
Darshan Thoogudeepa Fans- Yash Ramayana Trailer News- ಯಶ್ ರಾಮಾಯಣ ಟ್ರೇಲರ್ ಬಳಿಕ ದರ್ಶನ್ ಫ್ಯಾನ್ಸ್ ಕಣ್ಣಲ್ಲಿ ನೀರು ಬಂದಿರೋದು ಏಕೆ? ಈ ಸ್ಟೋರಿ ನೋಡಿ..
ರಾಮಾಯಣ ಸಿನಿಮಾ (Ramayana) ಟ್ರೈಲರ್ ಬಂದಿರೋದು, ರಾವಣ (Ravana) ಪಾತ್ರ ಮಾಡಿರೋ ರಾಕಿಂಗ್ ಸ್ಟಾರ್ ಯಶ್ (Yash) ದೇಶವಿಡಿ ಟ್ರೆಂಡಿಂಗ್ ನಲ್ಲಿ ಇರೋದು ಗೊತ್ತೇ ಇದೆ. ಈ ಟ್ರೇಲರ್ ನೋಡಿ ಕನ್ನಡಿಗರೆಲ್ಲ ಖುಷ್ ಆಗಿದ್ದಾರೆ. ಆದ್ರೆ ದರ್ಶನ್ ಫ್ಯಾನ್ಸ್ ಮಾತ್ರ ಮಮ್ಮುಲ ಮರುಗ್ತಾ ಇದ್ದಾರೆ. ಅಸಲಿಗೆ ದರ್ಶನ್ ಕೂಡ ರಾಮಾಯಣ ಆಧರಿಸಿದ ಚಿತ್ರವೊಂದರಲ್ಲಿನಟಿಸಬೇಕಿತ್ತು. ಆದ್ರೆ ಅಷ್ಟ್ರಲ್ಲಿ ದಾಸನ ವೈಯಕ್ತಿಕ ಬದುಕೇ ದೊಡ್ಡ 'ರಾಮಾಯಣ' ಆಗೋಯ್ತು.
ಆಂಜನೇಯನ ಪಾತ್ರದಲ್ಲಿ ನಟಿಸಬೇಕಿತ್ತು ದರ್ಶನ್..!
ಅಂದು ದುರ್ಯೋಧನನಾಗಿ ಮೆರೆದ ಚಕ್ರವರ್ತಿ, ಇಂದು ಕೈದಿ ..!
ಹೌದು, ಸದ್ಯ ಇಡೀ ದೇಶವಿಡೀ ಟ್ರೆಂಡಿಂಗ್ ನಲ್ಲಿದೆ ರಾಮಾಯಣ ಟ್ರೇಲರ್. ನಮ್ಮ ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಅಂತೂ ಎಲ್ಲೆಲ್ಲೂ ಚರ್ಚೆ ಅಗ್ತಾ ಇದೆ. ರಾವಣನ ಪಾತ್ರದಲ್ಲಿ ನಟಿಸಿರೋ ರಾಕಿಂಗ್ ಸ್ಟಾರ್ ಬೇರೆಲ್ಲ ಪಾತ್ರಧಾರಿಗಳನ್ನ ನುಂಗಿ ಹಾಕುವಂತೆ ನಟಿಸಿದ್ದಾರೆ .
ಈ ಸಿನಿಮಾದಲ್ಲಿ ಯಶ್ ನಟಿಸೋದ್ರ ಜೊತೆಗೆ ಸಹ ನಿರ್ಮಾಪಕ ಕೂಡ ಆಗಿದ್ದು, ಯಶ್ ನ ಎಲ್ಲರೂ 'ಪ್ರಚಂಡ ರಾವಣ' ಅಂತ ಕೊಂಡಾಡ್ತಾ ಇದ್ದಾರೆ. ಕನ್ನಡಿಗನ ಈ ಯಶಸ್ಸು ಕಂಡು ಎಲ್ಲರೂ ಖುಷಿ ಆಗಿದ್ರೆ ದರ್ಶನ್ ಫ್ಯಾನ್ಸ್ ಮಾತ್ರ ರಾಮಾಯಣ ನೋಡಿ ಕಣ್ಣೀರು ಹಾಕ್ತಾ ಇದ್ದಾರೆ.
