ದೊಡ್ಡ ಗೌಡ್ರುಗಳು ಅಂದ್ರೆ ಯಾರು..? ಈಗಿನ ನಾಯಕರೂ ಕೂಡ ನರಬಲಿ ಕೊಟ್ಟು ಅಧಿಕಾರಕ್ಕೆ ಬಂದ್ರಾ..? ಅಗ್ನಿ ಶ್ರೀಧರ್ ಹೇಳಲು ಹೊರಟಿರುವ ಕಥೆಯಲ್ಲಿ ಇವತ್ತಿನ ರಾಜಕೀಯ ನಾಯಕರು ಇದ್ದಾರಾ? ಎಲೆಕ್ಷನ್ ಕಾವೇರಿದ ಬೆನ್ನಲೆ ಅಗ್ನಿ ಶ್ರೀಧರ್ ಕಥೆ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗುತ್ತಾ?
ಸಂಯುಕ್ತಾ ಹೆಗಡೆ ನಟನೆ, ಅಭಿಷೇಕ್ ಬಸಂತ್ ನಿರ್ದೇಶನದ ಕ್ರೀಂ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ನೋಡಿದರೆ ಅದೊಂದು 'ಮರ್ಡರ್ ಮಿಸ್ಟರಿ' ತರಹ ಇದೆ ಎಂಬುದು ಮೇಲ್ನೋಟಕ್ಕೆ ಗೋಚರಿಸುತ್ತದೆ. ಆದರೆ ಅದು ಅಷ್ಟು ಮಾತ್ರವಲ್ಲ, ಭಯಂಕರವಾದ ಸೀಕ್ರೆಟ್‌ಅನ್ನು ಹೊರತೆಗೆಯಲಿರುವ 'ಅಸ್ತ್ರ'ದಂತೆ ಇದೆ ಟ್ರೇಲರ್ ಎನ್ನಬಹುದು. ಅಗ್ನಿ ಶ್ರೀಧರ್ ಬರವಣಿಗೆಯನ್ನು ಅಭಿಷೇಕ್ ಅವರು ತೆರೆಗೆ ತಂದಿದ್ದು, ಇದೊಂದು ನೈಜ ಸ್ಟೋರಿ ಹೊತ್ತ ಚಿತ್ರವಾಗಿದೆ ಎನ್ನಲಾಗಿದೆ. ಈ ಚಿತ್ರದಲ್ಲಿ ಸ್ವತಃ ಅಗ್ನಿ ಶ್ರೀಧರ್ ಮೊಟ್ಟಮೊದಲ ಬಾರಿಗೆ ನಟಿಸಿರುವುದು ಹೊಸ ಬೆಳವಣಿಗೆ.
ಟ್ರೇಲರ್‌ನಲ್ಲಿ ಬರುವ ಸೇನಾಪಾಳ್ಯ ಗ್ಯಾಂಗ್ ಅಂದ್ರೆ ಏನು? ದಂಡು ಪಾಳ್ಯ ಗ್ಯಾಂಗ್ ಗೆ ಮತ್ತೊಂದು ಹೆಸರಾ? ಅದಕ್ಕೆ ಉತ್ತರ ಬೇಕು ಎಂದರೆ ಸಿನಿಮಾ ನೋಡಬೇಕು ಅಥವಾ ಕಥೆ ಬರೆದಿರುವ ಅಗ್ನಿ ಶ್ರೀಧರ್ ಅವರನ್ನೇ ಕೇಳಬೇಕು. ಆದರೆ ಈ ಸಮಯದಲ್ಲಿ ಅವರಂತೂ ಖಂಡಿತ ಹೇಳುವುದಿಲ್ಲ. ಹಾಗಾಗಿ ಸಿನಿಮಾ ಬರುವವರೆಗೆ ಕಾಯುವುದೊಂದೇ ದಾರಿ. ಕ್ರೀಂ ಚಿತ್ರದಲ್ಲಿ ನರಬಲಿ ಬಗ್ಗೆ ಹೇಳಲಾಗಿದೆ. ಹಾಗಿದ್ದರೆ ಮಾಜಿ ಮುಖ್ಯಮಂತ್ರಿಗಳಾದ ದಿವಂಗತ ದೇವರಾಜ್ ಹೆಗ್ಡೆ, ರಾಮಕೃಷ್ಣ ಅರಸ್, ಹೇಮಚಂದ್ರ ಪಾಟೀಲ್, ದೊಡ್ಡೇಗೌಡ್ರು ಅಧಿಕಾರಕ್ಕೆ ಬರೋಕೆ ನರಬಲಿ ಕೊಟ್ಟಿದ್ರಾ? ಈ ಬಗ್ಗೆ, ತಮ್ಮ 'ಕ್ರೀಂ'ಸಿನಿಮಾದ ಪ್ರೆಸ್‌ಮೀಟ್‌ನಲ್ಲಿ ಸೂಚ್ಯವಾಗಿ, ಸೂಕ್ಷ್ಮವಾಗಿ ಮಾತನಾಡಿದ್ದಾರೆ ಅಗ್ನಿ ಶ್ರೀಧರ್.
