ನಟಿ ಶ್ರುತಿ ಹರಿಹರನ್ ಬಹುದಿನಗಳ ಬಳಿಕ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಸೀರೆಯ ಫೋಟೋ ಶೇರ್ ಮಾಡಿದ್ದಾರೆ. ಇದಕ್ಕೆ ಫ್ಯಾನ್ಸ್ ಹೇಳುತ್ತಿರೋದೇನು?
ನಟಿ ಶ್ರುತಿ ಹರಿಹರನ್ (Sruthi Hariharan) 2018ರಲ್ಲಿ ಭಾರಿ ಸುದ್ದಿಯಲ್ಲಿದ್ದ ನಟಿ. ಇದಕ್ಕೆ ಕಾರಣ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಲೈಂಗಿಕ ಆರೋಪ ಮಾಡಿದ್ದರು. 2015 ರಲ್ಲಿ ನಡೆದಿದ್ದ ‘ವಿಸ್ಮಯ’ ಎಂಬ ಹೆಸರಿನ ಚಿತ್ರದ ಶೂಟಿಂಗ್ ವೇಳೆ ರೋಮ್ಯಾಂಟಿಕ್ ಸೀನ್ ರಿಹರ್ಸಲ್ ಸಂದರ್ಭದಲ್ಲಿ ಅರ್ಜುನ್ ಸರ್ಜಾರವರು ನನ್ನ ಖಾಸಗಿ ಅಂಗವನ್ನು ಮುಟ್ಟಿದ್ದರು. ಆಗ ತಾನೆ ನಾನು ಸಿನಿಮಾ ಇಂಡಸ್ಟ್ರಿಯಲ್ಲಿ ಗುರುತಿಸಿಕೊಳ್ಳುತ್ತಿದ್ದ ನಟಿಯಾಗಿದ್ದರಿಂದ ನಾನು ಏನೂ ಮಾಡದೇ ಸುಮ್ಮನಾದೆ. ಅವರು ನನ್ನನ್ನು ಜೋರಾಗಿ ತಬ್ಬಿಕೊಂಡು ನನ್ನ ಬೆನ್ನಿನ ಹಿಂಭಾಗದಲ್ಲೆಲ್ಲಾ ಕೈಯಾಡಿಸಿದ್ದರು ಇದು ನನಗೆ ತೀವ್ರ ಮುಜುಗರ ಉಂಟು ಮಾಡಿತ್ತು ಎಂದು ಮೂರು ವರ್ಷಗಳ ಬಳಿಕ ಅವರು ತಮಗಾಗಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸಿದ್ದರು. ಹೀಗೆ ಬಹಿರಂಗವಾಗಿ ಲೈಂಗಿಕ ದೌರ್ಜನ್ಯದ ಕುರಿತು ಹೇಳುತ್ತಿದ್ದಂತೆಯೇ ತಮಗೂ ಇದೇ ರೀತಿ ಲೈಂಗಿಕ ದೌರ್ಜನ್ಯ (Sexual herrasment) ಆಗಿದೆ ಎನ್ನುವ ಮೂಲಕ ಹಲವು ಮಹಿಳೆಯರು ಮಾತನಾಡಿದ್ದರು. ಮೀ ಟೂ ಎನ್ನುವ ದೊಡ್ಡ ಅಭಿಯಾನವೇ ಶುರುವಾಗಿತ್ತು. ನಟನಾ ಕ್ಷೇತ್ರದಲ್ಲಿ ನೆಲೆಯೂರಲು ನಟಿಯರು ಏನು ಬೇಕಾದರೂ ಮಾಡಲು ಸಿದ್ಧರು ಎನ್ನುವ ದೊಡ್ಡ ಆಪಾದನೆಯೇ ಇರುವ ಹೊತ್ತಿನಲ್ಲಿ, ಹಲವು ನಟಿಯರು ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳ ಮಹಿಳೆಯರು ತಮ್ಮ ಮೇಲಾಗಿರುವ ವಿವಿಧ ರೂಪದ ಲೈಂಗಿಕ ದೌರ್ಜನ್ಯದ ಕುರಿತು ಬಹಿರಂಗವಾಗಿ ಹೇಳುವ ಮೂಲಕ ಮೀ ಟೂ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.
