ಹುಟ್ಟಿಸಿದೆ. ಯಾಕಂದ್ರೆ ಯಶ್​'ನಾನು ಒಂದು ನಿಯಮ ಪಾಲಿಸುತ್ತೇನೆ. ಅದು ಪೋಷಕರೊಂದಿಗೆ ಕುಳಿತು ನೋಡಲು ನನಗೆ ಮುಜುಗರ ಎನಿಸಿದರೆ ಅಂತಹ ದೃಶ್ಯದಲ್ಲಿ ನಾನು ನಟಿಸುವುದಿಲ್ಲ' ಎಂದಿದ್ರು. ಆದ್ರೆ ಟಾಕ್ಸಿಕ್​ನಲ್ಲಿ ಆ ಬ್ಯಾರಿಯರ್​ನ ಕುಟ್ಟಿ ಪುಡಿಮಾಡಿದ್ದಾರಾ ಯಶ್ ಅನ್ನೋ ಚರ್ಚೆ ನಡೆಯುತ್ತಿದೆ.

ಅಂದು ರೊಮ್ಯಾಂಟಿಕ್ ದೃಶ್ಯಗಳಿಗೆ ಮುಜುಗರ ಪಡುತ್ತಿದ್ದ ರಾಕಿಂಗ್ ಸ್ಟಾರ್, ಇಂದು ‘ಟಾಕ್ಸಿಕ್’ ಹಾಡಿನಲ್ಲಿ ಕಿಯಾರಾ ಅಡ್ವಾಣಿ ಜೊತೆ ಸಖತ್ ಬೋಲ್ಡ್ ಆಗಿದ್ದಾರೆ. ಬೆವತು ಬೆಂಡಾಗೊ ಬದಲು ತನ್ನ ಇಡೀ ದೇಹವನ್ನ ಸಿಕ್ಸ್​ಪ್ಯಾಕ್​ನಲ್ಲಿ ತೊರಿಸಿ ಬೆಂಕಿಯಾಗಿದ್ದಾರೆ.

ತಬಾಹಿ ಯೂಟ್ಯೂಬ್ ಹೈಜಾಕ್.. ಎಷ್ಟು ಕೋಟಿ ವೀವ್ಸ್ ಆಯ್ತು ಗೊತ್ತಾ..?

ಸದ್ಯ ತಬಾಹಿ ಹಾಡು ಸಾಮಾಜಿಕ ಜಾಲತಾಣದಲ್ಲಿ ಸುನಾಮಿ ಹಾಗೂ ಸುಂಟರಗಾಳಿ ಎಬ್ಬಿಸಿದೆ. ಪಂಚ ಭಾಷೆಯಲ್ಲಿ ಬಿಡುಗಡೆ ಆಗಿರೋ ಪ್ರಣಯ ಗೀತೆ 24 ಗಂಟೆಯಲ್ಲಿ 5 ಕೋಟಿ ವೀಕ್ಷಣೆ ಕಂಡು ಅಕ್ಷರಶಃ ಯೂಟ್ಯೂಬ್‌ನ ಹೈಜಾಕ್ ಮಾಡಿದ್ದು, ಸರಸ, ಸಮರ ಹಾಗೂ ಸಲ್ಲಾಪದ ಮೂಲಕ ಆಡಿಯನ್ಸ್‌ನ ಕಣ್ಮನ ಸೆಳೆದಿದೆ. ಒಟ್ಟನಲ್ಲಿ ಯಶ್​'ಟ್ರೆಂಡ್​ಕಾ ಬಾಪ್'​ಅನ್ನೋದು ಮತ್ತೆ ಪ್ರೂವ್ ಆಗಿದೆ.

'ಸಿನಿಮಾ ಹಂಗಾಮ' ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Karna Serial ಅತ್ತ ಕರ್ಣನ ಜೊತೆ ನಿಧಿ ಹೊಸ ಜೀವನ: ಇತ್ತ ಅಭಿಮಾನಿಗಳಲ್ಲಿ ನಟಿ ಭವ್ಯಾ ಗೌಡ ಕ್ಷಮೆಯಾಚನೆ- ಆಗಿದ್ದೇನು
ರಾಧಿಕಾಗೆ ನಾನು ಕೆಜಿಗಟ್ಟಲೆ ಚಿನ್ನ ಕೊಡಿಸಿದ್ದೇನೆ: ನಟ ಯಶ್​ ಅಮ್ಮ ಪುಷ್ಪಾ ಅರುಣ್​ಕುಮಾರ್​ ಹೇಳಿದ್ದೇನು