ಬಹು ವರ್ಷಗಳ ಬಳಿಕ ನಟಿ ಮೇಘನಾ ರಾಜ್ ‘ತತ್ಸಮ ತದ್ಭವ’ ಸಿನಿಮಾದ ಮೂಲಕ ಕಮ್ಬ್ಯಾಕ್ ಮಾಡಿದ್ದು, ಇದರ ಟ್ರೇಲರ್ ಇಂದು ಬಿಡುಗಡೆಯಾಗಿದ್ದು, ಧ್ರುವ ಸರ್ಜಾ ಭಾವುಕರಾಗಿದ್ದಾರೆ.
ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಕೆಲ ವರ್ಷಗಳ ಬಳಿಕ ತತ್ಸಮ ತತ್ಭವ ಚಿತ್ರದ ಮೂಲಕ ಕಮ್ಬ್ಯಾಕ್ ಮಾಡಿದ್ದಾರೆ. ನಟ ಚಿರಂಜೀವಿ ಸರ್ಜಾ (Chiranjeevi Sarja) ಅವರೊಂದಿಗೆ ಮದುವೆಯಾಗಿ ಸುಖಿ ದಾಂಪತ್ಯ ನಡೆಸುತ್ತಿರುವಾಗಲೇ ಇವರ ಬದುಕಿನಲ್ಲಿ ಬರಸಿಡಿಲು ಬಡಿದಿತ್ತು. ಚಿರಂಜೀವಿ ಅವರು ನಿಧನರಾದ ಬಳಿಕ ಆ ಶಾಕ್‌ನಿಂದ ಹೊರಬರಲು ಮೇಘನಾ ಅವರಿಗೆ ವರ್ಷಗಳೇ ಹಿಡಿದವು. ನಂತರ ಸಿನಿಮಾಗಳಿಂದ ದೂರವಾದರು. ಮಗ ರಾಯನ್ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ವರ್ಷಗಳ ಬಳಿಕ ಈಗ ತತ್ಸಮ ತದ್ಭವದ ಮೂಲಕ ಕಮ್ ಬ್ಯಾಕ್ ಮಾಡ್ತಿದ್ದಾರೆ ಮೇಘನಾ ರಾಜ್. ಮೇಘನಾ ರಾಜ್ ಅವರು ‘ತತ್ಸಮ ತದ್ಭವ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈಗಾಗಲೇ ಸಿನಿಮಾದ ಪೋಸ್ಟರ್ಗಳು ಗಮನ ಸೆಳೆದಿದ್ದವು. ಇದು ಮಹಿಳಾ ಪ್ರಧಾನ ಸಿನಿಮಾ ಎಂಬ ಕಾರಣಕ್ಕೂ ನಿರೀಕ್ಷೆ ಹೆಚ್ಚಿದೆ. ಅವರ ಕಂಬ್ಯಾಕ್ ಸಿನಿಮಾ ‘ತತ್ಸಮ ತದ್ಭವ’ ಸಿನಿಮಾದ ಟೀಸರ್ (Teaser) ಕೆಲ ದಿನಗಳ ಹಿಂದೆ ರಿಲೀಸ್ ಆಗಿತ್ತು. ಇದಕ್ಕೆ ಸಕತ್ ರೆಸ್ಪಾನ್ಸ್ ಸಿಕ್ಕಿದೆ. ಅದಕ್ಕೂ ಮುನ್ನ ಮೇ 3ರ ಅವರ ಹುಟ್ಟುಹಬ್ಬದಂದು ‘ತತ್ಸಮ ತದ್ಭವ’ ಚಿತ್ರದ ಹೊಸ ಪೋಸ್ಟರ್ ಬಿಡುಗಡೆ ಆಗಿತ್ತು. ಈ ಪೋಸ್ಟರ್ ನೋಡಿ ಫ್ಯಾನ್ಸ್ ಖಷಿಪಟ್ಟಿದ್ದರು. ಈ ಪೋಸ್ಟರ್ ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಟೀಸರ್ ನೋಡಿ ಇನ್ನಷ್ಟು ಕುತೂಹಲ ಮೂಡಿದೆ.
ಚಿನ್ನದ ಬೆಲೆ ಗಗನ ಮುಟ್ಟಿದರೂ ಬ್ಯಾಗ್‌ಮೇಲೆ MR ಕೆತ್ತಿಸಿಕೊಂಡ ಮೇಘನಾ ರಾಜ್!
