ದರ್ಶನ್‌ಗೆ ಒಳ್ಳೆಯ ಭವಿಷ್ಯವಿದೆ, 2025ರಲ್ಲಿ ಮತ್ತೆ ಸಿನಿಮಾದಲ್ಲೂ ನಟಿಸುತ್ತಾರೆ: ಅರ್ಜುನ್ ಗುರೂಜಿ!

By Shriram BhatFirst Published Oct 31, 2024, 11:45 AM IST
Highlights

ದರ್ಶನ್ ಗೆ ಸ್ತ್ರೀ ದೋಷ ಇಲ್ಲ, ಸ್ತೀ ದೋಷ ಇದೆ ಎಂಬುದೆಲ್ಲ ಸುಳ್ಳು. ಕೆಟ್ಟ ಸಮಯ, ಕೆಲವೊಂದು ಕೆಟ್ಟ ನಿರ್ಧಾರಗಳಿಂದ ಈ ರೀತಿಯಾಗಿದೆ. ಕನ್ನಡಿಗರಿಗೆ ದರ್ಶನ್ ಮೇಲೆ ಅಪಾರ ಪ್ರೀತಿಯಿದೆ. ಅನೇಕರಿಗೆ ದರ್ಶನ್ ಅವರು ತಾಯಿಯನ್ನು ನಿರ್ಲ್ಯಕ್ಷ ಮಾಡಿಲ್ಲ. ..

ನಟ ದರ್ಶನ್ (Darshan) ಮಧ್ಯಂತರ ಬೇಲ್ ಮಂಜೂರು ವಿಚಾರಕ್ಕೆ ಸಂಬಂಧಪಟ್ಟಂತೆ, ಮೈಸೂರಿನಲ್ಲಿ ಅವಧೂತ ಅರ್ಜುನ್ ಗುರೂಜಿ (Avadhoota Arjun Guruji) ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಅಕ್ಟೋಬರ್ 20ರ ನಂತರ ನೋಡಿ ಎಂದು ಭವಿಷ್ಯ ನುಡಿದಿದ್ದೆ. ದರ್ಶನ್ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ಇದೆ. 2025 ರಲ್ಲಿ ದರ್ಶನ್ ಗೆ ಒಳ್ಳೆಯ ದಿನಗಳು ಬರಲಿವೆ. ಚಿತ್ರದಲ್ಲೂ ಕೂಡ ನಟಿಸುತ್ತಾರೆ. ದರ್ಶನ್ ಅಭಿಮಾನಿಗಳು, ಅವರ ತಾಯಿ ಪತ್ನಿ, ತಮ್ಮನ ಪೂಜೆಗಳು ಫಲಿಸಿವೆ. ಹಾಗಾಗಿ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.

ದರ್ಶನ್ ಗೆ ಸ್ತ್ರೀ ದೋಷ ಇಲ್ಲ, ಸ್ತೀ ದೋಷ ಇದೆ ಎಂಬುದೆಲ್ಲ ಸುಳ್ಳು. ಕೆಟ್ಟ ಸಮಯ, ಕೆಲವೊಂದು ಕೆಟ್ಟ ನಿರ್ಧಾರಗಳಿಂದ ಈ ರೀತಿಯಾಗಿದೆ. ಕನ್ನಡಿಗರಿಗೆ ದರ್ಶನ್ ಮೇಲೆ ಅಪಾರ ಪ್ರೀತಿಯಿದೆ. ಅನೇಕರಿಗೆ ದರ್ಶನ್ ಅವರು ತಾಯಿಯನ್ನು ನಿರ್ಲ್ಯಕ್ಷ ಮಾಡಿಲ್ಲ. ಅದನ್ನು ಯಾರೂ ನೋಡಿಲ್ಲ, ದರ್ಶನ್ ಕುಟುಂಬದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ತಾಯಿ ಮಕ್ಕಳನ್ನು ಕೈಬಿಡುವುದಿಲ್ಲ.

