ಮುಖಾಮುಖಿಯಾದ ಓಲಾ ಕ್ಯಾಬ್- ಆಟೋ ಚಾಲಕ; 'ಸ್ಟಾರ್ ಕನ್ನಡಿಗ'!

Published : Oct 18, 2019, 10:48 AM ISTUpdated : Oct 18, 2019, 11:33 AM IST
ಮುಖಾಮುಖಿಯಾದ ಓಲಾ ಕ್ಯಾಬ್- ಆಟೋ ಚಾಲಕ; 'ಸ್ಟಾರ್ ಕನ್ನಡಿಗ'!

ಸಾರಾಂಶ

ಒಬ್ಬರು ಆಟೋ ಚಾಲಕರು. ಮತ್ತೊಬ್ಬರು ಓಲಾ ಕ್ಯಾಬ್ ಡ್ರೈವರ್. ಇವರಿಬ್ಬರು ಮುಖಾಮುಖಿಯಾದರೆ ಟ್ರಾಫಿಕ್ ಜಾಮ್ ಆಗಬಹುದು ಎಂಬುದು ಬಹುತೇಕರ ಊಹೆ ಮತ್ತು ಕಲ್ಪನೆ. ಆದರೆ, ಇವರಿಬ್ಬರು ಒಂದಾದರೆ ಒಂದು ಸಿನಿಮಾ ಹುಟ್ಟಿಕೊಳ್ಳುತ್ತದೆಂಬುದು ಹೊಸ ಥಿಯೇರಿ. ಇದಕ್ಕೆ ಸಾಕ್ಷಿ ‘ಸ್ಟಾರ್ ಕನ್ನಡಿಗ’ ಹೆಸರಿನ ಸಿನಿಮಾ.   

ನಟನೆ ಜತೆಗೆ ನಿರ್ದೇಶನ ಕೂಡ ಮಾಡಿರುವ ಆರ್ ಮಂಜುನಾಥ್ ಆಟೋ ಚಾಲಕ. ಮತ್ತೊಬ್ಬ ಪ್ರಮುಖ ಪಾತ್ರಧಾರಿ ಅರುಣ್ ಕುಮಾರ್ ಓಲಾ ಕ್ಯಾಬ್ ಚಾಲಕ. ಚಿತ್ರದ ಹೆಸರಿನಲ್ಲೇ ಕನ್ನಡ
ಇದೆ. ಈ ಕಾರಣಕ್ಕೋ ಏನೋ ನವೆಂಬರ್ ೧ರಂದೇ ಸಿನಿಮಾ ತೆರೆಗೆ ಬರುತ್ತಿದೆ. ಮೊನ್ನೆ ಚಿತ್ರದ ಟ್ರೇಲರ್ ಬಿಡುಗಡೆಯ ನಂತರ ಚಿತ್ರಕ್ಕೆ ಬೆಂಬಲ ಸೂಚಿಸಲು ಹಲವು ರೀತಿಯ ವಾಹನ ಚಾಲಕರ ಸಂಘಗಳು, ಕನ್ನಡ ಸಂಘಟನೆಯ ಮುಖ್ಯಸ್ಥರು ಆಗಮಿಸಿದ್ದರು.

‘ಅಮ್ಮನ ಮಾನ ಕಾಪಾಡಲು ಸೀರೆ ಅಡ್ಡ ಹಿಡಿಯುತ್ತಿದ್ದೆ’

ಎಲ್ಲರು ಶುಭ ನುಡಿಗಳು ಹೇಳುತ್ತ, ‘ಈ ಚಿತ್ರ ಗೆಲ್ಲಿಸಲೇ ಬೇಕು’ ಎಂದು ಗಟ್ಟಿಯಾಗಿ ಪ್ರತಿಪಾದಿಸಿದರು. ಈ ಚಿತ್ರಕ್ಕೆ ‘ಬೋಲೋ ಕನ್ನಡಿಗಾ ಕೀ ಜೈ’ ಎನ್ನುವ ಉಪ ಶೀರ್ಷಿಕೆ ಇದೆ. ‘ ಸ್ಟಾರ್ ಕನ್ನಡಿಗ ಸಿನಿಮಾದೊಳಗೊಂದು ಸಿನಿಮಾ ಕತೆಯನ್ನು ಒಳಗೊಂಡ ಸಿನಿಮಾ. ಜೀವನದಲ್ಲಿ ಸಾಧನೆ ಮುಖ್ಯವೋ, ಪ್ರೀತಿ ಮುಖ್ಯವೋ ಎಂಬ ಸಂದಿಗ್ಧತೆಗೆ ಆ ಹುಡುಗರು ಸಿಕ್ಕುತ್ತಾರೆ ಅಂತಿಮವಾಗಿ ಅವರು ಏನನ್ನು ಆರಿಸಿಕೊಂಡರು, ಸ್ಟಾರ್ ಕನ್ನಡಿಗನಾಗಿ ಮಿಂಚುವುದು ಯಾರು ಎಂಬುದೇ ಈ ಚಿತ್ರದ ಕುತೂಹಲಕಾರಿ ಅಂಶ’ ಎಂಬುದು ನಿರ್ದೇಶಕರ ಮಾತು. ನಿರ್ದೇಶಕ ಮಂಜುನಾಥ್ ಅವರೇ ತಮ್ಮೊಂದಿಗೆ ಒಂದಿಷ್ಟು ಆಟೋ ಚಾಲಕರನ್ನು ಸೇರಿಸಿಕೊಂಡು ಈ ಚಿತ್ರವನ್ನು ನಿರ್ಮಿಸಿದ್ದಾರೆ.

'ನನ್ನ ಕಂಡರೆ ನಿಮಗೆ ಏನನಿಸುತ್ತೆ?BB ಮನೆಯಲ್ಲಿ ಶುರುವಾಯ್ತು ಲವ್ ಸ್ಟೋರಿ!

ಚೆನ್ನೀರ, ಅರುಣ್ ಕುಮಾರ್ ಹಾಗೂ ಭೈರವ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಬೆಂಗಳೂರು, ಚಿಕ್ಕಬಳ್ಳಾಪುರ, ಕನಕಪುರ ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಪವನ್ ಪಾರ್ಥ ಸಂಗೀತ ಸಂಯೋಜನೆ ಇದೆ. ಶಾಲಿನಿ ಭಟ್, ರಾಕ್‌ಲೈನ್ ಸುಧಾಕರ್, ಕಿರಣ್, ರೋಹಿತ್ ಮುಂತಾದವರು ನಟಿಸಿದ್ದಾರೆ. ಮಹದೇವ್ ಈ ಚಿತ್ರದ ಛಾಯಾಗ್ರಹಕ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

1000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಡೆವಿಲ್ ರಿಲೀಸ್: ಜೈಲಿನಿಂದಲೇ ಅಭಿಮಾನಿಗಳಿಗೆ ಪತ್ರ ಬರೆದ ದರ್ಶನ್‌
ಶಿರಡಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!