
ಕಿಶೋರ್ ಪತ್ತಿಕೊಂಡಗೆ ಏನಾಗಿತ್ತು?
ಅಪ್ಪು (Appu)ಖ್ಯಾತಿಯ ನಟ ಪುನೀತ್ ರಾಜ್‌ಕುಮಾರ್ (Puneeth Rajkumar) ನಟಿಸಿದ ಕಟ್ಟ ಕಡೆಯ ಸಿನಿಮಾ ಜೇಮ್ಸ್ (James). 50 ಕೋಟಿಯಲ್ಲಿ ತಯಾರಾದ ಈ ಸಿನಿಮಾ ಬರೋಬ್ಬರಿ 151 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಎಲ್ಲರ ಕಣ್ಣು ಒದ್ದೆಯಾಗುವಂತೆ ಮಾಡಿತ್ತು. ಯಾಕಂದ್ರೆ ಅಪ್ಪು ನಮ್ಮನ್ನ ಅಗಲಿದ ನಂತ್ರ ತೆರೆಕಂಡ ಸಿನಿಮಾ ಇದಾಗಿತ್ತು. ಜೇಮ್ಸ್ ಸಿನಿಮಾ ನಿರ್ಮಾಪಕರಾದ ಕಿಶೋರ್ ಅಂದು ಗೆಲುವಿನ ನಗೆ ಬೀರಿದ್ದಾರೆ. ಆದರೆ, ಅದಾಗಿ ಸ್ವಲ್ಪವೇ ಸಮಯಕ್ಕೆ ಎಲ್ಲೂ ಕಾಣಿಸಿಕೊಳ್ಳದೇ ಅಜ್ಞಾತವಾಸಕ್ಕೆ ಶರಣಾಗಿದ್ದರು. ಅದಕ್ಕೆ ಕಾರಣವೇನು ಗೊತ್ತೇ?
ಹೌದು. ಜೇಮ್ಸ್ ಸಿನಿಮಾ ಭಾರೀ ಮೆಚ್ಚುಗೆ ಗಳಿಸಿತ್ತು. ಥೇಟ್ ಸೋಲ್ಜರ್ ರೀತಿ ಕಾಣ್ತಿದ್ದ ಅಪ್ಪು, ನೋಡುಗರ ಕಣ್ಣು ಕುಕ್ಕಿದ್ದು ಸುಳ್ಳಲ್ಲ. ಅದ್ರ ಹಿಂದೆ ಡೈರೆಕ್ಟರ್ ಬಹದ್ದೂರ್ ಚೇತನ್ ಅನ್ನೋ ಮಾಸ್ಟರ್ ಮೈಂಡ್ ಹಾಗೂ ಅವ್ರ ಕನಸು ನನಸು ಮಾಡಿದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಇದ್ದರು. ಕಿಶೋರ್ ಈ ಚಿತ್ರದ ಮೂಲಕ ರಾಜರತ್ನ ಅಪ್ಪುಗೆ ಬಹಳ ಹತ್ತಿರ ಆಗಿದ್ದಲ್ಲದೆ, ಸಿನಿಮಾನ ತುಂಬಾ ಪ್ಯಾಷನ್‌ನಿಂದ ರಿಚ್ ಆಗಿ ನಿರ್ಮಾಣ ಮಾಡಿದ್ರು. ಜೇಮ್ಸ್ ರಿಲೀಸ್ ಬಳಿಕ ಬರೋಬ್ಬರಿ 151 ಕೋಟಿ ಪೈಸಾ ವಸೂಲ್ ಮಾಡಿತ್ತು.
ಆದ್ರೆ ಕಿಶೋರ್ ಮಾತ್ರ ಅಂದಿನಿಂದ ಇತ್ತೀಚಿನ ತನಕ ಮತ್ತೆಲ್ಲೂ ಕಾಣಿಸಿಕೊಳ್ಳಲೇ ಇಲ್ಲ. ಅದಕ್ಕೆ ಕಾರಣ ಅವ್ರಿಗೆ ಆರೋಗ್ಯ ಕೈಕೊಟ್ಟಿತ್ತು. ಹೌದು.. ಸ್ಟ್ರೋಕ್ ಆಗಿ ಸಾವಿನ ಕದ ತಟ್ಟಿ ಮತ್ತೆ ವಾಪಸ್ ಆಗಿದ್ದ ಜೇಮ್ಸ್ ಪ್ರೊಡ್ಯೂಸರ್, ಇದೀಗ 4 ವರ್ಷಗಳ ನಂತ್ರ ಮತ್ತೆ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಅದೂ ರಾಮ್ ಚರಣ್ ಹಾಗೂ ಶಿವಣ್ಣ ಕಾಂಬೋನ ಪೆದ್ದಿ ಚಿತ್ರದಿಂದ ಅನ್ನೋದು ಇಂಟರೆಸ್ಟಿಂಗ್.
ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಜೇಮ್ಸ್ ಚಿತ್ರದ ಪ್ರೊಡ್ಯೂಸರ್ ಕಿಶೋರ್ ಪತ್ತಿಕೊಂಡ (Kishore Pathikonda), ಸದ್ಯ ಚಿತ್ರರಂಗಕ್ಕೆ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ರಾಮ್ ಚರಣ್-ಶಿವಣ್ಣನ ಪೆದ್ದಿ ಡಿಸ್ಟ್ರಿಬ್ಯೂಷನ್ ರೈಟ್ಸ್ ಖರೀದಿ ಮಾಡೋ ಮೂಲಕ ಮತ್ತೆ ಸಖತ್ ಸುದ್ದಿಯಾಗಿದ್ದಾರೆ. ಏನದು ಮ್ಯಾಟರ್ ಅನ್ನೋದಕ್ಕೆ ಈ ಸ್ಟೋರಿ ನೋಡಿ.
ಪೆದ್ದಿ ವಿತರಣಾ ಹಕ್ಕುಗಳಷ್ಟಿಲ್ಲ ಕನ್ನಡ ಸ್ಟಾರ್ಸ್ ಕಲೆಕ್ಷನ್!
ಜೇಮ್ಸ್.. ನಮ್ಮ ರಾಜರತ್ನ, ಇಡೀ ಕರುನಾಡೇ ಕೊಂಡಾಡಿದ ಕರ್ನಾಟಕರತ್ನ, ದೊಡ್ಮನೆಯ ಮಿಸ್ಟರ್ ಪರ್ಫೆಕ್ಟ್, ನಗುಮುಖದ ಒಡೆಯ
ಯೆಸ್.. ಜೂನ್ 4ಕ್ಕೆ ವರ್ಲ್ಡ್ ವೈಡ್ ಬಿಡುಗಡೆ ಆಗ್ತಿರೋ ಪೆದ್ದಿ ಸಿನಿಮಾದ ಕರ್ನಾಟಕ ಡಿಸ್ಟ್ರಿಬ್ಯೂಷನ್ ರೈಟ್ಸ್ ಬರೋಬ್ಬರಿ 18 ಕೋಟಿ ಕೊಟ್ಟು ತಮ್ಮದಾಗಿಸಿಕೊಳ್ಳುತ್ತಿದ್ದಾರಂತೆ ಕಿಶೋರ್ ಪತ್ತಿಕೊಂಡ. ಈಗಾಗ್ಲೇ ಮಾತುಕತೆ ಮುಗಿಸಿ, 3 ಕೋಟಿ ಅಡ್ವಾನ್ಸ್ ಕೂಡ ನೀಡಿರೋ ಜೇಮ್ಸ್ ಪ್ರೊಡ್ಯೂಸರ್ ಸದ್ಯದಲ್ಲೇ ಪೆದ್ದಿ ಕರ್ನಾಟಕ ವಿತರಕ ಅನಿಸಿಕೊಳ್ಳಲಿದ್ದಾರೆ.
ಅಂದಹಾಗೆ ಕಿಶೋರ್ ಪತ್ತಿಕೊಂಡ ನಿರ್ಮಾಪಕರಾಗೋಕೆ ಮುನ್ನ ಡಿಸ್ಟ್ರಿಬ್ಯೂಟರ್ ಹಾಗೂ ಪ್ರದರ್ಶಕರಾಗಿ ಬಹುದೊಡ್ಡ ಹೆಸರು ಮಾಡಿದವರು. ಹೊಸಪೇಟೆಯ ಬಾಲ ಥಿಯೇಟರ್ ಮಾಲೀಕರೂ ಆಗಿರೋ ಕಿಶೋರ್, ಶಿವಣ್ಣನ ಓಂ ಸಿನಿಮಾನ ಬದಲಾದ ತಂತ್ರಜ್ಞಾನದಲ್ಲಿ ಅಂದ್ರೆ 4Kನಲ್ಲಿ ರೀ-ರಿಲೀಸ್ ಮಾಡಿದ್ದರು. ಕಿಶೋರ್‌ಗೆ ಅವ್ರ ಗೆಳೆಯರಾಗಿರೋ ದಾವಣಗೆರೆಯ ವಸಂತ ಥಿಯೇಟರ್ ಮಾಲೀಕ ವಿಶ್ವದೀಪ್ ಕೂಡ ಸಾಥ್ ನೀಡ್ತಿದ್ದಾರಂತೆ. ಒಟ್ಟಾರೆ ಪೆದ್ದಿ ಸಿನಿಮಾದ ವಿತರಣಾ ಹಕ್ಕುಗಳಿಗೆ ನೀಡಿರೋ ಮೊತ್ತದಷ್ಟು ಇತ್ತೀಚಿನ ಕನ್ನಡ ಸಿನಿಮಾಗಳು ಗಳಿಕೆ ಮಾಡದೇ ಇರೋದು ಬೇಸರದ ಸಂಗತಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.