ಅವರ ದುರಂತಮಯ ಬದುಕು ಒಂದು ಕಡೆಯಾದರೆ, ಅವರು ಬದುಕಿದ್ದಾಗ ಒಳ್ಳೆಯ ಬೇಡಿಕೆಯಿದ್ದ ನಟರಾಗಿದ್ದರು ಎಂಬುದು ಮತ್ತೊಂದು ವಿಷಯ. 20ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ನಟ ಸುಧೀರ್ ಅವರು, ಮಿನುಗುತಾರೆ ಕಲ್ಪನಾ..
ಕನ್ನಡದ ಖ್ಯಾತ ಖಳನಟ ಸುಧೀರ್ (Actor Sudheer) ಅವರು ಕೇವಲ 54 ವರ್ಷ ಬದುಕಿದ್ದು ಹಲವರಿಗೆ ಗೊತ್ತೇ ಇದೆ. ಅವರಿಗೆ ಡಸ್ಟ್ ಅಲರ್ಜಿ ಖಾಯಿಲೆಯಿದ್ದು, ಅದೇ ಕಾರಣಕ್ಕೇ ಅವರು ದುರಂತ ಅಂತ್ಯ ಕಾಣುವಂತಾಯಿತು. ಕಂಠೀರವ ಸ್ಟೂಡಿಯೋದಲ್ಲಿ 'ದಂಡನಾಯಕ' ಸಿನಿಮಾ ಶೂಟಿಂಗ್ ವೇಳೆ ಮೇಲಿನಿಂದ ಜಿಗಿದ ಸಿನಿಮಾ ವಿಲನ್ ಸುಧೀರ್ ಅವರಿಗೆ ಬೆಡ್ ಮೇಲಿದ್ದ ಧೂಳು ವಿಲನ್ ಆಗಿಬಿಟ್ಟತು. ಅದೇ ದಿನ ಅನಾರೋಗ್ಯಕ್ಕೆ ಒಳಗಾದ ಸುಧೀರ್ ಅವರು ಮತ್ತೆ ಗುಣಮುಖರಾಗಲೇ ಇಲ್ಲ.
ಅವರ ದುರಂತಮಯ ಬದುಕು ಒಂದು ಕಡೆಯಾದರೆ, ಅವರು ಬದುಕಿದ್ದಾಗ ಒಳ್ಳೆಯ ಬೇಡಿಕೆಯಿದ್ದ ನಟರಾಗಿದ್ದರು ಎಂಬುದು ಮತ್ತೊಂದು ವಿಷಯ. 20ಕ್ಕೂ ಅಧಿಕ ಸಿನಿಮಾದಲ್ಲಿ ನಟಿಸಿದ್ದ ನಟ ಸುಧೀರ್ ಅವರು, ಮಿನುಗುತಾರೆ ಕಲ್ಪನಾ ಅವರ ನಾಟಕ ತಂಡದಲ್ಲಿ ಕೂಡ ಮುಖ್ಯ ಪಾತ್ರಗಳಲ್ಲಿ ನಟಿಸುತ್ತಿದ್ದರು. ಜೊತೆಗೆ, ಕಲ್ಪನಾ ಸಾವಿನ ಬಳಿಕ ಸುಧೀರ್-ಮಾಲತಿ ಜೋಡಿ 'ಕರ್ನಾಟಕ ಕಲಾ ವೈಭವ' ಎಂಬ ನಾಟಕ ಸಂಸ್ಥೆಯನ್ನು ಕಟ್ಟಿ ನಡೆಸುತ್ತಿದ್ದರು.
ಹುಟ್ಟುಕಿವುಡರಾಗಿದ್ದ ನಟ ಬಾಲಣ್ಣ ಬದುಕಿನಲ್ಲಿ ನಡೆದ ಘನಘೋರ ದುರಂತವೇನು?
ಈ ಎಲ್ಲ, ನಾಟಕ-ನಟನೆ ಹೊರತಪಡಿಸಿದ ಸಂಗತಿಯೊಂದಿದೆ. ಅದು ನಟ ಸುಧೀರ್ ಹಾಗೂ ರೆಬೆಲ್ ಸ್ಟಾರ್ ಅಂಬರೀಷ್ ಸ್ನೇಹ. ಹೌದು, ನಟ ಸುಧೀರ್ ಮತ್ತು ಅಂಬಿ ಒಳ್ಳೆಯ ಸ್ನೇಹಿತರಾಗಿದ್ದರು ಎನ್ನಲಾಗಿದೆ. ಅವರಿಬ್ಬರ ಸ್ನೇಹ ಅದೆಷ್ಟು ಗಟ್ಟಿಯಾಗಿತ್ತು ಎಂದರೆ, ಸುಧೀರ್ ಅವರು ಮನೆ ಕಟ್ಟವಾಗ ನಟ ಅಂಬರೀಷ್ ಸಹಾಯ ಮಾಡಿದ್ದರು. ಹೀಗಾಗಿ ಕಟ್ಟಿದ ಮನೆಗೆ ನಟ ಸುಧೀರ್ ಅವರು 'ಅಂಬರೀಷ್ ನಿಲಯ' ಎಂದು ಹೆಸರು ಇಟ್ಟಿದ್ದಾರೆ.
ಅಂದಹಾಗೆ, ಇಂದು ನಟ ಸುಧೀರ್ ಅವರು ನಮ್ಮೊಂದಿಗಿಲ್ಲ. ಆದರೆ, ಅವರ ಮಕ್ಕಳು ನಂದಕಿಶೋರ್ ಹಾಗು ತರುಣ್ ಸುಧೀರ್ ಅವರು ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ತರುಣ್ ಸುಧಿರ್ ನಿರ್ದೇಶನ ಹಾಗು ನಟ ದರ್ಶನ್ ಅಭಿನಯದ 'ಕಾಟೇರ' ಚಿತ್ರವು ಈ ವರ್ಷವೇ ಬಿಡುಗಡೆಯಾಗಿ ಅಭೂತಪೂರ್ವ ಯಶಸ್ಸು ಗಳಿಸಿತ್ತು. ಆದರೆ, ನಟ ದರ್ಶನ್ ಅವರು ಈಗ ಕೊಲೆ ಆರೋಪಿಯಾಗಿ ಜೈಲು ಸೇರಿದ್ದಾರೆ. ತರುಣ್ ಸುಧೀರ್ ಅವರು ನಟಿ ಸೋನಲ್ ಮಂಥೇರೋ ಅವರನ್ನು ಪ್ರೀತಿಸಿ ಮದುವೆಯಾಗಿದ್ದಾರೆ.
ಎಣ್ಣೆ-ಸೀಗೆಕಾಯಿಯಂತಿದ್ದ ಹೀರೋಗಳು ಈಗ ಕುಚಿಕುಗಳಾದ್ರಾ? ಟಾಲಿವುಡ್ ಸ್ಟಾರ್ಸ್ ಮಧ್ಯೆ ಏನ್ ನಡಿತಿದೆ?