ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಬರ್ತಿಲ್ಲ ಆದರೆ ಬಾಡಿ ಶೇಮಿಂಗ್ ಹೆಚ್ಚಾಗುತ್ತಿದೆ ಎಂದ ನಂದ ಲವ್ಸ್ ನಂದಿಯಾ ನಾಯಕಿ...
2008ರಲ್ಲಿ ನಂದ ಲವ್ಸ್ ನಂದಿತಾ ಚಿತ್ರದ ಮೂಲಕ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟ ನಂದಿತಾ ಶ್ವೇತಾ ಸದ್ಯ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯ ದಬಾಂಗ್ 3 ಚಿತ್ರದ ಸೋನಾಕ್ಷಿ ಕನ್ನಡ, ತೆಲುಗು ಮತ್ತು ತಮಿಳ್ ಡಬ್ಬಿಂಗ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಂದಿತಾ ಟ್ರೋಲ್ ಮತ್ತು ನೆಗೆಟಿವ್ ಕಾಮೆಂಟ್‌ಗಳನ್ನು ಹೇಗೆ ಎದುರಿಸುತ್ತಾರೆಂದು ಹಂಚಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ನನಗೆ ಹೆಚ್ಚಿಗೆ ನೆಗೆಟಿವ್ ಕಾಮೆಂಟ್ಸ್ ಬರುವುದಿಲ್ಲ ಆದರೆ ಬಾಡಿ ಶೇಮಿಂಗ್ ನಡೆಯುತ್ತಲೇ ಇರುತ್ತದೆ. ಮೊದಲು ನೀವು ಸಣ್ಣಗಿದ್ದೆ ಈಗ ದಪ್ಪ ಆಗಿದ್ಯಾ ಅಂತ ಕಾಮೆಂಟ್ ಮಾಡುತ್ತಾರೆ. ಅರೇ! ನಾವು ಮನುಷ್ಯರು ದಪ್ಪ ಸಣ್ಣ ಆಗುತ್ತಲೇ ಇರುತ್ತೀವಿ. ಕೆಲವೊಮ್ಮೆ ಅವರಿಗೆಲ್ಲಾ ಉತ್ತರ ಕೊಡಬೇಕಾ ಅನಿಸಿಬಿಡುತ್ತದೆ. ಗುಂಡು ಗುಂಡಗಿದ್ದರೆ ನನಗೆ ತುಂಬಾನೇ ಇಷ್ಟ. ಜೀವನದ ಯಾವುದೇ ಕ್ಷಣವಾಗಲಿ ನಾನು ಹೇಗೆ ಇದ್ದರೂ ತುಂಬಾನೇ ಖುಷಿಯಾಗಿರುತ್ತೀನಿ ಎಂದು ಡೀ ಟಾಕ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ನಂದಿತಾ ಮಾತನಾಡಿದ್ದಾರೆ.
undefined
ಮದ್ವೆಯಾಗಿ ಬೇವರ್ಸಿ ಅನಾಥೆ ತರ ಆಗಿದೆ ಜೀವನ, ಇದುವರೆಗೂ ಸುಖ ನೋಡಿಲ್ಲ; ರೀಲ್ಸ್ ರೇಶ್ಮಾ ಕಣ್ಣೀರು
'ವಯಸ್ಸಿಗೆ ತಕ್ಕ ಹಾಗೆ ನಾವು ಬದಲಾಗುತ್ತೀವಿ...ಇಲ್ಲಿ ನಮ್ಮ ಲೈಫ್ ಸ್ಟೈಲ್ ಬದಲಾಗುತ್ತದೆ, ನಿದ್ರೆ ಮಾಡುವ ಸಮಯ ಬದಲಾಗುತ್ತದೆ. ಆಕ್ಟರ್‌ಗಳು ದೇವತೆಗಳು ಅಲ್ಲ ಸದಾ ಜೀರೋ ಫಿಗರ್‌ನಲ್ಲಿ ಇರುವುದಕ್ಕೆ ಆಗಲ್ಲ. ಹಣ ಇದ್ದು ಏನೇ ಬದಲಾವಣೆಗಳು ಮಾಡಿಕೊಂಡರೂ ಶಾಶ್ವತವಲ್ಲ. ನಮ್ಮ ಜೀವನ ರೂಪಾ ಮಾತ್ರ ಶಾಶ್ವತ ...ಹೀಗೆ ಇರುವಾಗ ಯಾಕೆ ನಾವು ತಲೆ ಕೆಡಿಸಿಕೊಳ್ಳಬೇಕು? ನನ್ನ ಕೈಗಳು ದಪ್ಪ ಇದೆ ಎಂದು ಕಾಮೆಂಟ್ ಮಾಡುತ್ತಾರೆ ಅದಕ್ಕೆ ನಾನು ಬೇಸರ ಮಾಡಿಕೊಳ್ಳುವುದಿಲ್ಲ ಖುಷಿಯಿಂದಲೇ ಓ ನನ್ನ ಕೈಗಳಿಗೂ ಫ್ಯಾನ್ಸ್ ಇದ್ದಾರೆ ಎಂದು ಖುಷಿ ಪಡುವೆ' ಎಂದು ನಂದಿತಾ ಹೇಳಿದ್ದಾರೆ.
ನನ್ನ ಸಂಬಂಧ ಮುಚ್ಚಿಟ್ಟಿಕೊಳ್ಳಲು ತಾಳಿ-ಕಾಲುಂಗುರ ತೆಗೆಯುವುದಿಲ್ಲ; 'ಸರಿಗಮಪ' ಗಾಯಕಿ ಇಂಪನಾ ಪೋಸ್ಟ್ ವೈರಲ್!
ಸೋಷಿಯಲ್ ಮೀಡಿಯಾಗೆ ಇಳಿದು ನಮ್ಮ ಇಮೇಜ್ ನಾವೇ ಕ್ರಿಯೇಟ್ ಮಾಡಿಕೊಳ್ಳುತ್ತಿದ್ದೀವಿ. ಮೆಂಟಲ್ ಹೆಲ್ತ್ ಮೇಲೆ ಪರಿಣಾಮ ಬೀರುತ್ತದೆ. ಎಷ್ಟು ಬೇಕು ಅಷ್ಟು ತೋರಿಸಬೇಕು, ಪರ್ಸನಲ್ ಲೈಫ್ ಮತ್ತು ಪ್ರೋಫೆಶನ್ ನಡುವೆ ವ್ಯತ್ಯಾಸ ಇರಲಿ ಸಣ್ಣ ಗೆರೆ ಹಾಕಬೇಕು. ದೃಷ್ಠಿ ಆಗುವುದು ನಿಜ.. ನಾನು ಅದನ್ನು ತುಂಬಾ ನಂಬುತ್ತೀನಿ. ನಾವು ಏನೇ ಹಾಕಿದರೂ ಅದನ್ನು ಜಡ್ಜ್ ಮಾಡಲು ಜನರು ಇರುತ್ತಾರೆ ಆದರೆ ಅದಕ್ಕೆ ರೆಡಿಯಾಗಿರಿ. ಆದರೆ ನನ್ನ ಒಂದು ಸಲಹೆ ಏನೆಂದರೆ ಎರಡು ಪರ್ಸನಾಲಿಟಿ ಇಟ್ಟುಕೊಳ್ಳಬೇಕು....ಕಷ್ಟ ಆಗಬಹುದು ಆದರೆ ನಮಗೆ ಒಳ್ಳೆಯದು ಎಂದಿದ್ದಾರೆ ನಂದಿತಾ.