ಬ್ರೇಕಪ್‌ ಬಗ್ಗೆ ತಾಯಿ ಆಡಿಯೋ ವೈರಲ್;‌ ಕನ್ನಡದಲ್ಲೇ ಪ್ರತಿಕ್ರಿಯೆ ಕೊಟ್ಟ ನಟಿ ರಶ್ಮಿಕಾ ಮಂದಣ್ಣ

Published : Mar 12, 2026, 04:45 PM IST
actress rashmika mandanna

ಸಾರಾಂಶ

Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಮದುವೆ ಆಗಿದೆ. ಈಗ ರಶ್ಮಿಕಾ ಮಂದಣ್ಣ ತಾಯಿಯದ್ದು ಎನ್ನಲಾದ ಆಡಿಯೋವೊಂದು ವೈರಲ್‌ ಆಗಿತ್ತು. ಈಗ ಅದನೆಲ್ಲ ಡಿಲಿಟ್‌ ಮಾಡಿ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ. 

ನಟಿ ರಶ್ಮಿಕಾ ಮಂದಣ್ಣ ಅವರ ತಾಯಿ ಸುಮನ್‌ ಮಂದಣ್ಣರದ್ದು ಎನ್ನಲಾದ ಆಡಿಯೋವೊಂದು ವೈರಲ್‌ ಆಗಿತ್ತು. ಇದಕ್ಕೆ ಸಂಬಂಧಪಟ್ಟಂತೆ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಕೂಡ ಖಡಕ್‌ ಆಗಿ ತಿರುಗೇಟು ಕೊಟ್ಟಿದ್ದಾರೆ.

ರಶ್ಮಿಕಾ ಮಂದಣ್ಣ ಹೇಳಿದ್ದೇನು?

ನನ್ನ ಸಿನಿಮಾ ರಂಗದ ಈ ಅದ್ಭುತ ಪಯಣದಲ್ಲಿ ಇಲ್ಲಿಯವರೆಗೆ ನನ್ನ ಜೊತೆಗಿರುವ ನನ್ನ ಪ್ರೀತಿಯ ಜನರಿಗೆ, ಇದಕ್ಕೆ ಸಂಬಂಧಪಟ್ಟ ಉಳಿದವರಿಗೂ ನಮಸ್ಕಾರಗಳು. ಕಳೆದ 8 ವರ್ಷಗಳಿಂದ ಮಾಧ್ಯಮದ ಒಂದು ವರ್ಗ, ಕೆಲವು ವ್ಯಕ್ತಿಗಳಿಂದ ನನ್ನ ವಿರುದ್ಧ ಸುಳ್ಳು ಮಾಹಿತಿ, ಕಿರುಕುಳ ಆಗುತ್ತಿದೆ, ದಾಳಿ ಮಾಡುತ್ತಿದ್ದಾರೆ.

ನಾನು ಹೇಳಿದ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸುವುದಿಲ್ಲ, ಬದಲಾಗಿ ತಿರುಚಲಾಗಿದೆ. ನಾನು ಆಡದ ಮಾತುಗಳನ್ನು ಸುಳ್ಳು ಕಥೆಗಳನ್ನಾಗಿ ಸೃಷ್ಟಿ ಮಾಡಲಾಗಿದೆ. ಕೇವಲ ವ್ಯೂಸ್, ಎಂಗೇಜ್‌ಮೆಂಟ್‌ಗಾಗಿ ದ್ವೇಷ ಹರಡುವುದನ್ನು ನಾನು ಗಮನಿಸಿದ್ದೇನೆ. ಇವೆಲ್ಲ ನನಗೆ ನೋವು ಕೊಟ್ಟಿದೆ. ಆದರೂ ನಾನು ತಾಳ್ಮೆಯಿಂದ, ಮೌನದಿಂದ ಇದ್ದೆ.

ಪಬ್ಲಿಕ್‌ನಲ್ಲಿದ್ದಾಗ ಕೆಲವೊಮ್ಮೆ ಇಂತಹ ಅನ್ಯಾಯದ ಟೀಕೆಗಳು ಬರುತ್ತವೆ ಎಂದು ನಾನು ಒಪ್ಪಿಕೊಂಡಿದ್ದೆ. ನಾನು ಪ್ರಾಮಾಣಿಕವಾಗಿದ್ದು, ಸುತ್ತ ಮುತ್ತ ಇರುವವರಿಗೆ ಸಂತೋಷದಿಂದ ಇದ್ದರೆ ಎಲ್ಲವೂ ಸರಿಯಾಗುತ್ತದೆ ಎಂದು ನಂಬಿದ್ದೆ. ಕಳೆದ 24 ಗಂಟೆಗಳಲ್ಲಿ ನಡೆದಿರುವುದು ಮಿತಿ ಮೀರಿದೆ, ಇದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ.

