ಅಮ್ಮ-ಮಗಳು ಸೇಮ್ ಟು ಸೇಮ್; 'ಕನಸಿನ ರಾಣಿ'ಯ ಟ್ಯಾಟೂ ವೈರಲ್!

By Suvarna News  |  First Published Jan 26, 2021, 12:26 PM IST

ಮಾಲಾಶ್ರೀ ಫಸ್ಟ್ ಟ್ಯಾಟೂ ಏನಿರಬಹುದು ಗೆಸ್ ಮಾಡಿ? ಇದು ಮಗಳ ಐಡಿಯಾನಾ ಅಥವಾ ಅಮ್ಮನ ಐಡಿಯಾನಾ?
 


ಸ್ಯಾಂಡಲ್‌ವುಡ್‌ ಕನಸಿನ ರಾಣಿ ಮಾಲಾಶ್ರೀ ಚಿತ್ರರಂಗದಲ್ಲಿ ಆ್ಯಕ್ಟಿವ್‌ ಇಲ್ಲವಾದರೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಸಾಯಿ ಬಾಬಾ ಭಕ್ತೆಯಾಗಿರುವ ಮಾಲಾಶ್ರೀ  ವಾರ ವಾರವೂ ತಪ್ಪದೇ ಬಾಬನ ಫೋಟೋ ಶೇರ್ ಮಾಡುತ್ತಾರೆ. ಏನೇ ವಿಶೇಷ ವಿಚಾರವಿದ್ದರೂ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಾರೆ. ಅದರಂತೆ ಈ ಸ್ಪೆಷಲ್‌ ಫೋಟೋ ಕೂಡ.

ಕನಸಿನ ರಾಣಿ ಮಾಲಾಶ್ರೀ ಪುತ್ರಿ ಅನನ್ಯಾರಾಮು ಸ್ಟೈಲಿಶ್‌ ಫೋಟೋಗಳು! 

Tap to resize

Latest Videos

ಮಾಲಾಶ್ರೀ ಟ್ಯಾಟೂ:
ನಟಿ ಮಾಲಾಶ್ರೀ ಮೊದಲ ಬಾರಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ.  ಇದರಲ್ಲಿ ಏನಿದೆ ವಿಶೇಷತೆ ಅಂತ ಯೋಚಿಸುತ್ತಿದ್ದೀರಾ? ಹೌದು  ಇದು ಮಾಲಾಶ್ರೀ ಮೊದಲ ಟ್ಯಾಟೂ ಅನ್ನುವುದಕ್ಕಿಂತnt ಅಮ್ಮ-ಮಗಳು ಒಂದೇ ರೀತಿ ಹಾಕಿಸಿಕೊಂಡಿರುವ ಸ್ಮೈಲಿ ಎನ್ನಬಹುದು. ಇದನ್ನು #MomDaughterGoals ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ಮಗಳು ಅಮ್ಮನನ್ನ ಅನುಕರಿಸುತ್ತಾಳೆ. ಆದರೆ ಇಲ್ಲಿ ತಾಯಿಯೇ ಮಗಳನ್ನು ಅನುಕರಿಸಿದ್ದಾರೆ. ಟ್ಯಾಟು ಹಾಕಿಸಿಕೊಳ್ಳುತ್ತಿರುವ  ಹಾಗೂ ಮಗಳ ಜೊತೆ ಟ್ಯಾಟು ತೋರಿಸಿ ಪೋಟೋ ಅಪ್ಲೋಡ್ ಮಾಡಿದ್ದಾರೆ ಸ್ಯಾಂಡಲ್‌ವುಡ್ ಕನಸಿನ ರಾಣಿ.

ಸೀಮಂತದ ಫೋಟೋ ಶೇರ್ ಮಾಡಿ ಸಂಭ್ರಮ ಹಂಚಿಕೊಂಡ 'ಕನಸಿನ ರಾಣಿ' ಮಾಲಾಶ್ರಿ! 

2017ರಲ್ಲಿ 'ಉಪ್ಪು ಹುಳಿ ಖಾರ' ಚಿತ್ರದ ನಂತರ ಮಾಲಾಶ್ರೀ ಯಾವ ಕಥೆಗೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಕನಸಿನ ರಾಣಿ ಮತ್ತೆ ಆನ್‌ಸ್ಕ್ರೀನ್‌‌ನಲ್ಲಿ ಕಾಣಿಸಿಕೊಳ್ಳಬೇಕು ಎಂಬುವುದು ನೆಟ್ಟಿಗರ ಆಸೆ.

 

click me!