ಅಸಲಿಗೆ ಪೌರಾಣಿಕ ಪಾತ್ರಗಳು ಅಂದಕ್ಷಣ ತೆರೆಮೇಲೆ ನೆನಪಾಗುವ ಕೆಲವೇ ಕೆಲವು ಹೆಸರುಗಳಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೆಸರು ಅಗ್ರಸ್ಥಾನದಲ್ಲೇ ನಿಲ್ಲುತ್ತೆ . ಹೈಟು, ವೆಯ್ಟು, ಕಿಲ್ಲರ್ ಪರ್ಸನಾಲಿಟಿ—ಈ ಮೂರೂ ಗುಣಗಳು ಒಟ್ಟಿಗೆ ಸೇರಿದಾಗ ತೆರೆಮೇಲೆ ಸೃಷ್ಟಿಯಾಗುವ ಮ್ಯಾಜಿಕ್ ಹೇಗಿರುತ್ತದೆ ಅನ್ನೋದಕ್ಕೆ 'ಕುರುಕ್ಷೇತ್ರ' ಸಿನಿಮಾದ ದುರ್ಯೋಧನನೇ ಸಾಕ್ಷಿ.
ತೆರೆಯ ಮೇಲೆ ಆ ದುರ್ಯೋಧನನ ಗರ್ಜನೆ ನೋಡಿದ ಅಭಿಮಾನಿಗಳು, "ಪೌರಾಣಿಕ ಪಾತ್ರಗಳಲ್ಲಿ ದರ್ಶನ್‌ಗೆ ಸರಿಸಾಟಿಯಿಲ್ಲ" ಅಂತ ಎದೆತಟ್ಟಿ ಹೇಳಿದ್ರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನಿಂದ ಹಿಡಿದು ಕುರುಕ್ಷೇತ್ರದ ದುರ್ಯೋಧನನ ತನಕ, ಐತಿಹಾಸಿಕ ಮತ್ತು ಪೌರಾಣಿಕ ಗೆಟಪ್‌ನಲ್ಲಿ ದರ್ಶನ್ ಬಿಟ್ಟರೆ ಬೇರೆ ಯಾರನ್ನೂ ಕಲ್ಪಿಸಿಕೊಳ್ಳಲೂ ಸಾಧ್ಯವಿರಲಿಲ್ಲ.
ಅದಕ್ಕೇನೇ ನಿರ್ದೇಶಕ ಪ್ರೇಮ್ ಮತ್ತು ಕೆವಿಎನ್ ಪ್ರೊಡಕ್ಷನ್ ಬ್ಯಾನರ್‌ನಡಿ ಒಂದು ಬ್ರಹ್ಮಾಂಡದಂತಹ ಪೌರಾಣಿಕ ಕಥೆ ತೆರೆಗೆ ಬರಲಿದೆ ಅಂತ ಅನೌನ್ಸ್ ಆದಾಗ ಇಡೀ ಸ್ಯಾಂಡ್‌ವುಡ್ ಥ್ರಿಲ್ ಆಗಿತ್ತು. ರಾಮಾಯಣದ ಕಥಾಹಂದರ ಹೊಂದಿರುವ ಆ ಸಿನಿಮಾದಲ್ಲಿ ದರ್ಶನ್ ಮುಖ್ಯ ಭೂಮಿಕೆಯಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ದರ್ಶನ್ ಅಭಿಮಾನಿಗಳಲ್ಲಿ ಹಬ್ಬವೇ ಸೃಷ್ಟಿಸಿತ್ತು.
2024ರ ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಆ ಸಿನಿಮಾದ ಅಧಿಕೃತ ಟೀಸರ್ ಕೂಡ ಬಿಡುಗಡೆಗೊಂಡು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡಿತ್ತು. ದರ್ಶನ್ ಮತ್ತೆ ಪೌರಾಣಿಕ ಪಾತ್ರದಲ್ಲಿ ನಟಿಸ್ತಾರೆ ಅಂದಾಗ ಫ್ಯಾನ್ಸ್ ತುಂಬಾನೇ ಖುಷಿ ಆಗಿದ್ರು.
