ಸ್ಯಾಂಡಲ್ವುಡ್ ನಟಿ ಪೂಜಾ ಗಾಂಧಿ ಸಾಕಷ್ಟು ಬದಲಾಗಿದ್ದಾರೆ. ಅವರ ಕನ್ನಡ, ಅವರ ಆತ್ಮವಿಶ್ವಾಸ ಡಬಲ್ ಆಗಿದೆ. ಅದಕ್ಕೆ ಕಾರಣವೇನು ಎಂಬುದನ್ನು ಪೂಜಾ ಬಿಚ್ಚಿಟ್ಟಿದ್ದಾರೆ.ಹಾಗೆ ಮಂತ್ರದ ಮೇಲಿರುವ ನಂಬಿಕೆಯನ್ನು ಪೂಜಾ ಗಾಂಧಿ ಹೇಳಿದ್ದಾರೆ.
ಮುಂಗಾರು ಮಳೆ ಮೂಲಕವೇ ಪ್ರಸಿದ್ಧಿ ಪಡೆದ ಮಳೆ ಹುಡುಗಿ ಪೂಜಾ ಗಾಂಧಿ (Mungaru Male Heroine Pooja Gandhi) ಕನ್ನಡಕ್ಕೆ, ಕನ್ನಡಿಗರು ಮೆಚ್ಚುಗೆಯ ಮಳೆ ಸುರಿಸಿದ್ದಾರೆ. ಉತ್ತರ ಪ್ರದೇಶದಿಂದ ಬಂದು ಕರ್ನಾಟಕದಲ್ಲಿ ನೆಲೆ ನಿಂತಿರುವ ಸ್ಯಾಂಡಲ್ವುಡ್ ನಟಿ, ಕನ್ನಡಿಗರಿಗಿಂತ ಚೆಂದವಾಗಿ ಕನ್ನಡ ಮಾತನಾಡ್ತಿದ್ದಾರೆ. ಕನ್ನಡ ಕಲಿಕೆಗೆ ಹೆಚ್ಚು ಆದ್ಯತೆ ನೀಡ್ತಿರುವ ಅವರು ಶೀಘ್ರದಲ್ಲೇ ಕನ್ನಡ ನಿರುದ್ಯೋಗಿಗಳಿಗಾಗಿ ಹೊಸ ಪ್ರಾಜೆಕ್ಟ್ ಶುರು ಮಾಡ್ತಿದ್ದಾರೆ. ಮಂತ್ರ, ದೇವರ ಪ್ರಾರ್ಥನೆಯಲ್ಲೂ ನಂಬಿಕೆ ಇಟ್ಟಿರುವ ಪೂಜಾ ಗಾಂಧಿ ತಮ್ಮ ಮನದ ಮಾತನ್ನು ಅಭಿಮಾನಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.
ರ್ಯಾಪಿಡ್ ರಶ್ಮಿ (Rapid Rashmi) ಯುಟ್ಯೂಬ್ (YouTube) ಚಾನೆಲ್ ನಲ್ಲಿ ಕಾಣಿಸಿಕೊಂಡ ದಂಡು ಪಾಳ್ಯದ ಅಭಿನೇತ್ರಿ ಸೋಲು – ಗೆಲುವನ್ನು ಸಮಾನವಾಗಿ ಸ್ವೀಕರಿಸ್ತಾರೆ. ಮುಂಗಾರು ಮಳೆ ಚಿತ್ರದಲ್ಲಿ ಗಣೇಶನ ಜೊತೆ ನಟಿಸಿ ಸೈ ಎನ್ನಿಸಿಕೊಂಡಿದ್ದ ಪೂಜಾ ಗಾಂಧಿ (Pooja Gandhi), ನಿರ್ಮಾಣ, ರಾಜಕೀಯದಲ್ಲಿ ಸೋತಿದ್ರು. ಈ ಬಗ್ಗೆಯೂ ರಶ್ಮಿ ಜೊತೆ ಮಾತನಾಡಿದ ಅವರು, ತಾವು ಕಾಲೇಜಿಗೆ ಹೋಗುವ ಸಂಗತಿಯನ್ನು ತಿಳಿಸಿದ್ದಾರೆ.
