'ಪ್ರೀತಿ ಮಾಡುವ ವಯಸ್ಸು ದಾಟಿದೆ..' ನಿಶ್ಚಿತಾರ್ಥ ಮಾಡಿಕೊಂಡ ಪ್ರಜ್ವಲ್‌ ಹೀರೋಯಿನ್!

Published : Jun 08, 2024, 10:35 PM IST
'ಪ್ರೀತಿ ಮಾಡುವ ವಯಸ್ಸು ದಾಟಿದೆ..' ನಿಶ್ಚಿತಾರ್ಥ ಮಾಡಿಕೊಂಡ ಪ್ರಜ್ವಲ್‌ ಹೀರೋಯಿನ್!

ಸಾರಾಂಶ

Gange Baare Thunge Baare Fame Sunaina  engagement  ಕನ್ನಡದಲ್ಲಿ ಪ್ರಜ್ವಲ್‌ ದೇವರಾಜ್‌ ಅಭಿನಯದ ಗಂಗೆ ಬಾರೆ.. ತುಂಗೆ ಬಾರೆ ಸಿನಿಮಾದ ನಾಯಕಿಯಾಗಿ ನಟಿಸಿದ್ದ ನಟಿ ಸುನೈನಾ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.  

ಬೆಂಗಳೂರು (ಜೂ.8): ತಮಿಳು ಹಾಗೂ ತೆಲುಗು ಭಾಷೆಯ ಜನಪ್ರಿಯ ನಟಿ ಸುನೈನಾ ವಿವಾಹವಾಗಲು ನಿರ್ಧಾರ ಮಾಡಿದ್ದಾರೆ. ಕನ್ನಡದಲ್ಲಿ ಪ್ರಜ್ವಲ್‌ ದೇವರಾಜ್‌ ಅಭಿನಯದ ಗಂಗೆ ಬಾರೆ ತುಂಗೆ ಬಾರೆ ಸಿನಿಮಾದಲ್ಲಿ ನಟಿಸಿ ಹೆಸರು ಮಾಡಿದ್ದ ಸುನೈನಾ ಇತ್ತೀಚೆಗೆ ಆರೋಗ್ಯ ಸಮಸ್ಯೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯದಲ್ಲಿ ಚೇತರಿಕೆ ಕಂಡ ಬೆನ್ನಲ್ಲಿಯೇ ತಮ್ಮ ಮದುವೆಯ ವಿಚಾರವನ್ನು ಬಹಿರಂಗ ಮಾಡಿದ್ದಾರೆ. ಅಂದಾಜು 15 ವರ್ಷಗಳಿಂದ ಸಿನಿಮಾರಂಗದಲ್ಲಿರುವ ಸುನೈನಾ ಇತ್ತೀಚೆಗೆ ತಮಿಳು ಭಾಷೆಯ ಸಿನಿಮಾಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿದ್ದರು. ಕೆಲವೊಂದು ಯಶಸ್ವಿ ಚಿತ್ರಗಳು ಕೂಡ ಇವರ ಹೆಸರಿನಲ್ಲಿದೆ. ಮಾಡೆಲಿಂಗ್‌ ಜಗತ್ತಿನಲ್ಲಿ ಅವಕಾಶ ಹುಡುಕಿಕೊಂಡು ಬಂದಿದ್ದ ನಟಿ, ಬಳಿಕ ಸಿನಿಮಾದಲ್ಲಿ ಹೀರೋಯಿನ್‌ ಆಗಿ ಮಿಂಚಿದ್ದರು. 2008ರಲ್ಲಿ ಗಂಗೆ ಬಾರೆ.. ತುಂಗೆ ಬಾರೆ ಸಿನಿಮಾದೊಂದಿಗೆ ಕನ್ನಡ ಮಾತ್ರವಲ್ಲ ತಮಿಳು ಸಿನಿಮಾದಲ್ಲೂ ಪಾದಾರ್ಪಣೆ ಮಾಡಿದ್ದರು.

