ತಂದೆ ಜೊತೆ Dp ಹಾಕಿದ್ದ ಸ್ಪಂದನಾ ಎಂದೂ ಬದಲಾಯಿಸಲಿಲ್ಲ: ವಿಜಯ್ ರಾಘವೇಂದ್ರ ಭಾವುಕ

Published : Sep 01, 2023, 12:30 PM ISTUpdated : Sep 01, 2023, 12:35 PM IST
ತಂದೆ ಜೊತೆ Dp ಹಾಕಿದ್ದ ಸ್ಪಂದನಾ ಎಂದೂ ಬದಲಾಯಿಸಲಿಲ್ಲ: ವಿಜಯ್ ರಾಘವೇಂದ್ರ ಭಾವುಕ

ಸಾರಾಂಶ

ಸ್ಪಂದನಾ ಆರೋಗ್ಯವಾಗಿದ್ದಳು...ಆಕೆ ತಂದೆಯ ಮುದ್ದಿನ ಮಗಳು....ಸದಾ ಮಗನ ಬಗ್ಗೆ ಯೋಚನೆ ಮಾಡುತ್ತಿದ್ದಳು ಎಂದ ರಾಘು...   

ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಆಗಸ್ಟ್‌ 7ರಂದು ಬ್ಯಾಂಕಾಕ್‌ ಪ್ರವಾಸದಲ್ಲಿದ್ದಾಗ ಲೋ ಬಿಪಿ ಆಗಿ ಅಗಲಿದರು. ಎರಡು ದಿನ ಕಳೆದ ನಂತರ ಸ್ಪಂದನಾ ಮೃತದೇಹವನ್ನು ಬೆಂಗಳೂರಿಗೆ ಕರೆ ತಂದು ಅಂತಿಮ ದರ್ಶನ ವ್ಯವಸ್ಥಿ ಮಾಡಲಾಗಿತ್ತು. ಆನಂತರ ಹರಿಶ್ಚಂದ್ರ ಘಾಟ್‌ನಲ್ಲಿ ಅಂತಿಮ ಸಂಸ್ಕಾರ ನಡೆಸಿದರು. ಸದ್ಯ ಕದ್ದಚಿತ್ರ ಪ್ರಚಾರದಲ್ಲಿ ಬ್ಯುಸಿಯಾಗಿರುವ ರಾಘು ಪತ್ನಿಯನ್ನು ನೆನಪಿಸಿಕೊಂಡು ಮಾತನಾಡಿದ್ದಾರೆ.

ಸ್ಪಂದನಾ ತುಂಬಾ ಆರೋಗ್ಯವಾಗಿದ್ದರು ಫಿಟ್ ಆಂಡ್ ಫೈಟ್ ಆಗಿದ್ದು ಬಹಳ ಆರೋಗ್ಯವಾಗಿದ್ದಳು. ನಿಜ ಹೇಳಬೇಕು ಅಂದ್ರೆ ಈಗಲೂ ಈ ಕ್ಷಣಕ್ಕೂ ಏನಾಗಿದೆ ಎಂದು ಆಕೆಗೆ ಪಾಪ ಗೊತ್ತಿದೆಯೋ ಇಲ್ವೋ. ಎಲ್ಲರ ಮನೆಯಲ್ಲೂ ಈ ರೀತಿ ಘಟನೆ ನಡೆಯುತ್ತದೆ ಈಗ ನನ್ನ ಮನೆಯಲ್ಲಿ ನಡೆದಿದೆ. ಹೀಗಾಯ್ತು ಎಂದು ಒಬ್ಬರು ಹೇಳಿದಾಗ ಬೇಸರವಾಗುತ್ತಿತ್ತು ಆ ಜಾಗದಲ್ಲಿ ನಿಂತು ನೋಡಿದಾಗ ಆಗೋ ಅನುಭವ ಬೇರೆ. ಆ ನೋವು ಭರಿಸುತ್ತಿರುವ ನುಂಗುತ್ತಿರುವೆ ಮತ್ತೆ ಮತ್ತೆ ಮಾತನಾಡಿ ಅಳುವುದಕ್ಕೆ ನೋವು ಮಾಡಿಕೊಳ್ಳುವುದಕ್ಕೆ ಇಷ್ಟವಿಲ್ಲ. ನನ್ನ ಮಗ ನನ್ನನ್ನು ಗಮನಿಸುತ್ತಿರುತ್ತಾನೆ ನಾನು ಏನೇ ಮಾತನಾಡಿದರೂ ಅಪ್ಪ ಅಮ್ಮ ನೋಡುತ್ತಾರೆ ಹಾಗೂ ನನ್ನ ಅತ್ತೆ ಮಾವ ನೋಡುತ್ತಾರೆ. ಪದೇ ಪದೇ ಹೆಂಡತಿ ಬಗ್ಗೆ ಮಾತನಾಡುವುದಕ್ಕೆ ಬೇಸರವಾಗುತ್ತದೆ' ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ರಾಘು ಸ್ಪಂದನಾ ಪ್ರೀತಿಗೆ ಕಣ್ಣು ಬಿದ್ದಿದೆ: ಸಾವಿನ ಬಗ್ಗೆ ಸ್ಪಷ್ಟನೆ ಕೊಟ್ಟ ನಟ ವಿಶಾಲ್ ಹೆಗ್ಡೆ

