
ರೇಣುಕಾಸ್ವಾಮಿ ಪ್ರಕರಣದಲ್ಲಿ ದರ್ಶನ್ ಸಂಕಷ್ಟ ಪರಿಹಾರ ಆಗುತ್ತಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ರದ್ದಾಗಿ ದರ್ಶನ್ 2ನೇ ಬಾರಿ ಜೈಲು ಸೇರಿ 9 ತಿಂಗಳು ಕಳೆದಿದೆ. ಇತ್ತೀಚೆಗೆ ವಕೀಲರ ಮೂಲ ಸುಪ್ರೀಂ ಕೋರ್ಟ್‌ನಲ್ಲಿ ಜಾಮೀನು ಅರ್ಜಿ ಕೂಡ ಸಲ್ಲಿಸಿದ್ದಾರೆ. ತಮ್ಮ ಸಂಕಷ್ಟವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟು ಜಾಮೀನು ನೀಡುವಂತೆ ಮನವಿ ಮಾಡಿದ್ದಾರೆ. ಇದರ ಮಧ್ಯೆ ನೊಂದು ಬೆಂದಿರೊ ಪತ್ನಿ ವಿಜಯಲಕ್ಷ್ಮೀ ದೇವರು ನಮ್ಮ ಜೀವನದಲ್ಲಿ ಆಟ ಆಡುತ್ತಿದ್ದಾನೆ ಎಂದಿದ್ದಾರೆ. ಹಾಗಾದ್ರೆ ವಿಜಯಲಕ್ಷ್ಮೀ ಆ ರೀತಿ ಹೇಳಿದ್ದು ಯಾಕೆ..?
ನಟ ದರ್ಶನ್ ಜೈಲು ವಾಸ ಸುಸುತ್ರವಾಗಿ ಆಗ್ತಾ ಇದೆ. ದಾಸ ಹೊರ ಜಗತ್ತು ಕಂಡು ಕಲರ್ ಫುಲ್ ದುನಿಯಾ ನೋಡಿ ವರ್ಷಗಳೇ ಆಯ್ತು. ದರ್ಶನ್ಗೆ ಜೈಲೇ ಸಿನಿಮಾ ಸೆಟ್ಟು, ಜೈಲಿನ ಆವರಣವೇ ತಿರುಗಾಟದ ಜಾಗ.. ಪರಪ್ಪನ ಅಗ್ರಹಾರದಲ್ಲಿ ಇದ್ದು ಮಾನಸಿಕವಾಗಿ ಕುಗ್ಗಿರೋ ದರ್ಶನ್ ಮತ್ತೆ ಸುಪ್ರೀಂ ಕೋರ್ಟ್ ಕದಾ ತಟ್ಟಿದ್ರು. ದರ್ಶನ್ ಜೈಲಿನಿಂದ ಹೊರ ಬರಲಿ ಅಂತ ಫ್ಯಾನ್ಸ್ ಮಾಡದ ಪೂಜೆಗಳಿಲ್ಲ. ದಾಸನ ಪತ್ನಿ ವಿಜಯಲಕ್ಷ್ಮಿ ಹೊರದ ಹರಕೆ ಇಲ್ಲ. ಪ್ರಾರ್ಥಿಸದ ದೇವರಿಲ್ಲ. ಆದ್ರೂ ದಾಸನ ವಿಷಯದಲ್ಲಿ ದೇವರು ಕಣ್ಣು ಬಿಟ್ಟಿಲ್ಲ.
