
ಕನ್ನಡ ಸಿನಿ ಪ್ರೇಮಿಗಳ ನೆಚ್ಚಿನ ನಟರು, ಒಂದು ಕಾಲದಲ್ಲಿ ಕುಚುಕು ಗೆಳೆಯರು ಅಗಿದ್ದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಫೋಟೋವನ್ನು ಕಲಾವಿದ ಕರಣ್ ಆಚಾರ್ಯ ವಿಭಿನ್ನ ರೀತಿಯಲ್ಲಿ ಡಿಸೈನ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಫೋಟೋಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ತುಂಬು ಗರ್ಭಿಣಿ ಮೇಘನಾ ಜೊತೆ ಹೆಜ್ಜೆ ಹಾಕ್ತಿರೋ ಚಿರು: ಮನಮುಟ್ಟುವ ಫೋಟೋ ವೈರಲ್
ಪ್ರಿನ್ಸ್ ಮಂಜು ಎಂಬ ಅಭಿಮಾನಿಯೊಬ್ಬ ದರ್ಶನ್ ಹಾಗೂ ಸುದೀಪ್ ಫೋಟೋ ಶೇರ್ ಮಾಡಿಕೊಂಡು 'ನೆನಪುಗಳಿಗೆ ಮತ್ತೆ ಜೀವ ತರಬೇಕು. ಸರ್ ಈ ಫೋಟೋವನ್ನು ಹನುಮಾನ್ ಹಾಗೂ ರಾಮನ ಅವತಾರಕ್ಕೆ ಮಾಡಲು ಆಗುತ್ತಾ? ಅಭಿಮಾನಿಗಳೆಲ್ಲರೂ ಖುಷಿಯಾಗುತ್ತಾರೆ,' ಎಂದು ಕೇಳಿ ಕೊಂಡಿದ್ದರು. ಕೆಲವೇ ನಿಮಿಷಗಳಲ್ಲಿ ಕರಣ್ ಈ ಫೋಟೋವನ್ನು ಎಡಿಟ್ ಮಾಡಿ ಶೇರ್ ಮಾಡಿಕೊಂಡಿದ್ದಾರೆ.
ಫೋಟೋ ಅದ್ಭುತವಾಗಿ ಮೂಡಿ ಬಂದಿದ್ದು, 'ಅಭಿಮಾನಿಗಳಾಗಿ ನಾವು ಬಯಸುವುದು ಅವರು ಮತ್ತೆ ಒಂದಾಗಬೇಕೆಂದು' ಎಂದು ಒಬ್ಬ ಕಮೆಂಟ್ ಮಾಡಿದರೆ, ಮತ್ತೊಬ್ಬ 'ಇವರಿಬ್ಬರೂ ರಾಮ-ಹನುಮಾನ್. ಆದರೆ ನಮ್ಮ ಉಪೇಂದ್ರ ಸರ್ ರಾವಣ ಮಾಡಬಹುದು,' ಎಂದೂ ಹೇಳಿದ್ದಾರೆ. ಈಗಾಗಲೇ ರಾಬರ್ಟ್ ಸಿನಿಮಾದ ಹಾಡೊಂದರಲ್ಲಿ ದರ್ಶನ್ ಅವರನ್ನು ಅಂಜನೇಯನ ರೂಪದಲ್ಲಿ ನೋಡಿದ್ದೀವಿ, ಈ ಫೋಟೋದಲ್ಲಿ ರಾಮನಂತೆ ನೋಡಲು ತುಂಬಾನೇ ಖುಷಿಯಾಗುತ್ತಿದೆ ಎಂದಿದ್ದಾರೆ ಅಭಿಮಾನಿಗಳು.
ಕರಣ್ ಆಚಾರ್ಯ ದೇವರ ಉಗ್ರ ರೂಪದ ಚಿತ್ರ ಬಿಡಿಸುವ ಹಿಂದಿನ ಕಾರಣವೇನು..?
ದರ್ಶನ್- ಸುದೀಪ್ ಒಂದಾಗಬೇಕೆಂದು ಅಭಿಮಾನಿಗಳು ಎಲ್ಲಾ ರೀತಿಯ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ. ಈ ಫೋಟೋ ಅವರಿಬ್ಬರಿಗೂ ತಲುಪಬೇಕೆಂದು ಸೋಷಿಯಲ್ ಮೀಡಿಯಾದ ಫ್ಯಾನ್ ಪೇಜ್‌ಗಳು ಎಲ್ಲೆಡೆ ವೈರಲ್ ಮಾಡುತ್ತಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.