ಮದುವೆ ಬಗ್ಗೆ ಕೇಳಿದರೆ ಸರಿ ಇರಲ್ಲ; ಶ್ರದ್ಧಾ ಶ್ರೀನಾಥ್ ಹೇಳಿದ ಇಂಟರೆಸ್ಟಿಂಗ್ ಸಂಗತಿಗಳು!

Kannadaprabha News   | Asianet News
Published : May 22, 2021, 09:15 AM IST
ಮದುವೆ ಬಗ್ಗೆ ಕೇಳಿದರೆ ಸರಿ ಇರಲ್ಲ; ಶ್ರದ್ಧಾ ಶ್ರೀನಾಥ್ ಹೇಳಿದ ಇಂಟರೆಸ್ಟಿಂಗ್ ಸಂಗತಿಗಳು!

ಸಾರಾಂಶ

ಯೂ ಟರ್ನ್ ಸಿನಿಮಾ ಬಂದು ಐದು ವರ್ಷ ಆಗಿದೆ. ಈ ಐದು ವರ್ಷಗಳಲ್ಲಿ ಶ್ರದ್ಧಾ ಶ್ರೀನಾಥ ದೊಡ್ಡ ನಟಿಯಾಗಿ ಬೆಳೆದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಬದುಕಿನ ಕುರಿತು ಮಾತನಾಡಿದ್ದಾರೆ.

ಯೂಟರ್ನ್ ಟೀಶರ್ಟ್

ಐದು ವರ್ಷದ ಹಿಂದೆ ನ್ಯೂಯಾರ್ಕ್ ಫಿಲಂ ಫೆಸ್‌ಟ್ಗೆ ಹೋಗುವಾಗ ಯೂಟರ್ನ್ ಎಂದು ಬರೆದಿದ್ದ ಟೀ ಶರ್ಟ್ ಧರಿಸಿದ್ದೆ. ನನ್ನ ಮೊದಲ ಸಿನಿಮಾ ಅಲ್ವಾ, ಯಾರಾದರೂ ಈ ಟೀಶರ್ಟ್ ನೋಡಿ ಏನಿದು ಅಂತ ಕೇಳಲಿ ಅಂತ ಆಸೆ. ಆಗ ನಾನು ಹೆಮ್ಮೆಯಿಂದ ನನ್ನ ಮೊದಲ ಸಿನಿಮಾ ಯೂಟರ್ನ್ ಬಗ್ಗೆ, ಅದು ನ್ಯೂಯಾರ್ಕ್ ಫಿಲಂ ಫೆಸ್ಟಿವಲ್‌ನಲ್ಲಿ ಸ್ಕ್ರೀನಿಂಗ್ ಆಗ್ತಿರೋದರ ಬಗ್ಗೆ ಹೇಳಬಹುದಲ್ಲಾ ಅಂತ. ಆಗಿನ ಮುಗ್ಧತೆ, ಕುತೂಹಲ ಎಲ್ಲ ಮತ್ತೆ ಬರಲಿ ಅಂತ ಆಶಿಸ್ತೀನಿ.

ನಟನೆ ಬಿಟ್ರೆ ಲಾಯರ್ ಆಗ್ತಿದ್ದೆ!

ನಾನು ಎಲ್ಲದರಲ್ಲೂ ಆ್ಯವರೇಜ್ ವ್ಯಕ್ತಿ. ಇರೋದ್ರಲ್ಲಿ ಬೆಸ್‌ಟ್ ಅಂತ ಅನಿಸೋದು ನಟನೆ. ಸಿನಿಮಾ ಬರುವ ಮೊದಲು ನಾಟಕಗಳಲ್ಲಿ ಅಭಿನಯಿಸುತ್ತಿದ್ದೆ. ಆಗ ನನ್ನ ನಟನೆಯ ಬಗ್ಗೆ ಎಲ್ಲರು ಪ್ರಶಂಸಿಸೋದು ನೋಡಿ ಆತ್ಮವಿಶ್ವಾಸ ಬಂತು. ಒಂದು ವೇಳೆ ಸಿನಿಮಾಕ್ಕೆ ಬರಲಿಲ್ಲ ಅಂದ್ರೆ ಲಾಯರ್ ಆಗ್ತಿದ್ದೆ.

ಎಂಟಿಆರ್, ವಿದ್ಯಾರ್ಥಿ ಭವನ ಫೇವರಿಟ್

ಬೆಂಗಳೂರಲ್ಲಿ ಎಂಟಿಆರ್‌ನಲ್ಲಿ ಊಟ, ತಿಂಡಿ ಮಾಡೋದು ಬಹಳ ಇಷ್ಟ. ನನ್ನಿಷ್ಟದ ಮತ್ತೊಂದು ಜಾಗ ವಿದ್ಯಾರ್ಥಿ ಭವನದ ಮಸಾಲೆ ದೋಸೆ. ಆ ಪಲ್ಯ ನೆನೆಸಿಕೊಂಡರೆ ಈಗಲೂ ಬಾಯಲ್ಲಿ ನೀರು ಬರುತ್ತೆ.

ಶ್ರದ್ದಾ ಶ್ರೀನಾಥ್ ಮದ್ವೆ ಸಂಗತಿ ಮುಚ್ಚಿಡ್ತಿದ್ದಾರಾ..?

