ಆಟೋ ರಾಜ ಎಂದೇ ಪ್ರಸಿದ್ಧಿ ಪಡೆದಿರುವ ಶಂಕರ್ ನಾಗ್ ನಮ್ಮ ಜೊತೆಗಿಲ್ಲದೆ ಹೋದ್ರೂ ಅವರ ನಗು, ನಟನೆ ಜೀವಂತ. ಅವರ ಪತ್ನಿ ಅರುಂಧತಿ ನಾಗ್ ಅವರ ಜೊತೆ ಕಳೆದ ಸಮಯ, ಸುಂದರ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ಮಿಂಚಿನ ಓಟಗಾರ ಶಂಕರ್ ನಾಗ್ ಈಗ್ಲೂ ಎಲ್ಲರ ಅಚ್ಚುಮೆಚ್ಚು. ನಾಯಕನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಕೋಟ್ಯಾಂತರ ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೆ ಉಳಿದಿರುವ ಶಂಕರ್ ನಾಗ್ ಬಗ್ಗೆ ಎಷ್ಟು ಕೇಳಿದ್ರೂ ಮತ್ತೆ ಕೇಳ್ಬೇಕು ಎನ್ನಿಸದೆ ಇರೋದಿಲ್ಲ. ಅವರ ಬಾಲ್ಯದಿಂದ ಹಿಡಿದು, ಕಾಲೇಜು ದಿನ, ಪ್ರೀತಿ, ಮದುವೆ, ಸಿನಿಮಾ ಎಲ್ಲವನ್ನೂ ಅಭಿಮಾನಿಗಳು ತಿಳಿದುಕೊಳ್ಳಲು ಸದಾ ಕಾತುರರಾಗಿರ್ತಾರೆ.
ಪ್ರೀತಿಯ ಶಂಕರಣ್ಣ (Sankaranna) ಎಂದೇ ಕನ್ನಡಿಗರ ಮನದಲ್ಲಿ ಬೆರೆತಿರುವ ಶಂಕರ್ ನಾಗ್ ಹಾಗೂ ನಟಿ, ಪತ್ನಿ ಅರುಂಧತಿ ನಾಗ್ ಅವರ ಪ್ರೀತಿ ಚಿಗುರಿದ್ದು ಎಲ್ಲಿ, ಇಬ್ಬರ ಮಧ್ಯೆ ಆಗಾಗ ಜಗಳವಾಗ್ತಿತ್ತಾ ಎಲ್ಲ ವಿಷ್ಯವನ್ನು ಅರುಂಧತಿ ನಾಗ್ ಹೇಳಿದ್ದಾರೆ. ಈ ಹಿಂದೆ ಸುವರ್ಣ ವಾಹಿನಿ ಜೊತೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಅರುಂಧತಿ ನಾಗ್ ಶಂಕರ್ ನಾಗ್ ಅವರಿಗೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ಹಂಚಿಕೊಂಡಿದ್ದರು.
ಪಂದ್ಯಕ್ಕೂ ಮುನ್ನ ನಿದ್ರೆ ಮಾಡಿದ್ದ ಯಾರೋಸ್ಲಾವಾ, ತುಳಸಿದಾಸ್ ಜೂನಿಯರ್ ಸಿನಿಮಾ ಪ್ರೇರಣೆಯಾ?
ಶಂಕರ್ ನಾಗ್ – ಅರುಂಧತಿ ನಾಗ್ ಪ್ರೀತಿ ಚಿಗುರಿದ್ದು ಎಲ್ಲಿ?: ಅರುಂಧತಿ ನಾಗ್ ಹಾಗೂ ಶಂಕರ್ ನಾಗ್ ಪ್ರೀತಿಸಿ ಆರು ವರ್ಷದ ನಂತರ ಮದುವೆಯಾದವರು. ಅರುಂಧತಿ ನಾಗ್ 23 ವರ್ಷದಲ್ಲಿರುವಾಗಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದ್ರೆ ಅದಕ್ಕಿಂತ ಮೊದಲೇ ಅವರ ಬಾಳಲ್ಲಿ ಶಂಕರ್ ನಾಗ್ ಪ್ರವೇಶವಾಗಿತ್ತು. ಬೇರೆ ಬೇರೆ ಕಾಲೇಜಿನಲ್ಲಿ ಓದುತ್ತಿದ್ದ ಅರುಂಧತಿ ನಾಗ್ ಹಾಗೂ ಶಂಕರ್ ನಾಗ್ ಮುಖಾಮುಖಿ ಭೇಟಿಯಾಗಿದ್ದು ಗುಜರಾತ್‌ನಲ್ಲಿ. ಇಂಡಿಯನ್ ನ್ಯಾಷನಲ್ ಥಿಯೇಟರ್ ಇವರ ಭೇಟಿಗೆ ದಾರಿಯಾಯ್ತು.
