ರಿಷಬ್ ನನ್ ಮೀಟ್ ಮಾಡಿದಾಗ್ಲಿನಿಂದ್ಲೂ ಅದನ್ನೇ ಹೇಳ್ತಾ ಇದ್ರು... ನೇರ ಉತ್ತರ ಕೊಟ್ಟ ಪ್ರಗತಿ ಶೆಟ್ಟಿ!

Published : Nov 09, 2025, 12:42 PM IST
Pragathi Shety Rapid Rashmi

ಸಾರಾಂಶ

'ಸಮಾಜದ ಕಣ್ಣಲ್ಲಿ ಬೇಕಾಗಿರುವ ಎಲ್ಲಾ ಅಂಶಗಳನ್ನೂ ನೀವು ನೋಡಿದೀರಾ.. ಆದ್ರೆ, ನಿಮ್ಮ ಕಣ್ಣಲ್ಲಿ, ನಿಮ್ ಪ್ರಕಾರ, ಯಾವ ವಿಚಾರದಲ್ಲಿ ಇನ್ನೂ ಏನು ಬೇಕಂತ ಹಸಿವಿದೆ ನಿಮ್ಮಿಬ್ರಿಗೆ?' ಎಂದು ನಿರೂಪಕಿ ರಾಪಿಡ್ ರಶ್ಮಿ ಕೇಳಿದ್ದಾರೆ. ಅದಕ್ಕೆ ಪ್ರಗತಿ ಶೆಟ್ಟಿಯವರು ಕೊಟ್ಟ ಉತ್ತರ ಇಲ್ಲಿದೆ ನೋಡಿ..

ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಮಾತು!

ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ಈಗ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರಿಗೆ (Rishab Shetty) ಎತ್ತರದ ಸ್ಥಾನವಿದೆ. ಕನ್ನಡದ ರಿಷಬ್ ಶೆಟ್ಟಿಯವರು ಇಂದು ಇಂಟರ್‌ನ್ಯಾಷನಲ್ ಖ್ಯಾತಿ ಹೊಂದಿರುವ ಪ್ಯಾನ್ ಇಂಡಿಯಾ ಸ್ಟಾರ್. ಕಾಂತಾರ (Kantara) ಸಿನಿಮಾಗಿಂತ ಮೊದಲು ಕರ್ನಾಟಕದ ಮಟ್ಟಿಗೆ, ಕನ್ನಡ ಚಿತ್ರರಂಗದ ಮಟ್ಟಿಗೆ ಹೆಸರು ಮಾಡಿದ್ದ ರಿಷಬ್ ಶೆಟ್ಟಿಯವರು ಇಂದು ಭಾರತದ ಖ್ಯಾತ ಸಿನಿಮಾ ಸೆಲೆಬ್ರೆಟಿ ಪಟ್ಟ ಗಿಟ್ಟಿಸಿಕೊಂಡಿದ್ದಾರೆ. ಅಂತ ರಿಷಬ್ ಶೆಟ್ಟಿಯವರ ಪತ್ನಿ ಪ್ರಗತಿ ಶೆಟ್ಟಿ (Pragathi Shetty) ಕೂಡ ಇಂದು ಸೆಲೆಬ್ರಿಟಿಯೇ ಆಗಿದ್ದಾರೆ.

ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ ಪತ್ನಿ ಎನ್ನುವುದು ಒಂದುಕಡೆ, ಮತ್ತೊಂದು ಕಡೆ ಅವರೂ ಕೂಡ ಚಿತ್ರರಂಗದಲ್ಲಿ ತಮ್ಮ ಕೆಲಸದ ಮೂಲಕ ಕೂಡ ಗುರುತಿಸಿಕೊಂಡಿದ್ದಾರೆ. ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಕಾಂತಾರ ಸಿನಿಮಾ ಖ್ಯಾತಿ ಪಡೆದಿದ್ದು, ಅದರಲ್ಲಿ ಕಾಸ್ಟ್ಯೂಮ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ ಪ್ರಗತಿ ಶೆಟ್ಟಿ. ಅಷ್ಟೇ ಅಲ್ಲ, ಸಿನಿಮಾಕ್ಕೆ ಪ್ರಗತಿ ಶೆಟ್ಟಿ ಮಾಡಿಕೊಟ್ಟಿರುವ ವಸ್ತ್ರಾಲಂಕಾರದ ಟ್ಯಾಲೆಂಟ್ ಗುರುತಿಸಿ, ಅದಕ್ಕೆ ಬಹಳಷ್ಟು ಮನ್ನಣೆ ಕೂಡ ಸಿಕ್ಕಿದೆ.

