
ನಟ ದರ್ಶನ್ ಬಗ್ಗೆ ಅಚ್ಚರಿಯ ಭವಿಷ್ಯವಾಣಿ!
ನಟ ದರ್ಶನ್ ತೂಗುದೀಪ (Darshan Thoogudeepa) ಅವರು ಈ ಹಿಂದೆ ಕಮಿಟ್ ಆಗಿರೋ ಸಿನಿಮಾಗಳನ್ನೆಲ್ಲಾ ಕ್ಯಾನ್ಸಲ್ ಮಾಡಾಯ್ತು. ನಿರ್ಮಾಪಕರಿಗೆ ಅಡ್ವಾನ್ಸ್ ಹಣ ವಾಪಾಸ್ ಕೊಟ್ಟಾಯ್ತು. ಹಾಗಾದ್ರೆ ದರ್ಶನ್ ಮುಂದಿನ ನಡೆ ಏನು..? ಅದು ಪಾಲಿಟಿಕ್ಸ್.. ರೇಣುಕಾಸ್ವಾಮಿ ಸಮಸ್ಯೆ ಬಗೆ ಹರಿದ ಮೇಲೆ ದರ್ಶನ್ ಗುರಿ ರಾಜಕೀಯದ ಮೇಲೆ ಅಂತ ಪಕ್ಕಾ ಲೆಕ್ಕಾ ಹಾಕಿ ಸುದ್ದಿಯನ್ನ ಏಷ್ಯಾನೆಟ್ ಸುವರ್ಣ ನ್ಯೂಸ್ ವರ್ಷಗಳ ಹಿಂದೆಯೇ ಹೇಳಿತ್ತು. ಈಗ ಅದು ನಿಜ ಎನ್ನುತ್ತಿದ್ದಾರೆ ಜ್ಯೋತಿಷಿಗಳು.. ಹಾಗಾದ್ರೆ ದಾಸನ ರಾಜಕೀಯ ಭವಿಷ್ಯ ನಿಜಕ್ಕು ಉಜ್ವಲವಾಗುತ್ತಾ..? ದೇಶಾದ್ಯಂತ ಹೆಸರು ಮಾಡಿರೋ ಜೋತಿಷಿಯೊಬ್ಬರು ಇದಕ್ಕೆ ಉತ್ತರ ಕೊಟ್ಟಿದ್ದಾರೆ ನೋಡೋಣ ಬನ್ನಿ..
ಸಿನಿಮಾಕ್ಕೆ ಬೈ.. ಪಾಲಿಟಿಕ್ಸ್ಗೆ ಜೈ..!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಮಾರಂಗದಲ್ಲಿ ಇದ್ದಬದ್ದವರಿಗೆಲ್ಲಾ ಚಾಲೇಂಜ್ ಹಾಕಿದ್ದಾಗಿದೆ. ದರ್ಶನ್ ಈಗ ರೇಣುಕಾ ಕೊಲೆ ಕೇಸ್ನಿಂದ ಹೊರ ಬಂದ್ರೆ ಸಾಕಾಗಿದೆ. ಆದ್ರೆ ಜಟ್ಟಿ ನೆಲಕ್ಕೆ ಬಿದ್ರು ಮೀಸೆ ಮಣ್ಣಾಗಿಲ್ಲ ಅನ್ನೋ ಗಾದೇ ಮಾತಿನಂತೆ ದರ್ಶನ್ ಇಮೇಜ್ ಪಾತಾಳಕ್ಕೆ ಹೋದ್ರು, ಅವರ ಭವಿಷ್ಯದ ಕಥೆಗಳು ಮಾತ್ರ ಸದಾ ಜೀವಂತ ಆಗುತ್ತಿವೆ. ಯಾಕಂದ್ರೆ ಜೈಲಿನಲ್ಲಿರೋ ದರ್ಶನ್ ಪಾಲಿಟಿಕ್ಸ್ಗೆ ಬರುತ್ತಾರೆ ಅಂತ ಭಾರಿ ಸುದ್ದಿಯೊಂದು ಹರಿದಾಡ್ತಿದೆ. ಅದಕ್ಕೆ ಕಾರಣ ಖ್ಯಾತ ಜ್ಯೋತಿಷಿ ಹೇಳಿದ ನಟ ದರ್ಶನ್ ಬಗೆಗಿನ ರಾಜಕೀಯ ಭವಿಷ್ಯ.
ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ..!
