'ಕಿರಿಕ್ ಪಾರ್ಟಿ' ಸಂಯುಕ್ತಾ ಹೆಗಡೆ 'ಕ್ರೀಂ' ಚಿತ್ರದಲ್ಲಿ ಅಗ್ನಿ ಶ್ರೀಧರ್ ನಟನೆ; ಒಪ್ಪಿಸಿದ್ದು ಯಾರು ದೇವ್ರೂ!

Published : Feb 16, 2024, 05:06 PM ISTUpdated : Feb 16, 2024, 05:21 PM IST
'ಕಿರಿಕ್ ಪಾರ್ಟಿ' ಸಂಯುಕ್ತಾ ಹೆಗಡೆ 'ಕ್ರೀಂ' ಚಿತ್ರದಲ್ಲಿ ಅಗ್ನಿ ಶ್ರೀಧರ್ ನಟನೆ; ಒಪ್ಪಿಸಿದ್ದು ಯಾರು ದೇವ್ರೂ!

ಸಾರಾಂಶ

'ನಾನು ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತೇನೆ. ಎಲ್ಲಾ ಕಲಾವಿದರ  ಸಹಕಾರದಿಂದ ಚಿತ್ರೀಕರಣ ಇಪ್ಪತ್ತೆಂಟು ದಿನಕ್ಕೆ ಮುಕ್ತಾಯವಾಯಿತು. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವನ್ನು ನನ್ನ ಮೊದಲ ನಿರ್ದೇಶನ ಮಾಡಬೇಕೆಂಬ ಆಸೆಯಿತ್ತು‌.‌ ಅಗ್ನಿ ಶ್ರೀಧರ್ ಅವರ ಈ ಕಥೆ ಬಹಳ ಇಷ್ಟವಾಯಿತು. 

'ಕಿರಿಕ್ ಪಾರ್ಟಿ' ಚಿತ್ರದ ಖ್ಯಾತಿಯ ನಟಿ ಸಂಯುಕ್ತ ಹೆಗಡೆ ನಾಯಕಿಯಾಗಿ ನಟಿಸಿರುವ 'ಕ್ರೀಂ' ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರ 01 ಮಾರ್ಚ್ 2024ರಂದು ಬಿಡುಗಡೆಯಾಗಲಿದೆ.  ಖ್ಯಾತ ಲೇಖಕ ಅಗ್ನಿ ಶ್ರೀಧರ್ ಅವರಿಂದ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಅನಾವರಣವಾಯಿತು. ಡಿಕೆ ದೇವೇಂದ್ರ ಅವರು ನಿರ್ಮಿಸಿರುವ ಈ ಚಿತ್ರವನ್ನು ಅಭಿಷೇಕ್ ಬಸಂತ್ ನಿರ್ದೇಶಿಸಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ಅಗ್ನಿ ಶ್ರೀಧರ್ ಅವರು ಬರೆದಿದ್ದಾರೆ. ಈ ಚಿತ್ರದ ಪ್ರಮುಖಪಾತ್ರದಲ್ಲೂ ಅಗ್ನಿ ಶ್ರೀಧರ್ ನಟಿಸಿದ್ದಾರೆ.

'ನನಗೆ ಬರವಣಿಗೆಯಲ್ಲಿ ಹೆಚ್ಚು ಆಸಕ್ತಿ. ನಟನೆಯಲ್ಲಿ ನನಗೆ ಆಸಕ್ತಿ ಇರಲಿಲ್ಲ ಎಂದು ಮಾತು ಆರಂಭಿಸಿದ ಅಗ್ನಿ ಶ್ರೀಧರ್, ನಿರ್ಮಾಪಕ ದೇವೇಂದ್ರ ಅವರು ನನ್ನನ್ನು ಈ ಪಾತ್ರ ನಿರ್ವಹಣೆ ಮಾಡಲು ಹೆಚ್ಚು ಒತ್ತಾಯಿಸಿದರು. ನಾನು ಆಗಲ್ಲ ಎಂದು ಹೇಳಿದೆ.  ನಿರ್ಮಾಪಕರು ಹಾಗೂ ನನ್ನ ಹತ್ತಿರದವರ ಒತ್ತಾಯಕ್ಕೆ ನಾನು ನಟಿಸಲು ಒಪ್ಪಿಕೊಂಡೆ. ಈ ವಿಷಯವನ್ನು ಚಿತ್ರ ಬಿಡುಗಡೆಯಾಗುವವರೆಗೂ ಗೌಪ್ಯವಾಗಿಡೋಣ ಅಂತ ಹೇಳಿದ್ದೆ. ಆದರೆ ನಿರ್ಮಾಪಕರು ಟ್ರೇಲರ್ ನಲ್ಲೇ ನನ್ನನ್ನು ತೋರಿಸಿಬಿಟ್ಟಿದ್ದಾರೆ. 

ಇನ್ನು 'ಕ್ರೀಂ' ಎಂದರೆ ಬೀಜಾಕ್ಷರ ಮಂತ್ರ. ಈ  ಚಿತ್ರದ ಕಥೆಯು 'ಹಣ ಹಾಗೂ ಅಧಿಕಾರಕ್ಕಾಗಿ ನಡೆಯುವ ಹೆಣ್ಣುಮಕ್ಕಳ ಬಲಿ'ಯನ್ನು ಕುರಿತಾದ ಕಥಾಹಂದರ ಹೊಂದಿದೆ. ಈಗಲೂ ಕೂಡ ನಮ್ಮ ಊರು, ನಮ್ಮ ದೇಶ ಹಾಗೂ ವಿದೇಶಗಳಲ್ಲೂ ಈ ಕೃತ್ಯ ನಡೆಯುತ್ತಲೇ ಇದೆ. ಇಂತಹ ಸೂಕ್ಷ್ಮ ವಿಚಾರವನ್ನು ಈ ಚಿತ್ರದ ಮೂಲಕ ತೋರಿಸಲಾಗಿದೆ.‌ ಅಭಿಷೇಕ್ ಬಸಂತ್ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಹಾಗೂ ಸಂಯುಕ್ತ ಹೆಗಡೆ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ' ಎಂದರು.

