
ಕನ್ನಡದ ಪ್ಯಾನ್ ಇಂಡಿಯಾ ನಟ, ಡಿವೈನ್ ಸ್ಟಾರ್ ಖ್ಯಾತಿಯ ರಿಷಬ್ ಶೆಟ್ಟಿಯವರ ಈ ಮಟ್ಟದ ಸಕ್ಸಸ್‌ಗೆ ಕಾರಣವೇನು?
ಸ್ಯಾಂಡಲ್‌ವುಡ್‌ನಲ್ಲಿ ಎಲ್ಲ ನಟ-ನಿರ್ದೇಶಕರುಗಳಂತೆ ಇದ್ದ ರಿಷಬ್ ಶೆಟ್ಟಿಯವರು (Rishab Shetty) ಇಂದು ಏರಿರುವ ಎತ್ತರ ಅಸಾಮಾನ್ಯ ಎಂದೇ ಹೇಳಬೇಕು. ಹಂತಹಂತವಾಗಿ ಬೆಳೆದಿದ್ದಾರೆ ಎಂಬುದು ನಿಜವಾದರೂ ರಿಷಬ್ ಶೆಟ್ಟಿಯವರಂತೆ ಹೆಸರುಮಾಡಿರುವ ನಟ-ನಿರ್ದೇಶಕರ ಸಂಖ್ಯೆ ಕನ್ನಡ ಸಿನಿಮಾರಂಗದಲ್ಲಿ ಬಹಳ ಅಪರೂಪ. ಒಂದೋ ನಿರ್ದೇಶಕರಾಗಿ ಅಥವಾ ನಟರಾಗಿ ಹೆಸರು ಮಾಡಿರುವವರು ಇದ್ದಾರೆ. ಕನ್ನಡದ ಮಟ್ಟಿಗೆ ಹೆಸರು ಮಾಡಿದ ಅನೇಕರು ನಮ್ಮಲಿದ್ದರೂ ಜಾಗತಿಕ ಮಟ್ಟದಲ್ಲಿ ಇಷ್ಟು ಖ್ಯಾತಿ ಪಡೆದ ಕನ್ನಡದ ಸಿನಿಮಾತಾರೆ ಮತ್ತೊಬ್ಬರಿಲ್ಲ.
ಅಪ್ಪಟ ಕನ್ನಡದ ಈ ನಟ ಇಂದು ಬೇರೆಯವರ ನಿರ್ದೇಶನದಲ್ಲಿ ನಟಿಸುವುದಕ್ಕೂ ಸೈ, ತಮ್ಮದೇ ಸಿನಿಮಾಗೆ ನಟರಾಗುವುದಕ್ಕೂ ಜೈ. ಇಂಥ 'ದೈವಿಕ ತಾರೆ' ರಿಷಬ್ ಶೆಟ್ಟಿ ಯಶಸ್ಸಿನ ಹಿಂದಿನ ಕೈ ಯಾರದು? ಅವರ ಸಕ್ಸಸ್ ಹಿಂದಿರುವ ಕಾಣದ ಕೈ ಯಾವುದು? ಈ ಬಗ್ಗೆ ಹಲವರು ಚರ್ಚೆ ಮಾಡುತ್ತಿದ್ದಾರೆ.
