ಮಕ್ಕಳು ತಮ್ಮ ಜೀವನದಲ್ಲಿ ಎಷ್ಟು ಮುಖ್ಯ, ಜೀವನ ಯಾವ ರೀತಿ ಬದಲಾಗಿತ್ತು ಎಂದು ನೆನಪಿರಲಿ ಪ್ರೇಮ್ ಹೇಳಿದ್ದಾರೆ.
ಕನ್ನಡ ಚಿತ್ರರಂಗದ ಲವ್ಲಿ ಸ್ಟಾರ್ ಪ್ರೇಮ್ ಮತ್ತು ಪತ್ನಿ ಜ್ಯೋತಿ ಲವ್ ಸ್ಟೋರಿ ಈಗಾಗಲೆ ಎಲ್ಲರಿಗೂ ಗೊತ್ತಿದೆ. ಹಲವು ವರ್ಷಗಳ ಕಾಲ ಸಿನಿಮಾರಂಗದಲ್ಲಿ ಕಷ್ಟ ನೋಡಿರುವ ಪ್ರೇಮ್‌ಗೆ ಅದೃಷ್ಟನೇ ಮಕ್ಕಳು ಎಂದು ಹೇಳಿಕೊಂಡಿದ್ದಾರೆ. ಗುರು ಶಿಷ್ಯರು ಚಿತ್ರದ ಮೂಲಕ ಮಗ ಬಣ್ಣದ ಪ್ರಪಂಚಕ್ಕೆ ಕಾಲಿಟ್ಟರೆ, ಟಗರು ಪಲ್ಯ ಚಿತ್ರದ ಮೂಲಕ ಮಗಳು ಎಂಟ್ರಿ ಕೊಟ್ಟರು. ಮಕ್ಕಳನ್ನು ಶೂಟಿಂಗ್, ಫೋಟೋಶೂಟ್ ಎಂದು ಪತ್ನಿ ಜ್ಯೋತಿ ಕೂಡ ಬ್ಯುಸಿಯಾಗಿದ್ದಾರೆ.
'ನನ್ನ ಮಗಳು ನನ್ನ ಅದೃಷ್ಟ ದೇವತೆ. ಆಕೆ ಹುಟ್ಟಿದಾಗ ನನ್ನ ಜೇಬಿನಲ್ಲಿ 300 ರೂಪಾಯಿ ಇತ್ತು. ಮಗಳು ಹುಟ್ಟಿದ್ದಾಳೆ ಅಂತ 300 ರೂಪಾಯಿಂದ ಸ್ವೀಟ್ ಹಂಚಬೇಕಾ ಅಥವಾ 300 ರೂಪಾಯಿ ಆಸ್ಪತ್ರೆ ಫೀಸ್ ಕಟ್ಟಬೇಕಾ ಅಂತ ಗೊತ್ತಾಗದ ಸಮಯ. ತುಂಬಾ ಕಷ್ಟ ಪಡುತ್ತಿದ್ದೆ ತುಂಬಾ ಫೈಟ್ ಮಾಡುತ್ತಿದ್ದೆ ಲೆಕ್ಕವಿಲ್ಲದಷ್ಟು ಅವಮಾನಗಳನ್ನು ಎದುರಿಸುತ್ತಿದ್ದ ಸಮಯದಲ್ಲಿ ಹುಟ್ಟಿದ್ದಾಳೆ. ಹೊರಗಡೆ ಏನೇ ನೋವಿದ್ದರೂ ಹಿಂದೆ ಅವಮಾನ ಇದ್ದರೂ ಮಗಳ ಮುಖ ನೋಡಿದ ತಕ್ಷಣ ಮರೆತು ಹೋಗುತ್ತಿದ್ದೆ' ಎಂದು ವೀಕೆಂಡ್ ವಿತ್ ರಮೇಶ್ ಹಾಟ್ ಸೀಟ್‌ನಲ್ಲಿ ಕುಳಿತಿರುವಾಗ ಪ್ರೇಮ್ ಮಾತನಾಡಿದ್ದಾರೆ.
ಮಕ್ಕಳು ಕೂಡ ನಮ್ಮಿಬ್ಬರ ಮಧ್ಯೆ ಮಲಗಬಾರದು; ಪತ್ನಿ ಹಠದ ಬಗ್ಗೆ ಪ್ರೇಮ್
ಮಗ ಹುಟ್ಟಿದ ಸಮಯದಲ್ಲಿ ಫುಲ್ ಉಲ್ಟಾ ಆಗಿತ್ತು. ಅವನು ಹುಟ್ಟಿದಾಗ ನನ್ನ ಎರಡೂ ಜೇಬು ತುಂಬಾ ಹಣವಿತ್ತು. ಜೊತೆ ಜೊತೆಯಲಿ ಸಿನಿಮಾ ನಿರ್ಮಾಣ ಮಾಡಿದವರಲ್ಲಿ ವಿಜಯ್ ಕಿರಗಂದೂರ್ ಸರ್ ಕೂಡ ಒಬ್ಬರು ಆಗ ಸಿನಿಮಾ ಅಡ್ವಾನ್ಸ್ ಅಂತ ಎರಡುವರೆ ಲಕ್ಷ ಹಣ ಕೊಟ್ಟಿದ್ದರು. ಇವನು ಹುಟ್ಟಿದಾಗಿಂದ ಹಣ ನೋಡುತ್ತಿರುವೆ. ಮಗಳು ಸಂತೋಷ ತಂದುಕೊಳ್ಳು ಮಗ ಐಶ್ವರ್ಯ ತಂದುಕೊಟ್ಟ ಎಂದು ಪ್ರೇಮ್ ಹೇಳಿದ್ದಾರೆ.