ಮೂಲಗಳ ಪ್ರಕಾರ, ಈ ಸಿನಿಮಾ ಕೂಡ ರಾಮಾಯಣ ಆಧಾರಿಸಿಯೇ ರೆಡಿ ಆಗ್ತಾ ಇತ್ತು. ದರ್ಶನ್ ಆಂಜನೇಯನ ಪಾತ್ರ ಮಾಡ್ಬೇಕಿತ್ತು. ರಾವಣನ ಲಂಕೇಯನ್ನ ಸುಡಬೇಕಿತ್ತು.
ಆದರೆ... ವಿಧಿಯ ಆಟವೇ ಬೇರೆಯಿತ್ತು! ಭವಿಷ್ಯದ ದೊಡ್ಡ ಕನಸುಗಳು ಒಂದೇ ಒಂದು ರಾತ್ರಿಯಲ್ಲಿ ಕರಗಿಹೋದವು. 2024ರ ಜೂನ್ ನಲ್ಲೆ ದರ್ಶನ್ ಕೊಲೆ ಆರೋಪ ಹೊತ್ತು ಜೈಲು ಸೇರಿದ್ರು. ಈಗಲೂ ಅದೇ ಕೇಸ್ ನಲ್ಲಿ ಪರಪ್ಪನ ಅಗ್ರಹಾರದಲ್ಲಿ ಬಂಧಿ ಆಗಿದ್ದಾರೆ.
ದರ್ಶನ್ ವೈಯಕ್ತಿಕ ಬದುಕಿನಲ್ಲಿ ನಡೆದ ಅನಿರೀಕ್ಷಿತ ದುರಂತ ಘಟನೆಗಳು, ಕೊಲೆ ಕೇಸ್ ಹಾಗೂ ಕಾನೂನು ತೊಡಕುಗಳು ಅವರನ್ನ್ನ ಜೈಲಿನ ಕಂಬಿಗಳ ಹಿಂದೆ ತಳ್ಳಿದವು. ತೆರೆಮೇಲೆ ಕೋಟ್ಯಂತರ ಅಭಿಮಾನಿಗಳನ್ನ ರಂಜಿಸುತ್ತಿದ್ದ ನಾಯಕ, ಇಂದು ಸೆರೆಮನೆಯ ಕತ್ತಲಲ್ಲಿ ಕಾಲ ಕಳೆಯುವಂತಾಯಿತು.
ದರ್ಶನ್ ಜೈಲಿಗೆ ಹೋದ ನಂತರ ಅವರದ್ದೇ ಆದ ಒಂದು ಅಸಲಿ 'ರಾಮಾಯಣ' ಹಾಗೂ 'ಮಹಾಭಾರತ'ದಂತಹ ಬಿಕ್ಕಟ್ಟುಗಳು ಅವರ ಬದುಕಿನಲ್ಲಿ ನಡೆದುಹೋದವು. ಹೊರಗಡೆ ಅಭಿಮಾನಿಗಳು ತಮ್ಮ ನಾಯಕನಿಗಾಗಿ ಕಣ್ಣೀರಿಡುತ್ತಿದ್ದರೆ, ಒಳಗೆ ದರ್ಶನ್ ತಮ್ಮದೇ ಮೌನ ಯುದ್ಧವನ್ನಎದುರಿಸುತ್ತಿದ್ದಾರೆ.
ಇತ್ತ ಕಾಲ ಬದಲಾದಂತೆ ಕನ್ನಡ ಚಿತ್ರರಂಗದ ಮತ್ತೊಂದು ಗರ್ಜನೆ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದೆ. ನಿತೀಶ್ ತಿವಾರಿ ನಿರ್ದೇಶನದ ಬಹುಕೋಟಿ ವೆಚ್ಚದ 'ರಾಮಾಯಣ' ಚಿತ್ರದಲ್ಲಿ ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಅತಿ ಶಕ್ತಿಶಾಲಿ ಪಾತ್ರವಾದ 'ರಾವಣ'ನಾಗಿ ನಟಿಸಿದ್ದಾರೆ.
ಸಧ್ಯ ಆ ಸಿನಿಮಾದ ಟ್ರೇಲರ್ ಮತ್ತು ಪೋಸ್ಟರ್‌ಗಳು ಹೊರಬಂದು ವಿಶ್ವದಾದ್ಯಂತ ದೊಡ್ಡದಾದ ಸಂಚಲನ ಸೃಷ್ಟಿಸುತ್ತಿವೆ. ಯಶ್ ರಾವಣನ ಅವತಾರವನ್ನ ನೋಡಿ ಇಡೀ ಗ್ಲೋಬಲ್ ಸಿನಿಮಾ ಇಂಡಸ್ಟ್ರಿ ಹುಬ್ಬೇರಿಸಿದೆ.