ಮದುವೆ, ಮಗು ಬಗ್ಗೆ ಕೇಳಿದರೆ ಇಷ್ಟ ಆಗಲ್ಲ

ನನ್ನನ್ನೂ ಸೇರಿಸಿ ಕೆಲವು ನಟಿಯರಿಗೆ ಮದುವೆ, ಮಕ್ಕಳು ಅಂತೆಲ್ಲ ಕೇಳಿದರೆ ಇಷ್ಟ ಆಗಲ್ಲ. ಒಂಥರಾ ಉದ್ವಿಗ್ನತೆ ಉಂಟಾಗುತ್ತೆ.

ಮುಂಗಾರು ಮಳೆ 2 ಸಿನಿಮಾಗೆ ರಿಜೆಕ್‌ಟ್ ಆಗಿದ್ದೆ

ಆರಂಭದಲ್ಲಿ ಒಂದಿಷ್ಟು ಸಿನಿಮಾಗೆ ಆಡಿಶನ್ ಕೊಟ್ಟು ರಿಜೆಕ್‌ಟ್ ಆಗಿದ್ದೆ. ಅದರಲ್ಲಿ ಮುಂಗಾರು ಮಳೆ 2 ಸಹ ಒಂದು. ಒಂದಿಷ್ಟು ಹಿಂದಿ ಸಿನಿಮಾಗಳಿಂದಲೂ ರಿಜೆಕ್‌ಟ್ ಆಗಿದ್ದೆ.

ಡಸ್‌ಟ್ ಬಿನ್‌ಗೆ ಬಿದ್ದಿದ್ದೆ

ನನ್ನ ಹಣೆಯ ಮೇಲೆ ಸ್ಟಿಚ್ ಮಾಡಿರೋ ಗುರುತನ್ನ ನೀವು ನೋಡಿರಬಹುದು. ಇದು ಚಿಕ್ಕವಳಿರುವಾಗ ಡಸ್‌ಟ್ ಬಿನ್‌ಗೆ ಬಿದ್ದಿದ್ದು. ಇಳಿಜಾರಲ್ಲಿ ಸೈಕಲ್ ಹೊಡೀತಾ ಬರ್ತಿದ್ದೆ. ಬ್ರೇಕ್ ಮೇಲೆ ಕೈ ಇಡೋಕೆ ಗೊತ್ತಾಗ್ಲಿಲ್ಲ. ನನ್ನ ಹತೋಟಿ ತಪ್ಪಿ ಡಸ್‌ಟ್ ಬಿನ್‌ಗೆ ಬಿದ್ದು ಪ್ರಜ್ಞೆ ಕಳ್ಕೊಂಡಿದ್ದೆ. ಬಹುಶಃ ಆಮೇಲೆ ಅಲ್ಲಿ ಕೆಲಸ ಮಾಡೋರು ನನ್ನ ಎತ್ಕೊಂಡು ಹೋಗಿ ಅಮ್ಮಂಗೆ ಒಪ್ಪಿಸಿರಬಹುದು, ‘ಮೇಡಂ ನಿಮ್ಮ ಮಗು ಡಸ್‌ಟ್ ಬಿನ್‌ನಲ್ಲಿ ಸಿಕ್ಕಿತು’ ಅಂತ.

ಮದ್ವೆ ಆದ್ಮೇಲೆ ನಟಿಯರಿಗೆ ಡಿಮ್ಯಾಂಡ್ ಕಮ್ಮಿ ಆಗುತ್ತಾ? ದಯವಿಟ್ಟು ಉತ್ತರಿಸಿ ಎಂದ ನಟಿ! 

ನನ್ನ ಡಯೆಟ್ ಕತೆ ಇಷ್ಟೇ

ನಾನು ಕ್ಯಾಲರಿ ಟ್ರ್ಯಾಕಿಂಗ್ ಆ್ಯಪ್ ಬಳಸಿ ಡಯೆಟ್ ಮಾಡ್ತೀನಿ. ಪಕ್ಕಾ ಸಸ್ಯಾಹಾರಿ. ಮೊಟ್ಟೆಯನ್ನೂ ತಿನ್ನಲ್ಲ. ಆದರೆ 25 ಗ್ರಾಂಗಳಷ್ಟು ಫೈಬರ್ ಇರುವ ಆಹಾರ, ಪ್ರೊಟೀನ್ ಸಪ್ಲಿಮೆಂಟ್ ತಿನ್ನುತ್ತೀನಿ. ನೀರು ಚೆನ್ನಾಗಿ ಕುಡೀತೀನಿ. ತರಕಾರಿ, ಹಣ್ಣುಗಳನ್ನೇ ಹೆಚ್ಚೆಚ್ಚು ಸೇವಿಸ್ತೀನಿ. ಸ್ವಲ್ಪ ಎಚ್ಚರ ತಪ್ಪಿದ್ರೂ ತೂಕ ಹೆಚ್ಚಾಗುತ್ತೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Untold Love Story: ಸ್ಟಾರ್ ನಟನ ಎರಡನೇ ಪತ್ನಿಯ ಲವ್‌ನಲ್ಲಿ ಬಿದ್ದು ಒದ್ದಾಡಿದ್ದ ರಜನಿಕಾಂತ್!
Sandalwood Films: ರಿಲೀಸ್'ಗೂ ಮುನ್ನ ಭಾರಿ ನಿರೀಕ್ಷೆ ಹುಟ್ಟಿಸಿ, ಬಳಿಕ ಸೋತ ಕನ್ನಡ ಸಿನಿಮಾಗಳು