ಯುನಿವರ್ಸಿಟಿ ಕಾಂಪಿಟೇಶ್‌ನಲ್ಲಿ ಬೆಸ್ಟ್ ಆ್ಯಕ್ಟರ್ ಮತ್ತೆ ಬೆಸ್ಟ್ ಆ್ಯಕ್ಸೆರ್ಸ್ ಪಡೆದ ವಿದ್ಯಾರ್ಥಿಗಳನ್ನು ಒಂದುಗೂಡಿಸಿ ಇಂಡಿಯನ್ ನ್ಯಾಷನಲ್ ಥಿಯೇಟರ್ ಒಂದು ನಾಟಕವನ್ನು ಮಾಡಿತ್ತು. ಈ ಸಮಯದಲ್ಲಿ ಅರುಂಧತಿ ನಾಗ್ ಹಾಗೂ ಶಂಕರ್ ನಾಗ್ ಮೊದಲ ಬಾರಿ ಸಿಕ್ಕಿದ್ದರು. ಅಲ್ಲಿಯೇ ಅವರ ಮೊದಲ ಮಾತು. ಆ ಟೈಂನಲ್ಲೇ ನಾನು ಶಂಕರ್ ಪ್ರೀತಿಗೆ ಬಿದ್ದಿದ್ದೆ ಎನ್ನುತ್ತಾರೆ ಅರುಂಧತಿ ನಾಗ್.
ಶಂಕರ್ ನಾಗ್ ಸ್ವಭಾವ ಹೇಗಿತ್ತು?: ಆಟೋಗಳ ಮೇಲೆ ಸದಾ ಜೀವಂತವಾಗಿರುವ ಆಟೋ ರಾಜಾ ಶಂಕರ್ ನಾಗ್ ಅನೇಕ ಚಿತ್ರಗಳಲ್ಲಿ ರೌಡಿ ಪಾತ್ರ ಮಾಡಿದ್ದಾರೆ. ರೌಡಿ, ಫೈಟಿಂಗ್, ಕೋಪದ ದೃಶ್ಯಗಳಲ್ಲೇ ಅವರು ಹೆಚ್ಚಾಗಿ ಕಾಣಿಸಿಕೊಂಡ್ರೂ ಅವರ ಸ್ವಭಾವ ಮಾತ್ರ ಅದಕ್ಕೆ ತದ್ವಿರುದ್ಧ. ತುಂಬಾ ಮೃದು ಸ್ವಭಾವದವರಾಗಿದ್ದ ಶಂಕರ್ ನಾಗ್ ಅವರಿಗೆ ತುಂಬಾ ಮೆಚ್ಯುರಿಟಿ ಇತ್ತು. ಅರುಂಧತಿ ನಾಗ್ ಹಾಗೂ ಶಂಕರ್ ನಾಗ್ ಪರಸ್ಪರ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದರು. ಒಂದೆರಡು ಬಾರಿ ಈ ಸಂಬಂಧ ಬೇಡ ಅಂತ ಅರುಂಧತಿ ನಾಗ್ ಹೇಳಿದ್ದೂ ಇತ್ತು. ಆದ್ರೆ ತುಂಬಾ ಸಿಂಪಲ್ ಶಂಕರ್ ಸ್ವಭಾವಕ್ಕೆ ಅರುಂಧತಿ ಮನಸೋತಿದ್ದರು.
ವಿಷ್ಣುವರ್ಧನ್, ಅನಂತನಾಗ್ ನಟನೆ ಈ ಸಿನಿಮಾಗಳನ್ನ ನೋಡಿಲ್ಲ ಅಂದ್ರೆ ಮಿಸ್ ಮಾಡದೇ ನೋಡಿ
ಎಷ್ಟು ಬಾರಿ ನಡೆದಿತ್ತು ಶಂಕರ್ ನಾಗ್ – ಅರುಂಧತಿ ನಾಗ್ ಜಗಳ : ಬದುಕಿದ್ದರೆ ನಮ್ಮೆಲ್ಲರ ಶಂಕ್ರಣ್ಣಗೆ ಈಗ 70 ವರ್ಷವಾಗ್ತಿತ್ತು. 1980ರಲ್ಲಿ ಆರು ವರ್ಷಗಳು ಪ್ರೀತಿಸಿದ್ದ ಅರುಂಧತಿ ನಾಗ್ ಮದುವೆಯಾಗಿದ್ದರು ಶಂಕರ್ ನಾಗ್. ಅವರ ಮದುವೆ ಕೂಡ ಆರ್ಯ ಸಮಾಜದಲ್ಲಿ ತುಂಬಾ ಸರಳವಾಗಿ ನಡೆದಿತ್ತು. ಬರ್ತ್ ಡೇ ದಿನ ವೈವಾಹಿಕ ಜೀವನಕ್ಕೆ ಕಾಲಿಟ್ಟ ಶಂಕರ್ ನಾಗ್ ಅವರಿಗೆ ಅಂದು ತಮ್ಮ ಮದುವೆ ಅನ್ನೋದೇ ನೆನಪಿರಲಿಲ್ಲ. 1990ರಲ್ಲಿ ಶಂಕರ್ ನಾಗ್ ಅವರನ್ನು ಅರುಂಧತಿ ನಾಗ್ ಕಳೆದುಕೊಳ್ತಾರೆ. ಒಟ್ಟೂ 17 ವರ್ಷಗಳಿಂದ ಶಂಕರ್ ನಾಗ್ ಅವರ ಜೊತೆಗಿದ್ದ ಅರುಂಧತಿ ನಾಗ್, ಆ ದಿನಗಳನ್ನು ನೆನೆಪಿಸಿಕೊಳ್ತಾ, ಈ ಟೈಂನಲ್ಲಿ ಒಂದು ದಿನ ಕೂಡ ನಮ್ಮಿಬ್ಬರಿಗೆ ಜಗಳ ಆಗಿರಲಿಲ್ಲ ಎನ್ನುತ್ತಾರೆ.