ಇಂಥ ಪ್ರಗತಿ ಶೆಟ್ಟಿಯವರು 'ರಾಪಿಡ್ ರಶ್ಮಿ' ಯೂಟ್ಯೂಬ್ ಚಾನೆಲ್ ಇಂಟರ್‌ವ್ಯೂದಲ್ಲಿ ಆಡಿರುವ ಮಾತುಗಳು ಇಂದು ಸಖತ್ ವೈರಲ್ ಆಗುತ್ತಿವೆ. ರಾಪಿಡ್ ರಶ್ಮಿ ಜೊತೆಗಿನ ಸಂದರ್ಶನಲ್ಲಿ ಏನು ಪ್ರಶ್ನೆ ಕೇಳಲಾಗಿದೆ? ಹಾಗೂ, ಅದಕ್ಕೆ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ ಅದೇನು ಉತ್ತರ ಕೊಟ್ಟಿದ್ದಾರೆ ಎಂಬುದನ್ನು ಮುಂದೆ ನೋಡಿ..

'ಸಮಾಜದ ಕಣ್ಣಲ್ಲಿ ಒಂದು ವ್ಯಕ್ತಿಗೆ, ಫ್ಯಾಮಿಲಿಗೆ ಬೇಕಾಗಿರುವ ಎಲ್ಲಾ ಅಂಶಗಳನ್ನೂ ನೀವು ನೋಡಿದೀರಾ.. ಆದ್ರೆ, ನಿಮ್ಮ ಕಣ್ಣಲ್ಲಿ, ನಿಮ್ ಪ್ರಕಾರ, ಯಾವ ವಿಚಾರದಲ್ಲಿ ಇನ್ನೂ ಏನು ಬೇಕಂತ ಯಾವ ವಿಚಾರದಲ್ಲಿ ಹಸಿವಿದೆ ನಿಮ್ಮಿಬ್ರಿಗೆ?' ಎಂದು ನಿರೂಪಕಿ ರಾಪಿಡ್ ರಶ್ಮಿ ಕೇಳಿದ್ದಾರೆ. ಅದಕ್ಕೆ ಪ್ರಗತಿ ಶೆಟ್ಟಿಯವರು ಕೊಟ್ಟ ಉತ್ತರ ಇಲ್ಲಿದೆ ನೋಡಿ..

ಆ ಕೆಲಸದಿಂದಾನೇ ಬಂದಿರೋದು

ಕೆಲಸ ಅಷ್ಟೇ.. ಇಬ್ರಿಗೂ ಯಾಕೆ ಅಂದ್ರೆ.. ಕೆಲಸದಿಂದಾನೇ ಅಲ್ವಾ? ಇವತ್ತು ಏನ್ ಬಂದಿದೆ ನಮ್ಗೆ, ಅದೆಲ್ಲಾ ಆ ಕೆಲಸದಿಂದಾನೇ ಬಂದಿರೋದು.. ಇವತ್ತು ಏನ್ ಬಂದಿದೆಯೋ ಅದನ್ನ ನಾವು ಯಾವತ್ತೂ ಕೇಳಿದ್ದಲ್ಲ.. ರಿಷಬ್ ಯಾವತ್ತೂ ದೇವ್ರ ಹತ್ರ ಪ್ರಾಮಾಣಿಕವಾಗಿ ಕೇಳಿದ್ದು ಕೆಲಸ.. ಕೆಲಸ ಕೊಡು ದೇವ್ರೇ ಅಂತಾನೇ.. ಕೆಲಸ ಇಲ್ಲದೇ ಅವ್ರು ತುಂಬಾ ವರ್ಷ ಇದ್ದಿದ್ದರಿಂದ ಅವ್ರಿಗೆ ಆ ಕೆಲಸದ ಮೇಲೆ ಒಂದು ಹಸಿವು ಅಂತಿತ್ತು.. ದೇವ್ರು ಒಂದು ಕೆಲಸ ಕೊಟ್ಬಿಟ್ರೆ ನಾನು ಯಾವ್ ಥರ ಕೆಲಸ ಮಾಡ್ತೀನಿ ಅಂದ್ರೆ, ಆ ಲೆವಲ್‌ಗೆ ಮಾಡ್ತೀನಿ ಅಂತ ಇತ್ತು ಅವ್ರಿಗೆ...