'ಸ್ಪಂದನಾ ಬಗ್ಗೆ ಮಾತನಾಡುತ್ತಿದ್ದರೆ ಮಾತನಾಡುತ್ತಲೇ ಇರಬಹುದು. ಆಕೆ ಇಲ್ಲದೆ ಮೂರು ದಿನ ಕಷ್ಟವಾಯ್ತು..ಅಲ್ಲಿ ನಡೆದ ಘಟನೆ ಅಲ್ಲಿಂದ ಇಲ್ಲಿಗೆ ಬಂದ ಮೇಲೆ ಆದಂತ ಕೆಲಸಗಳು ಆಮೇಲೆ ಜನರು ಆಕೆಗೆ ಆಶೀರ್ವಾದ ಮಾಡಿದ್ದು ನೋಡಿದರೆ ನಾನು ಜೀವನದಲ್ಲಿ ಬಹಳ ದೊಡ್ಡದು ಏನೋ ಮಿಸ್ ಮಾಡಿಕೊಳ್ಳುತ್ತಿರುವೆ ಅನಿಸುತ್ತದೆ. ಕಳೆದ ಎರಡು ವರ್ಷಗಳಿಂದ ನಾವು ಇದ್ದಂತೆ ರೀತಿ ನಮ್ಮಲ್ಲಿ ಯೋಚನೆಗಳು ಮತ್ತು ಯೋಜನೆಗಳು ಚೆನ್ನಾಗಿ ಕೆಲಸ ರೂಪಕ್ಕೆ ಬರುತ್ತಿತ್ತು ಇನ್ನು ಮುಂದೆ ನಾನೊಬ್ಬನೆ ಅದನ್ನು ಕಂಪ್ಲೀಟ್ ಮಾಡಬೇಕು' ಎಂದು ರಾಘವೇಂದ್ರ ಹೇಳಿದ್ದಾರೆ.

ಸ್ಪಂದನಾ...ನಾನೆಂದು ನಿನ್ನವ: ಭಾವುಕ ಸಾಲುಗಳನ್ನು ಬರೆದ ವಿಜಯ್ ರಾಘವೇಂದ್ರ

'ಸ್ಪಂದನಾಗೆ ತಂದೆ ಅಂದ್ರೆ ತುಂಬಾನೇ ಇಷ್ಟ...ಅವರ ತಂದೆ ಕೂಡ ಮಗಳೇ ಮಗಳೇ ಎಂದು ಕರೆಯುತ್ತಿದ್ದರು. ತಂದೆ ತಾಯಿ ಸಂಬಂಧ ಯಾರೂ ಓವರ್ ಟೇಕ್ ಮಾಡಬಾರದು. ಕೊನೆ ತಂದೆ ಜೊತೆ Dp ಹಾಕಿದ್ದರು ಎಂದೂ ಅದನ್ನು ಬದಲಾಯಿಸಿರಲಿಲ್ಲ. ಸ್ಪಂದನಾ ತಂದೆ ಜೊತೆ ಸೇರಿಕೊಂಡು ಮಗ ಶೌರ್ಯನನ್ನು ಚೆನ್ನಾಗಿ ರೇಗಿಸುತ್ತಿದ್ದಳು. ಆ ನೆನಪುಗಳು ಇನ್ನು ಮುಂದೆ ಹಾಗೆ ಇರುತ್ತದೆ' ಎಂದಿದ್ದಾರೆ ವಿಜಯ್ ರಾಘವೇಂದ್ರ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಶಿರಸಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್