
ಬೆಂಗಳೂರು (ಫೆ.28) ನಟಿ ರಾಗಿಣಿ ದ್ವಿವೇದಿ ಸ್ಯಾಂಡಲ್‌ವುಡ್ ಮೂಲಕ ಸದ್ದು ಮಾಡಿ ಇದೀಗ ಮಲೆಯಾಳಂ ಸೇರಿದಂತೆ ಇತರ ಭಾಷೆಗಳಲ್ಲೂ ನಟಿಸುತ್ತಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಪ್ರಕರಣದ ವಿವಾದ ಸುತ್ತಿಕೊಂಡ ಬಳಿಕ ರಾಣಿಗಿ ದ್ವಿವೇದಿ ಸ್ಯಾಂಡಲ್‌ವುಡ್‌ನಿಂದ ಹೊರಗುಳಿಯಬೇಕಾಗಿ ಬಂದಿತ್ತು. ರಾಗಿಣಿ ದ್ವಿವೇದಿ ತಂದೆ ಕರ್ನಲ್ ರಾಕೇಶ್ ಕುಮಾರ್ ದ್ವಿವೇದಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ಅಧಿಕಾರಿ. ವಿಶೇಷ ಅಂದರೆ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಅಧಿಕಾರಿ. ತನ್ನ ಬೆಟಾಲಿಯನ್ ಪಡೆಯನ್ನು ಯಶಸ್ವಿಯಾಗಿ ಮುನ್ನಡೆಸಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ ವೀರ ಸೇನ್ಯಾಧಿಕಾರಿ. ಇದೀಗ ರಾಗಿಣಿ ತಂದೆ ಕಾರ್ಗಿಲ್ ಯುದ್ಧದ ಸಂದರ್ಭದಲ್ಲಿನ ಘಟನೆಗಳನ್ನು ಸಂದರ್ಶನದಲ್ಲಿ ಹೇಳಿದ್ದಾರೆ.
ತುಹಿನಂಶು ಜೊತೆಗಿನ ಸಂದರ್ಶನದಲ್ಲಿ ರಾಗಿಣಿ ದ್ವಿವೇದಿ ತನ್ನ ಬಾಲ್ಯದ ಘಟನೆ ಹೇಳಿದ್ದಾರೆ. ರಾಗಿಣಿ ಹುಟ್ಟಿ ಬೆಳೆದಿದ್ದು ಆರ್ಮಿ ಕ್ಯಾಂಪಸ್‌ನಲ್ಲಿ. ಹುಟ್ಟಿದ್ದು ಮಧ್ಯಪ್ರದೇಶದ ಆರ್ಮಿ ಆಸ್ಪತ್ರೆಯಲ್ಲಿ. ಈ ವೇಳೆ ರಾಗಿಣಿ ತಂದೆ ರಾಕೇಶ್ ಕುಮಾರ್ ಮಧ್ಯಪ್ರದೇಶದಲ್ಲಿ ಸೇನಾ ಕರ್ತವ್ಯದಲ್ಲಿದ್ದರು. ರಾಗಿಣಿಗೆ 8 ರಿಂದ 9 ವರ್ಷದ ವೇಳೆ ತಂದೆಗೆ ಕಾರ್ಗಿಲ್ ಯುದ್ಧದ ಕರ್ತವ್ಯಕ್ಕೆ ಹಾಜರಾಗಿದ್ದರು. ಶಾಲಾ ಬೇಸಿಗೆ ರಜೆಯಲ್ಲಿ ತಾಯಿ ಜೊತೆಗೆ ತಂದೆ ಇದ್ದ ಕಾರ್ಗಿಲ್ ಸೇನಾ ಕ್ವಾಟ್ರಸ್‌ಗೆ ತೆರಳಿದ್ದರು. ಈ ಕುರಿತು ಕೆಲ ರೋಚಕ ಘಟನೆಯನ್ನು ವಿವರಿಸಿದ್ದಾರೆ.
