ಮತ್ತೆ ಬರಲಿದೆ ಅಮೆರಿಕಾ ಅಮೆರಿಕಾ ಸಿನಿಮಾ; ರಮೇಶ್ ಬದಲು ಪಾರ್ಟ್-2ದಲ್ಲಿ ಯಾರಿದ್ದಾರೆ?

Published : Sep 11, 2024, 03:37 PM ISTUpdated : Sep 11, 2024, 04:06 PM IST
ಮತ್ತೆ ಬರಲಿದೆ ಅಮೆರಿಕಾ ಅಮೆರಿಕಾ ಸಿನಿಮಾ; ರಮೇಶ್ ಬದಲು ಪಾರ್ಟ್-2ದಲ್ಲಿ ಯಾರಿದ್ದಾರೆ?

ಸಾರಾಂಶ

ನಾಗತಿಹಳ್ಳಿಯವರು ಅಂದು ಈ ಚಿತ್ರಕ್ಕೆ 16ಜನರ ಟೀಮ್ ಕಟ್ಟಿಕೊಂಡು 45 ದಿನಗಳ ಕಾಲ ಶೂಟಿಂಗ್ ಮಾಡಿದ್ದರು. ಕನ್ನಡ ಪ್ರೇಕ್ಷಕರಿಗೆ ಅಮೆರಿಕಾ ದೇಶವನ್ನು ಚೆನ್ನಾಗಿ ಪರಿಚಯಿಸಿದ್ದರು. ಅಮೆರಿಕಾ ನೋಡದಿದ್ದ ಅದೆಷ್ಟೋ ಜನರು ಈ ಸಿನಿಮಾ..

ನಾಗತಿಹಳ್ಳಿ ಚಂದ್ರಶೇಖರ್ (Nagathihalli Chandrashekhar) ಅವರು ಮತ್ತೆ ಸುದ್ದಿಯಲ್ಲಿದ್ದಾರೆ. ಕಾರಣ, ಅವರೀಗ 'ಅಮೆರಿಕಾ ಅಮೆರಿಕಾ' ಸಿನಿಮಾದ ಸೀಕ್ವೆಲ್ ಅಂದ್ರೆ 'ಪಾರ್ಟ್ 2' ಶೂಟಿಂಗ್ ನಡೆಸುತ್ತಿದ್ದಾರಂತೆ. ಈ ಸಿನಿಮಾ ಮೂಲಕ ಕನ್ನಡದ ಎವರ್‌ಗ್ರೀನ್ ಸಿನಿಮಾ 'ಮಂಗಾರು ಮಳೆ'ಯನ್ನು ಮತ್ತೊಮ್ಮೆ ನೆನಪಿಸುವಂತೆ ಮಾಡಲಿದ್ದಾರೆ ನಾಗತಿಹಳ್ಳಿಯವರು ಎನ್ನಲಾಗ್ತಿದೆ. 1997ರಲ್ಲಿ ಅಮೆರಿಕಾ ಅಮೇರಿಕಾ (America America) ಸಿನಿಮಾ ತೆರೆಗೆ ಬಂದಿತ್ತು. ಅದರಲ್ಲಿ ರಮೇಶ್ ಅರವಿಂದ್, ಹೇಮಾ ಪಂಚಮುಖಿ ಹಾಗೂ ಅಕ್ಷಯ್ ಆನಂದ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. 

ನಾಗತಿಹಳ್ಳಿಯವರು ಅಂದು ಈ ಚಿತ್ರಕ್ಕೆ 16ಜನರ ಟೀಮ್ ಕಟ್ಟಿಕೊಂಡು 45 ದಿನಗಳ ಕಾಲ ಶೂಟಿಂಗ್ ಮಾಡಿದ್ದರು. ಕನ್ನಡ ಪ್ರೇಕ್ಷಕರಿಗೆ ಅಮೆರಿಕಾ ದೇಶವನ್ನು ಚೆನ್ನಾಗಿ ಪರಿಚಯಿಸಿದ್ದರು. ಅಮೆರಿಕಾ ನೋಡದಿದ್ದ ಅದೆಷ್ಟೋ ಜನರು ಈ ಸಿನಿಮಾ ಮೂಲಕ ಅಮೆರಿಕಾ ನೋಡಿ ಖುಷಿಯಾಗಿದ್ದರು. ಮನೋಮೂರ್ತಿ ಅವರು ತಮ್ಮ ಮೊದಲ ಚಿತ್ರದ ಸಂಗೀತ ನಿರ್ದೇಶನದಲ್ಲೇ ಕನ್ನಡಿಗರ ಮನಸ್ಸನ್ನು ಗೆದ್ದುಬಿಟ್ಟಿದ್ದರು.  ಇಂದಿಗೂ ಕೂಡ ಅಮೆರಿಕಾ ಅಮೆರಿಕಾ ಚಿತ್ರದ ಹಾಡುಗಳನ್ನು ಇಷ್ಟಪಟ್ಟು ಕೇಳುವವರಿದ್ದಾರೆ. ಸಂಗೀತ ಸಂಜೆಯಲ್ಲಿ, ಆರ್ಕಸ್ಟ್ರಾದಲ್ಲಿ ಆ ಹಾಡುಗಳು ಬರುತ್ತಲೇ ಇರುತ್ತವೆ. 