ಚಿನ್ನದಂಥ ಮಾತು ಹೇಳಿದ್ರು ನಟ ಚಿಕ್ಕಣ್ಣ; ಹೊಡಿರಲೇ ಚಪ್ಪಾಳೆ ಎಂದ್ಬಿಟ್ರು ಅಲ್ಲಿದ್ದ ರೈತ!
ದೊಡ್ಡ ಗೌಡ್ರುಗಳು ಅಂದ್ರೆ ಯಾರು..? ಈಗಿನ ನಾಯಕರೂ ಕೂಡ ನರಬಲಿ ಕೊಟ್ಟು ಅಧಿಕಾರಕ್ಕೆ ಬಂದ್ರಾ..? ಅಗ್ನಿ ಶ್ರೀಧರ್ ಹೇಳಲು ಹೊರಟಿರುವ ಕಥೆಯಲ್ಲಿ ಇವತ್ತಿನ ರಾಜಕೀಯ ನಾಯಕರು ಇದ್ದಾರಾ? ಎಲೆಕ್ಷನ್ ಕಾವೇರಿದ ಬೆನ್ನಲೆ ಅಗ್ನಿ ಶ್ರೀಧರ್ ಕಥೆ ರಾಜಕೀಯ ಪಕ್ಷಗಳಿಗೆ ಅಸ್ತ್ರವಾಗುತ್ತಾ? ಅಂದು ರಿಲೀಸ್ ಆಗಿದ್ದ 'ದಂಡುಪಾಳ್ಯ' ಚಿತ್ರದ ಕಥೆ ಏನೇನೂ ಅಲ್ಲ, ಅದಕ್ಕೂ ಮೀರಿದ ನೈಜ ಸ್ಟೋರಿ ಈ 'ಕ್ರೀಂ' ಎನ್ನಬಹುದು. ಅಗ್ನಿ ಶ್ರೀಧರ್ 'ಕ್ರೀಂ' ಪ್ರೆಸ್‌ಮೀಟ್‌ನಲ್ಲಿ ಹೇಳಿರುವ ಮಾತುಗಳನ್ನು ಕೇಳಿದರೆ ಖಂಡಿತವಾಗಿಯೂ ಇದು ಅಂತಿಂಥ ಸ್ಟೋರಿ ಅಲ್ಲ ಎನ್ನಬಹುದು.
ಬಜೆಟ್‌ನಲ್ಲಿ ನಟ ಧನಂಜಯ್; ಡಾಲಿ ಬರೆದ ಸಾಲುಗಳನ್ನ ಮಂಡಿಸಿದ ಮುಖ್ಯಮಂತ್ರಿಗಳು
ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು 'ನೀಲ ಮೇಘ ಶ್ಯಾಮ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಪರಿಚಯಿಸಿದ ನಿರ್ಮಾಪಕರಾದ ಡಿಕೆ ದೇವೇಂದ್ರ ನಿರ್ಮಾಣದ ಸಿನಿಮಾ ಈ ಕ್ರೀಂ. ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದಿರುವ ನೈಜ ಸ್ಟೋರಿ ಹಿನ್ನೆಲೆಯ ಸಿನಿಮಾ ಆಗಿರುವ 'ಕ್ರೀಂ' ಚಿತ್ರವು ಸ್ಯಾಂಡಲ್‌ವುಡ್ ಸಿನಿಮಾ ಉದ್ಯಮದಲ್ಲಿ ಮಾತ್ರವಲ್ಲ, ರಾಜಕೀಯ ಪಡಸಾಲೆಯಲ್ಲಿ ಕೂಡ ಅಲ್ಲೋಲಕಲ್ಲೋಲ ಸೃಷ್ಟಿಸಲಿರುವ ಸಿನಿಮಾ ಎನ್ನಬಹುದು.
'ಕಿರಿಕ್ ಪಾರ್ಟಿ' ಸಂಯುಕ್ತಾ ಹೆಗಡೆ 'ಕ್ರೀಂ' ಚಿತ್ರದಲ್ಲಿ ಅಗ್ನಿ ಶ್ರೀಧರ್ ನಟನೆ; ಒಪ್ಪಿಸಿದ್ದು ಯಾರು ದೇವ್ರೂ!