ದರ್ಶನ್ ಜೈಲುವಾಸ ಮುಂದುವರೆದಿದೆ. ಈ ನೋವು ತಾಳಲಾರದೇ ಪತ್ನಿ ವಿಜಯಲಕ್ಷ್ಮೀ ದೇವರು ನಮ್ಮ ಜೀವನದಲ್ಲಿ ಆಟವಾಡುತ್ತಿದ್ದಾನೆ ಅಂತ ವಿಡಿಯೋ ಫೋಸ್ಟ್ ಒಂದನ್ನ ತನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಪತಿಯನ್ನು ಸಂಕಷ್ಟದಿಂದ ಪಾರು ಮಾಡಲು ವಿಜಯಲಕ್ಷ್ಮಿ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿದೆ. ಈ ದೇವರ ಮೇಲೆ ಭಾರ ಹಾಕಿ ಕೂರುವಂತಾಗಿದೆ. 2024ರಲ್ಲಿ ದರ್ಶನ್ ಜೈಲು ಸೇರಿದಾಗ ಪತ್ನಿ ವಿಜಯಲಕ್ಷ್ಮಿ ದೇವಸ್ಥಾನಗಳಿಗೆ ಸುತ್ತಾಡಿ ಪ್ರಾರ್ಥಿಸಿದ್ದರು.
ಕಾನೂನು ಹೋರಾಟ ನಡೆಸಿದ್ದರು. ಅದೆಲ್ಲದರ ಪ್ರತಿಫಲ ಎನ್ನುವಂತೆ ಹೈಕೋರ್ಟ್‌ನಲ್ಲಿ ಜಾಮೀನು ಮಂಜೂರಾಗಿತ್ತು. ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಿ ಬಂದು 9 ತಿಂಗಳ ಕಾಲ ಹೊರಗಿದ್ದ ದರ್ಶನ್, ಡೆವಿಲ್ ಚಿತ್ರೀಕರಣ ಮುಗಿಸಿ ಮತ್ತೆ ಸುಪ್ರೀಂ ಕೋರ್ಟ್ ಆದೇಶದ ಮೇಲೆ ಜೈಲು ಸೇರಬೇಕಾಯ್ತು. ಸುಪ್ರೀಂ ಕೋರ್ಟ್‌ನಲ್ಲೇ ಜಾಮೀನು ರದ್ದಾದ ಬಳಿಕ ಮುಂದೇನು ಎಂದು ಗೊತ್ತಾಗದೇ ವಿಜಯಲಕ್ಷ್ಮಿ ಕುಗ್ಗಿ ಹೋಗಿದ್ದಾರೆ. ದೇವರಲ್ಲಿ ಪ್ರಾರ್ಥನೆ ನಿಂತಿಲ್ಲ.
ಸದ್ಯ ಮೀಮ್ ವೀಡಿಯೋ ಶೇರ್ ಮಾಡಿರೋ ವಿಜಯಲಕ್ಷ್ಮೀ "ದೇವರ ಅಡ್ರೆಸ್ ಕಂಡುಹಿಡಿದು, ಅವ್ರಿಗೆ ಒಂದು ಆಂಡ್ರಾಯ್ಡ್ ಫೋನ್ ಕೊಡ್ಸಣ ಅಂತ.. ಅವಾಗ್ಲೆ ಸಾರ್ ಅವ್ರು ನಮ್ಮ ಜೀವನದಲ್ಲಿ ಆಟ ಆಡುವುದು ಬಿಟ್ಟು ಫೋನ್ ಅಲ್ಲಿ ಆಡ್ಕೊತ್ತಾರೆ" ಎಂದು ಹೇಳುವ ಎಐ ವೀಡಿಯೋವನ್ನು ವಿಜಯಲಕ್ಷ್ಮಿ ಹಾಕಿದ್ದಾರೆ. ಮೇಲ್ನೋಟಕ್ಕೆ ವಿಜಯಲಕ್ಷ್ಮಿ ದರ್ಶನ್ ಮೀಮ್ ವೀಡಿಯೋವನ್ನು ಹಂಚಿಕೊಂಡಂತೆ ಕಂಡರೂ ತಮ್ಮ ಮನದ ನೋವು, ದೇವರ ಮೇಲಿನ ನಂಬಿಕೆ ಹಾಗೂ ದೇವರೇ ಎಲ್ಲದಕ್ಕೂ ಪರಿಹಾರ ನೀಡಲು ಸಾಧ್ಯ ಎಂದು ಹೇಳಿರುವುದು ಗೊತ್ತಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.