
'ಕೆಮಿಸ್ಟ್ರಿ ಆಫ್ ಕರಿಯಪ್ಪ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಸಂಜನಾ ಆನಂದ್, ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ನಿರ್ದೇಶಕರ ಜೊತೆ ಹೊಸ ಹೊಸ ಚಿತ್ರಗಳಿಗೆ ಸಹಿ ಮಾಡಿದ್ದರು. ಆದರೆ ಕೊರೋನಾ ಎರಡನೇ ಅಲೆಯಿಂದ ಸಿನಿಮಾ ಬಿಡುಗಡೆ ಆಗುವುದಕ್ಕೆ ತಡೆ ಆಗಿತ್ತು.
'ಎರಡನೇ ಅಲೆಯಿಂದ ಮಾನಸಿಕ ಬದಲಾವಣೆ ಆಗಿದೆ, ನಾನು ಕುಟುಂಬಸ್ಥರನ್ನು ಮಾತ್ರವಲ್ಲ, ಕೆಲವು ಸಹೋದ್ಯೋಗಿಗಳನ್ನು ಕಳೆದುಕೊಂಡಿರುವೆ. ಇದರಿಂದ ನನಗೆ ತುಂಬಾನೇ ಗಾಬರಿ ಆಗಿದೆ. ನನ್ನ ಕುಟುಂಬದ ಬಗ್ಗೆ ಆತಂಕ ಹೆಚ್ಚಾಗಿದೆ. ಪ್ರತಿ ಸಲವೂ ನನ್ನ ತಾಯಿ ಹೊರಗಡೆ ಹೋದಾಗ ಪದೇ ಪದೇ ಕರೆ ಮಾಡಿ ವಿಚಾರಿಸುತ್ತೇನೆ,' ಎಂದು ಸಂಜನಾ ಹೇಳಿಕೊಂಡಿದ್ದಾರೆ.
'ನನ್ನ ಮೊದಲ ಸಿನಿಮಾ ರಿಲೀಸ್ ನಂತರ ನನಗೆ ಒಳ್ಳೆಯ ಅವಕಾಶಗಳು ಸಿಕ್ಕಿದ್ದವು. ಚಿತ್ರತಂಡಗಳು ರಿಲೀಸ್‌ಗೆ ಸಿದ್ಧತೆಗಳನ್ನು ಮಾಡಿಕೊಳ್ಳುವಷ್ಟರಲ್ಲಿ, ಈ ಪ್ಯಾಂಡಮಿಕ್ ಶುರುವಾಗಿತ್ತು. ಇದರಿಂದ ಎಲ್ಲ ಕೆಲಸವೂ ಅರ್ಥಕ್ಕೇ ನಿಂತುಕೊಂಡಿತ್ತು. ಎಲ್ಲವೂ ತೆರೆದಿದ್ದರೂ ಚಿತ್ರಮಂದಿರಗಳು ಮಾತ್ರ ಓಪನ್ ಆಗಲಿಲ್ಲ. ನನಗೆ ಗ್ರೇಟ್ ಸಪೋರ್ಟ್ ಆಗಿ ತಂಡವಿತ್ತು. ತಿಂಗಳ ಕಾಲ ಕೆಲಸವಿಲ್ಲದೇ ಕುಳಿತಿರುವಾಗ ನಾನು ಕೆಲವೊಂದು ಸೀರಿಸ್ ಹಾಗೂ ಸಿನಿಮಾಗಳನ್ನು ನೋಡಿದೆ, ಆ್ಯಕ್ಟಿಂಗ್ ಮತ್ತು ಹೊಸ ಭಾಷೆ ಕಲಿತೆ,' ಎಂದಿದ್ದಾರೆ ಸಂಜನಾ.
ಶ್ರೀಲೀಲಾಗೆ ಲಿಪ್‌ಲಾಕ್ ಮಾಡಿದ ವಿರಾಟ್ ಇದೀಗ ಅದ್ಧೂರಿ ಲವರ್!
'ಈ ಪ್ಯಾಂಡಮಿಕ್‌ನಲ್ಲಿ ನಾನು ಎಲ್ಲಾ ನ್ಯೂಸ್ ಚಾನಲ್‌ಗಳನ್ನು ಆಫ್ ಮಾಡಿದೆ. ಸೋಷಿಯಲ್ ಮೀಡಿಯಾದಿಂದ ದೂರ ಉಳಿದೆ. ನಾವು ನಮ್ಮ ಸ್ನೇಹಿತರಿಗೆ ಕರೆ ಮಾಡಿ ಒಬ್ಬರಿಗೆ ಮತ್ತೊಬ್ಬರು ಬೆನ್ನೆಲುಬಾಗಿ ನಿಂತೆವು,' ಎಂದು ಸಂಜನಾ ಟೈಮ್ಸ್‌ಗೆ ನೀಡಿರುವ ಸಂದರ್ಶನದಲ್ಲಿ ತಮ್ಮ ಮನದಾಳದ ಮಾತುಗಳನ್ನು ತೋಡಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.