ರಿಷಬ್ ನನ್ ಮೀಟ್ ಮಾಡಿದಾಗ್ಲಿನಿಂದ್ಲೂ ಅದನ್ನೇ ಹೇಳ್ತಾ ಇದ್ರು.. ಇವತ್ತು ದೇವ್ರು ಯಾವ ಥರ ಕೆಲಸ ಕೊಟ್ಟಿದಾನೆ ಅಂದ್ರೆ, ಇವತ್ತು ಒಂದ್ ಸ್ವಲ್ಪ ರೆಸ್ಟ್ ಮಾಡ್ಬೇಕು ಅಂದ್ಕೊಂಡ್ರೂ ಬಿಡೋಕೆ ಆಗ್ತಿಲ್ಲ, ಇರೋ ಕೆಲಸ ಮುಗಿತಾ ಇಲ್ಲ.. ಆ ಥರ ಕೆಲಸ ಕೊಟ್ಟಿದಾನೆ.. ಇನ್ಮುಂದೆನೂ ನಾವು ಅದನ್ನೇ ನಿರೀಕ್ಷೆ ಮಾಡ್ತಾ ಇದೀವಿ..

ಲೈಫಲ್ಲಿ ಯಾವುದನ್ನೂ ಪ್ಲಾನ್ ಮಾಡಿಲ್ಲ

ನಿಜ ಹೇಳ್ಬೇಕು ಅಂದ್ರೆ, ನಾವು ಲೈಫಲ್ಲಿ ಯಾವುದನ್ನೂ ಪ್ಲಾನ್ ಮಾಡಿಲ್ಲ, ಅದೇ ಆಗ್ತಾ ಹೋಯ್ತು.. ಇನ್ಮುಂದೆನೂ ನಮ್ಗೆ ಯಾವುದೇ ಪ್ಲಾನ್ ಇಲ್ಲ.. ಲೈಫಲ್ಲಿ ನೆಮ್ಮದಿಯಾಗಿ ಇರ್ಬೇಕು, ಖುಷಿಖುಷಿಯಾಗಿ ಇರ್ಬೇಕು.. ಪ್ರೀತಿನ ಹಂಚೋ ಕೆಲಸ ಮಾಡ್ಬೇಕು, ಪ್ರಾಮಾಣಿಕವಾಗಿ ಇರ್ಬೇಕು, ಅಷ್ಟೇ..' ಎಂದಿದ್ದಾರೆ 'ಕಾಂತಾರ' ಖ್ಯಾತಿಯ ರಿಷಬ್ ಶೆಟ್ಟಿ ಪತ್ನಿ ಪ್ರಗತಿ ಶೆಟ್ಟಿ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೂರ್ಯನಿಗೆ ಬಹಳ ಹೊತ್ತು ಗ್ರಹಣ ಹಿಡಿಯಲ್ಲ.. ನಾನ್ ಬರ್ತಿದ್ದೀನಿ ಚಿನ್ನ: ದರ್ಶನ್‌ ಟ್ರೈಲರ್ ಡೈಲಾಗ್‌ಗೆ ಅಪಾರ್ಥ?
ದೈವದ ಮಾತು ನಿಜವಾಯ್ತು, ಹರಕೆ ತೀರಿಸಲು ದಂಪತಿ ಸಮೇತ ಬಂದ ರಿಷಬ್ ಶೆಟ್ಟಿ