ಹೌದು, ಯಾರಿಗೂ ಸಿಕ್ಕದ ಇನ್ಯಾರಿಗೂ ದಕ್ಕದ 'ಡಿವೈನ್ ಸ್ಟಾರ್' ಪಟ್ಟ ರಿಷಬ್ ಶೆಟ್ಟಿ ಪಾಲಾಗಿದೆ. ಇದು ಅಷ್ಟು ಸುಲಭಕ್ಕೆ ಸಿಗುವ ಸಂಗತಿಯಲ್ಲ. ರಿಷಬ್ ಶೆಟ್ಟಿಯವರ ಯಶಸ್ಸಿಗೆ ಕಾರಣವನ್ನು ಹುಡುಕಲು ಹೊರಟ ಅನೇಕರು ಸುಸ್ತಾಗಿದ್ದಾರೆ ಎನ್ನಬಹುದು. ಹೆಚ್ಚಿನ ಎಲ್ಲರೂ ತಮ್ಮತಮ್ಮ ಯೋಗ್ಯತೆಗೆ ತಕ್ಕಂತೆ, ತಮ್ಮಲ್ಲಿರುವ ಅಲ್ಪಬುದ್ಧಿಗೆ ತೋಚಿದಂತೆ ಅದನ್ನು ವಿಶ್ಲೇಷಿಸಿ 'ಇಷ್ಟೇ ಇದು' ಎಂಬಂತೆ ಹೇಳುತ್ತಾರೆ. ಆದರೆ ಅದು ನಿಜವಲ್ಲ ಎಂಬುದು ಹೆಚ್ಚಿನ ಜ್ಞಾನ ಇರುವವರಿಗೆ ಅರ್ಥವಾಗುತ್ತದೆ. ಹಾಗಿದ್ದರೆ ನಿಜವಾಗಿ ರಿಷಬ್ ಶೆಟ್ಟಿ ಸಕ್ಸಸ್ ಸೀಕ್ರೆಟ್ ಏನು?
ಕೆಲವರು ಹೇಳುವ ಪ್ರಕಾರ, ಅದು ಅವರ 'ಲೈಫ್ ಪರ್ಪಸ್'.. ಅಂದರೆ ರಿಷಬ್ ಶೆಟ್ಟಿ ಹುಟ್ಟಿರುವುದೇ ಈ ಸಾಧನೆ ಮಾಡೋದಕ್ಕೆ.. ಆದರೆ, ಹಲವರಿಗೆ ಇದೆಲ್ಲಾ ಅರ್ಥವಾಗುತ್ತಿಲ್ಲ, ಅವರು ಹೇಳೋದೇ ಬೇರೆ, ಅವೆಲ್ಲಾ ಕೇವಲ ವ್ಯಾವಹಾರಿಕ.. ಇನ್ನು, ರಿಷಬ್ ಶೆಟ್ಟಿಯವರು ಮಾಡುತ್ತಿರುವ ಬಹಿರಂಗ ಧಾರ್ಮಿಕ ಆಚರಣೆ ಅವರ ಈ ಪರಿಯ ಯಶಸ್ಸಿಗೆ ಕಾರಣವೋ? ರಿಷಬ್ ಶೆಟ್ಟಿಯವರ ಆಂತರಿಕ ನಂಬಿಕೆ ಹಾಗೂ ಸಾಧನೆ ಕಾರಣವೋ? ಹಲವರು ಹಲವು ವಿಧದಲ್ಲಿ ಯೋಚಿಸಿ, ಚರ್ಚೆ ಮಾಡುತ್ತಿದ್ದರೂ ಯಾರಿಗೂ ಅರ್ಥವಾಗದ ಸಂಗತಿ ಎಂದರೆ- 'ಇರಬಹುದೇನೋ, ಗೊತ್ತಿಲ್ಲ'..
ಹೌದು, ರಿಷಬ್ ಶೆಟ್ಟಿಯವರು ಕೇವಲ ನಟ-ನಿರ್ದೇಶಕರಲ್ಲ. ಅವರಿಗೊಂದು ಘನವಾದ ತೂಕವಿದೆ, ಅವರ ವ್ಯಕ್ತಿತ್ವದಲ್ಲಿ ಅಗಾಧವಾದ, ಅಪರಿಮಿತವಾದ ಜ್ಞಾನವಿದೆ. ಮಾತುಕತೆಯಲ್ಲಿ ಸಾಮಾನ್ಯ ಜ್ಞಾನವನ್ನೂ ಮೀರಿದ ಪ್ರೌಢತ್ವ ಹಾಗೂ ಆಧ್ಯಾತ್ಮಿಕತೆ ಇದೆ. ಅವರ ಸುತ್ತ ಒಂದು ಅದ್ಭುತ ಪ್ರಭಾವಳಿ (ಪ್ರಭಾವ ವಲಯ) ಇದೆ. ಅವೆಲ್ಲಾ ಸುಮ್ಮನೆ ಬರುವುದಿಲ್ಲ. ಹಾಗಿದ್ದರೆ ರಿಷಬ್ ಶೆಟ್ಟಿ ದಿನಚರಿಯಲ್ಲಿ ಏನನ್ನು ಫಾಲೋ ಮಾಡ್ತಾರೆ? ಅವರ ಧಾರ್ಮಿಕ ಆಚರಣೆಗಳೇನು? ಅವರು ಪಾಲಿಸುತ್ತಿರುವ ಆಧ್ಯಾತ್ಮಿಕ ಕ್ರಿಯೆಗಳೇನು?
