ಸುಮಲತಾ ಅಂಬರೀಶ್​ ಹುಟ್ಟುಹಬ್ಬ: ನಟಿ ಬರ್ತ್​ಡೇ ದಿನವೇ ಒಂದಾದ್ರಾ ಸುದೀಪ್​-ದರ್ಶನ್?

By Suvarna NewsFirst Published Aug 27, 2023, 4:49 PM IST
Highlights

ನಟಿ, ಸಂಸದೆ ಸುಮಲತಾ ಅಂಬರೀಶ್​ ಅವರು ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದು, ಈ ದಿನವೇ ಸುದೀಪ್​  ಮತ್ತು ದರ್ಶನ್​ ಅವರ ಬಹು ವರ್ಷಗಳ ವೈಮನಸ್ಸಿಗೂ ತೆರೆ ಎಳೆಯಲು ಪ್ರಯತ್ನಿಸಿದರು ಎನ್ನಲಾಗುತ್ತಿದೆ. ಆದರೆ  ಈ ಪ್ರಯತ್ನ ಫಲಪ್ರದವಾಗಿಲ್ಲ ಎಂದು ತಿಳಿದುಬಂದಿದೆ. 

ಬಹುಭಾಷಾ ನಟಿಯಾಗಿಯೂ  ಸಂಸದೆಯಾಗಿಯೂ ಗುರುತಿಸಿಕೊಂಡಿರೋ ಸುಮಲತಾ ಅಂಬರೀಷ್​ (Sumalatha Ambareesh) ಅವರು  ಇಂದು ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. 1963ರಲ್ಲಿ ಹುಟ್ಟಿರೋ ಸುಮಲತಾ ಅವರಿಗೆ ಇಂದು 60ನೇ ಹುಟ್ಟುಹಬ್ಬದ ಸಂಭ್ರಮ. ನಿನ್ನೆ ರಾತ್ರಿಯಿಂದಲೇ ಹುಟ್ಟುಹಬ್ಬದ ಪಾರ್ಟಿ ಶುರುವಾಗಿದ್ದು ಗಣ್ಯಾತಿಗಣ್ಯರು ಇದರಲ್ಲಿ ಭಾಗವಹಿಸಿ ಶುಭಕೋರಿದ್ದಾರೆ. ಬೆಂಗಳೂರಿನ ಸ್ಟಾರ್​ ಹೋಟೆಲ್​ನಲ್ಲಿ ಪಾರ್ಟಿ ನಡೆದಿದೆ. ಇವರಲ್ಲಿ ಹೈಲೈಟ್​ ಆಗಿರುವುದು ಸುದೀಪ್ ಹಾಗೂ ದರ್ಶನ್ ಅವರು. ದರ್ಶನ್​ ಅವರು ಮಾಧ್ಯಮಗಳ ವಿರುದ್ಧ ಮಾತನಾಡಿದ್ದರಿಂದ ಕಳೆದ ಎರಡು ವರ್ಷ ಅವರನ್ನು ಮೀಡಿಯಾಗಳು  ಬ್ಯಾನ್​ ಮಾಡಿದ್ದವು. ನಂತರ ಕೊನೆಗೂ ಮೊನ್ನೆ ಅವರು ಕ್ಷಮೆ ಕೋರಿದ್ದರು. 

ಇದೇ ರೀತಿ ಕಿಚ್ಚ ಸುದೀಪ್​ ಜೊತೆಯೂ ದರ್ಶನ್​ ಮಾತನಾಡದೇ ಬಹಳ ವರ್ಷಗಳೇ ಕಳೆದಿದ್ದವು. ಇನ್ಮುಂದೆ ನಾನು ಸುದೀಪ್ ಸ್ನೇಹಿತರಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ (Social Media) ಆರು ವರ್ಷಗಳ ಹಿಂದೆ ದರ್ಶನ್​ ಪೋಸ್ಟ್ ಹಾಕಿದ್ದರು. ಆದರೆ ಹುಟ್ಟುಹಬ್ಬದಂದು ಇಬ್ಬರೂ ಕಾಣಿಸಿಕೊಂಡಿದ್ದು, ಹುಟ್ಟುಹಬ್ಬದ ದಿನವೇ ಸುಮಲತಾ ಇಬ್ಬರನ್ನೂ ಒಂದು ಮಾಡಲು ಪ್ರಯತ್ನಿಸಿದ್ದರು ಎನ್ನಲಾಗುತ್ತಿದೆ. ತಡರಾತ್ರಿ 3 ಗಂಟೆಯವರೆಗೂ ಇಬ್ಬರೂ ನಟರು ಪಾರ್ಟಿಯಲ್ಲಿದ್ದರು. ಹೀಗಾಗಿ ಸುಮಲತಾ ಇವರಿಬ್ಬರನ್ನು ಒಂದು ಮಾಡಲು ಪ್ರಯತ್ನಿಸಿದ್ದರು. ಸುಮಲತಾ ಅವರೇ   ದರ್ಶನ್ ಹಾಗೂ ಸುದೀಪ್ ಬರ್ತ್​ಡೇ ಪಾರ್ಟಿಗೆ ಆಹ್ವಾನಿಸಿ,  ರಾಜಿ ಸಂಧಾನ ಮಾಡಿಸಲು ಯತ್ನಿಸಿದ್ದರು ಎನ್ನಲಾಗುತ್ತಿದೆ. ಆದರೆ  ಈ ಪ್ರಯತ್ನ ಫಲಪ್ರದವಾಗಿಲ್ಲ ಎಂದು ತಿಳಿದುಬಂದಿದೆ. 