ತಂದೆಗೆ ಕಾರ್ಗಿಲ್‌ನಲ್ಲಿ ಪೋಸ್ಟ್ ಆಗಿತ್ತು. ಹೀಗಾಗಿ ಬೇಸಿಗೆ ರಜಾ ದಿನದಲ್ಲಿ ತಾಯಿ ಕಾರ್ಗಿಲ್ ಸುಂದರ ಪ್ರದೇಶ ನೋಡಿಕೊಂಡು ಬರೋಣ ಎಂದು ಸೇನಾ ಕ್ವಾಟ್ರಸ್‌ಗೆ ತೆರಳಿದ್ದೆವು ಎಂದು ರಾಗಿಣಿ ಹೇಳಿದ್ದಾರೆ. ಇದೇ ವೇಳೆ ಭಾರತ ಪಾಕಿಸ್ತಾನ ನಡಿನ ಕಾರ್ಗಿಲ್ ಯುದ್ಧ ಆರಂಭಗೊಂಡಿತು. ಪ್ರಧಾನಿ ಯುದ್ಧ ಘೋಷಣೆ ಮಾಡಿದ್ದರು. ಹೀಗಾಗಿ ನಾವು ಆರ್ಮಿ ಕ್ವಾಟ್ರಸ್ ಬಿಟ್ಟು ತೆರಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.
ತಾಯಿ ಆತಂಕಗೊಂಡಿದ್ದರು. ದ್ರಾಸ್, ಕಾರ್ಗಿಲ್ ಸೇರಿದಂತೆ ಹಲವು ಸೆಕ್ಟರ್‌ಗಳಲ್ಲಿ ತಂದೆ ಹಾಗೂ ಸೇನೆ ನಿಯೋಜನೆಗೊಂಡಿತ್ತು. ಹೀಗಾಗಿ ತಂದೆ ಸೇನಾ ಕ್ವಾಟ್ರಸ್‌ಗೆ ಆಗಮಿಸಲು ಸಾಧ್ಯವಾಗುತ್ತಿರಲಿಲ್ಲ. ತಾಯಿಗೆ ಆತಂಕಗೊಂಡಿದ್ದರು. ಆದರೆ ನನಗೆ ಈ ಯುದ್ಧದ ಆಳ ಆಗಲ ಗೊತ್ತಿಲ್ಲ. ನಮಗೆ ಬೇಸಗೆ ರಜೆ ಮಾತ್ರ. ಭಾರತ ಪಾಕಿಸ್ತಾನ ಯುದ್ಧದ ತೀವ್ರತೆ ಸೇರಿದಂತೆ ಯಾವುದು ನಮಗೆ ಅರ್ಥವಾಗುತ್ತಿರಲಿಲ್ಲ. ಕೆಲೆವೆಡೆ ಬಾಂಬ್ ಬೀಳುತ್ತಿದೆ. ನಾವು ಬಾಬ್ ಶೆಲ್‌ಗಾಗಿ ಓಡುತ್ತಿದ್ದೇವು. ಬಾಂಬ್ ಶೆಲ್ ಸಂಗ್ರಹ ಮಾಡುವುದು ನಮ್ಮ ಹವ್ಯಾಸವಾಗಿತ್ತು. ತುಂಡಾಗಿ ಬಿದ್ದಿದ್ದ ಬಾಂಬ್ ಶೆಲ್, ಇತರ ದಾಳಿಯ ವಸ್ತುಗಳನ್ನು ನಾವು ಸಂಗ್ರಹ ಮಾಡುತ್ತಿದ್ದೆವು.
ಕಾರ್ಗಿಲ್ ಯುದ್ಧದ ವೇಳೆ ತಂದೆ ಬ್ರಿಗೇಡಿಯರ್ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅಂದು ಮೊಬೈಲ್ ಫೋನ್ ಇರಲಿಲ್ಲ. ಸೇನೆಯಲ್ಲಿ ಫೋನ್ ಇದ್ದರೂ ಯುದ್ದದ ತುರ್ತು ಸಂದರ್ಭದ ಕಾರಣ ಬಳಕೆ ಮಾಡುವುದು ಸಾಧ್ಯವಾಗುತ್ತಿರಲಿಲ್ಲ. ತಾಯಿ ಆತಂಕ ಹೆಚ್ಚಾಗುತ್ತಲೇ ಇತ್ತು. ಆದರೆ ನಮಗೆ ಎಲ್ಲವೂ ಆಟವಾಗಿತ್ತು ಎಂದು ರಾಗಿಣಿ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.