ಉದ್ಯೋಗ ಹುಡುಕಿಕೊಂಡು ಹಳ್ಳಿಯಿಂದ ನಗರಕ್ಕೆ ಬಂದ ರವಿ ಬಸ್ರೂರು ಮಾಡಿದ ಮಹತ್ವದ ಕಾರ್ಯ. ಹುಟ್ಟೂರಿನಲ್ಲಿ ಅನೇಕರಿಗೆ ಉದ್ಯೋಗ ಅವಕಾಶ....
ಬಾಲ್ಯದಿಂದಲೇ ಶಾಸ್ತ್ರೀಯ ಸಂಗೀತ, ಭಜನೆ, ಯಕ್ಷಗಾನ ಕಲಿತ ನಿರ್ದೇಶಕ ರವಿ ಬಸ್ರೂರು, ಈಗ ತಮ್ಮ ಹುಟ್ಟೂರಿನಲ್ಲಿ ಸಂಗೀತ ಸ್ಟುಡಿಯೋ ನಿರ್ಮಾಣ ಮಾಡಿದ್ದಾರೆ. ಕನ್ನಡ, ತೆಲುಗು, ತಮಿಳು ಸಿನಿಮಾಗಳಿಗೆ ಅಲ್ಲಿಂದಲೇ ಕೆಲಸ ಮಾಡುತ್ತಿದ್ದಾರೆ.
ಕುಲುಮೆ ಮಾಡಿ 35ರೂ. ಸಂಪಾದಿಸಲು ಹುಟ್ಟೂರಿಗೆ ಹೊರಟ ಖ್ಯಾತ ನಿರ್ದೇಶಕ!
undefined
ಉದ್ಯೋಗ ಅವಾಶಕ ಹುಡುಕುತ್ತಾ ಹಳ್ಳಿಯಿಂದ ನಗರಕ್ಕೆ ಆಗಮಿಸಿದ ನಿರ್ದೇಶಕರು ಇದೀಗ ಮತ್ತೊಮ್ಮೆ ಹಳ್ಳಿ ಕಡೆ ಮುಖ ಮಾಡಿದ್ದಾರೆ. ಮ್ಯೂಸಿಕ್ ಆ್ಯಂಡ್ ಮೂವೀಸ್ ಸ್ಟುಡಿಯೋವೊಂದನ್ನು ಕಟ್ಟಿದ್ದಾರೆ. ಇಲ್ಲಿ ಸಂಗೀತ ಮಾತ್ರವಲ್ಲ, ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೂ ಮಾಡಲಾಗುತ್ತದೆ. ಈ ಹಿಂದೆ ಬೆಂಗಳೂರಿನ ನಾಗರಬಾವಿಯಲ್ಲಿ ಹೈಟೆಕ್ ರೆಕಾರ್ಡಿಂಗ್ ಸ್ಟುಡಿಯೋ ಆರಂಭಿಸಿದ್ದರು. ಅಡ್ವಾನ್ಸ್ ಟೆಕ್ನಾಲಜಿ ಬಳಸಿ ರೆಕಾರ್ಡಿಂಗ್ ಮಾಡುವ ಸೌಲಭ್ಯ ಈ ಸ್ಟುಡಿಯೋದಲ್ಲಿತ್ತು.
ಕೊರೋನಾ ಲಾಕ್‌ಡೌನ್ ಸಮಯದಲ್ಲಿ ರವಿ ತಮ್ಮ ಹುಟ್ಟೂರಿಗೆ ತೆರಳಿ, ತಂದೆಯ ಕೆಲಸ ಮಾಡಲು ಪ್ರಾರಂಭಿಸಿದರು. ಕುಲುಮೆ ಮಾಡಿ 35 ರೂ. ಸಂಪಾದಿಸಿ ದಕ್ಕಿದ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ರವಿ ಸಂಗೀತ ಕ್ಷೇತ್ರದಲ್ಲಿ ಮಾತ್ರವಲ್ಲದೇ 'ಗರ್‌ಗರ್ ಮಂಡ್ಲ','ಗರ್ಮಿಟ್' ಸಿನಿಮಾಗಳ ಮೂಲಕವೂ ನಿರ್ದೇಶಕರಾಗಿ ಹೆಸರು ಮಾಡಿದ್ದಾರೆ.
ಕೆಜಿಎಫ್ ಸಂಗೀತ ನಿರ್ದೇಶಕನ ಹೈಟೆಕ್ ಸ್ಟುಡಿಯೋ; ಫೋಟೋ ನೋಡಿ!
ಕುಂದಾಪುರದಲ್ಲಿ ಈ ಸ್ಟುಡಿಯೋ ನಿರ್ಮಾಣವಾಗಿರುವುದರಿಂದ ಅಲ್ಲಿನ ಅನೇಕ ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶ ಸಿಗಲಿದೆ ಎಂದು ನೆಟ್ಟಿಗರು ಆಶಿಸುತ್ತಿದ್ದಾರೆ. ಮತ್ತೆ ಹುಟ್ಟೂರಿಗೆ ಹೊರಟು, ಅಲ್ಲಿಯೇ ಸಾಧನೆ ಮಾಡಬೇಕೆಂಬ ರವಿ ಕನಸು ಹಲವರಿಗೆ ಸ್ಫೂರ್ತಿಯಾಗಲಿದೆ.