
ದೊಡ್ಮನೆ ಸಣ್ಣ-ಸೊಸೆ, ಪುನೀತ್ ರಾಜ್‌ಕುಮಾರ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ (Ashwini Puneeth Rajkumar) ಅವರು ಎಂದೋ ಸಂದರ್ಶನದಲ್ಲಿ ಹೇಳಿದ್ದ ಮಾತೊಂದು ಇಂದು ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾ ಇರೋದು ಹಾಗೇ, ಸರ್ಚ್ ಮಾಡಿದ್ದು ನೋಡಬೇಕು ಎನ್ನುವಷ್ಟರಲ್ಲಿ ಅದೇನೋ ಒಂದು ಇಂಪಾರ್ಟೆಂಟು ಅನ್ನೋದು ಮತ್ತೊಂದು ಅಲ್ಲಿ ಕಾಣಿಸಿ ನಮ್ಮ ಚಿತ್ತ-ಕಣ್ಣು ಅತ್ತ ಹೋಗುವಂತೆ ಮಾಡುತ್ತದೆ. ಈ ಸಂದರ್ಶನದ ತುಣುಕೂ ಕೂಡ ಅಷ್ಟೇ, ಕಣ್ಣಿಗೆ ಕಂಡಾಗ ಶೇರ್ ಮಾಡುವಂತಿದೆ ಎನ್ನಿಸಿ, ಇದೀಗ ನಿಮ್ಮ ಮುಂದಿದೆ ನೋಡಿ..
ನಾನು ಮದುವೆಯಾಗಿ ಸ್ವಲ್ಪ ಕಾಲಕದ ಬಳಿಕ ಅಮ್ಮ (Paravathamma Rajkumar) ಆಫೀಸ್‌ಗೆ ಹೋಗೋದನ್ನು ನಿಲ್ಲಿಸಿದ್ರು.. ಆದ್ರೆ, ಹೆಳ್ತಾ ಇದ್ದು, 'ಕಾದಂಬರಿಗಳನ್ನು ಓದ್ಬೇಕು, ಅದೆಷ್ಟೋ ಕಾದಂಬರಿ ಓದಿದ್ರೆ ನಮ್ಗೆ ಇನ್‌ಸ್ಪಾಯರ್ ಆಗುತ್ತೆ' ಅಂತ. ಅಪ್ಪಾಜಿ (Dr Rajkumar) ಕೂಡ ಅಷ್ಟೇ, ಎಷ್ಟೋ ಸಿನಿಮಾಗಳನ್ನು ನೋಡೋಕೆ ಹೇಳಿದ್ರು.. ಅವ್ರು ಸಲಹೆನೂ ಸೇರಿ ನಾನು ಸಾಕಷ್ಟು ಕಥೆಗಳನ್ನು ಓದಿದೀನಿ, ಓದ್ತೀನಿ..
ಅಮ್ಮ ಯಾವತ್ತೂ ಹೇಳೋ ಒಂದು ಮಾತು ಅಂದ್ರೆ, 'ಪ್ರೊಡಕ್ಷನ್ ಬಜೆಟ್'ನ ಒಂದು ಮಟ್ಟಿಗೆ ಹಿಡಿತದಲ್ಲಿ ಇಡಬೇಕು ಅಂತ. ಆದ್ರೆ ಸರ್ ಹಾಗೆ ಇರ್ಲಿಲ್ಲ.. ಅವ್ರು ಹೇಗೆ ಅಂದ್ರೆ ಅದನ್ನು ಡೈರೆಕ್ಟರ್‌ಗೆ ಫ್ರೀ ಆಗಿ ಬಿಡ್ಬೇಕು, ಅದು ಅವರ ವಿಷನ್ ಮೇಲೆ ಡಿಪೆಂಡ್.. ಅದು, ಸಿನಿಮಾ ಬಜೆಟ್ ಡೈರೆಕ್ಟರ್ ಮಾಡಬೇಕಾಗಿರೋ ಕೆಲಸ ಅನ್ನೋರು.. ನಾನು ಇಬ್ಬರ ಕಡೆಯಿಂದಲೂ ಬಂದ ಸಲಹೆಗಳನ್ನು ತೆಗೆದುಕೊಂಡು, ನನ್ನ ಸ್ವಂತ ಇನ್‌ಪುಟ್ ಕೂಡ ಹಾಕಿ ಸಿನಿಮಾ ನಿರ್ಮಾಣದ ಕೆಲಸ ಮಾಡ್ಕೊಂಡು ಬಂದಿದೀನಿ.. ಎಂದಿದ್ದರು ಅಶ್ವಿನಿ ಪುನೀತ್ ರಾಜ್‌ಕುಮಾರ್. ಅಂದರೆ, ತಮ್ಮ ಅತ್ತೆ-ಮಾವನ ಸಲಹೆ ಸೂಚನೆಗಳು ಹಾಗೂ ಸ್ವಂತಿಕೆ ಎರಡನ್ನೂ ಒಟ್ಟಾಗಿಸಿಕೊಂಡು ತಾವು ಕೆಲಸ ಮಾಡುತ್ತಿರುವ ಸೀಕ್ರೆಟ್ ಹಂಚಿಕೊಂಡಿದ್ದರು ಅಶ್ವಿನಿಯವರು.
