ರಕ್ಷಿತಾ ಪ್ರೇಮ್‌ಗೆ ಅವಮಾನ; ಶೂಟಿಂಗ್‌ ಅರ್ಧಕ್ಕೆ ನಿಲ್ಲಿಸಿ ಸೆಟ್‌ನಿಂದ ಹೊರ ನಡೆದ ಘಟನೆ ತೆರೆದಿಟ್ಟ ನಟಿ!

Published : Sep 11, 2024, 04:37 PM IST
ರಕ್ಷಿತಾ ಪ್ರೇಮ್‌ಗೆ ಅವಮಾನ; ಶೂಟಿಂಗ್‌ ಅರ್ಧಕ್ಕೆ ನಿಲ್ಲಿಸಿ ಸೆಟ್‌ನಿಂದ ಹೊರ ನಡೆದ ಘಟನೆ ತೆರೆದಿಟ್ಟ ನಟಿ!

ಸಾರಾಂಶ

ತಂದೆ ಅಗಲಿದ ಮೂರೇ ದಿನಕ್ಕೆ ತಮ್ಮ ಜೀವನದಲ್ಲಿ ನಡೆದ ಮರೆಯಲಾಗದ ಘಟನೆಯನ್ನು ರಿವೀಲ್ ಮಾಡಿದ ನಟಿ ರಕ್ಷಿತಾ ಪ್ರೇಮ್.

ಸ್ಯಾಂಡಲ್‌ವುಡ್‌ ಡ್ರೀಮ್ ಗರ್ಲ್‌, ಬೋಲ್ಡ್‌ ನಟಿ ಆಂಡ್ ಕ್ರೀಜಿ ಕ್ವೀನ್ ರಕ್ಷಿತಾ ಸೈನ್ ಮಾಡಿದ ಪ್ರತಿಯೊಂದು ಪ್ರಾಜೆಕ್ಟ್‌ ಸೂಪರ್ ಹಿಟ್ ಆಂಡ್ ಬಾಕ್ಸ್ ಆಫೀಸ್ ಕಲೆಕ್ಷನ್. ಇದುವರೆಗೂ ಸಿನಿಮಾ ತಂಡದಿಂದ ಅಥವಾ ಶೂಟಿಂಗ್‌ ಸೆಟ್‌ನಲ್ಲಿ ಎಂದೂ ಕಹಿ ಘಟನೆ ನಡೆದಿಲ್ಲ ಎಂದಿರುವ ರಕ್ಷಿತಾ ತಮ್ಮ ಜೀವನದ ಮರೆಯಲಾಗದ ಘಟನೆಯನ್ನು ರಿವೀಲ್ ಮಾಡಿದ್ದಾರೆ. ತಂದೆ ಕಳೆದು ಕೊಂಡ ಮೂರೇ ದಿನಕ್ಕೆ ಶೂಟಿಂಗ್‌ ಸೆಟ್‌ಗೆ ಕಾಲಿಟ್ಟಾಗ ಖ್ಯಾತ ನಿರ್ದೇಶಕರು ಮಾಡಿದ ಅವಮಾನವನ್ನು ಇನ್ನೂ ಮರೆತಿಲ್ಲ ಅಂತಾರೆ ನಟಿ...

