ಅಷ್ಟು ಚೆನ್ನಾಗಿ ಹಾಡುವ ಡಾ ರಾಜ್‌ ಇಷ್ಟು ದಿನ ಆ ಅವಕಾಶವನ್ನು ನಂಗೆ ಬಿಟ್ಟಿದ್ದರಲ್ಲಾ; ಪಿಬಿ ಶ್ರೀನಿವಾಸ್!

By Shriram Bhat  |  First Published Mar 13, 2024, 3:01 PM IST

ಇಬ್ಬರ ಮಧ್ಯೆ ಪಿನ್ ಇಡುವ ಉದ್ದೇಶವಿತ್ತೋ ಅಥವಾ ಅವರವರ ಅಭಿಮಾನಿಗಳಿಗೆ ಸಹಜವಾಗಿಯೇ ತಮ್ಮ ಆರಾಧ್ಯ ದೈವಕ್ಕೆ ಅನ್ಯಾಯ ಆಗೋಯ್ತಲ್ಲ ಎಂಬ ಕೊರಗು ಕಾಡಿತೋ, ಒಟ್ಟಿನಲ್ಲಿ ಮಾತುಗಳಂತೂ ಹೊರಬಿದ್ದಿದ್ದವು. 


ಅದು ಡಾ ರಾಜ್‌ಕುಮಾರ್ ಹಾಗು ಪಿಬಿ ಶ್ರೀನಿವಾಸ್ ಅವರಿಬ್ಬರೂ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದ ಕಾಲ. 'ಸಂಪತ್ತಿಗೆ ಸವಾಲ್' ಚಿತ್ರದಲ್ಲಿ 'ಯಾರೇ ಕೂಗಾಡಲಿ' ಹಾಡು ಹಾಡುವ ಮೂಲಕ ಡಾ ರಾಜ್‌ಕುಮಾರ್ ಮೊಟ್ಟಮೊದಲ ಬಾರಿಗೆ ಗಾಯಕರಾಗಿಯೂ ಪರಿಚಯವಾಗಿ ಪ್ರಸಿದ್ಧಿ ಪಡೆದರು. ಆದರೆ, ಅಲ್ಲಿಯವರೆಗೂ ಡಾ ರಾಜ್‌ಕುಮಾರ್ ಅವರ ನಟನೆಯ ಚಿತ್ರಗಳಲ್ಲಿ ಅವರ ಹಾಡಿಗೆ ಧ್ವನಿಯಾಗಿದ್ದ ಗಾಯಕ ಪಿಬಿ ಶ್ರೀನಿವಾಸ್ ಅವರಿಗೆ ಸಹಜವಾಗಿಯೇ ಅವಕಾಶ್ ಕೈ ತಪ್ಪಿತು. ಮುಂದೆ ಡಾ ರಾಜ್‌ಕುಮಾರ್  ಚಿತ್ರಗಳಲ್ಲಿ ಯಾವತ್ತೂ ಪಿಬಿ ಶ್ರೀನಿವಾಸ್ ಅವರು ಹಾಡಲೇ ಇಲ್ಲ. 

ಆ ಸಮಯದಲ್ಲಿ ನಡೆದ ಘಟನೆಯೊಂದು ಇದೀಗ ಸೋಷಿಯಲ್ ಮೀಡಿಯಾ ಮೂಲಕ ವೈರಲ್ ಆಗಿದೆ. ಅಂದು ಕೆಲವು ಡಾ ರಾಜ್ ಅಭಿಮಾನಿಗಳು 'ನೀವು ಇಷ್ಟು ಒಳ್ಳೆಯ ಹಾಡುಗಾರರಾಗಿದ್ದೂ ಯಾಕೆ ಇದಕ್ಕೂ ಮೊದಲು ಹಾಡಲಿಲ್ಲ' ಎಂದು ಕೇಳಿದರಂತೆ. ಅದಕ್ಕೆ ಡಾ ಅಣ್ಣಾವ್ರು 'ಅಲ್ಲ, ಅವರದು ಅಷ್ಟು ಅಮೋಘ ಶಾರೀರ, ತುಂಬಾ ಚೆನ್ನಾಗಿ ಹಾಡುತ್ತಾರೆ. ಮಧ್ಯೆ ನಾನು ಯಾಕೆ ಹಾಡಿ ಅವರು ಹಾಡುವುದನ್ನು ನಲ್ಲಿಸಿಲಿ ಎಂದು ಹಾಡಿರಲಿಲ್ಲ' ಎಂದರಂತೆ. ಆದರೆ, ಅದು ಅಷ್ಟಕ್ಕೇ ನಿಲ್ಲಲಿಲ್ಲ. 