ಹೌದು, ಪಾರ್ವತಮ್ಮ ರಾಜ್‌ಕುಮಾರ್ ಅವರು ಕನ್ನಡ ಚಿತ್ರರಂಗದ ಯಶಸ್ವೀ ನಿರ್ಮಾಪಕಿ. ಪಾರ್ವತಮ್ಮ ರಾಜ್‌ಕುಮಾರ್ ಅವರು 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಡಾ ರಾಜ್‌ಕುಮಾರ್ ಅಭಿನಯದ 'ತ್ರಿಮೂರ್ತಿ' ಸಿನಿಮಾದ ಮೂಲಕ ನಿರ್ಮಾಪಕಿಯಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆ ಬಳಿಕ ಬರೋಬ್ಬರಿ 80ಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ಮಿಸುವ ಮೂಲಕ ಕನ್ನಡ ಚಿತ್ರರಂಗವನ್ನು ನಂಬಿಕೊಂಡು ಜೀವನ ಮಾಡುತ್ತಿದ್ದ ಹಲವರ ಪಾಲಿಗೆ ಕಾಮಧೇನು ಹಾಗೂ ಕಲ್ಪವೃಕ್ಷ ಎನ್ನಿಸಿಕೊಂಡಿದ್ದರು.
ಪಾರ್ವತಮ್ಮ ರಾಜ್‌ಕುಮಾರ್ ನಿಧನದ ಬಳಿಕ ವಜ್ರೇಶ್ವರಿ ಸಂಸ್ಥೆಯ ಭಾಗವಾಗಿರುವ 'ಪಿಅರ್‌ಕೆ ಪ್ರೊಡಕ್ಷನ್ಸ್' ಮೂಲಕ ಪುನೀತ್ ರಾಜ್‌ಕುಮಾರ್ ಹಾಗೂ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಸಿನಿಮಾ ನಿರ್ಮಾಣದ ಕಾಯಕವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಆದರೆ, ಪುನೀತ್ ರಾಜ್‌ಕುಮಾರ್ ಅವರ ಆಕಸ್ಮಿಕ ಅಗಲಿಕೆ ಬಳಿಕ, ಅಶ್ವಿನಿಯವರು ಪಿಆರ್‌ಕೆ ಪ್ರೊಡಕ್ಷನ್ ಮೂಲಕ ಸಿನಿಮಾ ನಿರ್ಮಾಣವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಓಡಾಡುತ್ತಿರುವ ಈ ಹಳೆಯ ವಿಡಿಯೋ ಒಂದರಿಂದ ಕೆಲವರಿಗೆ ಈಗಾಗಲೇ ಗೊತ್ತಿರುವ, ಹಲವರಿಗೆ ಗೊತ್ತಿಲ್ಲದ ಈ ಸಂಗತಿಗಳನ್ನು ಈಗ ಹೇಳುವಂತಾಯ್ತು..!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.