ಸುಮಾರು 8 ವರ್ಷಗಳ ಹಿಂದಿನ ಹಳೆಯ ಖಾಸಗಿ ಸಂಭಾಷಣೆಯನ್ನು, ಸಂಬಂಧಪಟ್ಟವರ ಅರಿವಿಲ್ಲದೆ ಅಥವಾ ಅನುಮತಿಯಿಲ್ಲದೆ ರೆಕಾರ್ಡ್ ಮಾಡಿ ರಿಲೀಸ್‌ ಮಾಡಲಾಗಿದೆ. ಆ ಸಂಭಾಷಣೆಯ ಒಂದು ಸಣ್ಣ ಭಾಗವನ್ನು ಉದ್ದೇಶಪೂರ್ವಕವಾಗಿ ಸಂದರ್ಭಕ್ಕೆ ತಕ್ಕಂತೆ ಬಳಸದೆ, ಮತ್ತೊಂದು ವಿವಾದವನ್ನು ಸೃಷ್ಟಿಸಲು ಬಳಸಿಕೊಳ್ಳಲಾಗಿದೆ. ನನ್ನ ವೈಯಕ್ತಿಕ ಜೀವನದ ಇತ್ತೀಚಿನ ಬೆಳವಣಿಗೆ ಜೊತೆಯಲ್ಲೇ ಇದೆಲ್ಲ ನಡೆದಿದೆ.

ಜನರು ಎಷ್ಟು ಕೆಳಮಟ್ಟಕ್ಕೆ ಇಳಿಯಬಲ್ಲರು? ಹೀಗೆ ಮಾಡಿ ನನ್ನ ಕುಟುಂಬವನ್ನು, ಈ ವಿಷಯಕ್ಕೆ ಸಂಬಂಧವಿಲ್ಲದವರನ್ನು ಅನಗತ್ಯವಾಗಿ ಮುಜುಗರಕ್ಕೆ ದೂಡಿದ್ದಾರೆ. ಇದು ಗೌಪ್ಯತೆಯ ಗಂಭೀರ ಉಲ್ಲಂಘನೆ, ದಾರಿ ತಪ್ಪಿಸುವ, ಮಾನಹಾನಿಕರ ವಿಷಯಗಳ ಪ್ರಸಾರವಾಗಿದೆ.

ನಾವು ಜೀವನದಲ್ಲಿ ಮುಂದೆ ಸಾಗುತ್ತ, ಬೆಳೆಯುತ್ತ, ಅರ್ಥಪೂರ್ಣ ಕೆಲಸಗಳನ್ನು ಮಾಡುತ್ತ ಪಾಸಿಟಿವಿಟಿ ಹರಡುತ್ತಿರುವಾಗ, ಕೆಲವರು ಇನ್ನೊಬ್ಬರ ಘನತೆ, ಶಾಂತಿಯ ವೆಚ್ಚದಲ್ಲಿ ದ್ವೇಷ, ವಿವಾದಗಳನ್ನು ಸೃಷ್ಟಿಸುತ್ತಿರುವುದು ದುರದೃಷ್ಟಕರ. ಕಳೆದ ಎಂಟು ವರ್ಷಗಳಿಂದ ನನ್ನ ಮೇಲೆ ದಾಳಿ ಮಾಡಿದಾಗ ನಾನು ಮೌನವಾಗಿದ್ದೆ. ಆದರೆ ಇಂದು ಬೇರೆಯವರನ್ನು ಇದಕ್ಕೆ ಎಳೆದು ತಂದಾಗ, ನಾನು ಸುಮ್ಮನಿರಲು ಸಾಧ್ಯವಿಲ್ಲ.

ಇಲ್ಲಿ ತನಕ ನನಗೆ ತುಂಬಾ ಜನ ಪ್ರೀತಿಯಿಂದ ಸಪೋರ್ಟ್ ಮಾಡಿದ್ದೀರ. ಅವರೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು. ಒಂದ್ ಮಾತು ಈ ಸಮಯದಲ್ಲಿ ಹೇಳಲೇಬೇಕು ಅನ್ನಿದೆ - ಬೇಕಂತ ನಮ್ಮ ಖಾಸಗಿ ಜೀವನದ ಬಗ್ಗೆ ಬೈಕೊಂಡ್ ಮಾತನಾಡೋ ಜನ, ಒಂದ್ ಅರ್ಥ ಮಾಡ್ಕೊಬೇಕು - ಅವರೆಲ್ಲ ನನ್ನ ಜೀವನ ಹೇಗಿರಬೇಕು ಅಂತ ನಿರ್ಧಾರ ಮಾಡಕ್ಕಾಗತ್ತಾ? ನಮ್ ಜೀವನ ನಮ್ಗಲ್ವಾ? ನಮ್ ನಿರ್ಧಾರ ನಾವೇ ತೊಗೋಬೇಕು ಮತ್ತೆ ತೊಗೋತೀವಿ ಕೂಡ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಡಿವೈನ್ ಸ್ಟಾರ್' ಲೈಫಲ್ಲಿ ಏನನ್ನ ಫಾಲೋ ಮಾಡ್ತಿದಾರೆ? ಕಾಂತಾರ ನಟ ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಇದೇನಾ?
ಆ ರೀತಿ ಮಾತಾಡೋದು ತಪ್ಪು; ಇದರ ಪರಿಣಾಮ ಕರ್ಣ ಸೀರಿಯಲ್‌ ಮೇಲೂ ಆಗುತ್ತೆ: Kiran Raj Interview