ಮೇಲ್ನೋಟಕ್ಕೆ ಗೊಚರಿಸುವ ಹಲವು ಸಂಗತಿಗಳು ರಿಷಬ್ ಶೆಟ್ಟಿ ಹಾಗೂ ಅವರ ಕುಟುಂಬದಲ್ಲಿದೆ ಅನ್ನೋದನ್ನು ಒಪ್ಪಲೇಬೇಕು. ಅದು- ಅವರ ಯಶಸ್ಸಿನಲ್ಲಿ ಪತ್ನಿ ಪ್ರಗತಿ ಶೆಟ್ಟಿಯವರ ಪಾಲು ಇದೆ, ಅಪ್ಪ-ಅಮ್ಮನ ಆಶೀರ್ವಾದವಿದೆ, ಸ್ನೇಹಿತರ ಸಹಕಾರವಿದೆ, ದೇವರು-ದೈವಗಳ ಕೃಪೆಯಿದೆ ಎಂಬುವುದೆಲ್ಲವೂ ಸತ್ಯ ಸಂಗತಿಗಳೇ ಆಗಿವೆ. ಜನಸಾಮಾನ್ಯರು ಈ ಎಲ್ಲದರ ಬಗ್ಗೆಯೂ ಚರ್ಚೆಯಲ್ಲಿ ಮಾತನಾಡುತ್ತಿದ್ದಾರೆ. ಆದರೆ, ಅವೆಲ್ಲವನ್ನೂ ಬಿಟ್ಟು ಬೇರೆ ಏನಿದೆ ಅನ್ನೋದನ್ನು ಯಾರಿಗೂ ಸರಿಯಾಗಿ ಹೇಳಲು, ಅದು 'ಇದೇ' ಎನ್ನಲು ಸಾಧ್ಯವಾಗುತ್ತಿಲ್ಲ.
ಹೌದು, ರಿಷಬ್ ಶೆಟ್ಟಿಯವರ ಯಶಸ್ಸಿನ ಗುಟ್ಟು ಅವರಿಗೆ ಮಾತ್ರ ಗೊತ್ತು ಅನ್ನೊದೇ ಒಳ್ಳೆಯದು. ಈ ಸೀಕ್ರೆಟ್ ಅವರ ಮನೆಯವರಿಗೆ, ಆಪ್ತರಿಗೆ ಗೊತ್ತಿರಬಹುದು. ಅಥವಾ, ರಿಷಬ್ ಶೆಟ್ಟಿ ಸೇರಿದಂತೆ ಯಾರೊಬ್ಬರೂ ಆ ಬಗ್ಗೆ ಯೋಚನೆಯನ್ನೂ ಮಾಡದಿರಬಹುದು. ಜೀವನವನ್ನು ಬಂದಂತೆ ಡಿವೈನ್ ಸ್ಟಾರ್ ಹಾಗೂ ಫ್ಯಾಮಿಲಿ ನಡೆಸುತ್ತಿರಬಹುದು. ಅಥವಾ ಅವರೇ ಸ್ವತಃ ಯಾವತ್ತೋ ಒಂದು ದಿನ ಎಲ್ಲವನ್ನೂ ಹೇಳಬಹುದು.
ಒಟ್ಟಿನಲ್ಲಿ ಕನ್ನಡ ಸಿನಿಮಾರಂಗಕ್ಕೊಬ್ಬರು 'ಡಿವೈನ್ ಸ್ಟಾರ್' ಸಿಕ್ಕಿದ್ದಾರೆ. ಪ್ರಪಂಚವೇ ತಿರುಗಿ ನೋಡುವಂತೆ ಬೆಳೆದಿರುವ ಒಬ್ಬರು ನಟ-ನಿರ್ದೇಶಕರು ದೊರಕಿದ್ದಾರೆ ಎಂಬ ಸಂಗತಿಯನ್ನೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ನೀವೇನಂತೀರಾ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.