ಇದನ್ನ ನಂಬಬೇಕೋ ಬಿಡಬೇಕೋ ಆ ಭವಿಷ್ಯ ವಾಣಿಗೆ ಗೊತ್ತು.? ಕೊಲೆ ಕೇಸ್ನಲ್ಲಿ ಪರಪ್ಪನ ಅಗ್ರಹಾರದಲ್ಲಿರೋ ದರ್ಶನ್ ರಾಜಕಾರಣ ಮಾಡುತ್ತಾರೆ. ರಾಜಕೀಯಕ್ಕೆ ಬರುತ್ತಾರೆ ಅಂತ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರೋ ಖ್ಯಾತ ಜ್ಯೋತಿಷಿ ಪ್ರಶಾಂತ್ ಕಿಣಿ ಭವಿಷ್ಯ ನುಡಿದಿದ್ದಾರೆ. 2029ರಿಂದ ದಾಸನ ಪಾಲಿಟಿಕ್ಸ್ ಬಂಡಿ ಬೀದಿ ಬೀದಿ ಸುತ್ತಲಿದೆಯಂತೆ...
ದರ್ಶನ್ ಅಭಿಮಾನಿಗಳ ಪ್ರಶ್ನೆಗೆ ಸಿಕ್ತು ಉತ್ತರ..!
ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿ ಪಡೆದಿರೋ ಜ್ಯೋತಿಷಿ ಪ್ರಶಾಂತ್ ಕಿಣಿಗೆ ದರ್ಶನ್ ಅಭಿಮಾನಿಗಳು ತನ್ನ ಹೀರೋನ ಭವಿಷ್ಯ ಹೇಳಿ ಅಂತ ಕೇಳಿದ್ದಾರೆ. ಹೇಳಿ ಕೇಳಿ ಹೆಸರು ಮಾಡಿದವರ ಭವಿಷ್ಯವನ್ನೆಲ್ಲಾ ಹೇಳೋ ಪ್ರಶಾಂತ್ ಕಿಣಿ ಸಿಕ್ಕಿದ್ದೇ ಚಾನ್ಸ್ ಅಂತ ದಾಸನ ಮುಂದಿನ ಜೀವನ ಹೇಗಿರುತ್ತೆ ಅಂತ ಹೇಳಿದ್ದಾರೆ. "ದರ್ಶನ್ಗೆ ಜಾಮೀನು ಸಿಗುತ್ತದೆ. ರೇಣುಕಾಸ್ವಾಮಿ ಪ್ರಕರಣದಿಂದ ದರ್ಶನ್ 2029ರಲ್ಲಿ ಖುಲಾಸೆಗೊಳ್ಳಲಿದ್ದಾರೆ. ದರ್ಶನ್ ಮಂಡ್ಯದಿಂದ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ" ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ರಿಪ್ಲೇ ಮಾಡಿದ್ದಾರೆ.
ನಟ ದರ್ಶನ್ ಸಿನಿಮಾ ರಂಗಲ್ಲೂ ಶಕುನಿಯಂತೆ ರಾಜಕೀಯ ಮಾಡಿಕೊಂಡು ಬೆಳೆದವರು ಅಂತ ಇಡೀ ಗಾಂಧಿನಗರ ಹೇಳುತ್ತೆ. ಆದ್ರೆ ಸಿನಿಮಾ ರಂಗದ ರಾಜಕೀಯ ಮನೆಯೊಳಗಿನಿ ಪಾಲಿಟಿಕ್ಸ್.. ಬಟ್ ದಾಸ 2029ಕ್ಕೆ ಹೆಜ್ಜೆ ಇಡೋದು ರಾಜ್ಯ ರಾಜಕಾರಣದಲ್ಲಂತೆ. ದರ್ಶನ್ಗೆ ರಾಜಕೀಯ ನಂಟು ಹೊಸದೇನು ಅಲ್ಲ. ಹಲವು ರಾಜಕೀಯ ನಾಯಕರಿಗೆ ದರ್ಶನ್ ಕ್ಯಾನ್ವಾಸ್ ಮಾಡಿದ್ದಾರೆ. ಅನೇಕರನ್ನ ಚುನಾವಣೆಯಲ್ಲಿ ಗೆಲ್ಲಿಸಿದ್ದಾರೆ. ಅಷ್ಟೆಲ್ಲಾ ಯಾಕೆ 2019ರಲ್ಲಿ ಮಂಡ್ಯ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಿದಾಗ , ಅವರ ಪರ ಗಟ್ಟಿಯಾಗಿ ನಿಂತಿದ್ದು ಇದೇ ದರ್ಶನ್.
