ಕ್ರೇಜಿ ಬೈಕ್‌ ಸಾಹಸ ಮಾಡಿದ ಸಂಯುಕ್ತಾ; ಬೆಚ್ಚಿಬಿದ್ದ ನೆಟ್ಟಿಗರು!

Suvarna News   | Asianet News
Published : Aug 03, 2020, 11:15 AM IST
ಕ್ರೇಜಿ ಬೈಕ್‌ ಸಾಹಸ ಮಾಡಿದ ಸಂಯುಕ್ತಾ; ಬೆಚ್ಚಿಬಿದ್ದ ನೆಟ್ಟಿಗರು!

ಸಾರಾಂಶ

ಕಿರಿಕ್ ಪಾರ್ಟಿ ಖ್ಯಾತಿಯ ಸಂಯುಕ್ತಾ ಹೆಗ್ಡೆ ಚಿಕ್ಕಮಗಳೂರಿಗೆ ಸೋಲೋ ರೈಡ್‌ ಹೋಗಿದ್ದಾರೆ. ವಿಚಾರ ಕೇಳಿ ಅಚ್ಚರಿ ಪಟ್ಟ ಅಭಿಮಾನಿಗಳು ! ಏನೆಂದು ನೋಡಿ....

'ಕಿರಿಕ್ ಪಾರ್ಟಿ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟಿ ಸಂಯುಕ್ತಾ ಹೆಗ್ಡೆ ಇತ್ತೀಚಿನ ದಿನಗಳಲ್ಲಿ ತುಂಬಾನೇ ಅಡ್ವೆಂಚರ್ಸ್‌ ಕೆಲಸಗಳನ್ನು ಮಾಡುತ್ತಿದ್ದಾರೆ. ಲಾಕ್‌ಡೌನ್‌ ಟೈಮ್‌ನಲ್ಲಿ ಹೋಲಾ ಹೂಪ್‌ ಹಿಡಿದು ಮಾಡುತ್ತಿದ್ದ ಸಾಹಸ ಸಿಕ್ಕಾಪಟ್ಟೆ ವೈರಲ್ ಆಗಿತ್ತು ಹಂತ ಹಂತವಾಗಿ  ಅನ್‌ಲಾಕ್‌ ಆಗುತ್ತಿದ್ದಂತೆ ಸಂಯುಕ್ತಾ ಗೆಳೆಯರ ಜೊತೆ ರೈಡ್‌ ಹೋಗಿದ್ದಾರೆ.

ಸಂಯುಕ್ತಾ ಹೆಗ್ಡೆ ವಿಚಿತ್ರ ಫೋಟೋ; 10 ಲಕ್ಷ ಜನರ ಪ್ರೀತಿ ಪಡೆದ ತುಂಟಿ!

ಬರ್ತಡೇ ಸ್ಪೆಷಲ್ : 

ಇತ್ತೀಚಿಗೆ 22ನೇ ವಸಂತಕ್ಕೆ ಕಾಲಿಟ್ಟ ಸಂಯುಕ್ತಾ ಗೆಳೆಯರ ಜೊತೆ ಚಿಕ್ಕಮಗಳೂರಿಗೆ ಬೈಕ್‌ ರೈಡ್ ಹೋಗಿದ್ದರು. ಕೆಲವೊಂದು ಮೂಲಗಳ ಪ್ರಕಾರ ಸಂಯುಕ್ತಾ ಒಬ್ಬಂಟಿಯಾಗಿ ಬೈಕ್ ರೈಡ್ ಮಾಡಿದ್ದಾರಂತೆ. ವಿಚಾರ ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ ಅಷ್ಟೇ ಅಲ್ಲದೇ  ಸಂಯುಕ್ತಾ ಬಗ್ಗೆ ಕಾಳಜಿ ವಹಿಸಿದ್ದಾರೆ. ಇದಕ್ಕೆ ಸಂಯುಕ್ತಾ ಪತ್ರಿಕ್ರಿಯಿಸಿದ್ದಾರೆ.

'ಬೈಕ್ ರೈಡ್ ತುಂಬಾನೇ ಚೆನ್ನಾಗಿತ್ತು.  ರಸ್ತೆ ಕೂಡ ಸೂಪರ್‌, ದಾರಿಯ ಮಧ್ಯೆ ನನಗೆ ಯಾವುದೇ ಸಮಸ್ಯೆ ಆಗಲಿಲ್ಲ. ನನ್ನ ಕ್ಷೇಮದ ಬಗ್ಗೆ ಕಾಳಜಿ ವಹಿಸಿದ ಎಲ್ಲರಿಗೂ ಧನ್ಯವಾದಗಳು' ಎಂದು ಹೇಳಿದ್ದಾರೆ.

 

ಕನ್ನಡ ಸಿನಿಮಾ ಮಾಡುವೆ:

ಕಿರಿಕ್ ಪಾರ್ಟಿ ಹಾಗೂ ಕಾಲೇಜ್ ಕುಮಾರ ಸಿನಿಮಾ ನಂತರ ಪರಭಾಷೆಯಲ್ಲಿ ಬ್ಯುಸಿಯಾದ ಸಂಯುಕ್ತಾ ಕನ್ನಡ ಸಿನಿಮಾಗಳಲ್ಲಿ ಹೆಚ್ಚಾಗಿ ಅಭಿನಯಿಸಬೇಕೆಂದು ಆಸೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಇಲ್ಲಿಯೇ ಹುಟ್ಟಿ ಬೆಳೆದಿದ್ದು ಇಲ್ಲಿ ಇರುವ ಕೆಲ ಕಲಾವಿದರಿಗಿಂತ ಸ್ಪಷ್ಟವಾಗಿ ಕನ್ನಡ ಮಾತನಾಡುತ್ತೇನೆ. ಚಿತ್ರರಂಗದಲ್ಲಿ ಕೆಲಸ ಮಾಡುವುದಕ್ಕೆ ತನಗಿರುವ ಪ್ರತಿಭೆ ಸಾಕು ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