ಅಳಿಲು ಮರಿಗೆ ಅಮ್ಮನಾದ ನಟ ಶಂಕರ್ ಅಶ್ವಥ್: ಮರುಗಿದ ಹಿರಿಯ ಕಲಾವಿದನ ಜೀವಪ್ರೇಮಕ್ಕೆ ಫ್ಯಾನ್ಸ್ ಫಿದಾ!

Published : Feb 28, 2026, 04:53 PM IST
Shankar Ashwath

ಸಾರಾಂಶ

ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದಾಗ ಸ್ವಾಭಿಮಾನ ಬಿಡದೆ ಉಬರ್ ಚಾಲಕರಾಗಿಯೂ ಕೆಲಸ ಮಾಡಿ ಸುದ್ದಿಯಾಗಿದ್ದರು. ಅವರ ಈ ಸರಳ ವ್ಯಕ್ತಿತ್ವ ಮತ್ತು ಈಗ ಹೊರಬಂದಿರುವ ಈ ಜೀವಪ್ರೇಮದ ವಿಡಿಯೋ ಅವರನ್ನು ಜನಸಾಮಾನ್ಯರ ನೆಚ್ಚಿನ ನಟನನ್ನಾಗಿ ಮಾಡಿದೆ. ಈ ಸ್ಟೋರಿ ನೋಡಿ..

ಸಹೃದಯತೆಗೆ ಹಿಡಿದ ಕನ್ನಡಿ

ಕನ್ನಡ ಚಿತ್ರರಂಗದ ಹಿರಿಯ ನಟ ದಿ. ಅಶ್ವಥ್ ಅವರ ಮಗ ಶಂಕರ್ ಅಶ್ವಥ್ (Shankar Ashwath) ಅವರು ಕೇವಲ ಒಬ್ಬ ಪ್ರತಿಭಾವಂತ ನಟ ಮಾತ್ರವಲ್ಲ, ಅದಕ್ಕೂ ಮಿಗಿಲಾಗಿ ಅತ್ಯಂತ ಸರಳ ಮತ್ತು ಸಹೃದಯಿ ಮನುಷ್ಯ ಎಂಬುದು ಇಡೀ ನಾಡಿಗೆ ಗೊತ್ತು. ಜೀವನದಲ್ಲಿ ಎಂತಹ ಕಷ್ಟಗಳು ಎದುರಾದರೂ ಎದೆಗುಂದದೆ, ಸ್ವಾಭಿಮಾನದಿಂದ ಬದುಕುವ ಇವರು, ಈಗ ತಮ್ಮಲ್ಲಿರುವ ಅಪರೂಪದ ಮಾನವೀಯತೆಯ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈಗ ಶಂಕರ್ ಅಶ್ವಥ್ ಅವರ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದ್ದು, ಅದನ್ನು ನೋಡಿದ ಪ್ರತಿಯೊಬ್ಬರ ಕಣ್ಣಾಲಿಗಳು ಒದ್ದೆಯಾಗುತ್ತಿವೆ.

ಏನಿದೆ ಆ ವಿಡಿಯೋದಲ್ಲಿ?

ವೈರಲ್ ಆಗಿರುವ ಈ ವಿಡಿಯೋದಲ್ಲಿ ಶಂಕರ್ ಅಶ್ವಥ್ ಅವರು ತಾಯಿಯಿಂದ ದೂರವಾಗಿ ಅನಾಥವಾಗಿದ್ದ ಪುಟ್ಟ ಅಳಿಲು ಮರಿಯೊಂದಕ್ಕೆ ಅತ್ಯಂತ ಪ್ರೀತಿಯಿಂದ ಹಾಲು ಕುಡಿಸುತ್ತಿದ್ದಾರೆ. ಆ ಪುಟ್ಟ ಜೀವ ಹಸಿವಿನಿಂದ ನರಳುತ್ತಿದ್ದರೆ, ಅದರ ಸ್ಥಿತಿಯನ್ನು ಕಂಡು ಶಂಕರ್ ಅಶ್ವಥ್ ಅವರ ಮನಸ್ಸು ಮರುಗಿದೆ. "ಅಯ್ಯೋ ಪಾಪ ಅನ್ಸುತ್ತೆ.. ತಾಯಿಯಿಂದ ದೂರವಾಗಿ ಈ ಪುಟ್ಟ ಪ್ರಾಣಿ ಎಷ್ಟು ಕಷ್ಟಪಡುತ್ತಿದೆ ನೋಡಿ" ಎಂದು ಅವರು ಮಮ್ಮಲ ಮರುಗುತ್ತಾ, ಆ ಮರಿಯನ್ನು ತನ್ನ ಮಗುವಿನಂತೆ ಆರೈಕೆ ಮಾಡುತ್ತಿದ್ದಾರೆ.