ಬಜೆಟ್‌ನಲ್ಲಿ ನಟ ಧನಂಜಯ್; ಡಾಲಿ ಬರೆದ ಸಾಲುಗಳನ್ನ ಮಂಡಿಸಿದ ಮುಖ್ಯಮಂತ್ರಿಗಳು

'ನಾನು ಸಮಯಕ್ಕೆ ಹೆಚ್ಚು ಬೆಲೆ ಕೊಡುತ್ತೇನೆ. ಎಲ್ಲಾ ಕಲಾವಿದರ  ಸಹಕಾರದಿಂದ ಚಿತ್ರೀಕರಣ ಇಪ್ಪತ್ತೆಂಟು ದಿನಕ್ಕೆ ಮುಕ್ತಾಯವಾಯಿತು. ವಿಭಿನ್ನ ಕಥಾಹಂದರ ಹೊಂದಿರುವ ಚಿತ್ರವನ್ನು ನನ್ನ ಮೊದಲ ನಿರ್ದೇಶನ ಮಾಡಬೇಕೆಂಬ ಆಸೆಯಿತ್ತು‌.‌ ಅಗ್ನಿ ಶ್ರೀಧರ್ ಅವರ ಈ ಕಥೆ ಬಹಳ ಇಷ್ಟವಾಯಿತು. ನನ್ನ ಮೊದಲ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ ಎಂದರು ನಿರ್ದೇಶಕ ಅಭಿಷೇಕ್ ಬಸಂತ್.  ಐದು ವರ್ಷಗಳ ನಂತರ ನಾನು ನಟಿಸಿರುವ ಕನ್ನಡ ಸಿನಿಮಾ ಇದು. ನಾನು ಈವರೆಗೂ ಮಾಡಿರದ ಪಾತ್ರವಿದು. ಆಕ್ಷನ್ ಕೂಡ ಮಾಡಿದ್ದೇನೆ' ಎಂದು ಸಂಯುಕ್ತ ಹೆಗಡೆ ತಿಳಿಸಿದರು. 

ಚಿನ್ನದಂಥ ಮಾತು ಹೇಳಿದ್ರು ನಟ ಚಿಕ್ಕಣ್ಣ; ಹೊಡಿರಲೇ ಚಪ್ಪಾಳೆ ಎಂದ್ಬಿಟ್ರು ಅಲ್ಲಿದ್ದ ರೈತ!

'ನಮ್ಮ ಚಿತ್ರದಲ್ಲಿ ನಟಿಸಬೇಕಿದ್ದ  ಖಳನಟರೊಬ್ಬರು ಕಾರಣಾಂತರದಿಂದ ನಟಿಸಲು ಆಗಲ್ಲ ಎಂದಾಗ ನಾನು ಹಾಗೂ ನಿರ್ದೇಶಕರು ಬಹಳ ಒತ್ತಡದಲ್ಲಿದ್ದೆವು. ಆಗ ನನಗೆ ಈ ಪಾತ್ರವನ್ನು ಅಗ್ನಿ ಶ್ರೀಧರ್ ಅವರು ಮಾಡಿದರೆ ಚೆನ್ನಾಗಿರುತ್ತದೆ ಎಂದು ಅನಿಸಿತು. ಅವರ ಬಳಿ ನೀವೇ ಈ ಪಾತ್ರ ಮಾಡಬೇಕು ಎಂದು ಹೇಳಿದಾಗ ಅವರು ಒಪ್ಪಲಿಲ್ಲ.‌ ನಂತರ ಬಹಳ ಕಷ್ಟಪಟ್ಟು ಅವರನ್ನು ಒಪ್ಪಿಸಿದ್ದೆವು. ಚಿತ್ರತಂಡದ ಸಹಕಾರದಿಂದ 'ಕ್ರೀಂ' ಚಿತ್ರ ಚೆನ್ನಾಗಿ ಬಂದಿದೆ. ಮುಂದಿನ ತಿಂಗಳು 01ರಂದು, ಅಂದರೆ ಮಾರ್ಚ್ ಒಂದರಂದು ಬಿಡುಗಡೆಯಾಗುತ್ತಿದೆ ಎಂದರು' ನಿರ್ಮಾಪಕ ದೇವೇಂದ್ರ.

ಜಗತ್ತು ನಿಮ್ಮನ್ನು ನೆಲಕ್ಕೆ ಹಾಕಿ ನಗಬಹುದು, ಅದಕ್ಕೇನು ಮಾಡ್ಬೇಕು ಅಂತ ಗೊತ್ತಿರಲಿ; ಪ್ರಿಯಾಂಕಾ ಚೋಪ್ರಾ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ: ಸಮಂತಾ ಬಾಳಲ್ಲಿ ನಿಜವಾಯ್ತು, ಆದ್ರೆ ರಶ್ಮಿಕಾ ಲೈಫಲ್ಲಿ ಸುಳ್ಳಾಗಲಿ ಅಂತಿರೋ ಫ್ಯಾನ್ಸ್!