Tap to resize

Latest Videos

ಹೊಟೆಲ್ ರೂಮಿನಲ್ಲಿ ಕುಂಕುಮ ಹಚ್ಚಿದೆ, ಅಲ್ಲೇ ಫಸ್ಟ್ ನೈಟ್ ಆಯ್ತು; ಲಕ್ಷ್ಮೀ ಮಾಜಿ ಪತಿ ಶಾಕಿಂಗ್ ಹೇಳಿಕೆ!

ಪಿಬಿ ಶ್ರೀನಿವಾಸ್ ಅವರ ಕೆಲವು ಅಭಿಮಾನಿಗಳು ಅವರ ಬಳಿ ಹೋಗಿ 'ಅಲ್ಲಾ, ಡಾ ರಾಜ್‌ಕುಮಾರ್ ಅವರು ತಮ್ಮ ನಟನೆಯ ಚಿತ್ರಗಳಿಗೆ ತಾವೇ ಸ್ವತಃ ಹಾಡಲು ಶುರು ಮಾಡಿದ್ದಾರೆ. ಈಗ ನಿಮಗೆ ಅವಕಾಶವೇ ಇಲ್ಲ. ಎಂಥಾ ಕೆಲಸ ಆಗಿಹೋಯ್ತು ' ಎಂಬ ಅಭಿಪ್ರಾಯ ವ್ಯಕ್ತಪಡಿಸಿದರಂತೆ. ಅದಕ್ಕೆ ಗಾಯಕ ಪಿಬಿ ಶ್ರೀನಿವಾಸ್ 'ಅಷ್ಟು ಚೆನ್ನಾಗಿ ಹಾಡುವ ಡಾ ರಾಜ್‌ಕುಮಾರ್ ಇಷ್ಟು ದಿನ ನನಗೆ ಅವಕಾಶವನ್ನು ಕೊಟ್ಟಿದ್ದರಲ್ಲಾ, ಅದು ಬೇಕಾದಷ್ಟು ಆಗೋಯ್ತು' ಎಂದರಂತೆ. 

ಬಾಲಿವುಡ್ ನಟ ಹೃತಿಕ್ ರೋಶನ್ ದುಃಖ-ದುಮ್ಮಾನಗಳ ಬಗ್ಗೆ ಈಗ ಯಾಕೆ ಮಾತನಾಡಿದ್ದಾರೆ?

ಇಬ್ಬರ ಮಧ್ಯೆ ಪಿನ್ ಇಡುವ ಉದ್ದೇಶವಿತ್ತೋ ಅಥವಾ ಅವರವರ ಅಭಿಮಾನಿಗಳಿಗೆ ಸಹಜವಾಗಿಯೇ ತಮ್ಮ ಆರಾಧ್ಯ ದೈವಕ್ಕೆ ಅನ್ಯಾಯ ಆಗೋಯ್ತಲ್ಲ ಎಂಬ ಕೊರಗು ಕಾಡಿತೋ, ಒಟ್ಟಿನಲ್ಲಿ ಮಾತುಗಳಂತೂ ಹೊರಬಿದ್ದಿದ್ದವು. ಆದರೆ, ಡಾ ರಾಜ್‌ಕುಮಾರ್ ಹಾಗೂ ಪಿಬಿ ಶ್ರೀನಿವಾಸ್ ಎಂಬ ಇಬ್ಬರೂ ಲೆಜೆಂಡ್‌ಗಳು, ಸಿನಿಮಾರಂಗದ ಅಂದಿನ ಮಹೋನ್ನತ ಮುತ್ತುಗಳು ಆಡಿದ್ದ ಮಾತುಗಳು ಪರಸ್ಪರ ಹಾಗೂ ಮತ್ತೊಬ್ಬರ ಘನತೆ-ಗೌರವಗಳನ್ನು ಎತ್ತಿ ಹಿಡಿಯುವಂತಿದ್ದವು. ಅದೇ ಕೆಲವರಾಗಿದ್ದರೆ ಅಂದು ಅದೇ ವಿಷಯಕ್ಕೆ ಕಿತ್ತಾಡಿಕೊಂಡು ಒಬ್ಬರ ಬಗ್ಗೆ ಇನ್ನೊಬ್ಬರು ಕೆಟ್ಟದಾಗಿ ಮಾತನಾಡಿ ಕಾಂಟ್ರೋವರ್ಸಿ ಕ್ರಿಯೇಟ್ ಮಾಡಿಬಿಡುತ್ತಿದ್ದರೋ ಏನೋ!

ಮದುವೆಗಾಗಿ ಧರ್ಮವನ್ನೇ ಬಿಟ್ರು, ಆದ್ರೆ ಡಿವೋರ್ಸ್ ಆಯ್ತು; ಸ್ಟಾರ್ ನಟಿ ಬದುಕು ದುರಂತದಲ್ಲಿ ಕೊನೆಯಾಯ್ತು!

click me!