ಈ ಪೈಕಿ ಕೆಲವು ಮಹಿಳೆಯರು ಮಾಡುತ್ತಿರುವ ಆರೋಪ ನಿರಾಧಾರವಾಗಿರುವುದಾಗಿಯೂ ಆರೋಪ ಎದುರಾಗಿತ್ತು. ತಮ್ಮ ಕಾರ್ಯ ಸಿದ್ಧಿಸಿಕೊಳ್ಳಲು ಏನೂ ಮಾಡಲು ಹೇಸದೇ ನಂತರ ಮೀ ಟೂ (Me too) ಆರೋಪ ಹೊರಿಸಲಾಗುತ್ತಿದೆ ಎನ್ನುವ ಗಂಭೀರ ಆರೋಪವನ್ನೂ ಕೆಲವು ಮಹಿಳೆಯರು ಎದುರಿಸುವ ಸ್ಥಿತಿಯೂ ತಲೆದೋರಿತು. ಅದೇನೆ ಇದ್ದರೂ ನಟಿ ಶ್ರುತಿ ಹರಿಹರನ್ ಹುಟ್ಟುಹಾಕಿದ ಈ ಮೀಟೂ ಅಭಿಯಾನ ದೊಡ್ಡ ಮಟ್ಟದ ಕ್ರಾಂತಿಯನ್ನೇ ಸೃಷ್ಟಿಸಿತ್ತು. ಶ್ರುತಿ ಅವರು ಒಂದೊಂದು ಸಲ ಒಂದೊಂದು ರೀತಿಯ ಗೊಂದಲಮಯ ಹೇಳಿಕೆ ನೀಡುತ್ತಿರುವ ಕಾರಣ, ಇವರೂ ಹಲವರ ಕೆಂಗಣ್ಣಿಗೆ ಗುರಿಯಾಗಬೇಕಾದ ಸ್ಥಿತಿಯೂ ತಲೆದೋರಿತ್ತು. ಅದೇ ಇನ್ನೊಂದೆಡೆ, ಮೀಟೂ ಪ್ರಕರಣದಲ್ಲಿ ಪೊಲೀಸರು ಮೂರು ವರ್ಷ ತನಿಖೆ ನಡೆಸಿದರು. ಆದರೆ, ನಟನ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದಿದ್ದ ಪೊಲೀಸರು ಶ್ರುತಿ ಮಾಡುತ್ತಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಕೋರ್ಟ್ ಗೆ ಬಿ ರಿಪೋರ್ಟ್ ಸಲ್ಲಿಸಿದ ನಂತರ ನಟಿಯನ್ನು ವಿರೋಧಿಸುವವರ ಸಂಖ್ಯೆಯೂ ಹೆಚ್ಚಾಯಿತು.
undefined
MeToo Case: ಶ್ರುತಿ ಹರಿಹರನ್ ಪ್ರಕರಣಕ್ಕೆ ಟ್ವಿಸ್ಟ್, ಬಿ-ರಿಪೋರ್ಟ್ ಚಾಲೆಂಜ್ ಮಾಡಿದ್ದ ನಟಿಗೆ ಕೋರ್ಟ್ ನೋಟಿಸ್
ಹಲವರು ಪೊಲೀಸರ ವಿರುದ್ಧವೇ ತಿರುಗಿಬಿದ್ದು ನಟಿಯ ಪರವಾಗಿಯೂ ನಿಂತರು. ಈ ರಿಪೋರ್ಟ್‌ಗೆ ನಟಿ ಕೂಡ ಆರಂಭದಲ್ಲಿ ಯಾವುದೇ ಆಕ್ಷೇಪ ವ್ಯಕ್ತಪಡಿಸದೇ ಮೌನಕ್ಕೆ ಜಾರಿದ್ದರು. ನಂತರ ಪೊಲೀಸರು ಸಲ್ಲಿಸಿದ್ದ ಬಿ ರಿಪೋರ್ಟ್ ಬಗ್ಗೆ ಶೃತಿ ಹರಿಹರನ್ ಪ್ರಶ್ನಿಸಿದ್ದಾರೆ. ಶ್ರುತಿ ಅವರ ಮೇಲ್ಮನವಿಯನ್ನು ಕೋರ್ಟ್ ಒಪ್ಪಿದೆ. ಪೊಲೀಸರಿಗೆ ಸಾಕ್ಷ್ಯಾಧಾರ ಒದಗಿಸುವಂತೆ ಶ್ರುತಿಗೆ ನೋಟಿಸ್ ನೀಡಲಾಗಿದೆ. ಇದರ ನಡುವೆಯೇ ಶ್ರುತಿ ಅವರಿಗೆ ಚಿತ್ರರಂಗದಲ್ಲಿ ಅವಕಾಶ ಕಡಿಮೆಯಾಗಿದ್ದು, ನಿರ್ದೇಶನದ ಮೂಲಕ ಗುರುತಿಸಿಕೊಳ್ಳಲು ಮುಂದಾಗಿದ್ದಾರೆ.
ಇದರ ನಡುವೆಯೇ ಈಗ ಶ್ರುತಿ ಸೀರೆ ಹಾಗೂ ಸ್ಲ್ವೀವ್ಲೆಸ್ ಬ್ಲೌಸ್ನಲ್ಲಿ (Sleeveless blouse) ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ಕೆಲವರು ಶ್ಲಾಘನೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ನಟಿಯನ್ನು ತಾವು ದ್ವೇಷಿಸುತ್ತಿರುವುದಾಗಿ ಹೇಳಿದ್ದಾರೆ. ನಾನು ಹೆಚ್ಚು ದ್ವೇಷ ಮಾಡುವ ನಟಿ ನೀವು ಕಾರಣ ಕೂಡ ನೀವೇ ಎಂದು ಅಭಿಮಾನಿಯೊಬ್ಬರು ಬರೆದಿದ್ದಾರೆ. ಇನ್ನು ಕೆಲವರು ಸೀರೆಗೂ, ಬ್ಲೌಸ್ಗೂ ಹೊಂದಾಣಿಕೆಯೇ ಇಲ್ಲ ಎಂದಿದ್ದರೆ, ಇನ್ನು ಕೆಲವರು ಕ್ಯೂಟ್ ಎಂದು ಬರೆದಿದ್ದಾರೆ. ಮತ್ತೆ ನಟನೆಗೆ ಬನ್ನಿ ಎಂದು ಇನ್ನು ಕೆಲವರು ಕಮೆಂಟ್ ಮಾಡಿದ್ದಾರೆ.
#MeToo ಗೆ ಒಂದು ವರ್ಷ; 'ವೀ ದ ವುಮೆನ್' ಸೆಮಿನಾರ್‌ನಲ್ಲಿ ಶೃತಿ ಹರಿಹರನ್ ತಾಯಿ ಭಾವುಕ