'ಮರ್ಟಿನ್' ಆದ ಧ್ರುವ ಸರ್ಜಾ; ಬಾಡಿ ನೋಡಿ ಗಾಬರಿ ಆದ ನೆಟ್ಟಿಗರು!

By Suvarna News  |  First Published Aug 15, 2021, 4:20 PM IST

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ರುವ ಸರ್ಜಾ ತಮ್ಮ ಮುಂದಿನ ಚಿತ್ರದ ಲುಕ್ ಹಾಗೂ ಮೋಷನ್ ಪೋಸ್ಟರ್ ರಿಲೀಸ್ ಮಾಡಿದ್ದಾರೆ. 
 


ಪೊಗರು ಚಿತ್ರದ ನಂತರ ಧ್ರುವ ಸರ್ಜಾ ಮುಂದಿನ ಚಿತ್ರ ಯಾವುದು ಎಂದು ಲೆಕ್ಕ ಹಾಕುತ್ತಿದ್ದ ಅಭಿಮಾನಿಗಳಿಗೆ ಇಂದು ಗುಡ್ ನ್ಯೂಸ್ ನೀಡಿದ್ದಾರೆ. ಅಲ್ಲದೇ ತಮ್ಮ ಮುಂದಿನ ಚಿತ್ರಕ್ಕೆ ಧ್ರುವ ಸರ್ಜಾ ಸಖತ್ ಯಂಗ್ ಆಗಿ ಕಾಣಿಸಿಕೊಂಡಿದ್ದಾರೆ. 

ಹೌದು! ಹಲವು ದಿನಗಳಿಂದ ಧ್ರುವ ಸರ್ಜಾ ಮತ್ತು ಎಪಿ ಅರ್ಜುನ್ ಒಟ್ಟಿಗೆ ಸಿನಿಮಾ ಮಾಡುತ್ತಾರೆಂಬಬ ಮಾತು ಎಲ್ಲೆಡೆ ಹರಿದಾಡುತ್ತಿತ್ತು. ಅಲ್ಲದೆ ಇಡೀ ಚಿತ್ರತಂಡ ಬೆಂಗಳೂರಿನ ದೇಗುಲದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಿಸಿದ್ದಾರೆ. ಪೊಗರು ಚಿತ್ರದ ನಂತರ ಧ್ರುವ ಹೇರ್‌ಸ್ಟೈಲ್ ಬದಲಾಯಿಸಿದ್ದನ್ನು ಅಭಿಮಾನಿಗಳು ಗಮನಿಸಿದ್ದಾರೆ. ಹೀಗಾಗಿ ಟೈಟಲ್ ಅಥವಾ ಧ್ರುವ ಲುಕ್ ರಿವೀಲ್ ಮಾಡಬೇಕೆಂದು ಡಿಮ್ಯಾಂಡ್ ಹೆಚ್ಚಾಗಿದೆ. 

ರ್ದೇಶಕ ಪ್ರೇಮ್‌ ಜೊತೆ ಧ್ರುವ ಸರ್ಜಾ; ಸ್ಕ್ರಿಪ್ಟ್‌ ಪೂಜೆಯ ಹಿಂದಿನ ಗುಟ್ಟೇನು

Tap to resize

Latest Videos

ಇಂದು ಇಡೀ ಚಿತ್ರತಂಡ ಧ್ರುವ ಲುಕ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಚಿತ್ರಕ್ಕೆ ಮಾರ್ಟಿನ್ ಎಂಬ ಶೀರ್ಷಿಕೆ ನೀಡಲಾಗಿದೆ. ಉದಯ್ ಮೆಹ್ತಾ ಬಂಡವಾಳ ಹಾಕುತ್ತಿರುವ ಈ ಚಿತ್ರಕ್ಕೆ ಟಾಲಿವುಡ್ ಸ್ಟಂಟ್ ಮಾಸ್ಟರ್ ರಾಮ್‌-ಲಕ್ಷ್ಮಣ್ ಸಾಹಸ ಸಂಯೋಜನೆ ಮಾಡುತ್ತಿದ್ದಾರೆ. ನಾಯಕಿ ಹುಡುಕಾಟ ಶುರುವಾಗಿದ್ದು, ಶೀಘ್ರದಲ್ಲಿ ರಿವೀಲ್ ಮಾಡಲಿದ್ದಾರೆ. ಪೋಸ್ಟರ್‌ನಲ್ಲಿ ಧ್ರುವ ಸರ್ಜಾ ಮತ್ತೆ muscles ಬಿಲ್ಡ್ ಮಾಡಿರುವುದನ್ನು ನೋಡಿ ನೆಟ್ಟಗರು ಶಾಕ್ ಆಗಿದ್ದಾರೆ ಅಲ್ಲದೆ ಒಂದು ಕೈ ಮೇಲೆ ಇಂಡಿಯನ್ ಎಂಬ ಟ್ಯಾಟು ಹಾಕಲಾಗಿದೆ. ಇದು ಮಾಸ್ ಆರ್ ಕ್ಲಾಸ್ ಸಿನಿಮಾ ಎಂದು ತಿಳಿದುಕೊಳ್ಳಲು ಕಾದು ನೋಡಬೇಕಿದೆ.

 

1Million+ Views 🔥🔥🔥 for First Look Teaser

Watch Now: https://t.co/KnECwKeW3w pic.twitter.com/7uiYgOtxtw

— Lahari Music (@LahariMusic)
click me!