'ಕಳೆದ 20 ವರ್ಷಗಳಿಂದ ರಾಕೇಶ್‌ ನನ್ನ ಅಸಿಸ್ಟೆಂಟ್ ಆಗಿದ್ದಾರೆ..ಅಂದಿನಿಂದ ನನ್ನ ಜರ್ನಿಯನ್ನು ನೋಡಿಕೊಂಡು ಬಂದಿದ್ದಾರೆ. 2004ರಲ್ಲಿ ನನ್ನ ತಂದೆ ಆರೋಗ್ಯ ಗಂಭೀರವಾಗಿತ್ತು ತುಂಬಾ ಬ್ಲೀಟಿಂಗ್ ಆಗುತ್ತಿದ್ದ ಕಾರಣ ಸ್ನೇಹಿತರು ಪ್ಲೇಟ್ಲೆಟ್‌ ಕೊಡುತ್ತಿದ್ದರು. ಆಗ ನನ್ನ ಕೈಯಲ್ಲಿ ದೊಡ್ಡ ಸಿನಿಮಾಗಳ ಪ್ರಾಜೆಕ್ಟ್‌ ಇತ್ತು, ಈಗಲೂ ನೆನಪಿದೆ ಚಿತ್ರೀಕರಣ ಮುಗಿಸಿಕೊಂಡು ಅದೇ ಮೇಕಪ್‌ನಲ್ಲಿ ನನ್ನ ತಂದೆಯನ್ನು ನೋಡಲು ಆಸ್ಪತ್ರೆಗೆ ಹೋಗುತ್ತಿದ್ದೆ. ಕಷ್ಟ ಪಟ್ಟು ಉಸಿರಾಡುತ್ತಿರುವುದು ನನಗೆ ಐಸಿಯುಯಿಂದ ಹೊರಗೆ ಕೇಳಿಸುತ್ತಿತ್ತು. ಅವರು ಅಗಲಿದ ದಿನ ಅವರ ಮುಖವನ್ನು ಗಮನಿಸುತ್ತಿದ್ದೆ ಮೂಗಿನಿಂದ ರಕ್ತ ಬರುತ್ತಿತ್ತು...ಯಾರಾದರೂ ಟಿಶು ಪೇಪರ್ ಕೊಡಿ ಎಂದು ಹೊರೆಸುತ್ತಿದ್ದೆ. ಆಗ ಅರ್ಥವಾಗಿತ್ತು ಇದು ಜೀವನ ಅಂದ್ರೆ....ಏನೇ ಸ್ಟಾರ್ ಸಾಧನೆ ಮಾಡಿದರೂ ಸಾಯುವಾಗ ಏನೂ ಎತ್ತಿಕೊಂಡು ಹೋಗಲ್ಲ.  ತಂದೆ ಅಗಲಿದ ಮೂರನೇ ದಿನಕ್ಕೆ ಹಾಲು ತುಪ್ಪ ಹಾಕಿ ಶೂಟಿಂಗ್‌ ಮಾಡಲು ಹೋಗಿದ್ದೆ ಆಗ ಅಲ್ಲಿದ್ದ ಡೈರೆಕ್ಟ್‌ ಒಬ್ಬರು ' ಏನು ಅವಳು ಅಪ್ಪ ಸತ್ತೋದರೆ ನಾವು ಶೂಟಿಂಗ್ ನಿಲ್ಲಿಸಬೇಕಾ? ಪ್ರಡ್ಯೂಸರ್ ದುಡ್ಡು ಹೋಗುತ್ತಿಲ್ವಾ?' ಎಂದು ಹೇಳಿದರು. ಅದೇ ಮೊದಲು ನಾನು ಶೂಟಿಂಗ್‌ ಸೆಟ್‌ನಿಂದ ಹೊರ ನಡೆದಿದ್ದು, ನಿರ್ಮಾಪಕರಿಗೆ ತಕ್ಷಣವೇ ಕರೆ ಮಾಡಿ ಸಿನಿಮಾ ಮಾಡುವುದಿಲ್ಲ ಎಂದು ಹೇಳಿದೆ' ಎಂದು ರ್ಯಾಪಿಡ್ ರಶ್ಮಿಕಾ ಯೂಟ್ಯೂಬ್ ಚಾನೆಲ್‌ನಲ್ಲಿ ರಕ್ಷಿತಾ ಪ್ರೇಮ್ ಮಾತನಾಡಿದ್ದಾರೆ.

ಒಪ್ಪಿಗೆಯಿಂದ ಡಿವೋರ್ಸ್ ಕೊಟ್ಟಿಲ್ಲ, ಸಮಯ ಕಳೆದಂತೆ ಸತ್ಯ ಹೊರ ಬರಲಿದೆ; ನಟ ಜಯರಾಂ ವಿರುದ್ಧ ತಿರುಗಿಬಿದ್ದ ಪತ್ನಿ

ನಮ್ಮ ಭಾವನೆಗಳು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ ನಮ್ಮನ್ನು ನಾವೇ ಅರ್ಥ ಮಾಡಿಕೊಳ್ಳಬೇಕು. ಆಗ ಅರ್ಥವಾಯ್ತು ನಾನು ಅಂದುಕೊಂಡಿರುವುದಕ್ಕಿಂತ ಧೈರ್ಯವಿದೆ, ನಾನು ನೋಡುವುದಕ್ಕಿಂತ ಗಟ್ಟಿಯಾಗಿದ್ದೀನಿ ಅಷ್ಟೇ ಅಲ್ಲ ನಾನು ಯೋಚನೆ ಮಾಡುವುದಕ್ಕಿಂತ ಹೆಚ್ಚಾಗಿ ಸ್ಮಾರ್ಟ್ ಆಗಿದ್ದೀನಿ ಎಂದಿದ್ದಾರೆ ರಕ್ಷಿತಾ ಪ್ರೇಮ್. 

ಶೂಟಿಂಗ್ ಮನೆ ಮಾಡಲು ಹೋಗಿ 70 ಲಕ್ಷ ಲಾಸ್, ಕೊನೆಗೂ ಸತ್ಯ ಬಿಚ್ಚಿಟ್ಟ ಅನುಪಮಾ ಗೌಡ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಆರ್ಯನ್ ಖಾನ್‌ಗೆ ಝೈದ್ ಖಾನ್ ಸಪೋರ್ಟ್; ಆದ್ರೂ ಪಬ್ಲಿಕ್‌ ಪ್ಲೇಸ್‌ನಲ್ಲಿ 'ಮಿಡ್ಲ್ ಫಿಂಗರ್' ಎತ್ತಿದ್ದು ತಪ್ಪು ಅಂತಿರೋ ನೆಟ್ಟಿಗರು!
ರಿಷಬ್ ಶೆಟ್ಟಿ ದೈವದ ಮುಂದೆ ಅತ್ಬಿಟ್ರಾ? ಅಳಬೇಡ ಅಂತ ಸಂತೈಸಿದ್ದೇಕೆ ಪಂಜುರ್ಲಿ ದೈವ?