ಇದರ ನಂತರ, ಅವರು ಮತ್ತೆ ನಕುಲ್ ಜೊತೆ ಮಾಸಿಲಮಣಿ, ಭರತ್ ಜೊತೆ ತಿರುತ್ತಣಿ, ಅರುಳ್ನಿಧಿ ಜೊತೆ ವಂಶಮ್, ವಿಷ್ಣು ವಿಶಾಲ್ ಜೊತೆ ನೀರ್ಪರವೈ, ಥಳಪತಿ ವಿಜಯ್ ಅಭಿನಯದ ತೇರಿ ಮುಂತಾದ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. 2023ರಲ್ಲಿ ತಮಿಳಿನ ರೆಜಿನಾ ಚಿತ್ರದಲ್ಲಿ ಕೊನೆಯ ಬಾರಿಗೆ ಸುನೈನಾ ನಟಿಸಿದ್ದರು. ಚಿತ್ರ ಯಶಸ್ಸು ಕಾಣದ ಹಿನ್ನಲೆಯಲ್ಲಿ ಅವರಿಗೂ ಕೂಡ ಅವಕಾಶವೂ ಕಡಿಮೆಯಾಗಿತ್ತು. ಈಗ ತಮ್ಮ 35ನೇ ವರ್ಷದಲ್ಲಿ ಮದುವೆಯಾಗಲು ನಿರ್ಧಾರ ಮಾಡಿರುವುದಾಗಿ ತಿಳಿಸಿದ್ದಾರೆ.

ಪ್ರಜ್ವಲ್‌ ದೇವರಾಜ್‌ ಜೊತೆ ನಟಿಸಿದ್ದ ನಟಿ ಆಸ್ಪತ್ರೆಗೆ ದಾಖಲು, ಮೂಗಿಗೆ ಟ್ಯೂಬ್ ಹಾಕಿರುವ ಫೋಟೋ ವೈರಲ್‌

ಮೂರು ದಿನಗಳ ಹಿಂದೆ ಇನ್ಸ್‌ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಗೂ ಸ್ಟೋರಿ ಹಂಚಿಕೊಂಡಿರುವ ಸುನೈನಾ ತಾವು ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ. ಹುಡುಗನೊಬ್ಬನ ಕೈ ಹಿಡಿದುಕೊಂಡಿರುವ ಚಿತ್ರವನ್ನು ಅವರು ಪೋಸ್ಟ್‌ ಮಾಡಿದ್ದಾರೆ.

ಬೆಡ್‌ ಮೇಲೆ ಬಿದ್ದ ಬೋಲ್ಡ್‌ ಚಿತ್ರಗಳನ್ನು ಹಂಚಿಕೊಂಡ ಬಿಗ್‌ ಬಾಸ್‌ ನಟಿ!

ಅದಾದ ಬಳಿಕ ತಮ್ಮ ನಿಶ್ಚಿತಾರ್ಥವಾಗಿರುವುದನ್ನು ಅವರು ಖಚಿತಪಡಿಸಿದ್ದಾರೆ. ಕಳೆದ ಕೆಲವು ದಿನಗಳಲ್ಲಿ ನನ್ನ ಹೊಸ ಪೋಸ್ಟ್‌ನ ಕುರಿತಾಗಿ ಸಾಕಷ್ಟು ಸುದ್ದಿಯಾಗಿದ್ದವು. ಆ ಪೋಟೋಗೆ ಕನ್ಫರ್ಮೇಷನ್‌ ಅನ್ನೋ ರೀತಿಯಲ್ಲಿ ನಾನು ಹೇಳೋದು ಏನೆಂದರೆ, ನನಗೆ ನಿಶ್ಚಿತಾರ್ಥವಾಗಿದೆ. ನಾನು ಪ್ರೀತಿ ಮಾಡುವ ವಯಸ್ಸೀಗ ದಾಟಿದೆ. ವಿಶ್‌ ಮಾಡಿದ ಎಲ್ಲರಿಗೂ ಥ್ಯಾಂಕ್ಸ್‌ ಎಂದಿದ್ದಾರೆ. ಇದರ ಬೆನ್ನಲ್ಲೇ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ. ಆದರೆ ಸುನೈನಾ ತನ್ನ ಭಾವಿ ಪತಿಯ ಮುಖ ತೋರಿಸಿಲ್ಲ. ಅದಲ್ಲದೆ, ಮದುವೆಯ ದಿನಾಂಕವನ್ನೂ ಖಚಿತಪಡಿಸಿಲ್ಲ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೆಡ್ಡಿಂಗ್ ಸೀಸನ್ ಶುರು, ಆದ್ರೆ ನನ್ನ ಮದುವೆ...... ಏನ್ ಹೇಳಿದ್ರು Sanvi Sudeep
ಡಿಸೆಂಬರ್‌ಗೆ ಸ್ಯಾಂಡಲ್‌ವುಡ್‌ ದಬ್ಬಾಳಿಕೆ: ಡೆವಿಲ್‌, 45, ಮಾರ್ಕ್‌ ಮೂವರು ಸೂಪರ್‌ಸ್ಟಾರ್‌ಗಳ ಮಹಾಯುದ್ಧ