Latest Videos

ಸಲ್ಮಾನ್ ಖಾನ್ ಮನೆಯಲ್ಲಿ ಬೆಳೆದ ಅನಾಥೆ ಅರ್ಪಿತಾ 'ಟೈಗರ್‌'ಗೆ ಕಣ್ಣೀರು ಹಾಕಿಸಿದ್ದೇಕೆ?

ಕನ್ನಡ ಚಿತ್ರರಂಗದ ಬಗ್ಗೆಯೂ ಅರ್ಜುನ್ ಗುರೂಜಿ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೂ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರುತ್ತವೆ. ಎಲ್ಲರೂ ಕೂಡ ಕನ್ನಡ ಚಿತ್ರರಂಗದ ಕಡೆ ಮತ್ತೆ ತಿರುಗಿ ನೋಡುವಂತೆ ಆಗುತ್ತದೆ. ಕಲ್ಲಿಗೆ ಏಟು ಬಿದ್ದು ವಿಗ್ರಹ ಆಗಿದೆ. ದರ್ಶನ್ ಕೂಡ ಅಷ್ಟೇ, ಈಗ ಸಾಕಷ್ಟು ಏಟು ಬಿದ್ದಿವೆ. ವಿಗ್ರಹ ಆಗಿ ಹೊರ ಬಂದಿದ್ದಾರೆ. ಪೂಜೆಯೂ ಸಹ ಆಗತ್ತದೆ.

ಯಾರನ್ನೂ ಯಾರು ಕೂಡ ದ್ವೇಷ ಮಾಡಬೇಡಿ. ನಾನು, ನಾನು ಎಂದು ಮೆರೆಯಬೇಡಿ. ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡಿ. ಕನ್ನಡ ಬೆಳೆಸಿ, ನೀವು ಬೆಳೆಯಿರಿ..' ಎಂದು ಯುವ ನಟರಿಗೆ ಅರ್ಜುನ್ ಗುರೂಜಿ ಕರೆ ನೀಡಿದ್ದಾರೆ. ಜೊತೆಗೆ, 'ನಟ ದರ್ಶನ್ ರಾಜಕೀಯಕ್ಕೂ ಬರುತ್ತಾರೆ. ದರ್ಶನ್ ಅವರಿಗೆ ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ರಾಜಕೀಯ ಪಕ್ಷಗಳೇ ಅವರ ಬಳಿಗೆ ಹೋಗುತ್ತವೆ...' ಎಂದು ದರ್ಶನ್ ರಾಜಕೀಯ ಎಂಟ್ರಿ ಕುರಿತು ಭವಿಷ್ಯ ನುಡಿದಿದ್ದಾರೆ ಅರ್ಜುನ್ ಅವಧೂತ ಗುರೂಜಿ.

ನಟ ದರ್ಶನ್‌ ಮಧ್ಯಂತರ ಬೇಲ್‌ಗೆ ಶ್ಯೂರಿಟಿ ಕೊಟ್ಟ 'ಆಪದ್ಭಾಂಧವ' ಧನ್ವೀರ್ ಗೌಡ!

'ದರ್ಶನ್ ಸಹೋದರ ದಿನಕರ್ ಕರೆ ಮಾಡಿದ್ದರು. ಬೇಲ್ ಸಿಗುವ ಮುನ್ನಾ ಏನಾಗತ್ತದೆ ಎಂದು ಕೇಳಿದರು. ಸಂಜೆ ಸ್ವೀಟ್ ತೆಗೆದುಕೊಂಡು ಬನ್ನಿ ಎಂದಿದ್ದೆ'.. ಎಂದು ಮೈಸೂರಿನಲ್ಲಿ ಅವಧೂತ ಅರ್ಜುನ್ ಗುರೂಜಿ ಹೇಳಿಕೆ ನೀಡಿದ್ದಾರೆ. 

click me!