ಆಗ ಸುಮಲತಾ ವಿರುದ್ದ ಸ್ಪರ್ಧಿಸಿದ್ದು ಅಂದಿನ ಸಿಎಂ ಪುತ್ರ ನಿಖಿಲ್ ಕುಮಾರ್ ಸ್ವಾಮಿ. ಸುಮಲತಾ ಗೆಲುವಿಗೆ ಅನೇಕ ಅಡ್ಡಿ ಆತಂಕ ಇದ್ವು. ಆದ್ರೆ ಮಂಡ್ಯದಲ್ಲಿ ದರ್ಶನ್, ಯಶ್ ಜೊತೆ ಸೇರಿ ಜೋಡೆತ್ತಿನಂತೆ ಸುತ್ತಿ ಮಾಜಿ ಮದರ್ ಇಂಡಿಯಾನ ಗೆಲ್ಲಿಸಿದ್ರು. ದರ್ಶನ್ಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ನಲ್ಲಿ ಸ್ನೇಹಿತರಿದ್ದಾರೆ. ತನಗಿರೋ ಜನಪ್ರೀಯತೆಗೆ ರಾಜಕೀಯಕ್ಕೆ ಧುಮುಕಿದ್ರೆ ಕ್ರಾಂತಿನೇ ಆಗುತ್ತೆ ಅನ್ನೋದು ದರ್ಶನ್ ಲೆಕ್ಕಾಚಾರ ಎಂದೋ ಹಾಕಿದ್ದಾರೆ. ಆದ್ರೆ ಅದಕ್ಕೆ ಟೈಮ್ ಕೂಡಿ ಬರೋದು ಮಾತ್ರ 2029ಕ್ಕೆ ಅನ್ನೋದು ಭವಿಷ್ಯ ವಾಣಿ..
ಕೊಲೆ ಆರೋಪ ಹೊತ್ತು ಜೈಲಿಗೆ ಹೋಗಿ ಬಂದ ಮೇಲೆ ದರ್ಶನ್ಗೆ ಸಿನಿಮಾ ಮೇಲಿನ ಆಕರ್ಷಣೆ ಕುಂದಿದಂತಿದೆ. ಕೊಲೆ ಆರೋಪದಲ್ಲಿ ದರ್ಶನ್ರನ್ನ ಪೊಲೀಸರು ಹಾಗು ರಾಜಕೀಯ ವ್ಯವಸ್ಥೆ ನಡೆಸಿಕೊಂಡ ರೀತಿ ದರ್ಶನ್ರನ್ನ ಪೊಲಿಟಿಕ್ಸ್ಗೆ ಬರೋ ಹಾಗೆ ಮಾಡುತ್ತೆ ಅಂತ ದಾಸನ ಆಪ್ತರೇ ಮಾತಾಡಿಕೊಳ್ಳುತ್ತಿದ್ದಾರೆ. ಹಾಗಾಂತ ದಾಸನ ರಾಜಕಾರಣ ಸುಲಭದ ಮಾತೇನು ಅಲ್ಲ. ದರ್ಶನ್ ಹಿಂದೆ ಇದ್ದ ದೊಡ್ಡ ಫ್ಯಾನ್ಸ್ ಬಳಗ ಕೊಲೆ ಕೇಸ್ ಆದ್ಮೇಲೆ ಅಕ್ರಮ ಸಂಬಂಧ ಅನ್ನೋ ಸುದ್ದಿ ಹಬ್ಬಿದ ಮೇಲೆ ಕಡಿಮೆ ಆದಂತಿದೆ. ಮಂಡ್ಯ, ಮೈಸೂರು ಭಾಗದಲ್ಲಿ ದರ್ಶನ್ಗೆ ದೊಡ್ಡ ಫ್ಯಾನ್ಸ್ ಬಳಗ ಇದ್ದು, ಅಲ್ಲೇ ಚುನಾವಣೆಗೆ ನಿಂತು ಗೆಲ್ಲಬೇಕಷ್ಟೆ. ಇದೆಲ್ಲದಕ್ಕೂ ಉತ್ತರ ದರ್ಶನ್ ಜೈಲಿನಿಂದ ಹೊರ ಬಂದ್ರೆ ಮಾತ್ರ ಸಿಗುತ್ತೆ ಅನ್ನೋದು ನೀವ್ಯಾರು ಮರೆಯೋ ಹಾಗಿಲ್ಲ..
ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.