ಅಮ್ಮನನ್ನೇ ಧಾರೆ ಎರೆದುಕೊಟ್ಟ ಮಗ! ಬದಲಾದ ಮನಸ್ಥಿತಿಗೆ ನೆಟ್ಟಿಗರ ಕಮೆಂಟ್ಗಳೇ ಸಾಕ್ಷಿ...
ಬಸವಣ್ಣನ ವಚನ, ದ.ರಾ ಬೇಂದ್ರೆ ಬಗ್ಗೆ ಫಟ ಫಟ ಅಂತ ಮಾತನಾಡುವ ಪೂಜಾ ಗಾಂಧಿ ಕನ್ನಡಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ. ಪೂಜಾ ಗಾಂಧಿ ನಿತ್ಯ ಹೇಳ್ತಾರೆ ಈ ಮಂತ್ರ : ಮಾನಸಿಕ ಸ್ಥಿತಿಯನ್ನು ಸುಧಾರಿಸಿಕೊಳ್ಳಲು ಧ್ಯಾನ, ಮಾತುಕತೆ ಬಹಳ ಮುಖ್ಯ ಎನ್ನುವ ಪೂಜಾ ಗಾಂಧಿ, ಪ್ರತಿ ದಿನ ಮಂತ್ರ ಪಠಣ ಮಾಡ್ತಾರೆ. ಹನುಮಾನ ಚಾಲೀಸಾ ಹಾಗೂ ಮೃತ್ಯಂಜಯ ಮಂತ್ರದಲ್ಲಿ ಅವರಿಗೆ ನಂಬಿಕೆ ಇದೆ. ಇದು ನನಗೆ ಶಕ್ತಿ ನೀಡಿದೆ ಎನ್ನುವ ಅವರು, ಪ್ರತಿ ದಿನ, ಪ್ರತಿ ಕ್ಷಣವನ್ನು ಎಂಜಾಯ್ ಮಾಡಿ ಎಂಬ ಕಿವಿಮಾತು ಹೇಳಿದ್ದಾರೆ.
2023ರಲ್ಲಿ ಉದ್ಯಮಿ ವಿಜಯ್ ಘೋರ್ಪಡೆ ಅವರನ್ನು ಮದುವೆಯಾದ ಪೂಜಾ, ಅವರು ಉತ್ತಮ ಪತಿ ಮಾತ್ರವಲ್ಲ ಒಳ್ಳೆ ಸ್ನೇಹಿತ ಎಂದಿದ್ದಾರೆ. ಅನೇಕ ವರ್ಷಗಳಿಂದ ಉತ್ತಮ ಸ್ನೇಹಿತರಾಗಿದ್ದ ವಿಜಯ್, ತನಗೊಬ್ಬ ಒಳ್ಳೆ ಸಂಗಾತಿ ಆಗಬಲ್ಲ ಅನ್ನಿಸ್ತು. ಹಾಗಾಗಿ ಅವರನ್ನೇ ಮದುವೆಯಾಗುವ ನಿರ್ಧಾರಕ್ಕೆ ಬಂದೆ ಎಂದಿದ್ದಾರೆ.
ಸಿನಿಮಾ ಮಾಡ್ಕೊಂಡಿದ್ದ ಪೂಜಾ ಗಾಂಧಿ, ನಿರ್ಮಾಣ ಹಾಗೂ ರಾಜಕೀಯಕ್ಕೆ ಇಳಿದಿದ್ರು. ಆದ್ರೆ ಅವರೆಡರಲ್ಲೂ ಅವರಿಗೆ ಸಕ್ಸಸ್ ಸಿಗ್ಲಿಲ್ಲ. ಯಾವುದೇ ವಿಷ್ಯದ ಬಗ್ಗೆ ಜ್ಞಾನ ಇರ್ಲಿಲ್ಲ ಎಂದಾದ್ರೆ ಆ ಕ್ಷೇತ್ರಕ್ಕೆ ಕಾಲಿಡ್ಬೇಡಿ. ಅರಿವೇ ಗುರು ಎಂದ ಪೂಜಾ ಎಲ್ಲವನ್ನೂ ಕಲಿತು ಬರ್ಬೇಕು. ನಾನು ಪ್ಲಾಪ್ ನಿರ್ಮಾಪಕಿ, ಪ್ಲಾಪ್ ರಾಜಕಾರಣಿ. ಆದ್ರೆ ಅಲ್ಲೂ ಸಾಕಷ್ಟು ವಿಷ್ಯವನ್ನು ಕಲಿತಿದ್ದೇನೆ, ಕಷ್ಟವನ್ನು ಖುಷಿಯಿಂದ ಸ್ವಾಗತಿಸಿದ್ದೇನೆ ಎಂದದ್ದಾರೆ.