ಅಣ್ಣಾವ್ರಿಗಿತ್ತು ಬಾಲಿವುಡ್ ನಂಟು, ಡಾ ರಾಜ್‌ ಚಿತ್ರಕ್ಕೆ ಕೆಲಸ ಮಾಡಿದ್ರು ಸಲ್ಲೂ ತಂದೆ ಸಲೀಮ್!

ಅದಾದ ಬಳಿಕ ಕೂಡ ನಾಗತಿಹಳ್ಳಿ ಚಂದ್ರಶೇಖರ್ ಅವರು 'ಅಮೃತಧಾರೆ' ಸಿನಿಮಾ ಮೂಲಕ ಮತ್ತೆ ಗೆದ್ದು ಬೀಗಿದ್ದರು. ಆದರೆ, ನಂತರ ಮಾಡಿದ ಸಿನಿಮಾಗಳು ನಾಗತಿಹಳ್ಳಿವರನ್ನು ಅಷ್ಟಾಗಿ ಕೈ ಹಿಡಯಲಿಲ್ಲ. ಇದೀಗ, ಬರೋಬ್ಬರಿ 27 ವರ್ಷಗಳ ಬಳಿಕ ಮತ್ತೆ ಅದೇ 'ಅಮೇರಿಕಾ ಅಮೇರಿಕಾ' ಚಿತ್ರದ ಎರಡನೇ ಭಾಗವನ್ನು ತೆರೆಗೆ ತರುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್, ಈ ಸುದ್ದಿ ಕೇಳಿ ಸ್ಯಾಂಡಲ್‌ವುಡ್ ಸಿನಿಪ್ರಿಯರು ಸಖತ್ ಖುಷಿಯಾಗಿದ್ದಾರೆ. 

ಆದರೆ, ಸಿಕ್ಕ ಮಾಹಿತಿ ಪ್ರಕಾರ, ಮುಂಬರುವ 'ಅಮೆರಿಕಾ ಅಮೆರಿಕಾ 2' ಚಿತ್ರದಲ್ಲಿ 'ಭಾಗ 1' ಇದ್ದ ನಟನಟಿಯರು ಇರುವುದಿಲ್ಲ ಎನ್ನಲಾಗಿದೆ. ನಟ ರಮೇಶ್ ಅರವಿಂದ್ ಹಾಗು ಹೇಮಾ ಪಂಚಮುಖಿ ಮುಂಬರಉವ ಚಿತ್ರದಲ್ಲಿ ನಟಿಸುತ್ತಿಲ್ಲ. ಹೀಗಾಗಿ ಕೆಲವರಿಗೆ ನಿರಾಸೆ ಆಗಬಹುದು. ಆದರೆ, ಹಳೆಯ ನೀರು ಕೊಚ್ಚಿ ಹೋಗಿ ಹೊಸ ನೀರು ಬರುವುದು ನಿಸರ್ಗ ನಿಯಮ ಎಂದುಕೊಂಡರೆ ಆಯ್ತು, ಹೊಸಬರನ್ನು ವೆಲ್‌ಕಮ್ ಮಾಡಬಹುದು ಅಲ್ವಾ..! ಏನಂತೀರಾ?

ಬ್ಯೂಟಿ ಸೀಕ್ರೆಟ್ ಬಿಚ್ಚಿಟ್ಟ ಕನ್ನಡದ ಸ್ವೀಟಿ, ಅಂತೂ ಇಂತೂ ಬಾಯ್ಬಿಟ್ರು ರಾಧಿಕಾ ಕುಮಾರಸ್ವಾಮಿ!

 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಗಡ್‌ ಕಾಪ್‌, ಮ್ಯಾಕ್ಸಿಮಮ್‌ ಮಾಸ್‌.. 'ಮಾರ್ಕ್' ಕಥೆ ಬಗ್ಗೆ ಸ್ಫೋಟಕ ಸತ್ಯ ಬಿಚ್ಚಿಟ್ಟ ಕಿಚ್ಚ ಸುದೀಪ್!
ಸುದೀಪ್​ಗೆ ಸ್ತ್ರೀದೋಷ ಇದೆಯಾ? ಬಹು ದೊಡ್ಡ ರಹಸ್ಯ ರಿವೀಲ್​ ಮಾಡಿದ ಕಿಚ್ಚ ಹೇಳಿದ್ದೇನು?