ಬಳಿಕ ಅಲ್ಲಿಯೇ ಇದ್ದ ತಮ್ಮವರಿಗೆ "ಎತ್ತಿಕೊಂಡು ಮೆಲ್ಲಗೆ ಹಾಲು ಕುಡಿಸಮ್ಮ" ಎಂದು ಅವರು ಮಮತೆಯಿಂದ ಹೇಳುವ ದೃಶ್ಯ ಅವರ ಹೃದಯವಂತಿಕೆಗೆ ಸಾಕ್ಷಿಯಾಗಿದೆ. ಮೂಕ ಪ್ರಾಣಿಯ ಮೇಲಿರುವ ಅವರ ಈ ಕಾಳಜಿ ಈಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಸರಳತೆಯ ಸಂಕೇತ ಶಂಕರ್ ಅಶ್ವಥ್:

ನಟ ಶಂಕರ್ ಅಶ್ವಥ್ ಅವರು ಚಂದನವನ ಮತ್ತು ಕಿರುತೆರೆಯಲ್ಲಿ ದಶಕಗಳಿಂದ ಸಕ್ರಿಯರಾಗಿದ್ದಾರೆ. ಆದರೆ ಅವರು ಎಂದೂ ಸ್ಟಾರ್ ಗಿರಿಯ ಹಮ್ಮು-ಬಿಮ್ಮು ತೋರಿಸಿದವರಲ್ಲ. ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದಾಗ ಸ್ವಾಭಿಮಾನ ಬಿಡದೆ ಉಬರ್ ಚಾಲಕರಾಗಿಯೂ ಕೆಲಸ ಮಾಡಿ ಸುದ್ದಿಯಾಗಿದ್ದರು. ಅವರ ಈ ಸರಳ ವ್ಯಕ್ತಿತ್ವ ಮತ್ತು ಈಗ ಹೊರಬಂದಿರುವ ಈ ಜೀವಪ್ರೇಮದ ವಿಡಿಯೋ ಅವರನ್ನು ಜನಸಾಮಾನ್ಯರ ನೆಚ್ಚಿನ ನಟನನ್ನಾಗಿ ಮಾಡಿದೆ.

ವೈರಲ್ ಆದ ವಿಡಿಯೋಗೆ ನೆಟ್ಟಿಗರ ಪ್ರತಿಕ್ರಿಯೆ:

ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸಾವಿರಾರು ಜನರು ಲೈಕ್ ಮತ್ತು ಕಮೆಂಟ್ ಮಾಡಿದ್ದಾರೆ. "ಅಶ್ವಥ್ ಅವರ ಮಗನಾಗಿ ನೀವು ಅವರ ಸಂಸ್ಕಾರವನ್ನು ಎತ್ತಿ ಹಿಡಿಯುತ್ತಿದ್ದೀರಿ", "ನಿಜವಾದ ಹೀರೊ ಅಂದರೆ ನೀವೇ ಸಾರ್", "ಮೂಕ ಪ್ರಾಣಿಯ ಮೇಲೆ ಇಷ್ಟೊಂದು ಪ್ರೀತಿ ತೋರುತ್ತಿರುವುದು ನೋಡಿ ಖುಷಿಯಾಯಿತು" ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಒಟ್ಟಿನಲ್ಲಿ, ಈ ಬಣ್ಣದ ಲೋಕದಲ್ಲಿ ಬೂಟಾಟಿಕೆಯ ಬದುಕಿಗಿಂತಲೂ ಸತ್ಯ ಮತ್ತು ಪ್ರೀತಿಯ ಬದುಕು ದೊಡ್ಡದು ಎಂಬುದನ್ನು ಶಂಕರ್ ಅಶ್ವಥ್ ಅವರು ತೋರಿಸಿಕೊಟ್ಟಿದ್ದಾರೆ. ಆ ಪುಟ್ಟ ಅಳಿಲು ಮರಿಗೆ ಇವರು ತೋರಿದ ಮರುಕ ಇಂದಿನ ಯುವ ಪೀಳಿಗೆಗೆ ಒಂದು ದೊಡ್ಡ ಪಾಠ. ನಿಜಕ್ಕೂ ಶಂಕರ್ ಅಶ್ವಥ್ ಅವರ ಈ ಕಾರ್ಯಕ್ಕೆ ಒಂದು ದೊಡ್ಡ ಸಲಾಂ ಹೇಳಲೇಬೇಕು!

https://www.threads.com/@shankaraswath/post/DVTC8exkp2x?xmt=AQF0NQW87MN-PWP1SJvKomAkt_4BLJOoQ79AqjPPeRL_qA 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಭಾರತಿ-ವಿಷ್ಣುವರ್ಧನ್ ಮದುವೆ ಫೋಟೊ ವೈರಲ್… ಹಿರಿಯ ನಟಿಯ ಪ್ರೀತಿಯಲ್ಲಿ ಬಿದ್ದಿದ್ದೇಗೆ ಯುವನಟ?
ಸತೀಶ್‌ ಮೂತ್ರ ವಿಸರ್ಜನೆ ಮಾಡುವ ವಿಡಿಯೋಕ್ಕೆ ಕಿಚ್ಚ ಸುದೀಪ್‌ ಹಾಡು ಬಳಕೆ; ದೂರು ದಾಖಲಿಸಿದ ರಜತ್!