
ವಿಶೇಷ ವಿಷಯಗಳ ಮೂಲಕವೇ ಸುದ್ದಿಯಾಗೋ ಸ್ಯಾಂಡಲ್‌ವುಡ್ ನಟಿ ರಮ್ಯಾ ಈಗ ಮತ್ತೊಂದು ಶಾಕಿಂಗ್ ಸುದ್ದಿ ಕೊಟ್ಟಿದ್ದಾರೆ. ಮುದ್ದೆ, ಮಟನ್ ಸಾರು ಚಪ್ಪರಿಸಿ ತಿನ್ನೋ ಮಂಡ್ಯದ ಹುಡುಗಿ ಇನ್ಮುಂದೆ ನಾನ್‌ವೆಜ್ ತಿನ್ನಲ್ಪಂತೆ.
ನಟಿ ನಾನ್‌ವೆಜ್ ತಿನ್ನೋಕೆ ಡಿಸೈಡ್ ಮಾಡಿದ್ದಾರೆ ಈಕೆ. ವರ್ಷದ ಕೊನೆಗೆ ಇಂತಹ ನಿರ್ಧಾರ ತೆಗೆದುಕೊಂಡಿರೋ ನಟಿ, ಇದು ನಾನು ತೆಗೆದುಕೊಂಡಿರೋ ಬೆಸ್ಟ್ ನಿರ್ಧಾರ ಎಂದಿದ್ದಾರೆ.
ಸಮಂತಾ ಕಾರ್ಯಕ್ರಮ ನಡೆಸೋದಕ್ಕೆ ಪಡೆಯೋ ಸಂಭಾವನೆ ಎಷ್ಟು ಗೊತ್ತಾ..?
ನಾನ್‌ವೆಜ್‌ನಿಂದ ವೆಜ್‌ಗೆ ಶಿಫ್ಟ್ ಆಗೋದು ಸ್ವಲ್ಪ ಕಷ್ಟಾನೆ. ಆದ್ರೆ ಇಂತಹದ್ದೊಂದು ದೊಡ್ಡ ನಿರ್ಧಾರ ಮಾಡಿದ್ದಾರೆ ನಟಿ. ಈ ಸಂಬಂಧ ವಿಡಿಯೋ ಕೂಡಾ ಶೇರ್ ಮಾಡಿಕೊಂಡಿದ್ದಾರೆ.
ಈ ವರ್ಷದ ಆರಂಭದಲ್ಲಿ ನಾನು ಸಸ್ಯಾಹಾರಿಯಾಗಿ ಮಾರ್ಪಟ್ಟಿದ್ದೇನೆ ಮತ್ತು ಇದು ನಾನು ಮಾಡಿದ ಅತ್ಯುತ್ತಮ ನಿರ್ಧಾರ. ನಮಗೆ ನಿರಂತರವಾಗಿ ಪ್ರೋಟಿನ್‌ಗೆ ಮಾಂಸ ಬೇಕು ಎಂದು ಹೇಳಲಾಗುತ್ತದೆ. ಸ್ನಾಯು ಇತ್ಯಾದಿಗಳನ್ನು ನಿರ್ಮಿಸಲು ನಿಮಗೆ ಮಾಂಸದಿಂದ ಪ್ರೋಟೀನ್ ಬೇಕು. ಅದು ನಿಜವೆಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ. ನಾನು ಇದಿಲ್ಲದೆಯೂ ಚೆನ್ನಾಗಿದ್ದೆ. ನನಗೆ ಐಸ್‌ಕ್ರೀಮ್ ಇಷ್ಟ. ಮಾಂಸಾಹಾರಕ್ಕೆ ಪರ್ಯಾಯಗಳಿವೆ ಎಂದು ನನಗೆ ತಿಳಿದಿದೆ ಎಂದಿದ್ದಾರೆ ನಟಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.