ಹತ್ತನೇ ತರಗತಿಯವರೆಗೆ ಮಾತ್ರ ಓದಿದ್ದ ಪೂಜಾ ಈಗ ಯುಪಿಎಸ್ಸಿ ತಯಾರಿ ನಡೆಸ್ತಿದ್ದಾರೆ. ಕನ್ನಡ ಕಲಿಯುತ್ತಿದ್ದಾರೆ. ಎಲ್ಲ ವಿಷ್ಯಗಳನ್ನು ಓದುತ್ತಿರುವ ಪೂಜಾ, ತಮಗಿಂತ ಅರ್ಧ ವಯಸ್ಸಿನ ಯುವಕರ ಜೊತೆ ಮಾತನಾಡೋದು ತುಂಬಾ ಖುಷಿ ಸಿಗ್ತಿದೆ ಎನ್ನುತ್ತಾರೆ. ಕನ್ನಡ ಓದೋದು, ಬರೆಯೋದನ್ನು ಕಲಿತಿರುವ ಪೂಜಾ, ಸ್ಪಷ್ಟ ಕನ್ನಡದಲ್ಲಿ ಮಾತನಾಡುವ ಗುರಿಯನ್ನು ಹೊಂದಿದ್ದಾರೆ. ಹಾಗೆ ಕನ್ನಡಿಗರಿಗಾಗಿ ಅವರು ಹೊಸ ಪ್ರಾಜೆಕ್ಟ್ ಒಂದನ್ನು ತರ್ತಿದ್ದಾರೆ. ಕೆಲವೇ ದಿನಗಳಲ್ಲಿ ಈ ಬಗ್ಗೆ ಅಧಿಕೃತ ಹೇಳಿಕೆ ನೀಡ್ತೇನೆ ಎಂದಿರುವ ಪೂಜಾ ಕರ್ನಾಟಕದ ಹೆಮ್ಮೆ ಮೈಸೂರ್ ಸ್ಯಾಂಡಲ್ ಸೋಪ್ ಬಳಕೆ ಮಾಡ್ತಾರೆ. ಅದ್ರ ಬಗ್ಗೆ ಜನರಿಗೆ ತಿಳಿಸಲು ರೀಲ್ಸ್ ಕೂಡ ಮಾಡಿದ್ರು.
ಮಗಳ ಮೊದಲ ಹುಟ್ಟುಹಬ್ಬವನ್ನ ಅದ್ದೂರಿಯಾಗಿ ಆಚರಿಸಿದ 'ಜೊತೆ ಜೊತೆಯಲಿ' ನಟಿ ಆಶಿತಾ ಚಂದ್ರಪ್ಪ
ಸಾಮಾಜಿಕ ಜಾಲತಾಣದಲ್ಲಿ ಪೂಜಾ ಗಾಂಧಿ ವಿಡಿಯೋ ವೈರಲ್ ಆಗ್ತಿದ್ದಂತೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪೂಜಾ ಗಾಂಧಿ ಕನ್ನಡವನ್ನು ಶ್ಲಾಘಿಸಿದ್ದಾರೆ. ಕನ್ನಡಿಗರಿಗಿಂತ ಹೆಚ್ಚು ಕನ್ನಡ ಮಾತನಾಡ್ತಿರುವ, ಕನ್ನಡ ಕವಿ, ಸಾಹಿತಿಗಳ ಬಗ್ಗೆ ಮಾತನಾಡ್ತಿರುವ ಪೂಜಾ ಅನೇಕರಿಗೆ ಮಾದರಿ ಎನ್ನುತ್ತಿದ್ದಾರೆ ನೆಟ್ಟಿಗರು.