ಆಯುರ್ವೇದ ವೈದ್ಯನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 'ಮಿಥುನ ರಾಶಿ' ಸ್ವಾಮಿನಾಥನ್ ಅನಂತರಾಮನ್!

By Suvarna NewsFirst Published Jul 4, 2021, 2:42 PM IST
Highlights

ಕತೆ ಕೇಳಿ ಎರಡೇ ತಾಸಿನಲ್ಲಿ ಸಿನಿಮಾ ಒಪ್ಪಿಕೊಂಡ ಸ್ವಾಮಿನಾಥನ್. 5 ಭಾಷೆಯಲ್ಲಿ ಸಿನಿಮಾ ರಿಲೀಸ್....

ಕರ್ಲಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಿಥುನ ರಾಶಿ' ಧಾರಾವಾಹಿಯ ಪ್ರಮುಖ ಪಾತ್ರಧಾರಿ ಮಿಥುನ್ ಅಲಿಯಾನ್ ಸ್ವಾಮಿನಾಥನ್ ಅನಂತರಾಮನ್‌ ಇದೀಗ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಕಮರಟ್ಟು ಚೆಕ್ ಪೋಸ್ಟ್ ಮತ್ತು ಮಾಮು ಟೀ ಅಂಗಡಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವ ಪರಮೇಶ್‌ ಈ ಚಿತ್ರದ ನಿರ್ದೇಶನ ಮಾಡುತ್ತಿದ್ದಾರೆ. 

'ನಾನು ತುಂಬಾ ಕತೆಗಳನ್ನು ಕೇಳಿರುವೆ ಆದರೆ ಯಾವುದೇ ಅಷ್ಟಾಗಿ ಇಷ್ಟ ಆಗಿರಲಿಲ್ಲ. ಕಮರ್ಷಿಯಲ್ ಡ್ರಾಮಾಗಿಂತ ಈ ರೀತಿಯ ಕಥೆಗಳನ್ನು ನಾನು ಹುಡುಕುತ್ತಿದ್ದೆ.  ಎರಡು ಗಂಟೆಗಳ ಕಾಲ ಚಿತ್ರಕತೆ ಬಗ್ಗೆ ನಿರ್ದೇಶಕರು ಹೇಳಿದ್ದರು. ಕತೆ ಕೇಳುತ್ತಿದ್ದಂತೆ ಸಂತೋಷ ಆಗಿತ್ತು, ಒಪ್ಪಿಕೊಂಡೆ.  ಮುಂದಿನ ದಿನಗಳ ಮಂಗಳೂರಿನಲ್ಲಿರುವ ಹಳ್ಳೆ ಮನೆಯೊಂದರಲ್ಲಿ ಚಿತ್ರೀಕರಣ ಶುರುವಾಗಲಿದೆ' ಎಂದಿದ್ದಾರೆ ಸ್ವಾಮಿನಾಥನ್.

ಮೆಕ್ಯಾನಿಕಲ್‌ ಎಂಜಿನಿಯರಿಂಗ್ ಹುಡ್ಗ ಮಿಥುನ್‌ ಕಣ್ಸೆಳೆದ ಆಟೋ ಹುಡುಗಿ ಯಾರು? 

ಈ ಚಿತ್ರದಲ್ಲಿ ಸ್ವಾಮಿನಾಥನ್ ಆಯುರ್ವೇದ ವೈದ್ಯನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಐದು ಭಾಷೆಯಲ್ಲಿ ಬಿಡುಗಡೆ ಆಗುತ್ತಿರುವ ಈ ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್ ಕೂಡ ಅಭಿನಯಿಸುತ್ತಿದ್ದಾರೆ.  ಧಾರಾವಾಹಿ ಹಾಗೂ ಸಿನಿಮಾ ಎರಡನ್ನೂ ಮ್ಯಾನೇಜ್ ಮಾಡಬೇಕು ಎಂದು ಸ್ವಾಮಿನಾಥನ್ ನಿರ್ಧರಿಸಿದ್ದಾರೆ.  'ಚಿತ್ರದಲ್ಲಿ ಮೂರು ಕತೆಗಳಿವೆ. ದೆವ್ವದ ಚಟುವಟಿಕೆಗಳು ಇದರಲ್ಲಿದೆ. ಒಂದು ಜೋಡಿ, ಒಬ್ಬ ರಿಸರ್ಚ್ ಮಾಡುವ ವೈದ್ಯ ಮತ್ತೊಂದು ಅಡುಗೆ ಮಾಡುವವರ ಕುಟುಂಬದ ಸುತ್ತ ಕತೆ ನಡೆಯಲಿದೆ' ಎಂದು ನಿರ್ದೇಶಕ ಪರಮೇಶ್ ಹೇಳಿದ್ದಾರೆ.

click me!