Latest Videos

ನಟ ದರ್ಶನ್ ಹಾಗೂ ಮಾಧ್ಯಮ ನಡುವಿನ ವಿವಾದ ಸುಖಾಂತ್ಯ

ಅಂದಹಾಗೆ ಸುಮಲತಾ ಅವರು ಅಭಿಷೇಕ್​ ಅಂಬರೀಷ್​-ಅವಿವಾ ಬಿಡಪ ಮದುವೆ ಬಳಿಕ  ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ ಇದಾಗಿದ್ದು, ಸಂಭ್ರಮ ದುಪ್ಪಟ್ಟಾಗಿದೆ.  ಇನ್ನು ಸುಮಲತಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, 1978ರಿಂದಲೂ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ ಇವರು ಕನ್ನಡ ಮಾತ್ರವಲ್ಲದೆ ಹಿಂದಿ, ತೆಲಗು, ಮಲಯಾಳ ಮತ್ತು ತಮಿಳಿನಲ್ಲಿಯೂ   200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.  2019ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು ಸಂಸದೆಯಾದರು. ಸದ್ಯ  ಸಿನಿರಂಗದಲ್ಲಿ ತುಸು ದೂರ ಇದ್ದು ಹಾಲಿ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.  

ಮೊನ್ನೆಯಷ್ಟೇ ಸುಮಲತಾ ಅವರು ಸೊಸೆಯ ಜೊತೆ  ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಿಕೊಂಡಿದ್ದರು. ಅಭಿಷೇಕ್ ಮತ್ತು ಅವಿವಾ ಮದುವೆ ನಂತರ ಆಚರಿಸುತ್ತಿರುವ ಮೊದಲ ಹಬ್ಬ ಹೀಗಾಗಿ ಮನೆಯಲ್ಲಿ ಆಚರಣೆ ಅದ್ಧೂರಿಯಾಗಿತ್ತು. ವಿಶೇಷ ಪೂಜೆ ನಡೆದಿತ್ತು. ಅದರ ಫೋಟೋ ವೈರಲ್​ ಆಗಿತ್ತು. ಹಬ್ಬ ಅಂದರೆ ಫ್ಯಾಮಿಲಿ ಟೈಂ ಎಂದು ಸುಮಲತಾ ಅಂಬರೀಶ್ ಬರೆದುಕೊಂಡಿದ್ದರು. ಅಭಿ ಮತ್ತು ಅವಿವಾ ಜೊತೆಗಿರುವ ಫೋಟೋ ವೈರಲ್ ಆಗುತ್ತಿದೆ. 'ನಾಡಿನ ಸಮಸ್ತ ಜನತೆಗೆ ವರಮಹಾಲಕ್ಷ್ಮಿ ಹಬ್ಬದ ಹಾರ್ದಿಕ ಶುಭಾಶಯಗಳು' ಎಂದು ಅಭಿವಾ ಬಿಡಪ್ಪ ಕನ್ನಡದಲ್ಲಿ ಬರೆದುಕೊಂಡಿದ್ದರೆ,  ಸುಮಲತಾ ಇಂಗ್ಲಿಷ್‌ನಲ್ಲಿ ಬರೆದಿದ್ದರು.  ಸೊಸೆ ಕನ್ನಡದಲ್ಲಿ ಬರೆದಿದ್ದುದಕ್ಕೆ ಹಲವಾರು ಮಂದಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಅಂದಹಾಗೆ, ಬೆಂಗಳೂರಿನ ಅರಮನೆ ಮೈದಾನದಲ್ಲಿ ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಜೂನ್ 5ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಕಾಲ ಪ್ರೀತಿ ಮದುವೆಯಾಗಿದ್ದಾರೆ. 

ಸೊಸೆ ಜೊತೆ ಸುಮಲತಾ ಅಂಬರೀಶ್ ವರಮಹಾಲಕ್ಷ್ಮಿ ಹಬ್ಬ ಅಚರಣೆ; ಮಂಡ್ಯ ಹೈಕ್ಳುಗಳಿಂದ ಮೆಚ್ಚುಗೆ
 

click me!