ಆದರೆ ಈ ಯಶಸ್ಸಿನ ಹೊಸ್ತಿಲಲ್ಲಿ ಕನ್ನಡಿಗರ ಮನಸ್ಸಿನಲ್ಲಿ ಒಂದು ಅಸಾಧಾರಣ ಪ್ರಶ್ನೆ ಕೊರೆಯುತ್ತಲೇ ಇದೆ. "ಒಂದು ವೇಳೆ ದರ್ಶನ್ ಆ ಕಾನೂನು ಸುಳಿಗೆ ಸಿಲುಕಿಲ್ಲದಿದ್ದರೆ, ಪ್ರೇಮ್ ನಿರ್ದೇಶನದ ಆ ಪೌರಾಣಿಕ ಸಿನಿಮಾದಲ್ಲಿ ದರ್ಶನ್ ಅವರೂ ಕೂಡ ರಾಮಾಯಣದ ಭಾಗವಾಗಿ ವಿಶ್ವಾದ್ಯಂತ ಸೌಂಡ್ ಮಾಡುತ್ತಿದ್ದರೇ?" ಎಂಬ ನೋವಿನ ಪ್ರಶ್ನೆ ಅಭಿಮಾನಿಗಳ ಮನಸ್ಸನ್ನ ಕಾಡುತ್ತಿದೆ.
ಹೌದು, ಕಲೆ ಅನ್ನೋದು ಕಲಾವಿದನಿಗೆ ದೇವರು ಕೊಟ್ಟ ವರ. ಆದರೆ ಬದುಕು ಕೆಲವೊಮ್ಮೆ ಕೆಲವು ವ್ಯಕ್ತಿಗಳಿಗೆ ಅಗ್ನಿಪರೀಕ್ಷೆಯ ಕದ ತಟ್ಟುತ್ತೆ . ಯಶ್ ರಾವಣನಾಗಿ ವಿಶ್ವವನ್ನು ಗೆಲ್ಲುತ್ತಾ ಸಾಗಿದ್ದರೆ, ದರ್ಶನ್ ತಮ್ಮದೇ ಪಾಪ-ಪುಣ್ಯದ, ತಪ್ಪು-ಒಪ್ಪುಗಳ ಸುಳಿಗೆ ಸಿಲುಕಿ ಜೈಲಿನ ಕೋಣೆಯಲ್ಲಿ ದಿನ ದೂಡುತ್ತಿದ್ದಾರೆ. ಒಬ್ಬರ ಯಶಸ್ಸು ಇನ್ನೊಬ್ಬರ ಅಸಹಾಯಕತೆಯನ್ನ ನೆನಪಿಸುತ್ತಿರುವ ಈ ಕಾಲದ ಕ್ರೌರ್ಯ ನಿಜಕ್ಕೂ ವಿಚಿತ್ರವಾದದ್ದು.
ತೆರೆಮೇಲೆ ರಾವಣನ ಹಾವಳಿ ಜೋರಾಗಿದೆ, ಆದರೆ ಕರುನಾಡಿನ ದುರ್ಯೋಧನನ ರಾಜಸೀಕ ಕಳೆ ಮಾತ್ರ ಮೌನವಾಗಿದೆ. ಕಾಲ ಎಲ್ಲ ಗಾಯಗಳಿಗೂ ಮದ್ದು ಮಾಡುತ್ತದೆ ಅಂತಾರೆ . ಹಾಗೆಯೇ, ದರ್ಶನ್ ಎಂಬ ಚಕ್ರವರ್ತಿ ಬದುಕಿನ ಈ ಕರಾಳ ರಾಮಾಯಣ ಮುಗಿದು, ಮತ್ತೆ ಅವರ ಸಿಂಹಾಸನದ ರಾಜಯೋಗ ಯಾವಾಗ ಕೂಡಿಬರಲಿದೆ ಅನ್ನೋದನ್ನ ಕಾಲವೇ ಉತ್ತರಿಸಬೇಕು!
'ಸಿನಿಮಾ ಹಂಗಾಮ' ನೋಡಿ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.