ಇಂದು ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿ ಕ್ಷೇತ್ರದ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್, ಬಾಲಾಜಿ ಮನೋಹರ್, ದೇವರಾಜ್, ಶ್ರುತಿ, ಟಿ.ಎಸ್. ನಾಗಾಭರಣ ಕೂಡ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಇದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವುದು ಟ್ರೇಲರ್ನಲ್ಲಿಯೇ ಕಾಣಬಹುದಾಗಿದೆ. ಇದರಲ್ಲಿ ಅತ್ತಿಗೆ ಮೇಘನಾ ರಾಜ್ ಅವರ ಒಂದು ಡೈಲಾಗ್ಗೆ ಧ್ರುವ ಸರ್ಜಾ (Druva Sarja) ಭಾವುಕರಾಗಿದ್ದಾರೆ. ಅದೇನೆಂದರೆ, ಈ ಹಿಂದೆ ಬಿಡುಗಡೆಯಾಗಿದ್ದ ಟೀಸರ್ನಲ್ಲಿ ಮೇಘನಾ ರಾಜ್ ಕಾಣಿಸಿಕೊಂಡಿದ್ದರು. ಅದರಲ್ಲಿ ಈ ಚಿತ್ರವು ಕಾಣೆಯಾಗಿರುವ ಪತಿಯ ಹುಡುಕಾಟದ ಕಥೆ ಎಂದು ತೋರುತ್ತಿತ್ತು. ಮೇಘನಾ ರಾಜ್ ಅವರು, ‘ನನ್ನ ಹೆಸರು ಆರಿಕಾ. ನನ್ನ ಪತಿ ಕಾಣೆ ಆಗಿದ್ದಾರೆ’ ಎಂದು ದೂರು ನೀಡುತ್ತಾರೆ. ಈ ಕೇಸ್ ಅನ್ನು ಪೊಲಿಸ್ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ನಡೆಸುತ್ತಾರೆ. ಈ ಟೀಸರ್ನ ಉದ್ದಕ್ಕೂ ಕುತೂಹಲಕಾರಿ ಸಸ್ಪೆನ್ಸ್ ಅಂಶ ಇದೆ. ಇದನ್ನು ನೋಡಿದರೆ ಚಿತ್ರದಲ್ಲಿ ಸಾಕಷ್ಟು ಥ್ರಿಲ್ಲಿಂಗ್ ಅಂಶ ಇದೆ ಎನ್ನುವುದು ತಿಳಿದುಬರುತ್ತದೆ.
ಈ ಸಿನಿಮಾ ಶುರುವಾಗಲು ಚಿರು ಕಾರಣ. ಅಂದು ರಾತ್ರಿ ಪನ್ನಗ ಮತ್ತು ಪ್ರಜ್ವಲ್ ಅವರನ್ನು ಕೂರಿಸಿಕೊಂಡು ಜೊತೆಯಾಗಿ ಪ್ರೊಡಕ್ಷನ್ ಮಾಡುವ ಆಸೆಯನ್ನು ಚಿರು ಹೇಳಿಕೊಂಡಿದ್ದರು. ಅವರ ಆಸೆ ಈಗ ಈಡೇರಿದೆ ಎಂದು ಮೇಘನಾ ಅವರು ಹೇಳಿಕೊಂಡಿದ್ದರೆ, ಚಿತ್ರದಲ್ಲಿ ಮೇಘನಾ ಅವರ ಒಂದು ಡೈಲಾಗ್ನಿಂದ ತುಂಬಾ ನೋವಾಯಿತು ಎಂದು ಅವರ ಮೈದುನ ಧ್ರುವ ಸರ್ಜಾ ಹೇಳಿದ್ದಾರೆ. ಅವರು ಹೇಳಿದ್ದೇನೆಂದರೆ: ಅದರಲ್ಲಿ ನನ್ನ ಅತ್ತಿಗೆ ಅವರ ಸಿನಿಮಾ ಪಾತ್ರಕ್ಕೆ ಸಂಬಂಧಿಸಿದಂತೆ ನನ್ನ ಪತಿ ಮಿಸ್ಸಿಂಗ್ ಆಗಿದ್ದಾರೆ ಎನ್ನುತ್ತಾರೆ. ಇದು ನನ್ನನ್ನು ತುಂಬಾ ಭಾವುಕಗೊಳಿಸಿತು. ಏಕೆಂದರೆ, ನಿಜಕ್ಕೂ ಈಗ ನನ್ನ ಅಣ್ಣ ಮಿಸ್ಸಿಂಗ್. ಇದನ್ನು ಅತ್ತಿಗೆಯ ಬಾಯಲ್ಲಿ ಕೇಳುವಾಗ ತುಂಬಾ ನೋವಾಯಿತು ಎಂದಿದ್ದಾರೆ. ಅತ್ತಿಗೆ ಮೇಘನಾ ಅವರ ರಾಜ್ ಜೊತೆ ನಾನು ‘ಅಲ್ಲಮ’ (Allama) ಸಿನಿಮಾದಲ್ಲಿ ಜೊತೆಯಾಗಿ ಕೆಲಸ ಮಾಡಿದ್ದೆ. ಹೊಸ ನಿರ್ದೇಶಕರು, ಹೊಸ ನಿರ್ಮಾಪಕರು ಚೆನ್ನಾಗಿ ಕೆಲಸ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಅಂದಹಾಗೆ ಈ ಚಿತ್ರಕ್ಕೆ ಶ್ರೀನಿವಾಸ್ ರಾಮಯ್ಯನವರ ಛಾಯಾಗ್ರಹಣವಿದ್ದು, ವಾಸುಕಿ ವೈಭವ್ ಅವರು ಸಂಗೀತ ನಿರ್ದೇಶಿಸಿದ್ದಾರೆ.
ಮೇಘನಾ ರಾಜ್ ಕೈಯಲ್ಲಿ ಬಾಟಲಿಗಳು ಪೀಸ್ ಪೀಸ್, ಪಾತ್ರೆಗಳು ಪುಡಿಪುಡಿ: ಆಗಿದ್ದೇನು?